ನಗರ ಪೊಲೀಸ್ ಬೀಟ್ ಮತ್ತಷ್ಟು ಚುರುಕು; ಸಿಟಿ, ಸರ್ವಿಸ್ ಬಸ್ ನಿಲ್ದಾಣದಲ್ಲಿ ವಿಕೃತರ ಕಾಟ
Team Udayavani, Jan 22, 2022, 7:14 PM IST
ಸಾಂದರ್ಭಿಕ ಚಿತ್ರ.
ಉಡುಪಿ: ನಗರದ ಸಿಟಿ, ಸರ್ವಿಸ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕ ರಿಗೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ನಿತ್ಯ ಕಿರುಕುಳ ನೀಡುತ್ತಿರುವ ವಿಕೃತರ ಗುಂಪಿನ ಮೇಲೆ ನಿಗಾ ವಹಿಸಲು ನಗರ ಠಾಣೆ ಪೊಲೀಸರು ಬೀಟ್ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಬಸ್ ನಿಲ್ದಾಣದಲ್ಲಿ ಒಂದು ಕ್ಷಣ ಕೂತುಕೊಂಡರೆ ಭಿಕ್ಷುಕರು ಸಹಿತ ಕೆಲವರು ವಿನಾ ಕಾರಣ ಕಿರುಕುಳ ನೀಡುವ ಘಟನೆಗಳು ನಡೆಯುತ್ತಿವೆ. ಬಸ್ ತಂಗುದಾಣದಲ್ಲಿ ಶುಚಿತ್ವ ಇಲ್ಲದಿರುವುದು ಹಾಗೂ ಎಲ್ಲೆಂದರಲ್ಲಿ ತಂಬಾಕು ಸೇವಿಸಿ ಉಗುಳುವುದು ಕೂಡ ನಗರದ ಅಂದಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಪ್ರಯಾಣಿಕರ ತಂಗುದಾಣದಲ್ಲಿಯೇ ದಾರಿಹೋಕರು ವಿಶ್ರಾಂತಿ ಪಡೆಯು ತ್ತಿದ್ದು, ಪ್ರಯಾಣಿಕರಿಗೆ ಇರಿಸುಮುರುಸು ಉಂಟುಮಾಡುತ್ತಿದೆ.
ವೇಶ್ಯಾವಾಟಿಕೆ ದಂಧೆ
ಈ ಎರಡೂ ಬಸ್ ತಂಗುದಾಣದ ಬಳಿ ವೇಶ್ಯಾವಾಟಿಕೆ ದಂಧೆ ನಡೆಯು ತ್ತಿವೆ. ಪ್ರಯಾಣಿಕರ ಆಸೀನದಲ್ಲಿ ಕುಳಿತು ಕೊಳ್ಳುವವರನ್ನೂ ವಕ್ರ ದೃಷ್ಟಿಯಿಂದ ನೋಡಲಾಗುತ್ತಿದೆ. ಸರ್ವಿಸ್ ಬಸ್ ನಿಲ್ದಾಣದ ಎರಡೂ ಬದಿಯೂ ದಿನಂಪ್ರತಿ ಇಂತಹ ಘಟನೆಗಳು ಕಾಣಸಿಗುತ್ತಿವೆ. ಅಲ್ಲದೆ ಕೆಎಸ್ಸಾರ್ಟಿಸಿ ಬಸ್ ತಂಗು ದಾಣದಲ್ಲಿಯೂ ಇವರ ಉಪಟಳ ನಿರಂ ತರವಾಗಿ ನಡೆಯುತ್ತಿದೆ.
ವಿದ್ಯಾರ್ಥಿನಿಯರಿಗೂ ತೊಂದರೆ
ನಗರ ವ್ಯಾಪ್ತಿಯಲ್ಲಿ ಹಲವಾರು ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪ್ರಯಾಣಕ್ಕೆ ಈ ಬಸ್ ತಂಗುದಾಣ ವನ್ನೇ ಆಶ್ರಯಿಸಿದ್ದಾರೆ. ವಿದ್ಯಾರ್ಥಿನಿಯ ರೊಂದಿಗೆ ಮೈಕೈ ತಾಗಿಸಿ ಮಾತುಕತೆ ನಡೆಸಿ ಪರಿಚಿತರಂತೆ ವರ್ತಿಸುತ್ತಿದ್ದಾರೆ. ಹಿಂದಿ- ಕನ್ನಡ ಮಾತನಾಡುವ ಮಂದಿಯಿಂದಲೇ ಈ ಕೃತ್ಯ ನಡೆಯುತ್ತಿದೆ ಎನ್ನುತ್ತಾರೆ
-ಕಾಲೇಜು ವಿದ್ಯಾರ್ಥಿನಿಯೊಬ್ಬರು.
ಸಹಾಯವಾಣಿ ಸಂ. 112
ಬಸ್ ತಂಗುದಾಣದಲ್ಲಿ ಕಿರುಕುಳ ನೀಡುವ ಬಗ್ಗೆ ದೂರುಗಳು ಬಂದಿದ್ದು, ಈಗಾಗಲೇ ಕೆಲವರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಪೊಲೀಸರು ಈ ಭಾಗದಲ್ಲಿ ಬೀಟ್ ಕಾರ್ಯಾಚರಣೆಯಲ್ಲಿದ್ದಾರೆ. ಇಬ್ಬರು ಸಿಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಸಾರ್ವಜನಿಕರು ಅಥವಾ ಪ್ರಯಾಣಿಕರಿಗೆ ತೊಂದರೆ ಉಂಟಾದರೆ ಕೂಡಲೇ 112ಗೆ ಕರೆ ಮಾಡಬಹುದು. 5 ನಿಮಿಷದೊಳಗೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿ ಸಲಿದ್ದಾರೆ. ನಗರ ಠಾಣೆಗೆ ಮುಖತಃ ಭೇಟಿಯಾಗಿಯೂ ದೂರು ನೀಡಬಹುದಾಗಿದೆ.
-ಪ್ರಮೋದ್ ಕುಮಾರ್,
ಪೊಲೀಸ್ ನಿರೀಕ್ಷಕರು,
ಉಡುಪಿ ನಗರ ಠಾಣೆ
ರಾತ್ರಿ ವೇಳೆ ಉಪಟಳ ಹೆಚ್ಚಳ
ಸಿಟಿ ಬಸ್ ತಂಗುದಾಣದಿಂದ ಸರ್ವಿಸ್ ಬಸ್ ತಂಗುತಾಣಕ್ಕೆ ತೆರಳುವ ಭಾಗದಲ್ಲಿ ವೇಶ್ಯೆಯರು ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುತ್ತಾರೆ. ಕೆಲವೊಂದು ಬಾರಿ ಈ ಭಾಗದಲ್ಲಿ ಬೀದಿದೀಪಗಳೂ ಉರಿಯದ ಕಾರಣ ಪ್ರಯಾಣಿಕರೂ ತೊಂದರೆ ಎದುರಿಸಬೇಕಾಗುತ್ತದೆ.
ವಸ್ತು ಮಾರಾಟದ ನೆಪದಲ್ಲಿ ಕಿರುಕುಳ
ಪರ್ಸ್, ಕೀಚೈನ್ ಮಾರಾಟದ ನೆಪದಲ್ಲಿ ಬಸ್‌ನೊಳಗೆ ಆಗಮಿಸಿ ಪ್ರಯಾ ಣಿಕರೊಂದಿಗೆ ಅನುಚಿತವಾಗಿ ವರ್ತಿಸುವ ಘಟನೆಗಳೂ ನಿರಂತರವಾಗಿ ನಡೆಯುತ್ತಿದೆ. ವಸ್ತುಗಳನ್ನು ಖರೀದಿಸುವಂತೆ ಒತ್ತಡ ಹಾಕುವುದು ಹಾಗೂ ಕಿರುಕುಳವನ್ನೂ ನೀಡಲಾಗುತ್ತಿದೆ ಎನ್ನುತ್ತಾರೆ ನಿತ್ಯ ಪ್ರಯಾಣಿಕರೊಬ್ಬರು.
– ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್.ರೆಹಮಾನ್ ತಂಡದ ಸದಸ್ಯೆ ಮೋಹಿನಿ
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.