ಉಡುಪಿ ಜಿಲ್ಲೆ ಹೊಸ ಪ್ರಕರಣಗಳಿಲ್ಲ
Team Udayavani, Apr 14, 2020, 5:13 AM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮೂವರು ಕೋವಿಡ್ 19 ಸೋಂಕಿತರಲ್ಲಿ ಒಬ್ಬರು ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಇನ್ನೊಬ್ಬರ ಪ್ರಥಮ ಮಾದರಿ ನೆಗೆಟಿವ್ ಬಂದಿದೆ.
ಪ್ರಥಮ ವರದಿ ಬಂದವರ ಎರಡನೆಯ ಮಾದರಿಯನ್ನು ಪ್ರಯೋಗಾಲಯಕ್ಕೆ ಸೋಮವಾರ ಕಳುಹಿಸಲಾಗಿದೆ. ಇನ್ನೊಬ್ಬರ ಮಾದರಿಯ ವರದಿ ಮಂಗಳವಾರ ಕೈಸೇರುವ ನಿರೀಕ್ಷೆ ಇದೆ. ಮೊದಲ ವರದಿ ಬಂದ ಬಳಿಕ ಎರಡನೆಯ ಮಾದರಿಯನ್ನು ಕಳುಹಿಸಲಾಗುವುದು. ಎರಡೂ ವರದಿಗಳು ನೆಗೆಟಿವ್ ಬಂದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾಣ ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಸೋಮವಾರ ಜಿಲ್ಲೆಯಲ್ಲಿ ಒಟ್ಟು ಎಂಟು ಮಂದಿ ಆಸ್ಪತ್ರೆಗಳ ಐಸೊಲೇಶನ್ ವಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಐವರು ಮಹಿಳೆಯರು ತೀವ್ರ ಉಸಿರಾಟದ ಸಮಸ್ಯೆ ಹೊಂದಿದ್ದರೆ, ಮೂವರು ಪುರುಷರು ಕೊರೊನಾ ಶಂಕೆಯವರು. ಪ್ರಸ್ತುತ 29 ಮಂದಿ ಐಸೊಲೇಶನ್ ವಾರ್ಡ್
ನಲ್ಲಿದ್ದಾರೆ. ಸೋಮವಾರ 10 ಮಂದಿ ವಾರ್ಡ್‌ನಿಂದ ಬಿಡುಗಡೆಗೊಂಡಿದ್ದರೆ, ಇದುವರೆಗೆ ಒಟ್ಟು 186 ಮಂದಿ ಬಿಡುಗಡೆಗೊಂಡಿದ್ದಾರೆ.
ಸೋಮವಾರ ತೀವ್ರ ಉಸಿರಾಟದ ಸಮಸ್ಯೆ ಇರುವ ಇಬ್ಬರು, ಕೋವಿಡ್ 19 ಸೋಂಕಿನ ಸಂಪರ್ಕದ 51 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈಗಾಗಲೇ ಕಳುಹಿಸಿದ 41 ಜನರ ಮಾದರಿಗಳ ನೆಗೆಟಿವ್ ವರದಿ ಕೈಸೇರಿದೆ. 56 ಮಂದಿಯ ವರದಿ ಬರಬೇಕಾಗಿದೆ.
ಸೋಮವಾರ 16 ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದುವರೆಗೆ ಒಟ್ಟು 2,129 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಸೋಮವಾರ 141 ಮಂದಿ 28 ದಿನಗಳ, 12 ಮಂದಿ 14 ದಿನಗಳ ನಿಗಾ ಮುಗಿಸಿದ್ದಾರೆ. ಇದುವರೆಗೆ 1,117 ಮಂದಿ 28 ದಿನಗಳ, 1,951 ಮಂದಿ 14 ದಿನಗಳ ನಿಗಾವನ್ನು ಮುಗಿಸಿದ್ದಾರೆ. ಪ್ರಸ್ತುತ 112 ಮಂದಿ ಗೃಹ ನಿಗಾದಲ್ಲಿಯೂ 37 ಮಂದಿ ಆಸ್ಪತ್ರೆ ನಿಗಾದಲ್ಲಿಯೂ ಇದ್ದಾರೆ. ಸೋಮವಾರ 9 ಮಂದಿ ಆಸ್ಪತ್ರೆ ನಿಗಾಕ್ಕೆ ಸೇರ್ಪಡೆಗೊಂಡರೆ 29 ಮಂದಿ ಆಸ್ಪತ್ರೆ ನಿಗಾದಿಂದ ಬಿಡುಗಡೆಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.