ಉಡುಪಿ: ವಿದೇಶದಲ್ಲಿರುವ ಮತದಾರರಿಗೂ ಬುಲಾವ್
ದೇಶದಲ್ಲಿರುವ ಗುಂಪುಗ ಳೊಂದಿಗೆ ಕೆಲವು ಅಭ್ಯರ್ಥಿಗಳು ಈಗಾಗಲೇ ಆನ್‌ಲೈನ್ ಮೂಲಕ ಸಭೆ ನಡೆಸಿದ್ದಾರೆ.
Team Udayavani, May 3, 2023, 12:40 PM IST
ಉಡುಪಿ: ಜಿಲ್ಲಾದ್ಯಂತ ಚುನಾವಣ ಕಣ ರಂಗೇರಿದ್ದು, ಮೇ 10 ರಂದು ನಡೆಯುವ ಮತದಾನಕ್ಕೆ ವಿದೇಶಗಳಿಂದಲೂ ಊರಿಗೆ
ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಉದ್ಯೋಗ, ಉನ್ನತ ಶಿಕ್ಷಣ ಸಹಿತ ವಿವಿಧ ಕಾರಣಕ್ಕೆ ಹೊರ ದೇಶಗಳಲ್ಲಿ ನೆಲೆಸಿರುವ
ಜಿಲ್ಲೆಯವರಿಗೆ ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಅವರ ಕುಟುಂಬದ ಸದಸ್ಯರು ಕರೆ ಮಾಡಿ, ಚುನಾವಣೆಗೆ
ಬರುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಕೆಲವರು ಈಗಾಗಲೇ ರಜೆಯ ಮೇಲೆ ತವರಿಗೆ ಬಂದಿಳಿದ್ದಾರೆ. ಇನ್ನು ಕೆಲವರು ಈ ವಾರಾಂತ್ಯದೊಳಗೆ ಬರುವ ಸಾಧ್ಯತೆಯೂ
ಇದೆ ಎಂದು ಹೇಳಲಾಗುತ್ತಿದೆ. ಕೆಲವರು ತಮ್ಮ ಸ್ನೇಹಿತರು, ಪಕ್ಷದ ಸಾಮಾನ್ಯ ಕಾರ್ಯ ಕರ್ತರು ಸ್ಪರ್ಧೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಸ್ವ ಇಚ್ಛೆಯಿಂದಲೇ ವಿದೇಶದಿಂದ ಮತದಾನಕ್ಕಾಗಿಯೇ ಊರಿಗೆ ವಾಪಸಾಗುತ್ತಿದ್ದಾರೆ. ಈಗಾಗಲೇ ಬಂದಿರುವ ಕೆಲವರು
ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಪ್ರಕ್ರಿಯೆ, ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡು ತಂತ್ರಗಾರಿಕೆಯ ತಂಡದಲ್ಲೂ
ಕೆಲಸ ಮಾಡುತ್ತಿದ್ದಾರೆ.
ವಿದೇಶದಲ್ಲಿರುವ ಗುಂಪುಗ ಳೊಂದಿಗೆ ಕೆಲವು ಅಭ್ಯರ್ಥಿಗಳು ಈಗಾಗಲೇ ಆನ್‌ಲೈನ್ ಮೂಲಕ ಸಭೆ ನಡೆಸಿದ್ದಾರೆ. ಅರಬ್ ದೇಶಗಳಲ್ಲಿ ಕರಾವಳಿಯ ಅನೇಕರು ಉದ್ಯೋಗದಲ್ಲಿದ್ದಾರೆ. ಅಂಥವರ ಮೇಲೂ ರಾಜಕೀಯ ಪಕ್ಷದ ಪ್ರಮುಖರು ಕಣ್ಣಿಟ್ಟಿದ್ದಾರೆ. ಒಂದು ದಿನದ ಮಟ್ಟಿಗಾದರೂ ಅವರನ್ನು ತವರಿಗೆ ಕರೆಸಿಕೊಳ್ಳುವ ಶತಪ್ರಯತ್ನ ಮಾಡುತ್ತಿದ್ದಾರೆ.
ಉದ್ಯೋಗ ಅರಸಿ ವಿದೇಶಗಳಿಗೆ ಹೋಗಿರುವ ಅನೇಕರು ಅಲ್ಲಿಯ ಪೌರತ್ವ ಪಡೆದಿರುವುದು ಕಡಿಮೆ. ತಮ್ಮ ಮತ ಊರಲ್ಲೇ
ಇರುವುದರಿಂದ ಕನಿಷ್ಠ ಐದು ವರ್ಷಕ್ಕೆ ಒಮ್ಮೆಯಾದರೂ ಊರಿಗೆ ಬಂದು ಮತ ಚಲಾಯಿಸಬೇಕು ಎಂಬ ಆಶಯ ವ್ಯಕ್ತ
ಪಡಿಸುವವರು ಕೆಲವರಿದ್ದಾರೆ. ವಿದೇಶದಲ್ಲಿರುವವರು ತಮ್ಮದೇ ಸಂಘಟನೆಗಳನ್ನು ಸ್ಥಾಪಿಸಿಕೊಂಡಿದ್ದಾರೆ.
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಆ ಸಂಘಟನೆಗಳ ಪ್ರಮುಖರನ್ನು ಮಾತನಾಡಿಸಿ, ಮತ ಸೆಳೆಯುವ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಈ ಬಾರಿ ತಮಗೆ ಖಾತರಿ ಯಾಗಿರುವ ಯಾವ ಮತದಲ್ಲೂ ವ್ಯತ್ಯಾಸವಾಗಬಾರದು ಎಂಬ ನೆಲೆಯಲ್ಲಿ ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಹಾಗೆಯೇ ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಮನೆ ಮನೆಗೆ ಭೇಟಿ ಮಾಡಿದ ಸಂದರ್ಭ ಮತದಾರರ ಪಟ್ಟಿಯಲ್ಲಿ ಅರ್ಹ
ರೆಲ್ಲರ ಹೆಸರು ಇದೆಯೇ, ಅವರೆಲ್ಲರೂ ಮತದಾನ ದಿನದಂದು ಊರಿಗೆ ಬಂದು ಹಕ್ಕು ಚಲಾಯಿಸಲಿದ್ದಾರೆಯೇ? ಎಂಬು
ದನ್ನು ಖಾತರಿಪಡಿಸಿಕೊಂಡೇ ವಾಪಸ್ ಬರುತ್ತಿದ್ದಾರೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯದಲ್ಲಿ ಇರುವ ಮತದಾರರನ್ನು ಒಗ್ಗೂ
ಡಿಸುವ ಕೆಲಸವನ್ನು ಈಗಾಗಲೇ ಎಲ್ಲ ಪಕ್ಷಗಳು ಮಾಡಿವೆ. ಅಷ್ಟು ಮಾತ್ರವಲ್ಲದೆ ಮತದಾನ ದಿನಕ್ಕೂ ಮುನ್ನ ಊರಿಗೆ ಕರೆ
ತರುವ ವ್ಯವಸ್ಥೆಯನ್ನೂ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.