Udupi: ಹೊಟ್ಟೆ ನೋವಿನಿಂದ ಬಳಲಿ ಬಾಲಕಿ ಸಾವು
Team Udayavani, Oct 10, 2024, 7:00 AM IST
ಉಡುಪಿ: ಇಲ್ಲಿನ 76 ಬಡಗಬೆಟ್ಟಿನ ಯಲ್ಲಪ್ಪ ಅವರ ಪುತ್ರಿ ಅಶ್ವಿನಿ (8) ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪಿದ್ದಾಳೆ.
ಆಕೆ ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಸೂಕ್ತ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದರು. ಅ. 9ರಂದು ಬೆಳಗ್ಗೆ ಮತ್ತೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯಾಧಿಕಾರಿಗಳು ತುರ್ತು ನಿಗಾ ಘಟಕದಲ್ಲಿ ದಾಖಲಿಸಿದ್ದರು. ಸ್ಪಲ್ಪ ಸಮಯದ ಬಳಿಕ ವೈದ್ಯಾಧಿಕಾರಿಗಳು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.