Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
ಇಂದ್ರಾಳಿ ರೈಲ್ವೇ ಬ್ರಿಡ್ಜ್: ಗರ್ಡರ್ ಜೋಡಣೆ ಕಾರ್ಯವೇ ಪೂರ್ಣಗೊಂಡಿಲ್ಲ: ಇನ್ನೂ 2-3 ತಿಂಗಳ ಕೆಲಸ ಬಾಕಿ
Team Udayavani, Jan 6, 2025, 3:52 PM IST
ಉಡುಪಿ: ಕಳೆದ 5 ವರ್ಷದಿಂದ ಆಮೆಗತಿಯಲ್ಲಿ ಸಾಗುತ್ತಿರುವ ಇಂದ್ರಾಳಿ ಸೇತುವೆ ನಿರ್ಮಾಣಕ್ಕೆ 2025ರ ಜ.15ರ ಗಡುವು ನೀಡಲಾಗಿತ್ತು. ಈ ದಿನಾಂಕದೊಳಗೆ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವೇ ಇಲ್ಲ. ಕಾರಣ ಇನ್ನೂ ಗರ್ಡರ್ ಜೋಡಣೆ ಕಾರ್ಯವೇ ಮುಗಿದಿಲ್ಲ. ವೆಲ್ಡಿಂಗ್ ಕಾರ್ಯವೂ ಸಾಕಷ್ಟಿದೆ. ಅನಂತರ ಎಳೆದು ಸೇತುವೆ ಮೇಲೆ ತಂದಿಟ್ಟು ಮಧ್ಯದಲ್ಲಿ ಕಾಂಕ್ರೀಟ್ ರಸ್ತೆ ಮಾಡಬೇಕಿದೆ. ಹೀಗಾಗಿ ಇನ್ನೂ ಕನಿಷ್ಠ 2ರಿಂದ 3 ತಿಂಗಳು ಬೇಕಿದೆ.
ಜ.15ರೊಳಗೆ ಕಾಮಗಾರಿ ಪೂರ್ಣ ಗೊಳಿಸುವುದಾಗಿ ಗುತ್ತಿಗೆಪಡೆದವರು ನಗರ ಠಾಣೆಯಲ್ಲಿ ಜನಪ್ರತಿನಿಧಿಗಳ ಎದುರು ಮುಚ್ಚಳಿಕೆ ಬರೆದುಕೊಟ್ಟಿರುವುದರಿಂದ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗುವ ಸಾಧ್ಯತೆಯೂ ಹೆಚ್ಚಿದೆ. ಅಲ್ಲದೆ ಜಿಲ್ಲಾಧಿಕಾರಿಗಳು ಕೂಡ ಕಾಮಗಾರಿ ಪೂರ್ಣಗೊಳಿಸಲು ಈಗಾಗಲೇ ಹಲವು ಬಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಕಾಮಗಾರಿ ಮಾತ್ರ ಆಮೆ ಗತಿಯಲ್ಲೇ ಸಾಗುತ್ತಿದೆ.
ಏನೇನು ಕಾಮಗಾರಿಯಾಗಿದೆ?
ಸದ್ಯ ಗರ್ಡರ್ ಜೋಡಣೆಯ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸೇತುವೆಯ ಒಂದು ರೂಪ ನಿರ್ಮಾಣವಾಗಿದೆ. ಒಂದು ಬದಿಯ ಮೇಲ್ಭಾಗದ ಹೊದಿಕೆಯನ್ನು ಅಳವಡಿಸುವುದು ಬಾಕಿಯಿದೆ. ಹಾಗೆಯೇ ಸೇತುವೆಯ ಮಧ್ಯದಲ್ಲಿ ಕಾಂಕ್ರೀಟ್ ರಸ್ತೆಗೆ ಬೇಕಾದ ಗರ್ಡರ್ ನಿರ್ಮಾಣ ಅರ್ಧದಷ್ಟು ಪೂರ್ಣಗೊಂಡಿದೆ. ಇನ್ನರ್ಧ ಬಾಕಿಯಿದೆ. ವೆಲ್ಡಿಂಗ್ ಕಾರ್ಯ ಸಾಕಷ್ಟು ಇದೆ.
ಇಲಾಖೆಗಳ ಸಮನ್ವಯ ಇಲ್ಲ
ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರೈಲ್ವೇ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯ ಮೊದಲಿನಿಂದಲೂ ಕೊರತೆಯಿದೆ. ಇಂದ್ರಾಳಿಯಲ್ಲಿ ಗರ್ಡರ್ ಬಂದು ತಿಂಗಳಾಗಿದ್ದರೂ ಕಾಮಗಾರಿ ಶುರುವಾಗಿರಲಿಲ್ಲ. ಅಪಘಾತ ಹೆಚ್ಚಾಗುತ್ತಿದ್ದಂತೆ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೇಲಿಂದ ಮೇಲೆ ಸಭೆ ಮಾಡಿ ಕಾಮಗಾರಿಗೆ ವೇಗ ನೀಡಿ ಗಡುವು ನಿಗದಿ ಪಡಿಸಿದ್ದರೂ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಕಾಮಗಾರಿ ನಿಗದಿತ ವೇಗದಲ್ಲಿ ನಡೆದೇ ಇಲ್ಲ. ರೈಲ್ವೇ ಇಲಾಖೆಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲೇ ಕಾಮಗಾರಿ ನಡೆಯುತ್ತಿರುವುದರಿಂದ ಎಲ್ಲದಕ್ಕೂ ಅನುಮತಿ ಕಡ್ಡಾಯವಾಗಿರುತ್ತದೆ. ಹೀಗಾಗಿ ಕಾಮಗಾರಿ ನಿರ್ದಿಷ್ಟ ಕಾಲಮಿತಿಯಲ್ಲಿ ಮುಗಿಸುವುದೇ ಸವಾಲು.
240 ಟನ್ ಸ್ಟೀಲ್‌ಗಳಿಂದ ಗರ್ಡರ್ ನಿರ್ಮಾಣ
58 ಮೀಟರ್ ಉದ್ದದ ಸೇತುವೆ
12.50 ಮೀಟರ್ ಅಗಲ ಇರಲಿದೆ.
1.50 ಮೀಟರ್ ಪಾದಚಾರಿ ಮಾರ್ಗ ಸೇತುವೆಯ ಎರಡೂ ಭಾಗದಲ್ಲಿ ಇರಲಿದೆ.
ರೈಲ್ವೇ ಇಲಾಖೆ ಮಾರ್ಗದರ್ಶಿಯೇ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ ಎನ್ನುವುದು ರಾ.ಹೆ. ಅಧಿಕಾರಿಗಳ ದೂರು. ಗರ್ಡರ್ ಜೋಡಣೆ ವೆಲ್ಡಿಂಗ್ ಗುಣಮಟ್ಟವನ್ನು ರೈಲ್ವೇ ಸುರಕ್ಷತಾ ಆಯುಕ್ತಾಲಯ ಮತ್ತು ರೈಲ್ವೇ ಆರ್‌ಡಿಎಸ್‌ಒ (ರಿಸರ್ಚ್ ಡಿಸೈನ್ ಆ್ಯಂಡ್ ಸ್ಟಾಂಡರ್ಡ್ ಆರ್ಗನೈಸೇಶನ್) ಸಂಬಂಧಪಟ್ಟ ತಾಂತ್ರಿಕ ಎಂಜಿನಿಯರ್ ಪರಿಶೀಲಿಸುವುದು ಕಡ್ಡಾಯವಾಗಿದೆ. ಪ್ರತಿಯೊಂದು ಕೆಲಸವೂ ಅವರು ಅನುಮೋದನೆಗೊಂಡ ಅನಂತರವೇ ಮುನ್ನಡೆಯಾಗಬೇಕು. ಗರ್ಡರ್ ರೂಪುಗೊಳ್ಳುತ್ತಿರುವ ಪ್ರತೀ ನಕ್ಷೆಗೂ ಆರ್‌ಡಿಎಸ್‌ಒ, ರೈಲ್ವೇ ಸೇಫ್ಟಿ ಸಂಬಂಧಿಸಿದ ಅಧಿಕಾರಿಗಳು ಸಹಿ ಹಾಕಬೇಕು.
ಈಗ ಏಳೆಂಟು ಕಾರ್ಮಿಕರಿಂದ ವೆಲ್ಡಿಂಗ್
ಸದ್ಯ ಇಂದ್ರಾಳಿ ಸೇತುವೆ ನಿರ್ಮಾಣ ಸಂಬಂಧ ಏಳೆಂಟು ಕಾರ್ಮಿಕರಿಂದ ನಿರಂತರ ವೆಲ್ಡಿಂಗ್ ಕಾರ್ಯ ನಡೆಯುತ್ತಿದೆ. ಹಾಗೆಯೇ ಸೇತುವೆ ಕೂರಿಸಲು ಅನುಕೂಲ ಆಗುವಂತೆ ಎರಡು ಭಾಗದಲ್ಲಿ ಕಾಂಕ್ರೀಟ್ ನಿಂದ ಸ್ಲ್ಯಾಬ್ ನಿರ್ಮಾಣ ಮಾಡಲಾಗಿದೆ. ಹಾಗೆಯೇ ಈ ಹಿಂದೆ ನಿರ್ಮಿಸಿದ್ದ ಅಡ್ಡ ಪಟ್ಟಿಗಳನ್ನು ಇದೀಗ ಸ್ವತ್ಛಗೊಳಿಸಲಾಗಿದೆ. ಬ್ರಿಡ್ಜ್ ಎಳೆಯಲು ಬೇಕಾದ ಉಪಕರಣ ಮತ್ತು ಕಾಂಕ್ರೀಟ್ ಕಟ್ಟೆ ನಿರ್ಮಾಣವೂ ಪೂರ್ಣಗೊಂಡಿದೆ. ವೆಲ್ಡಿಂಗ್ ಹಾಗೂ ಗರ್ಡರ್ ಜೋಡಣೆ ಕಾರ್ಯ ಇನ್ನು ನಡೆಯುತ್ತಲೇ ಇದೆ.
ಪ್ರಗತಿ ಪರಿಶೀಲನ ಸಭೆ
ಜ.15ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದ್ದೇವೆ. ಕಾಮಗಾರಿ ವೇಗವಾಗಿ ಸಾಗುತ್ತಿದೆ. ಹೀಗಾಗಿಯೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದ್ರಾಳಿ ರೈಲ್ವೇ ಬ್ರಿಡ್ಜ್ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯು ಜ.6ರಂದು ನಡೆಯಲಿದೆ.
-ಡಾ| ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ
ಶೀಘ್ರ ಕಾಮಗಾರಿ
ನಿರ್ದಿಷ್ಟ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಈಗಾಗಲೇ ಸೂಚನೆ ನೀಡಿದ್ದೇವೆ ಮತ್ತು ಗುತ್ತಿಗೆದಾರರಿಂದ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗಿದೆ. ಹೀಗಾಗಿ ಕಾಮಗಾರಿ ಆದಷ್ಟು ಶೀಘ್ರ ಮುಗಿಯಲಿದೆ.
-ಕೋಟ ಶ್ರೀನಿವಾಸ ಪೂಜಾರಿ, ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.