Udupi: ಎರಡೇ ದಿನದಲ್ಲಿ ಬರಲಿದೆ, ವಾರಾಹಿ ನೀರು!

ನಗರದ ಮನೆಗಳಿಗೆ ಶನಿವಾರದೊಳಗೆ ಪೂರೈಕೆ | ಮೊದಲು ದಿನಕ್ಕೆ 6 ಗಂಟೆ, ಹಂತ ಹಂತವಾಗಿ ಹೆಚ್ಚಳ

Team Udayavani, Jan 16, 2025, 3:17 PM IST

10

ಉಡುಪಿ: ಬಹುಕಾಲದ ಕನಸೊಂದು ನಿಜವಾಗುವ ಕಾಲ ಸನ್ನಿಹಿತವಾಗಿದೆ. ಈ ವಾರಾಂತ್ಯದಲ್ಲಿ ಉಡುಪಿ ನಗರದ ಮನೆಗಳಿಗೆ ವಾರಾಹಿ ನದಿಯ ನೀರು ಪೂರೈಕೆಯಾಗಲಿದೆ.

ನಗರಸಭಾ ವ್ಯಾಪ್ತಿಯಲ್ಲಿ ದಿನಪೂರ್ತಿ ಕುಡಿಯುವ ನೀರು ಪೂರೈಸುವ ವಾರಾಹಿ ಯೋಜನೆಯ ಪೈಪ್‌ಲೈನ್‌ ಸಂಪರ್ಕ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ನೀರು ಪೂರೈಕೆಗೆ ಎಲ್ಲವೂ ಸಜ್ಜಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಬುಧವಾರ ಮಣಿಪಾಲದ ಆರ್‌ಎಸ್‌ಬಿ ಬಳಿ ಇರುವ ನಗರಸಭೆಯ ನೀರಿನ ರೇಚಕದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿ ನೀರಿನ ಗುಣಮಟ್ಟ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿದರು.

ಈ ವೇಳೆ ಆರಂಭದಲ್ಲಿ ಕೆಸರುಯುಕ್ತವಾಗಿರುವ ನೀರನ್ನು ತೋಡಿಗೆ ಬಿಡಲಾಯಿತು. ಒಮ್ಮೆಗೆ ಇರುವ ನೀರನ್ನು ಖಾಲಿ ಮಾಡಿ ಉತ್ತಮ ನೀರು ಬಂದಾಗ ಅದರ ಗುಣಮಟ್ಟವನ್ನು ಪರಿಶೀಲನೆ ನಡೆಸಲಾಗುವುದು. ಅನಂತರ ನಗರಕ್ಕೆ ನೀರು ಪೂರೈಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪಂಚಾಯತ್‌ಗಳಿಗೂ ಪೂರೈಕೆ
ಈ ಯೋಜನೆಯಡಿ ಆವರ್ಸೆ, ಬಿಲ್ಲಾಡಿ, ಯಡ್ತಾಡಿ, ಹೆಗ್ಗುಂಜೆ, ಕಾಡೂರು, ಕೊಕ್ಕರ್ಣೆ, ಕಳೂರು, ನೀಲಾವರ, ಚೇರ್ಕಾಡಿ, ಆರೂರು, ಚಾಂತಾರು, ಉಪ್ಪೂರು ಸೇರಿದಂತೆ 13 ಪಂಚಾಯತ್‌ಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ. ಕುಡಿಯುವ ನೀರು ಪೂರೈಸಲು ಉತ್ತಮ ಗುಣಮಟ್ಟದ ಎಚ್‌ಡಿಪಿ (ಹೈಡೆನ್ಸಿಟಿ ಪಾಲಿಥಿನ್‌ ಪೈಪ್‌) ಪೈಪ್‌ಗ್ಳನ್ನು ಅಳವಡಿಸಲಾಗುತ್ತಿದೆ. ಗುತ್ತಿಗೆದಾರರೇ 8 ವರ್ಷಗಳ ನಿರ್ವಹಣೆ ಹೊಣೆ ಹೊತ್ತಿದ್ದಾರೆ.

ಪ್ರಾಯೋಗಿಕ ಪರೀಕ್ಷೆ ಪೂರ್ಣ
ನಗರಸಭಾ ವ್ಯಾಪ್ತಿಯ 35 ವಾರ್ಡ್‌ ಗಳಲ್ಲಿ 22 ಸಾವಿರ ಮನೆಗಳಿಗೆ ಮೀಟರ್‌ ಅಳವಡಿಸಲಾಗಿದೆ. ಈಗಾಗಲೇ ಪ್ರಾಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿವೆ. 13 ಪಂಚಾಯತ್‌ಗಳಿಗೆ ಶುದ್ಧೀಕರಿಸಿದ ನೀರು 2019ರಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, 5 ವರ್ಷದ ಬಳಿಕ ಮೊದಲ ಹಂತದ ಯೋಜನೆ ಪೂರ್ಣಗೊಂಡಿದೆ. ಮಾರ್ಚ್‌ ಅಂತ್ಯಕ್ಕೆ 45 ಎಂಎಲ್‌ಡಿ ನೀರು ಮಣಿಪಾಲಕ್ಕೆ ಸರಬರಾಜಾಗಲಿದ್ದು, ಹಾಲಾಡಿಯಿಂದ ಮಣಿಪಾಲಕ್ಕೆ ಬರುವ ಮಾರ್ಗದಲ್ಲಿರುವ ಚೇರ್ಕಾಡಿ, ವಂಡಾರು, ಕಾಡೂರು, ಕೊಕ್ಕರ್ಣೆ, ಬೆನಗಲ್‌, ಮಡಿಸಾಲು ಹೊಳೆ, ಸ್ವರ್ಣ ನದಿ, ಪೆರಂಪಳ್ಳಿಯಲ್ಲಿ ಈಗಾಗಲೇ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿ ಪೂರ್ಣಗೊಳಿಸಲಾಗಿದೆ. ಮಣಿಪಾಲದ ಆರ್‌ಎಸ್‌ಬಿ ಬಳಿ ಬುಧವಾರ ಅಂತಿಮ ಹಂತದ ಪರಿಶೀಲನೆ ಮಾಡಲಾಯಿತು.

ನೀರು ಪೂರೈಕೆ ಕ್ರಮ ಹೇಗೆ?
– ವಾರಾಹಿ ಪೈಪ್‌ಲೈನ್‌ ಕಾರ್ಯ ಬಹುತೇಕ ಪೂರ್ಣಗೊಂಡರೂ ಪ್ರಮುಖ ಜಂಕ್ಷನ್‌, ಟ್ರಾಫಿಕ್‌ ಪ್ರದೇಶದಲ್ಲಿ ಅಂತಿಮ ಕಾಮಗಾರಿ ಬಾಕಿಯಿದೆ.
– ಈಗ ಇರುವ ಪೈಪ್‌ಲೈನ್‌ ಮೂಲಕವೇ ನೀರು ಬರಲಿದೆ. ಆದರೆ, ಮೀಟರ್‌ ಬದಲಾಗಲಿದೆ.
– ಈಗ ದಿನಕ್ಕೆ 4 ಗಂಟೆ ನೀರು ಪೂರೈಕೆ ಆಗುತ್ತಿದ್ದು, ವಾರಾಹಿ ನೀರು ಆರಂಭದಲ್ಲೇ ಆರು ಗಂಟೆ ಬರಲಿದೆ.
– ಹಂತ ಹಂತವಾಗಿ ನೀರು ಪೂರೈಕೆ ಅವಧಿ ಏರಿಕೆಯಾಗಿ ಫೆಬ್ರವರಿ 2ನೇ ವಾರದಲ್ಲಿ ದಿನಕ್ಕೆ 15ರಿಂದ 20 ಗಂಟೆ ನೀರು ಸಿಗಲಿದೆ. ಮಾರ್ಚ್‌ ಅಂತ್ಯಕ್ಕೆ ದಿನಪೂರ್ತಿ ನೀರು ಪೂರೈಕೆ ಆಗಲಿದೆ.
– ಒಮ್ಮೆಗೆ ದಿನಪೂರ್ತಿ ನೀರು ಪೂರೈಕೆ ಮಾಡಿದರೆ ಒತ್ತಡ ಹೆಚ್ಚಾಗಿ ಸೋರಿಕೆ ಅಥವಾ ಮನೆಗಳಲ್ಲಿ ಗೇಟ್‌ವಾಲ್‌ ಆನ್‌ ಇದ್ದರೆ ಓವರ್‌ಪ್ಲೋ ಆಗುವ ಸಾಧ್ಯತೆ ಇರುವುದರಿಂದ ಹಂತ ಹಂತವಾಗಿ ಪೂರೈಕೆ ಅವಧಿ ಹೆಚ್ಚಲಿದೆ.

ನೀರಿನ ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ
ಮಣಿಪಾಲದ ನಗರಸಭೆ ಉಪಕೇಂದ್ರದಲ್ಲಿ ಈಗಾಗಲೇ ಹೆಲ್ಪ್‌ ಲೈನ್‌ ತೆರೆಯ ಲಾಗಿದೆ. ವಾರಾಹಿ ನೀರಿನ ಪೈಪ್‌ಲೈನ್‌ ಸೋರಿಕೆ, ನೀರಿನ ಹಂಚಿಕೆಯಲ್ಲಿ ವ್ಯತ್ಯಯಗಳು ಕಂಡು ಬಂದಲ್ಲಿ ಸಾರ್ವಜನಿಕರು 8749066111 ಕರೆ ಮಾಡಿ ಮಾಹಿತಿ ನೀಡಬಹುದು. ಅಲ್ಲದೆ ಕಚೇರಿಗೂ ಭೇಟಿ ನೀಡಿ ಸಮಸ್ಯೆಗಳನ್ನು ತಿಳಿಸಬಹುದು, ಬಿಲ್‌ ಪಾವತಿಯೂ ಮಾಡಬಹುದು. ನಗರಸಭೆ ಕೇಂದ್ರ ಕಚೇರಿಯಲ್ಲೂ ಈ ವ್ಯವಸ್ಥೆ ಇದೆ ಎಂದು ವಾರಾಹಿ ಯೋಜನೆಯ ಎಇಇ ಅರ್ಕೇಶ್‌ ಗೌಡ ತಿಳಿಸಿದ್ದಾರೆ.

ಭರತ್ಕಲ್‌-ಮಣಿಪಾಲ್‌: 268 ಕೋ.ರೂ.ವೆಚ್ಚದ ಕಾಮಗಾರಿ
268 ಕೋ.ರೂ. ವೆಚ್ಚದ ವಾರಾಹಿ ಕಾಮಗಾರಿ ಇದಾಗಿದ್ದು, ಈ ವಾರದೊಳಗೆ ಪ್ರತಿ ದಿನ 20 ಎಂಎಲ್‌ಡಿ ನೀರು ಹಾಲಾಡಿಯ ಭರತ್ಕಲ್‌ ನೀರು ಶುದ್ಧೀಕರಣ ಘಟಕದಿಂದ ಮಣಿಪಾಲದ ಜಿಎಲ್‌ಎಸ್‌ಆರ್‌ ಘಟಕಕ್ಕೆ ಪೂರೈಕೆಯಾಗಲಿದೆ. ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಯೋಜನೆ ಕಾಮಗಾರಿ ನಿರ್ವಹಿಸುತ್ತಿದ್ದು, 166 ಕೋ.ರೂ.ವೆಚ್ಚದಲ್ಲಿ ಉಡುಪಿ ಗ್ರಾಮಾಂತರ ಹಾಗೂ ನಗರ ಪ್ರದೇಶ ಸೇರಿ 271 ಕಿ.ಮೀ. ಪೈಪ್‌ಲೈನ್‌ ಅಳವಡಿಕೆ ಮಾಡಲಾಗಿದ್ದು, ಹಾಲಾಡಿಯಲ್ಲಿ 50 ಕೋ.ರೂ. ವೆಚ್ಚದಲ್ಲಿ ಡಬ್ಲೂéಟಿಪಿ ನಿರ್ಮಿಸಲಾಗಿದೆ. 96 ಕೋ.ರೂ. ವೆಚ್ಚದಲ್ಲಿ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ.

ಅಂತಿಮ ಹಂತದ ಪರೀಕ್ಷೆ
ಈಗಾಗಲೇ ಪ್ರಾಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿದ್ದು, ಮಣಿಪಾಲದಲ್ಲಿ ಅಂತಿಮ ಹಂತದ ಪರೀಕ್ಷೆ ನಡೆಸಲಾಗಿದೆ. ಹೊಸ ಪೈಪ್‌ಲೈನ್‌ ಆದ ಕಾರಣ ಆರಂಭದಲ್ಲಿ ನೀರನ್ನು ತೋಡುಗಳಿಗೆ ಬಿಡಲಾಯಿತು. ಶುದ್ಧ ನೀರು ಬಂದ ಬಳಿ ಅದನ್ನು ಪರೀಕ್ಷೆ ನಡೆಸಿ ಮನೆಮನೆಗೆ ನೀರು ಪೂರೈಸಲು ಆದ್ಯತೆ ನೀಡಲಾಗುವುದು.
-ಪ್ರಭಾಕರ ಪೂಜಾರಿ ಗುಂಡಿಬೈಲು, ಅಧ್ಯಕ್ಷರು, ನಗರಸಭೆ

ಗುತ್ತಿಗೆದಾರರಿಗೆ ನಿರ್ದೇಶನ
ವಾರಾಹಿ ಕಾಮಗಾರಿ ವೇಗವಾಗಿ ಪೂರ್ಣಗೊಳಿಸಿ, ಆದಷ್ಟು ಬೇಗ ಮನೆ ಮನೆಗೆ ನೀರು ಪೂರೈಕೆಗೆ ಈಗಾಗಲೇ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಗಿದ್ದು, ಅದರಂತೆ ಪರಿಶೀಲನ ಕಾರ್ಯ ನಡೆಯುತ್ತಿದೆ.
-ಯಶ್‌ಪಾಲ್‌ ಸುವರ್ಣ, ಶಾಸಕರು ಉಡುಪಿ

ಟಾಪ್ ನ್ಯೂಸ್

1-devendra

Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್

RCB

RCB: ‌ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್‌ ಆಫ್‌ ಸ್ಪಿನ್ನರ್ ಎಂಟ್ರಿ

1-saif

Saif Ali Khan ಬೆನ್ನುಮೂಳೆಯಿಂದ ಚಾಕು ತೆಗೆದ ವೈದ್ಯರು; ಅಪಾಯದಿಂದ ಪಾರು

Thirthahalli: ನೇಣಿಗೆ ಶರಣಾದ ಹೋಟೆಲ್ ಉದ್ಯಮಿ… ಕಾರಣ ನಿಗೂಢ

Thirthahalli: ನೇಣಿಗೆ ಶರಣಾದ ಹೋಟೆಲ್ ಉದ್ಯಮಿ… ಕಾರಣ ನಿಗೂಢ

ಬಸ್ಸಿನಲ್ಲಿ ಬಿಟ್ಟು ಹೋದ ಹಣದ ಚೀಲವನ್ನು ಮಹಿಳೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ

ಬಸ್ಸಿನಲ್ಲಿ ಬಿಟ್ಟು ಹೋದ ಹಣದ ಚೀಲವನ್ನು ಮಹಿಳೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

Team India: BCCI moves to appoint new coach

Team India: ಹೊಸ ಕೋಚ್‌ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್‌ ನಲ್ಲಿ ಪೀಟರ್ಸನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ

Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ

Udupi: ಫೆ.7ರಿಂದ 9ರವರೆಗೆ ಮಹಿಳಾ ಉದ್ಯಮಿಗಳ ಆರ್ಥಿಕ ಬಲವರ್ಧನೆಗಾಗಿ “ಪವರ್‌ ಪರ್ಬ 25′

Udupi: ಫೆ.7ರಿಂದ 9ರವರೆಗೆ ಮಹಿಳಾ ಉದ್ಯಮಿಗಳ ಆರ್ಥಿಕ ಬಲವರ್ಧನೆಗಾಗಿ “ಪವರ್‌ ಪರ್ಬ 25′

6-Udupi-Bidar

Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ

UDp-Nagarasabhe

Proposal: ಮಹಾನಗರ ಪಾಲಿಕೆ ಆಗಿ ಉಡುಪಿ ನಗರಸಭೆ: ಪ್ರಸ್ತಾವನೆಗೆ ಸೂಚನೆ

Udupi: ಮೀನುಗಾರರ ಸಮಸ್ಯೆ: ರಾಜ್ಯದಲ್ಲಿ ಏಕರೂಪತೆಗೆ ಜಿಲ್ಲಾಧಿಕಾರಿ ಚಿಂತನೆ

Udupi: ಮೀನುಗಾರರ ಸಮಸ್ಯೆ: ರಾಜ್ಯದಲ್ಲಿ ಏಕರೂಪತೆಗೆ ಜಿಲ್ಲಾಧಿಕಾರಿ ಚಿಂತನೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-devendra

Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್

RCB

RCB: ‌ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್‌ ಆಫ್‌ ಸ್ಪಿನ್ನರ್ ಎಂಟ್ರಿ

1-saif

Saif Ali Khan ಬೆನ್ನುಮೂಳೆಯಿಂದ ಚಾಕು ತೆಗೆದ ವೈದ್ಯರು; ಅಪಾಯದಿಂದ ಪಾರು

Thirthahalli: ನೇಣಿಗೆ ಶರಣಾದ ಹೋಟೆಲ್ ಉದ್ಯಮಿ… ಕಾರಣ ನಿಗೂಢ

Thirthahalli: ನೇಣಿಗೆ ಶರಣಾದ ಹೋಟೆಲ್ ಉದ್ಯಮಿ… ಕಾರಣ ನಿಗೂಢ

ಬಸ್ಸಿನಲ್ಲಿ ಬಿಟ್ಟು ಹೋದ ಹಣದ ಚೀಲವನ್ನು ಮಹಿಳೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ

ಬಸ್ಸಿನಲ್ಲಿ ಬಿಟ್ಟು ಹೋದ ಹಣದ ಚೀಲವನ್ನು ಮಹಿಳೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.