Udupi: ಅನಾಥ ಸ್ಥಿತಿಯಲ್ಲಿದೆ ಬೀಡಿನಗುಡ್ಡೆಯ ಅನಿಲ ಚಿತಾಗಾರ!

ವರ್ಷ ಕಳೆದರೂ ದೊರಕದ ಉದ್ಘಾಟನೆ ಭಾಗ್ಯ

Team Udayavani, Sep 1, 2024, 6:27 PM IST

Udupi: ಅನಾಥ ಸ್ಥಿತಿಯಲ್ಲಿದೆ ಬೀಡಿನಗುಡ್ಡೆಯ ಅನಿಲ ಚಿತಾಗಾರ!

ಉಡುಪಿ: ನಗರದ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿ ಬಳಿ ನಗರಸಭೆ ಒಂದು ಕೋ.ರೂ. ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಪರಿಸರ ಸ್ನೇಹಿ ಅನಿಲ ಚಿತಾಗಾರಕ್ಕೆ ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

ಈಗಲೂ ಕೂಡ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಕಟ್ಟಿಗೆಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಪದ್ಧತಿಯಂತೆ ಅಂತ್ಯಸಂಸ್ಕಾರಗಳನ್ನು ನಡೆಸಲಾಗುತ್ತಿದೆ.

ಮರಗಳ ವಿನಾಶ ಹಾಗೂ ಶವ ದಹನದಿಂದಾಗುವ ಧೂಮ, ಹಾರುವ ಬೂದಿಯಿಂದ ಪರಿಸರವು ವಾಯುಮಾಲಿನ್ಯ ಪಡೆಯುತ್ತದೆ. ಪರಿಸರ ರಕ್ಷಿಸುವ ದೃಷ್ಟಿಕೋನದಿಂದ ನಗರಸಭೆ ಶವಸಂಸ್ಕಾರಕ್ಕೆ ಆಧುನಿಕ ತಂತ್ರಜ್ಞಾನದ ಅನಿಲ ಚಿತಾ ಗಾರವನ್ನು ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿರುವ ಸಾಂಪ್ರದಾಯಿಕ ಚಿತಾಗಾರದ ಸನಿಹ ಸ್ಥಾಪಿಸಿತ್ತು. ಈ ಪರಿಸರ ಸ್ನೇಹಿ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ವರ್ಷ ಕಳೆದರೂ ಇದು ಕಾರ್ಯರೂಪಕ್ಕೆ ಬಾರದಿರುವ ಕಾರಣ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನವೀನ ವ್ಯವಸ್ಥೆ
ಕಟ್ಟಿಗೆಯಿಂದ ಶವ ದಹಿಸಲು ಸುಮಾರು 2ರಿಂದ 3 ಗಂಟೆಗಳು ಬೇಕಾಗುತ್ತದೆ. ಆದರೆ ಅನಿಲ ಚಿತಾಗಾರದಲ್ಲಿ ಬಹಳ ಕಡಿಮೆ ಸಮಯದಲ್ಲಿ ಕಳೇಬರವನ್ನು ಭಸ್ಮಗೊಳಿಸಬಹುದು. ಅನಿಲ ಚಿತಾಗಾರದಲ್ಲಿ ಶವವನ್ನು ದಹಿಸುವಾಗ ಉತ್ಪತ್ತಿಯಾಗುವ ಧೂಮವು ನೇರವಾಗಿ ಪ್ರಸ್ತುತ ಶವ ಸಂಸ್ಕಾರಕ್ಕೆ ತಗಲುವ ವೆಚ್ಚ 2,000 ರೂ. ಅನಿಲ ಚಿತಾಗಾರದಲ್ಲಿ ಶವಸಂಸ್ಕಾರ ವೆಚ್ಚ 5ರಿಂದ 6 ಸಾವಿರ ರೂ. ಚೇಂಬರ್‌ಗಳ ಸಂಖ್ಯೆ 6 ದಿನನಿತ್ಯ ಸುಡುವ ಸರಾಸರಿ ಹೆಣಗಳು 6ರಿಂದ 10 ವರ್ಷ ಕಳೆದರೂ ದೊರಕದ ಉದ್ಘಾ ಟನೆ ಭಾಗ್ಯ ಸುದಿನ ಜನಹಿತ ಪರಿಸರದಲ್ಲಿ ಪಸರಿಸುವುದಿಲ್ಲ. ಈ ಚಿತಾಗಾರವು ಧೂಮದಲ್ಲಿನ ರಾಸಾಯನಿಕ ಹಾಗೂ ಧೂಮವನ್ನು ನಿಯಂತ್ರಿಸಿಕೊಂಡು, ಶುದ್ಧೀಕರಿಸಿದ ಧೂಮವನ್ನು ಚಿಮಣಿಯ ಮೂಲಕ ಹೊರಹಾಕಿಸುವ ನವೀನ ವ್ಯವಸ್ಥೆ ಹೊಂದಿದೆ. ಪರಿಸರ ಸ್ನೇಹಿಯಾಗಿ ಅನಿಲ ಚಿತಾಗಾರವು ಕೆಲಸ ನಿರ್ವಹಿಸುತ್ತದೆ.

ಕಟ್ಟಿಗೆ ದಾಸ್ತಾನು
ಸರಕಾರದ ಜಾಗವಾದ ಇದು ಪ್ರಸ್ತುತ ಹಿಂದೂ ಶವ ಸಂಸ್ಕಾರ ಸೇವಾ ಸಮಿತಿಯ ಸ್ವಾಧೀನದಲ್ಲಿದೆ. ಸುಮಾರು 50 ವರ್ಷಗಳಿಂದಲೂ ಇದು ಕಾರ್ಯಾಚರಿಸುತ್ತಿದ್ದು, ನಗರಸಭೆ ಅಥವಾ ಜಿಲ್ಲಾಡಳಿತ ಇದಕ್ಕೆ ಕಿಂಚಿತ್‌ ನೆರವು ನೀಡಿಲ್ಲ. 1 ವರ್ಷಕ್ಕೆ ಬೇಕಿರುವಷ್ಟು ಕಟ್ಟಿಗೆಗಳನ್ನು ದಾಸ್ತಾನು ಇರಿಸಲಾಗಿದೆ. ಬಿದ್ದ ಮರಗಳನ್ನು ಮಾತ್ರ ಇದಕ್ಕೆ ಬಳಕೆ ಮಾಡಲಾಗುತ್ತಿದೆ. ಇದಕ್ಕೆಂದು ಮರಗಳನ್ನು ಕಡಿಯುವ ಕ್ರಮ ಇಲ್ಲ ಎನ್ನುತ್ತಾರೆ ಇಲ್ಲಿನ ಸಿಬಂದಿ.

ಸೂಕ್ತ ಕ್ರಮಕೈಗೊಳ್ಳಲಾಗುವುದು
ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿರುವ ಅನಿಲ ಚಿತಾಗಾರದ ಸಾಧಕ-ಬಾಧಕಗಳ ಬಗ್ಗೆ ತಿಳಿದುಕೊಂಡು ಇದಕ್ಕೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು.
-ಪ್ರಭಾಕರ ಪೂಜಾರಿ ಗುಂಡಿಬೈಲು, ಅಧ್ಯಕ್ಷರು, ನಗರಸಭೆ

ದುಬಾರಿ ವೆಚ್ಚ
ಸಾಮಾನ್ಯ ಅಂತ್ಯಸಂಸ್ಕಾರಕ್ಕೆ ತಗಲುವ ವೆಚ್ಚಕ್ಕಿಂತ ಅನಿಲ ಚಿತಾಗಾರಕ್ಕೆ ತಗಲುವ ವೆಚ್ಚ ದುಬಾರಿಯಾಗಿದೆ. ಕೋಟ್ಯಂತರ ರೂ.ವೆಚ್ಚದ ಈ ಚಿತಾಗಾರದ ಗ್ಯಾಸ್‌ ಚೇಂಬರ್‌ಗೆ 26 ಲ.ರೂ. ವಿನಿಯೋಗ ಮಾಡಲಾಗಿದ್ದು, ಪ್ರಸ್ತುತ ಅದು ಕೂಡ ಸೋರುತ್ತಿದೆ. ಒಂದು ಕಳೇಬರ ಸುಡಲು 2.5ರಷ್ಟು ಗ್ಯಾಸ್‌ ಸಿಲಿಂಡರ್‌ ಆವಶ್ಯಕತೆಯೂ ಇದಕ್ಕಿದೆ. ಈಗಾಗಲೇ ಇದಕ್ಕೆ 3 ಫೇಸ್‌ ವಿದ್ಯುತ್‌ ಕೂಡ ಬೇಕು ಎನ್ನಲಾಗುತ್ತಿದ್ದು, ಒಟ್ಟಾರೆಯಾಗಿ ಇದು ಬಲು ದುಬಾರಿಯಾಗಿ ಪರಿಣಮಿಸಿದೆ. ಜತೆಗೆ ಇದರ ನಿರ್ವಹಣೆಯ ವೆಚ್ಚವೂ ಪ್ರತ್ಯೇಕವಾಗಿರುವ ಕಾರಣ ಈ ಯಂತ್ರವೂ ಈಗ ಹೆಣದಂತೆಯೇ ಮಲಗಿಕೊಂಡಿದೆ.

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.