Udupi: ತ್ಯಾಜ್ಯ ಎಸೆಯುವವರ ಮೇಲೆ ಕೆಮರಾ ಕಣ್ಣು!

ನಗರದಲ್ಲಿ 24 ಬ್ಲ್ಯಾಕ್‌ಸ್ಪಾಟ್‌ ಗುರುತು | 4 ತಿಂಗಳೊಳಗೆ ಸಿಸಿ ಕೆಮರಾ ಅಳವಡಿಕೆ

Team Udayavani, Jan 30, 2025, 2:53 PM IST

13(1

ಉಡುಪಿ: ನಗರಸಭೆ ವ್ಯಾಪ್ತಿಯ 35 ವಾರ್ಡ್‌ ಗಳಲ್ಲಿಯೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವ ಘಟನೆಗಳು ವ್ಯಾಪಕವಾಗಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರದ 24 ಪ್ರದೇಶಗಳನ್ನು ಬ್ಲ್ಯಾಕ್‌ ಸ್ಪಾಟ್‌ಗಳೆಂದು ಗುರುತಿಸಿ ಸಿಸಿಟಿವಿ ಅಳವಡಿಕೆಗೆ ನಿರ್ಧರಿಸಲಾಗಿದೆ. ನಾಲ್ಕು ತಿಂಗಳ ಒಳಗೆ ಈ ಯೋಜನೆ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.

ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಅತ್ಯಾಧುನಿಕ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತಿದ್ದು, ಕಸ ಎಸೆಯುವ ವ್ಯಕ್ತಿ ಇಲ್ಲವೇ ವಾಹನವನ್ನು ಗುರುತಿಸಲಾಗುತ್ತದೆ. ವಾಹನದ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕನನ್ನು ಪತ್ತೆ ಹಚ್ಚಿ 5ರಿಂದ 25 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಈ ಸಂಬಂಧ ಪ್ರಸ್ತಾವನೆ ಪೂರ್ಣಗೊಂಡಿದ್ದು, ಜಿಲ್ಲಾಧಿಕಾರಿಗಳ ಅನುಮೋದನೆ ಬಾಕಿಯಿದೆ.

ಒಂದು ನಿರ್ದಿಷ್ಟ ಜಾಗವನ್ನು ಬ್ಲ್ಯಾಕ್‌ ಸ್ಪಾಟ್‌ ಎಂದು ಗುರುತಿಸಿ ಸ್ವಲ್ಪ ಕಾಲ ಕಣ್ಗಾವಲು ಇಡಲಾಗುತ್ತದೆ. ಸಮಸ್ಯೆ ಪರಿಹಾರವಾದ ಬಳಿಕ ಅಲ್ಲಿ ಸಣ್ಣ ಗಾರ್ಡನ್‌ ಮಾಡಲಾಗುತ್ತದೆ ಎಂದು ನಗರಸಭೆ ತಿಳಿಸಿದೆ.

ತ್ಯಾಜ್ಯ ವಿಲೇವಾರಿಯದ್ದೂ ಸಮಸ್ಯೆ
ಹಸಿ ಹಾಗೂ ಒಣ ಕಸ ವಿಂಗಡಿಸಿ ನೀಡುವಂತೆ ಸೂಚನೆ ನೀಡಿದರೂ ಹಲವೆಡೆ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಕೆಲವು ಕಡೆ ಕಸ ಸಂಗ್ರಹಣೆಯೂ ಸರಿಯಾಗಿಲ್ಲ. ಹೀಗಾಗಿ ಅದು ಎಲ್ಲೆಂದರಲ್ಲಿ ಬಿದ್ದು ಪರಿಸರದಲ್ಲಿ ದುರ್ನಾತ ಬೀರಲು ಕಾರಣವಾಗುತ್ತಿದೆ ಎಂಬ ದೂರುಗಳೂ ಕೇಳಿಬರುತ್ತಿವೆ.

ನಿರ್ವಹಣೆ ಜಾಗೃತಿಗೆ ಹಲವು ಕ್ರಮ
– ಕೇಂದ್ರದ ಮಾಹಿತಿ, ಶಿಕ್ಷಣ ಮತ್ತು ಸಂವಹನ ಘಟಕದಡಿ ನಗರಸಭೆಗೆ 2.5 ಕೋ.ರೂ.ಅನುದಾನ ಬಿಡುಗಡೆಗೊಂಡಿದ್ದು, ಶುಚಿತ್ವ ಹಾಗೂ ನೈರ್ಮಲ್ಯಕ್ಕೆ ವಿಶೇಷ ಒತ್ತು ನೀಡಲು ಮುಂದಾಗಿದೆ.
– ಫ‌ನತ್ಯಾಜ್ಯ ವಸ್ತು ನಿರ್ವಹಣೆ, ಪ್ಲಾಸ್ಟಿಕ್‌ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂದೇಶಗಳನ್ನೊಳಗೊಂಡ ಫೇಸ್‌ ಮಾಸ್ಕ್ ಗಳು, ಬಟ್ಟೆ ಚೀಲಗಳು, ಛತ್ರಿಗಳು, ಕರಪತ್ರ, ಪೋಸ್ಟರ್‌, ಕ್ಯಾಪ್‌ಗ್ಳು, ರಿಸ್ಟ್‌ ಬ್ಯಾಂಡ್‌ಗಳಂತಹ ವಸ್ತುಗಳ ವಿತರಣೆ ನಡೆಯಲಿದೆ.
– ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ನೈರ್ಮಲ್ಯಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಪ್ರದರ್ಶನ ಆಯೋಜನೆ, ಮೇಳಗಳ ಮೂಲಕ ಅರಿವು.
– ಸರಕಾರಿ ಶಾಲಾ, ಕಾಲೇಜುಗಳಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ, ನೈರ್ಮಲ್ಯದ ಮಾದರಿ ರಚನೆ
– ಸೈಕ್ಲೋಥಾನ್‌, ಮ್ಯಾರಥಾನ್‌, ಕಲಾ ಸ್ಪರ್ಧೆ, ಸ್ವತ್ಛತಾ ಅಭಿಯಾನ, ವಾಲ್‌ಪೈಂಟಿಂಗ್‌, ಸಹಿ ಅಭಿಯಾನ.

ಸವಲತ್ತು ಕಡಿತ
ತ್ಯಾಜ್ಯ ಎಸೆಯುವ ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯ ನೀರು ಹರಿಯಬಿಡುವವರಿಗೆ ಹಲವಾರು ಬಾರಿ ಎಚ್ಚರಿಕೆ ಹಾಗೂ ನೋಟಿಸ್‌ ನೀಡಲಾಗಿದೆ. ಇದು ಮರುಕಳಿಸಿದರೆ ಅಂತಹ ಮನೆ, ಅಪಾರ್ಟ್‌ಮೆಂಟ್‌, ಉದ್ಯಮಗಳಿಗೆ ನಗರಸಭೆ ಒದಗಿಸುವ ಮೂಲ ಸೌಕರ್ಯಗಳನ್ನು ರದ್ದು ಮಾಡಲಾಗುತ್ತದೆ. ಬ್ಲಾಕ್‌ಸ್ಪಾಟ್‌ಗಳಲ್ಲಿ ಸಿಸಿಟಿವಿ ಅಳವಡಿಸುವ ಪ್ರಕ್ರಿಯೆಯೂ ಜಾರಿಯಲ್ಲಿದೆ.
-ಪ್ರಭಾಕರ ಪೂಜಾರಿ ಗುಂಡಿಬೈಲು, ಅಧ್ಯಕ್ಷರು, ನಗರಸಭೆ

-ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ

Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ

ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು

ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು

Congress: ದಲಿತ ಸಮಾವೇಶ ಬೇಡ ಅಂತ ಹೈಕಮಾಂಡ್‌ ಹೇಳಿಲ್ಲ: ಸಚಿವ ಕೆ.ಎಚ್‌. ಮುನಿಯಪ್ಪ

Congress: ದಲಿತ ಸಮಾವೇಶ ಬೇಡ ಅಂತ ಹೈಕಮಾಂಡ್‌ ಹೇಳಿಲ್ಲ: ಸಚಿವ ಕೆ.ಎಚ್‌. ಮುನಿಯಪ್ಪ

Dharawad: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟದ್ದು: ಸಚಿವ ಲಾಡ್

Dharawad: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟದ್ದು: ಸಚಿವ ಲಾಡ್

Mysuru ಗಲಭೆ ಕೇಸಲ್ಲಿ ಅನಕ್ಷರಸ್ಥ ಮೌಲ್ವಿಯ ಬಂಧಿಸಿ: ಪ್ರತಾಪ ಸಿಂಹ

Mysuru ಗಲಭೆ ಕೇಸಲ್ಲಿ ಅನಕ್ಷರಸ್ಥ ಮೌಲ್ವಿಯ ಬಂಧಿಸಿ: ಪ್ರತಾಪ ಸಿಂಹ

Ragging: ವಿಜಯಪುರದ ಮೆಡಿಕಲ್ ಕಾಲೇಜಿನಲ್ಲಿ ರ‍್ಯಾಗಿಂಗ್ ಆರೋಪ.. ಐವರು ವಿದ್ಯಾರ್ಥಿಗಳ ಬಂಧನ

Ragging: ವಿಜಯಪುರದ ಮೆಡಿಕಲ್ ಕಾಲೇಜಿನಲ್ಲಿ ರ‍್ಯಾಗಿಂಗ್ ಆರೋಪ.. ಐವರು ವಿದ್ಯಾರ್ಥಿಗಳ ಬಂಧನ

High Court: ಪರಿಷ್ಕರಣೆ ಆಗದ ಕಾರ್ಮಿಕರ ಕನಿಷ್ಠ ವೇತನ: ನೋಟಿಸ್‌ ಜಾರಿ

High Court: ಪರಿಷ್ಕರಣೆ ಆಗದ ಕಾರ್ಮಿಕರ ಕನಿಷ್ಠ ವೇತನ: ನೋಟಿಸ್‌ ಜಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ

Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ

1-wedw

Udupi;ಹೋಟೆಲ್ ಮಥುರಾ ಗೋಕುಲ್: ಫೆ19 ರಿಂದ ‘ಉಡುಪಿ ಸಂಸ್ಕೃತಿ’ ಕೈಮಗ್ಗ ಮತ್ತು ಕರಕುಶಲ ಮೇಳ

Udupi: ಗೀತಾರ್ಥ ಚಿಂತನೆ-191: “ಡಿಸಿಶನ್‌ ಮೇಕರ್‌ ನೀನಲ್ಲ’ ಎಂಬ ಶ್ರೀಕೃಷ್ಣ

Udupi: ಗೀತಾರ್ಥ ಚಿಂತನೆ-191: “ಡಿಸಿಶನ್‌ ಮೇಕರ್‌ ನೀನಲ್ಲ’ ಎಂಬ ಶ್ರೀಕೃಷ್ಣ

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣUdupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Mulki ರೈಲು ನಿಲ್ದಾಣ ಕಾಮಗಾರಿ: ಫೆ.21 ರಂದು ರೈಲು ವಿಳಂಬ

Mulki ರೈಲು ನಿಲ್ದಾಣ ಕಾಮಗಾರಿ: ಫೆ.21 ರಂದು ರೈಲು ವಿಳಂಬ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ

Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ

ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು

ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು

ಭದ್ರಾವತಿಯಲ್ಲಿ ಫೈನಾನ್ಸ್‌ ಕಿರುಕುಳಕ್ಕೆ ವ್ಯಕ್ತಿ ಆತ್ಮಹ*ತ್ಯೆ

ಭದ್ರಾವತಿಯಲ್ಲಿ ಫೈನಾನ್ಸ್‌ ಕಿರುಕುಳಕ್ಕೆ ವ್ಯಕ್ತಿ ಆತ್ಮಹ*ತ್ಯೆ

Congress: ದಲಿತ ಸಮಾವೇಶ ಬೇಡ ಅಂತ ಹೈಕಮಾಂಡ್‌ ಹೇಳಿಲ್ಲ: ಸಚಿವ ಕೆ.ಎಚ್‌. ಮುನಿಯಪ್ಪ

Congress: ದಲಿತ ಸಮಾವೇಶ ಬೇಡ ಅಂತ ಹೈಕಮಾಂಡ್‌ ಹೇಳಿಲ್ಲ: ಸಚಿವ ಕೆ.ಎಚ್‌. ಮುನಿಯಪ್ಪ

Dharawad: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟದ್ದು: ಸಚಿವ ಲಾಡ್

Dharawad: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟದ್ದು: ಸಚಿವ ಲಾಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.