Udupi: 10 ವರ್ಷದಲ್ಲಿ 27,712 ಮಂದಿಯಿಂದ ಕಷ್ಟ ನಿವೇದನೆ

ಉಡುಪಿಯಲ್ಲಿ ಹಿರಿಯ ನಾಗರಿಕರಿಗೆ 1090 ನಂಬರಿನ ಸಹಾಯವಾಣಿಯ ಶ್ರೀರಕ್ಷೆ

Team Udayavani, Jan 30, 2025, 3:17 PM IST

15(2

ಉಡುಪಿ: ನೊಂದವರ, ನಿರ್ಲಕ್ಷಿತ, ನಿರ್ಗತಿಕ ಹಾಗೂ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರ ಹಿತರಕ್ಷಣೆಗೆ ಇರುವ ಹಿರಿಯರ ಜಿಲ್ಲಾ ಸಹಾಯವಾಣಿ ಕೇಂದ್ರ 10 ವರ್ಷ ಪೂರೈಸಿದೆ. ಇದುವರೆಗೆ 27,712 ಹಿರಿಯ ನಾಗರಿಕರು ಕೇಂದ್ರದ ಮೂಲಕ ನೆರವು ಪಡೆದು ಕಷ್ಟ ನಿವೇದಿಸಿಕೊಂಡಿದ್ದಾರೆ.

2014ರಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಸ್ಥಾಪಿಸಲಾಗಿದೆ. 2014ರಿಂದ 2024ರ ಡಿಸೆಂಬರ್‌ ತನಕ ಮಾಹಿತಿ ಕೋರಿ 21,347 ಕರೆ ಬಂದಿದೆ. ನೇರ ಭೇಟಿಯ ಮೂಲಕ 2,470 ಮಂದಿ ಮಾಹಿತಿ ಪಡೆದುಕೊಂಡಿದ್ದಾರೆ. ಕೇಂದ್ರದಲ್ಲಿ ದಾಖಲಾದ ದೂರು 1220. ಕೇಂದ್ರದಿಂದ ಒದಗಿಸಲಾದ ವಿವಿಧ ರೀತಿಯ ಸೇವೆಗಳ ಪೈಕಿ ಆಪ್ತ ಸಮಾಲೋಚನೆ 1515. ಕಾನೂನು ಸಲಹೆ 883. ಪೊಲೀಸ್‌ ನೆರವು 91. ಪುನರ್ವಸತಿ 186 ಆಗಿರುತ್ತದೆ.

ಏನೇನು ಸಮಸ್ಯೆಗಳಿಗೆ ಪರಿಹಾರ?
ಕೌಟುಂಬಿಕ, ಸಾಂಸಾರಿಕ ಸಮಸ್ಯೆಗಳಿಗೆ ಆಪ್ತ ಸಮಾಲೋಚನೆ ಮೂಲಕ ಸಂಧಾನ, ಸಲಹೆ, ಮಾರ್ಗದರ್ಶನ ಅನುಸರಿಸಿ ಪರಿಹಾರ. ದೈಹಿಕ ಹಿಂಸೆಯಾದವರಿಗೆ ಪೊಲೀಸ್‌ ಇಲಾಖೆ ಮೂಲಕ ಅಗತ್ಯ ನೆರವು, ರಕ್ಷಣೆ. ಆಶ್ರಯದ ಅಗತ್ಯವಿದ್ದವರಿಗೆ ಇಲಾಖೆಯ ನೆರವಿನಿಂದ ಆಶ್ರಮದಲ್ಲಿ ಪುನರ್ವಸತಿ ಕಲ್ಪಿಸಿರುವುದು. ಉಚಿತ ಕಾನೂನು ಸಲಹೆ, ಮಾರ್ಗದರ್ಶನ. ದೌರ್ಜನ್ಯಕ್ಕೆ ಅನುಗುಣವಾಗಿ ವೈದ್ಯಕೀಯ ಸಲಹೆ ಮತ್ತು ಸೇವೆ ದೊರಕಿಸಲಾಗಿದೆ. ಸರಕಾರದ ಸಂಧ್ಯಾ ಸುರಕ್ಷಾ ಯೋಜನೆ, ಹಿರಿಯರ ಗುರುತಿನ ಚೀಟಿ ಹಾಗೂ ಇತರೆ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹಿರಿಯ ನಾಗರಿಕರಿಗೆ ಒದಗಿಸಲಾಗಿದೆ.

2020ರಿಂದ ಈವರೆಗೆ ಬಂದ ಕರೆ ಸಹಿತ ವಿವಿಧ ವಿವರ

ದಿನಪೂರ್ತಿ ಸೇವೆ
ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಒಬ್ಬರು ಜಿಲ್ಲಾ ಯೋಜನ ಸಂಯೋಜಕರು, ಮೂರು ಮಂದಿ ಆಪ್ತ ಸಮಾಲೋಚಕರು ಕಾರ್ಯನಿರ್ವಹಿಸುತ್ತಿದ್ದಾರೆ. ದಿನದ 24 ತಾಸು ಸಹಾಯವಾಣಿ ತೆರೆದಿರುತ್ತದೆ. ಹಿರಿಯ ನಾಗರಿಕರು ಸಹಾಯಕ್ಕಾಗಿ 1090 ಟೋಲ್‌ ಪ್ರೀಗೆ ಕರೆ ಮಾಡಬಹುದು. ಬನ್ನಂಜೆಯಲ್ಲಿರುವ ಸಹಾಯವಾಣಿ ಕಚೇರಿಗೆ ನೇರವಾಗಿಯೂ ಸಂಪರ್ಕಿಸಬಹುದು.

ಕೌಟುಂಬಿಕ ಪ್ರಕರಣ ಹೆಚ್ಚಳ
ದಾಖಲಾದ ಪ್ರಕರಣಗಳಲ್ಲಿ ಹೆಚ್ಚಿನದ್ದು ಮಕ್ಕಳಿಂದ, ಸಂಬಂಧಿಕರಿಂದ ಕಿರುಕುಳ, ಆಸ್ತಿ ವಿಚಾರದಲ್ಲಿ ತಗಾದೆ, ಮಾನಸಿಕ ಕಿರುಕುಳ ಇತ್ಯಾದಿಗಳಿಗೆ ಸೇರಿದ್ದಾಗಿದೆ. ಇನ್ನುಳಿದಂತೆ ಪಿಂಚಣಿ ಸವಲತ್ತಿನ ನೆರವು ಕೋರಿ ಹಿರಿಯ ನಾಗರಿಕರು ಸಹಾಯವಾಣಿಗೆ ಬರುತ್ತಿದ್ದಾರೆ.

ಅಳುಕಿಲ್ಲದೆ ನೆರವು ಪಡೆಯಿರಿ
ಹತ್ತು ವರ್ಷದಲ್ಲಿ ಹಲವು ಮಂದಿ ಹಿರಿಯರು ಕೇಂದ್ರದ ನೆರವು ಪಡೆದಿದ್ದಾರೆ, ಕೌಟುಂಬಿಕ ದೌರ್ಜನ್ಯ, ಸವಲತ್ತಿನಿಂದ ವಂಚನೆಗೊಳಗಾದ ನೊಂದ ಹಿರಿಯ ನಾಗರಿಕರೂ ಸಹಾಯಕ್ಕಾಗಿ ಬರುತ್ತಾರೆ. ಅಂತಹವರಿಗೆ ನೆರವಾಗಿದ್ದೇವೆ. ನೊಂದ ಹಿರಿಯ ಜೀವಗಳು ಕೇಂದ್ರದ ನೆರವು ಪಡೆಯವಹುದು.
-ರತ್ನಾ ಸುವರ್ಣ, ಜಿಲ್ಲಾ ಯೋಜನಾ ಸಂಯೋಜಕಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಉಡುಪಿ

-ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳುಮಾಡಿಕೊಳ್ಳದ ಭಗವಂತ

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳು ಮಾಡಿಕೊಳ್ಳದ ಭಗವಂತ

Mangaluru: ಪಿಲಿಕುಳದ ಸಮಗ್ರ ಅಭಿವೃದ್ಧಿಗೆ 165 ಕೋ.ರೂ. ಪ್ರಸ್ತಾವನೆ

Mangaluru: ಪಿಲಿಕುಳದ ಸಮಗ್ರ ಅಭಿವೃದ್ಧಿಗೆ 165 ಕೋ.ರೂ. ಪ್ರಸ್ತಾವನೆ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

Kinnigoli: ಅಕ್ರಮ ಮರಳು ಅಡ್ಡೆಗೆ ಪೋಲಿಸ್‌ ದಾಳಿ

Kinnigoli: ಅಕ್ರಮ ಮರಳು ಅಡ್ಡೆಗೆ ಪೋಲಿಸ್‌ ದಾಳಿ

Mulki ಆವರಣ ಗೋಡೆಗೆ ಕಾರು ಢಿಕ್ಕಿ; ಚಾಲಕ ಪಾರು

Mulki ಆವರಣ ಗೋಡೆಗೆ ಕಾರು ಢಿಕ್ಕಿ; ಚಾಲಕ ಪಾರು

Karkala; ಕಾರು-ಬೈಕ್‌ ಢಿಕ್ಕಿ: ಸವಾರ ಗಂಭೀರ

Karkala; ಕಾರು-ಬೈಕ್‌ ಢಿಕ್ಕಿ: ಸವಾರ ಗಂಭೀರ

Mangaluru: ಭೂವಿವಾದ, ಕಳೆ ಕತ್ತರಿಸುವ ಯಂತ್ರದಿಂದ ಹಲ್ಲೆ: ನಾಲ್ವರಿಗೆ ಶಿಕ್ಷೆ

Mangaluru: ಭೂವಿವಾದ, ಕಳೆ ಕತ್ತರಿಸುವ ಯಂತ್ರದಿಂದ ಹಲ್ಲೆ: ನಾಲ್ವರಿಗೆ ಶಿಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳುಮಾಡಿಕೊಳ್ಳದ ಭಗವಂತ

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳು ಮಾಡಿಕೊಳ್ಳದ ಭಗವಂತ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

Karkala; ಕಾರು-ಬೈಕ್‌ ಢಿಕ್ಕಿ: ಸವಾರ ಗಂಭೀರ

Karkala; ಕಾರು-ಬೈಕ್‌ ಢಿಕ್ಕಿ: ಸವಾರ ಗಂಭೀರ

Kaup: ಯುವಕರ ಮೇಲೆ ಹಲ್ಲೆ, ಮನೆಯವರಿಗೆ ಬೆದರಿಕೆ: ಪ್ರಕರಣ ದಾಖಲು

Kaup: ಯುವಕರ ಮೇಲೆ ಹಲ್ಲೆ, ಮನೆಯವರಿಗೆ ಬೆದರಿಕೆ: ಪ್ರಕರಣ ದಾಖಲು

Udupi: ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದ ವ್ಯಕ್ತಿ 30 ಅಡಿ ಎತ್ತರದಿಂದ ಬಿದ್ದು ಸಾವುUdupi: ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದ ವ್ಯಕ್ತಿ 30 ಅಡಿ ಎತ್ತರದಿಂದ ಬಿದ್ದು ಸಾವು

Udupi: ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದ ವ್ಯಕ್ತಿ 30 ಅಡಿ ಎತ್ತರದಿಂದ ಬಿದ್ದು ಸಾವು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳುಮಾಡಿಕೊಳ್ಳದ ಭಗವಂತ

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳು ಮಾಡಿಕೊಳ್ಳದ ಭಗವಂತ

Mangaluru: ಪಿಲಿಕುಳದ ಸಮಗ್ರ ಅಭಿವೃದ್ಧಿಗೆ 165 ಕೋ.ರೂ. ಪ್ರಸ್ತಾವನೆ

Mangaluru: ಪಿಲಿಕುಳದ ಸಮಗ್ರ ಅಭಿವೃದ್ಧಿಗೆ 165 ಕೋ.ರೂ. ಪ್ರಸ್ತಾವನೆ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

Kinnigoli: ಅಕ್ರಮ ಮರಳು ಅಡ್ಡೆಗೆ ಪೋಲಿಸ್‌ ದಾಳಿ

Kinnigoli: ಅಕ್ರಮ ಮರಳು ಅಡ್ಡೆಗೆ ಪೋಲಿಸ್‌ ದಾಳಿ

Mulki ಆವರಣ ಗೋಡೆಗೆ ಕಾರು ಢಿಕ್ಕಿ; ಚಾಲಕ ಪಾರು

Mulki ಆವರಣ ಗೋಡೆಗೆ ಕಾರು ಢಿಕ್ಕಿ; ಚಾಲಕ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.