Udupi: ರಜತ ಕವಚ, ಪ್ರಭಾವಳಿ ಸಮರ್ಪಣೆ
Team Udayavani, Jan 28, 2024, 10:38 PM IST
ಉಡುಪಿ: ಉಡುಪಿಯ ಕಿದಿಯೂರು ಹೊಟೇಲ್ಸ್ ನ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತವಾಗಿ ಜ. 27ರಂದು ಬೆಳಗ್ಗೆ ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ ಶ್ರೀ ನಾಗ ದೇವರಿಗೆ ನೂತನವಾಗಿ ನಿರ್ಮಿಸಲಾದ ಭವ್ಯ ರಜತ ಮಂಟಪ, ರಜತ ಕವಚಗಳ ಮತ್ತು ಸ್ವರ್ಣ ಲೇಪಿತ ರಜತ ಪಭಾವಳಿಯಲ್ಲಿ ರಜತ ಬಲಿ ಮೂರ್ತಿಯ ಸಮರ್ಪಣೆ ನಡೆಯಿತು. ಪವಮಾನ ಹೋಮ ಆಯುತ ಸಂಖ್ಯಾಕ ತಿಲಹೋಮ, ಕೂಷ್ಮಾಂಡ ಹೋಮ, ಶ್ರೀ ನಾಗದೇವರಿಗೆ ಪವಮಾನಾದಿ ಕಲಶಾಭಿಷೇಕ ಸಹಿತ ಮಹಾಪೂಜೆ, ಸಂಜೆ ಸುದರ್ಶನ ಹೋಮ ನಡೆಯಿತು.
ಶುಕ್ರವಾರ ಬೆಳಗ್ಗೆ ಶ್ರೀ ನಾಗಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಫಲನ್ಯಾಸ, ಪುಣ್ಯಾಹ, ದೇವನಾದಿ, ಮಹಾಸಂಕಲ್ಪ, ಋತ್ವಿಗರಣ, ದ್ವಾದಶ ನಾರಿಕೇಳ ಗಣಯಾಗ, ಶ್ರೀ ನಾಗದೇವರಿಗೆ ಪಂಚಾಮೃತ ಅಭಿಷೇಕ ಸಹಿತ ಮಹಾಪೂಜೆ, ಉಗ್ರಾಣ ಮುಹೂರ್ತ, ಪಾಕಶಾಲಾ ಮುಹೂರ್ತ, ಪಾಕಶಾಲೆಯಲ್ಲಿ ಶ್ರೀ ಸೂಕ್ತ ಹವನ ನಡೆಯಿತು. ಸಂಜೆ ಭೂವರಾಹ ಹೋಮ, ಆಶ್ಲೇಷಾಬಲಿ, ಶ್ರೀ ನಾಗದೇವರಿಗೆ ರಾತ್ರಿ ಪೂಜೆ ಜರಗಿತು.
ಸೇವಾಕರ್ತ ಭುವನೇಂದ್ರ ಕಿದಿಯೂರು, ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಯುವರಾಜ್ ಮಸ್ಕತ್, ನಾಡೋಜ ಡಾ| ಜಿ. ಶಂಕರ್, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಭವ್ಯಶ್ರೀ ಕಿದಿಯೂರು, ಡಾ| ವಿಜಯೇಂದ್ರ, ಗಣೇಶ್ ರಾವ್, ಹರಿಯಪ್ಪ ಕೋಟ್ಯಾನ್, ಹಿರಿಯಣ್ಣ ಕಿದಿಯೂರು, ಜಿತೇಶ್ ಬಿ. ಕಿದಿಯೂರು, ಪಾಂಡುರಂಗ ಕರ್ಕೇರ, ಭೋಜರಾಜ್ ಕಿದಿಯೂರು, ಮಧುಸೂದನ್ ಕೆಮ್ಮಣ್ಣು, ದಿನೇಶ್ ಎರ್ಮಾಳ್, ವಿಲಾಸ್ ಜೈನ್, ದಿನಕರ, ಧನಂಜಯ ಕಾಂಚನ್, ಯತೀಶ್ ಕಿದಿಯೂರು, ಪ್ರಕಾಶ್ ಜತ್ತನ್, ರಮೇಶ್ ಕಿದಿಯೂರು, ಪ್ರಕಾಶ್ ಸುವರ್ಣ, ಚಂದ್ರೇಶ್ ಪಿತ್ರೋಡಿ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.