Udupi: ದೀಪಾವಳಿ ಪಟಾಕಿ; ನಿರ್ಬಂಧಗಳದೇ ಸದ್ದು!

ಮೈದಾನ, ತೆರೆದ ಪ್ರದೇಶಗಳಲ್ಲಿ ಮಾತ್ರ ಅವಕಾಶ; ಮಳಿಗೆಗಾಗಿ ಈಗಾಗಲೇ 200ಕ್ಕೂ ಅಧಿಕ ಅರ್ಜಿ ಸಲ್ಲಿಕೆ

Team Udayavani, Oct 20, 2024, 6:00 PM IST

12

ಉಡುಪಿ: ದೀಪಾವಳಿ ಆಚರಣೆಗೆ ದಿನಗಣನೆ ಆರಂಭಗೊಂಡಿದೆ. ಈ ನಡುವೆ ಪಟಾಕಿ ಮಾರಾಟ ಪರವಾನಿಗೆ ನಿಯಮಾವಳಿಗಳೂ ಸದ್ದು ಮಾಡುತ್ತಿದೆ.

ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟಕ್ಕಾಗಿಯೇ ವಿಶೇಷ ವ್ಯವಸ್ಥೆ ಇರುವುದರಿಂದ ಹಲವರು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಜಿಲ್ಲಾದ್ಯಂತ 200ಕ್ಕೂ ಅಧಿಕ ಅರ್ಜಿ ಈಗಾಗಲೇ ಸಲ್ಲಿಕೆಯಾಗಿದ್ದು ಕಾನೂನುಬದ್ಧವಾಗಿ ಪರಿಶೀಲಿಸಿ, ನಿಯಮ ಬದ್ಧ ಅರ್ಜಿಗಳಿಗೆ ಅನುಮತಿ ಜಿಲ್ಲಾಡಳಿತ ನೀಡಲಿದೆ.

ಆಯಾ ಠಾಣಾ ವ್ಯಾಪ್ತಿಯಲ್ಲಿ ಬರುವ ಕಿರಿದಾದ, ಜನನಿಬಿಡ ಮತ್ತು ವಾಣಿಜ್ಯ ಸಂಕೀರ್ಣ ಸ್ಥಳಗಳಲ್ಲಿ ಯಾವುದೇ ಖಾಯಂ ಅಂಗಡಿ ಅಥವಾ ಕಟ್ಟಡಗಳಲ್ಲಿ ಚಿಲ್ಲರೆ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆ ಯಲು, ಪಟಾಕಿಗಳ ದಾಸ್ತಾನು ಹಾಗೂ ಮಾರಾಟಕ್ಕೆ ಅನುಮತಿ ನೀಡದಿರಲು ಜಿಲ್ಲಾಡಳಿತ ನಿರ್ಧರಿಸಿದೆ.

ಜನವಸತಿ ಪ್ರದೇಶಗಳಲ್ಲಿ ನಿಷೇಧ
ಪಟಾಕಿಗಳನ್ನು ಅಧಿಕಾರಿಗಳು ನಿಗದಿಪಡಿಸಿದ ಮೈದಾನ ಅಥವಾ ತೆರೆದ ಪ್ರದೇಶಗಳಲ್ಲಿ, ಸ್ಥಳೀಯ ಆಡಳಿತ ಅನುಮತಿ ನೀಡಿರುವ ತಾತ್ಕಾಲಿಕ ಮಳಿಗೆಗಳಲ್ಲಿ ಮಾತ್ರ ದಾಸ್ತಾನು ಮಾಡಲು ಹಾಗೂ ಮಾರಾಟಕ್ಕೆ ಅನುಮತಿ ಕಲ್ಪಿಸಲಾಗಿದೆ. ನಗರ ಭಾಗ, ಜನವಸತಿ ಸ್ಥಳಗಳಲ್ಲಿ ಇದರ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮಾರಾಟಗಾರರು ನಿರ್ದಿಷ್ಟ ಮೊತ್ತವನ್ನು ಸರಕಾರಿ ಖಜಾನೆಗೆ ಜಮೆ ಮಾಡುವುದನ್ನೂ ಕಡ್ಡಾಯಗೊಳಿಸಲಾಗಿದೆ.

ದೀಪಾವಳಿ ಹಬ್ಬಕ್ಕೂ ಮೊದಲೇ ಮಾರಾಟ
ಪಟಾಕಿ ಮಾರಾಟದಲ್ಲಿ ವ್ಯಾಪಾರಸ್ಥರು ಶೇ.80ರಷ್ಟು ಕಮಿಷನ್‌ ಗಿಟ್ಟಿಸಿಕೊಳ್ಳುತ್ತಾರೆ ಎಂಬ ಮಾತಿದೆ. ದೀಪಾವಳಿಗೂ 2ರಿಂದ 3 ದಿನಗಳ ಮೊದಲೇ ವ್ಯಾಪಾರ ಆರಂಭಗೊಳ್ಳಲಿದ್ದು ಗ್ರಾಹಕರು ಕೂಡ ಮುಗಿಬಿದ್ದು ಪಟಾಕಿ ಖರೀದಿಸಲಿದ್ದಾರೆ. ಈ ಬಾರಿ ಮಳೆ ಬರುವ ಮುನ್ಸೂಚನೆಯಿದ್ದು, ಇದಕ್ಕೆ ಪೂರಕವಾಗಿಯೇ ಸಕಲ ತಯಾರಿ ಮಾಡಲು ವ್ಯಾಪಾರಸ್ಥರು ಸಜ್ಜಾಗಿದ್ದಾರೆ.

ಹಸುರು ಪಟಾಕಿ ಹೆಸರಿಗೆ ಮಾತ್ರ, ಬೇಡಿಕೆ ಕಡಿಮೆ
ಕಳೆದ ಮೂರ್‍ನಾಲ್ಕು ವರ್ಷಗಳಿಂದ ಹಸುರು ಪಟಾಕಿ ಹೆಚ್ಚು ಸದ್ದು ಮಾಡುತ್ತಿದೆ. ಸರಕಾರ, ಜಿಲ್ಲಾಡಳಿತವೂ ಪರಿಸರ ಮಾಲಿನ್ಯ ತಡೆ ನಿಟ್ಟಿನಲ್ಲಿ ಹಸುರು ಪಟಾಕಿಗೆ ಉತ್ತೇಜನ ನೀಡುತ್ತಾ ಬಂದಿದೆ. ಆದರೆ, ಹಸುರು ಪಟಾಕಿಯ ಬಗ್ಗೆ ಜನರಲ್ಲಿ ಒಲವು ಕಡಿಮೆ. ಹೀಗಾಗಿ ಬೇಡಿಕೆಯೂ ಕಡಿಮೆ ಎನ್ನುತ್ತಾರೆ ವ್ಯಾಪಾರಿಯೊಬ್ಬರು.

ಆನ್‌ಲೈನ್‌ ಪೂರೈಕೆ ಪೊಲೀಸರ ಕಣ್ಣು
ಜಿಲ್ಲಾಡಳಿತ ಅದೆಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡರೂ ಆನ್‌ಲೈನ್‌ ಮೂಲಕ ವಿವಿಧ ರೀತಿಯ ಪಟಾಕಿಗಳು ಸುಲಭದಲ್ಲಿ ಪೂರೈಕೆಯಾಗುತ್ತಿವೆ. ಜತೆಗೆ ವಾಟ್ಸಾಪ್‌ ಸಹಿತ ವಿವಿಧ ಸಾಮಾಜಿಕ ಜಾಲತಾಣದ ಮೂಲಕ ಕಡಿಮೆ ದರಕ್ಕೆ ಮನೆಬಾಗಿಲಿಗೆ ತಂದು ಪೂರೈಸುವ ಕೆಲಸವೂ ನಡೆಯುತ್ತಿದ್ದು, ಈ ಬಗ್ಗೆಯೂ ಪೊಲೀಸರು ಕಣ್ಗಾವಲು ಇರಿಸಲು ನಿರ್ಧರಿಸಿದ್ದಾರೆ. ಅಂತಹ ಸಂದೇಶಗಳಿದ್ದರೆ ಇಲಾಖೆಗೆ ಸೂಚನೆ ನೀಡುವಂತೆಯೂ ಪೊಲೀಸರು ತಿಳಿಸಿದ್ದಾರೆ.

ಪರಿಶೀಲನೆ ಬಳಿಕ ಅನುಮತಿ
ಪಟಾಕಿ ಮಾರಾಟಕ್ಕೆ ಅನುಮತಿ ಬಯಸುವವರಿಗೆ ಅ. 23ರ ವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಸಾಕಷ್ಟು ಅರ್ಜಿಗಳು ಬಂದಿದ್ದು, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿದ ಬಳಿಕವೇ ಅನುಮತಿ ನೀಡಲಾಗುವುದು.
-ಡಾ| ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ

ನಿಯಮ ಏನೇನು?
ರಾತ್ರಿ ವೇಳೆ ಪಟಾಕಿ ಮಾರುವಂತಿಲ್ಲ

  • ಮೈದಾನ ಇಲ್ಲವೇ ತೆರೆದ ಪ್ರದೇಶದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ.
  • ಮಳಿಗೆಗಳಲ್ಲಿ ಎರಡೂ ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು.
  • ಮಳಿಗೆ ನಿರ್ಮಿಸಲು ಬಳಸುವ ಸಾಮಗ್ರಿಗಳು ಸುಲಭವಾಗಿ ಬೆಂಕಿ ಹತ್ತಿಸಿಕೊಳ್ಳುವಂತೆ ಇರಬಾರದು.
  • ಬೆಂಕಿ ತಡೆಗಟ್ಟಬಲ್ಲ ಸಾಮಗ್ರಿಗಳನ್ನು ಮಾತ್ರ ಮಳಿಗೆ ನಿರ್ಮಾಣಕ್ಕೆ ಉಪಯೋಗಿಸಬೇಕು.
  • ಪ್ರತಿಯೊಂದು ಮಳಿಗೆಗೆ ಮುಂದಿನಿಂದ, ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರಬೇಕು.
  • ಮಳಿಗೆಗಳ ಗಾತ್ರ 10×10 ಚದರ ಅಡಿಗೆ ಸೀಮಿತಗೊಳಿಸಬೇಕು
  • ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ಮಾರಾಟಕ್ಕೆ ಅವಕಾಶ. ರಾತ್ರಿ ವೇಳೆ ಪಟಾಕಿ ಮಾರುವಂತಿಲ್ಲ.
  • ಮಳಿಗೆಯೊಳಗೆ ರಾತ್ರಿ ವೇಳೆ ಯಾರು ಕೂಡ ಮಲಗದಂತೆ ಸೂಚನೆ ನೀಡಲಾಗಿದೆ.
  • ಪ್ರತಿಯೊಂದು ಮಳಿಗೆಗಳಲ್ಲಿ 9 ಲೀ. ಸಾಮರ್ಥ್ಯದ ಅಗ್ನಿನಂದಕ ಹಾಗೂ 2 ಬಕೆಟ್‌ಗಳಲ್ಲಿ ನೀರು ಇಡಬೇಕು.
  • ಪ್ರತೀ ಮಳಿಗೆ ಪಕ್ಕದಲ್ಲಿ ಕನಿಷ್ಠ 400 ಲೀ.ನಷ್ಟು ನೀರು ಶೇಖರಿಸಬೇಕು.

ಟಾಪ್ ನ್ಯೂಸ್

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

u1

Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.