Udupi: ತೋಟಗಾರಿಕೆ ಬೆಳೆಗಳಿಗೆ ಸಂಕಷ್ಟ ತಂದ ಹವಾಮಾನ ವೈಪರೀತ್ಯ
ರೋಗ ಬಾಧೆಯಿಂದ ಬೆಳೆ ನಷ್ಟ; ಇಳುವರಿ ಕುಂಠಿತ!
Team Udayavani, Sep 3, 2024, 3:53 PM IST
ಉಡುಪಿ: ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು ಸಂಕಷ್ಟದ ಪರಿಸ್ಥಿತಿಯಲ್ಲಿದೆ ಎಂಬುದು ಬಹುತೇಕ ಬೆಳೆಗಾರರು ಅಳಲು.
ಅಡಿಕೆ, ತೆಂಗು, ಕಾಳುಮೆಣಸು ಬೆಳೆಗಳಿಗೆ ನಾನಾ ರೀತಿಯ ಸಮಸ್ಯೆಗಳು ಕಾಡತೊಡಗಿದೆ. ಇದೇ ರೀತಿ ಬಾಳೆ, ಮಾವು ಇಳುವರಿಯಲ್ಲಿಯೂ ಸಾಕಷ್ಟು ವ್ಯತ್ಯಾಸ ಸಂಭವಿಸಬಹುದು ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅತೀಯಾದ ಗಾಳಿಮಳೆ, ಬಿರು ಬಿಸಿಲು ವಾತಾವರಣದಂತಹ ಪರಿಸ್ಥಿತಿಯಲ್ಲಿ ತೋಟಗಾರಿಕೆ ಬೆಳೆ ಏರಿಳಿತವಾಗುತ್ತಿದೆ. ಕಾರ್ಕಳ, ಕುಂದಾಪುರ ಭಾಗದಲ್ಲಿ ಹೆಚ್ಚಿರುವ ತೆಂಗು, ಅಡಿಕೆ, ಕಾಳು ಮೆಣಸು ಬೆಳೆಗಳಿಗೆ ವಿವಿಧ ಬಾಧೆಗಳು ಕಾಣಿಸಿಕೊಳ್ಳುತ್ತಿವೆ.
4 ವರ್ಷಗಳ ಅನಂತರ ಅಡಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಕೊಳೆ ರೋಗ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ. ಈಗಾಗಲೇ ಅಡಿಕೆ ಶೇ.25 ಬೆಳೆ ನಷ್ಟ ಸಂಭವಿಸಿದೆ. ಕಾಳು ಮೆಣಸಿಗೆ ಸೊರಗು ರೋಗ ಕಾಣಿಸಿಕೊಂಡಿದ್ದು, ಬಳ್ಳಿಗಳು ಬಳಲಿ ಇಳುವರಿ ಕುಂಠಿತವಾಗಲಿದೆ. ತೆಂಗಿನ ಮರದಿಂದ ಕಾಯಿ ಬಲಿತಗೊಳ್ಳುವ ಮೊದಲೇ ನೆಲಕ್ಕೆ ಉದುರುತ್ತಿವೆ. ಬಾಳೆ ಬೆಳೆಗೂ ಹವಾಮಾನ ವೈಪರೀತ್ಯ ಹೊಡೆತ ನೀಡಿದೆ. ಇದು ಹೀಗೆ ಮುಂದುವರಿದಲ್ಲಿ ತೋಟಗಾರಿಕೆ ಬೆಳೆ ಹೆಚ್ಚು ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಭಾರತೀಯ ಕಿಸಾನ್ ಸಂಘದ ಪ್ರ. ಕಾರ್ಯದರ್ಶಿ ಸತ್ಯನಾರಾಯಣ ಉಡುಪ.
ಕೃಷಿ ವಿಜ್ಞಾನಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ಷೇತ್ರ ಭೇಟಿ ಮಾಡಿ ಈ ಬಗ್ಗೆ ಸರಕಾರಕ್ಕೆ ಸಮಗ್ರ ವರದಿ ನೀಡಿ ಬೆಳೆಗಾರರಿಗೆ ವಿಪತ್ತು ಪರಿಹಾರ ವಿಶೇಷ ಪ್ಯಾಕೇಜ್ ಘೋಷಿಸಲು ಜಿಲ್ಲೆಯ ಬೆಳೆಗಾರರು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಗಾಳಿ ಹೊಡೆತಕ್ಕೆ ತೋಟ ನಾಶ
ಈ ಬಾರಿ ಮಳೆಯ ಜತೆಗೆ ಅತ್ಯಂತ ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದ ಹಲವು ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದೆ. ಕುಂದಾಪುರ, ಕಾರ್ಕಳ, ಹೆಬ್ರಿ, ಬ್ರಹ್ಮಾವರ ಭಾಗದಲ್ಲಿ ಗಾಳಿಯಿಂದ ಬಹುತೇಕ ಅಡಿಕೆ ಮರಗಳು ನೆಲಕ್ಕುರುಳಿವೆ. ಸಾಕಷ್ಟು ವರ್ಷ ಸಸಿ ನೆಟ್ಟು, ಬೆಳೆಸಿ, ಪೋಷಿಸಿದ ಮರಗಳು ನೆಲಕ್ಕೆ ಉರುಳುತ್ತಿರುವುದನ್ನು ಕಂಡು ಬೆಳೆಗಾರರು ಮರುಗುತ್ತಿದ್ದಾರೆ. ಮರದಿಂದ ಮರಕ್ಕೆ ಬಾಳೆ ಗಿಡದ ಮಾದರಿಯಲ್ಲಿ ಹಗ್ಗವನ್ನು ಕಟ್ಟಿ ಗಿಡಗಳನ್ನು ಉಳಿಸಲು ಮುಂದಾಗಿದ್ದಾರೆ.
ಕ್ಷೇತ್ರ ತಪಾಸಣೆ
ಜಿಲ್ಲೆಯಲ್ಲಿ ಗಾಳಿ, ಬಿರುಸಿನ ಮಳೆ, ಬಿಸಿಲು ಹವಾಮಾನ ವೈಪರೀತ್ಯ ಪರಿಣಾಮ ತೋಟಗಾರಿಕೆ ಬೆಳೆಗಳ ಮೇಲೆ ಆಗುತ್ತಿರುವ ಪ್ರತಿಕೂಲ ಪರಿಣಾಮಗಳ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿ, ತಜ್ಞರು ಕ್ಷೇತ್ರ ತಪಾಸಣೆ ಕೈಗೊಂಡಿದ್ದಾರೆ. ಈ ಬಗ್ಗೆ ಜಂಟಿ ತಪಾಸಣೆ ನಡೆಸಿ ಸೂಕ್ತ ವರದಿ ನೀಡುವಂತೆ ವಲಯ ಕೃಷಿ ಮತ್ತು ಸಂಶೋಧನ ಕೇಂದ್ರಕ್ಕೂ ಪತ್ರ ಬರೆಯಲಾಗಿದೆ.
– ಭುವನೇಶ್ವರಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ. ಉಡುಪಿ ಜಿಲ್ಲೆ
ಬೆಳೆ ವಿಮೆ ಮಾಡಿಸಿದರೆ ಸಕಾಲದಲ್ಲಿ ಪರಿಹಾರ
ಎಪ್ರಿಲ್ ಮೇ ಬೇಸಗೆ ಬಿಸಿಲಿನಲ್ಲಿ ಅಡಿಕೆ ಕೃಷಿಗೆ ಕೀಟದ ಹಾವಳಿ ಹೆಚ್ಚಿತ್ತು. ಮತ್ತು ಅಡಿಕೆ ಗಿಡಗಳಿಗೆ ಔಷಧ ಹೊಡೆಯದಿದ್ದ ಕೆಲವರು ರೈತರು ಇದೀಗ ಕೊಳೆ ರೋಗ ಭೀತಿ ಎದುರಿಸುತ್ತಿದ್ದಾರೆ. ಅಲ್ಲದೆ ಮಳೆ ಹೆಚ್ಚಾಗಿ ಕಡಿಮೆಯಾಗಿ ಬಿಸಿಲು ಹೆಚ್ಚಿರುವುದರಿಂದ ಎಲೆಚುಕ್ಕಿ ರೋಗದ ಬಾಧೆ ಹೆಚ್ಚಾಗುವ ಭೀತಿ ಇದೆ. ಬೆಳೆಯ ಉತ್ಪಾದನೆ ಗುಣಮಟ್ಟದಲ್ಲಿ ಇಳಿಕೆ ಕಂಡು ಬರುವ ಸಾಧ್ಯತೆ ಇದೆ. ಸದ್ಯಕ್ಕೆ ರೈತರು ಬೆಳೆ ವಿಮೆ ಯೋಜನೆ ಪರಿಹಾರವನ್ನು ಸಕಾಲದಲ್ಲಿ ಮಾಡಿಸಿಕೊಂಡಲ್ಲಿ ಬೆಳೆ ನಷ್ಟಕ್ಕೆ ಪರಿಹಾರ ಪಡೆಯಲು ಅನುಕೂಲವಾಗಲಿದೆ ಎಂದು ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.