Udupi: ಸೈನಿಕರಿಗೆ ಇಟಿಪಿಬಿಎಸ್ ಮತದಾನ; ಜಿಲ್ಲೆಯಲ್ಲಿದ್ದಾರೆ 243 ಸೈನಿಕ ಮತದಾರರು
Team Udayavani, Apr 26, 2023, 3:50 PM IST
ಉಡುಪಿ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ರಂಗೇರಿದ್ದು, ಕಣದಲ್ಲಿ ಅಭ್ಯರ್ಥಿಗಳು ಅಂತಿಮವಾಗಿದ್ದಾರೆ. ಇನ್ನು ಅಂಚೆ, ಇಟಿಪಿಬಿಎಸ್ ಮತದಾನ ಪ್ರಕ್ರಿಯೆ ಚುರುಕು ಪಡೆಯಲಿದೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ 243 ಸೇವಾ ಮತದಾರರು ಇಟಿಪಿಬಿಎಸ್ (ಎಲೆಕ್ಟ್ರಾನಿಕಲಿ ಟ್ರಾನ್ಸ್‌ಮಿಟೆಡ್ ಪೋಸ್ಟಲ್ ಬ್ಯಾಲೆಟ್ (ಸ್ಟಂ) ಮೂಲಕ ಮತದಾನ ಮಾಡಲಿದ್ದಾರೆ.
ನಾಮಪತ್ರ ಹಿಂತೆಗೆದು ಕೊಳ್ಳುವ ಕೊನೆಯ ದಿನಾಂಕ ಮುಗಿದ ಅನಂತರ 24 ಗಂಟೆ ಕಳೆದು ಇಟಿಪಿಬಿಎಸ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಈಗಾಗಲೇ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು, ಬುಧವಾರ ಇಟಿಪಿಬಿಎಸ್ ಪ್ರಕ್ರಿಯೆ ಪ್ರಾರಂಭ ಗೊಳ್ಳಲಿದೆ. ಸೇನೆಗೆ ಸಂಬಂಧಿಸಿದ ಎಲ್ಲ ರೆಜಿಮೆಂಟ್ ಗಳಲ್ಲಿಯೂ ಈ ಬಗ್ಗೆ ವ್ಯವಸ್ಥೆಯನ್ನು ಚುನಾವಣೆ ಆಯೋಗ ಮಾಡಿರುತ್ತದೆ.
ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 20ರ ಉಪ ಸೆಕ್ಷನ್ (8)ರ ಅನ್ವಯ ಕೇಂದ್ರ ಶಸಸ್ತ್ರ ಪಡೆಗಳ ಸಿಬಂದಿ, ಅಧಿಕಾರಿಗಳು, ಸೇನಾ ಕಾಯ್ದೆ 1950ರ ಸೆಕ್ಷನ್ 46 ಅನ್ವಯವಾಗುವ ಸೇನಾ ಸಿಬಂದಿ, ರಾಜ್ಯದ ಹೊರ ಭಾಗಗಳಲ್ಲಿ ಪೊಲೀಸ್ ಶಸಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದವರು ಹಾಗೂ ಕೇಂದ್ರ ಸರಕಾರದ ಸೇವೆ ಮೇರೆಗೆ ವಿದೇಶಗಳಲ್ಲಿ ರಾಯಭಾರಿ ಕಚೇರಿಗಳಲ್ಲಿ ಸೇವೆ
ಸಲ್ಲಿಸುತ್ತಿರುವವರನ್ನು ಸೇವಾ ಮತದಾರರು ಎಂದು ಪರಿಗಣಿಸಲಾಗುತ್ತದೆ. ಜಿಲ್ಲೆಯಲ್ಲಿ 243 ಮಂದಿಯಲ್ಲಿ ಶೇ.90
ರಷ್ಟು ಮಂದಿ ಸೇನೆಗೆ ಸಂಬಂಧಿಸಿದ ಮತದಾರರಿದ್ದಾರೆ.
ಇಟಿಪಿಬಿಎಸ್ ಮತದಾನ ಪ್ರಕ್ರಿಯೆ ಹೇಗೆ ?
ಸೇವಾ ಮತದಾರರಾಗಿ ನೋಂದಾಯಿಸಿಕೊಳ್ಳಲು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಫಾರಂ-2ರಲ್ಲಿ ಸಶಸ್ತ್ರ ಪಡೆಗಳಲ್ಲಿ ಬೇರೆ ರಾಜ್ಯಗಳಲ್ಲಿ ಸೇವೆಯಲ್ಲಿರುವವರು ಫಾರಂ-2ರಲ್ಲಿ ಹಾಗೂ ವಿದೇಶಗಳಲ್ಲಿ ಕೇಂದ್ರ ಸರಕಾರದ ಸೇವೆಯಲ್ಲಿರುವವರು ಫಾರಂ-3 ಭರ್ತಿ ಮಾಡಿ ಆನ್‌ಲೈನ್ ನಲ್ಲಿ ನೋಂದಾಯಿಸಿಕೊಳ್ಳಬೇಕು. ಸೇವಾ ಮತದಾರರು ಮತದಾನ ಮಾಡಲು ಸಿ-ಡಾಕ್ ನೆರವಿನೊಂದಿಗೆ ಕೇಂದ್ರ ಚುನಾವಣ ಆಯೋಗವು ಇಟಿಪಿಬಿಎಸ್ ನೋಂದಾಯಿಸಿಕೊಂಡವರಿಗೆ ತಮ್ಮ ಕ್ಷೇತ್ರದ ಹೊರ
ಭಾಗದಿಂದಲೂ ಮತದಾನ ಮಾಡಲು ಇದರಿಂದ ಅವಕಾಶವಾಗುತ್ತಿದೆ.
ನೋಂದಣಿ ಮಾಡಿಕೊಂಡ ಸೇವಾ ಮತದಾರರ ಎಲೆಕ್ಟ್ರಾನಿಕ್ ಬ್ಯಾಲೆಟ್ ಅನ್ನು ಸಂಬಂಧಪಟ್ಟ ರೆಕಾರ್ಡ್ ಅಧಿಕಾರಿ ಮತ್ತು ಯೂನಿಟ್ ಅಧಿಕಾರಿಗೆ ಕಳಿಸಲಾಗುತ್ತದೆ. ಅವರು ಒಟಿಪಿ ಹಾಕಿ ಅದನ್ನು ಡೌನ್‌ಲೋಡ್ ಮಾಡಿ ಸಂಬಂಧಪಟ್ಟ ಸೇವಾ ಮತದಾರನಿಗೆ ಕೊಡಬೇಕು. ಅದನ್ನು ಭರ್ತಿ ಮಾಡಿ ಸೇವಾ ಮತದಾರರು ಲಕೋಟೆಯಲ್ಲಿ ಸಂಬಂಧಪಟ್ಟ
ಚುನಾವಣಾಧಿಕಾರಿಗೆ ಕಳುಹಿಸುತ್ತಾರೆ.
*ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.