ಜಲಪ್ರಳಯದ ಬಳಿಕ ಸಹಜ ಸ್ಥಿತಿಗೆ ಮರಳಿದ ಉಡುಪಿ ನಗರ
ಜನರಲ್ಲಿ ಮತ್ತೂಮ್ಮೆ ಬದುಕು ಕಟ್ಟಿಕೊಳ್ಳುವ ತವಕ; ವ್ಯಾಪಾರ-ವಹಿವಾಟು ಎಂದಿನಂತೆ
Team Udayavani, Sep 24, 2020, 5:23 AM IST
ಸೆ. 23ರಂದು : ಕೃಷ್ಣಮಠ ರಾಜಾಂಗಣ ಪಾರ್ಕಿಂಗ್ ಪ್ರದೇಶ ಬಳಿ ಕಂಡದ್ದು ಹೀಗೆ.
ಉಡುಪಿ: ಜಲಪ್ರಳಯವಾಗಿ ಮೂರು ದಿನಗಳು ಕಳೆದಿವೆ. ನಗರದ ಬೀದಿ ಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಪ್ರಾರಂಭಗೊಂಡಿದ್ದು, ಜನರಲ್ಲಿ ಮತ್ತೂಮ್ಮೆ ಬದುಕು ಕಟ್ಟಿಕೊಳ್ಳುವ ತವಕ ಎದ್ದು ಕಾಣುತ್ತಿತ್ತು. ಉಡುಪಿ ನಗರ ಸೆ.20ರ ಜಲಪ್ರಳಯಕ್ಕೆ ಸಂಪೂರ್ಣವಾಗಿ ನಲುಗಿ ಹೋಗಿತ್ತು. ಬಡಗುಪೇಟೆ ಸಾಲು-ಸಾಲು ಅಂಗಡಿಗಳಿಗೆ ಮೂರರಿಂದ ನಾಲ್ಕು ಅಡಿಗಳಷ್ಟು ನೀರು ನುಗ್ಗಿ ದಿನಸಿ ಸಾಮಗ್ರಿ ಸೇರಿದಂತೆ ಔಷಧ ವಸ್ತುಗಳು ಹಾನಿಗೊಂಡಿದ್ದವು. ಕೆಲ ಮನೆಗಳು ಸಂಪೂರ್ಣ ಹಾಗೂ ಭಾಗಶಃ ಹಾನಿಗೊಂಡಿವೆ. ಕೆಲವೆಡೆ ಮನೆಯ ವಸ್ತುಗಳು ಇಂದ್ರಾಣಿ ಮೂಲಕ ಸಮುದ್ರದ ಒಡಲು ಸೇರಿವೆ.
ನಗರ ಸಹಜ ಸ್ಥಿತಿಗೆ
ಈಗ ನೆರೆಯಿಂದ ಆವೃತವಾಗಿದ್ದ ಬಡಗುಪೇಟೆ ಸೇರಿದಂತೆ ವಿವಿಧ ಮಾರ್ಗಗಳು ಸಹಜ ಸ್ಥಿತಿಗೆ ಬಂದಿದೆ. ಅಂಗಡಿಗಳನ್ನು ಸ್ವತ್ಛಗೊಳಿಸಿ ವ್ಯಾಪಾರ ವಹಿವಾಟು ಪ್ರಾರಂಭವಾಗಿದೆ. ಕೆಲ ಅಂಗಡಿಮುಂಗಟ್ಟುಗಳಲ್ಲಿ ಹಾಳಾದ ವಸ್ತುಗಳನ್ನು ಹೊರಗೆಸೆಯುವ ಕೆಲಸಗಳು ಭರದಿಂದ ಸಾಗುತ್ತಿದೆ. ಇನ್ನೂ ಕೆಲವಡೆ ಅಂಗಡಿಗಳು ಬಾಗಿಲು ಹಾಕಿದ ದೃಶ್ಯಗಳು ಕಂಡು ಬರುತ್ತಿವೆ. ಇಂದ್ರಾಣಿ ಶಾಂತವಾಗಿ ಹರಿಯುತ್ತಿದೆ.
ಸೆ.23ರ ಬೆಳಗ್ಗೆ 8.30ರ ಹಿಂದಿನ 24 ಗಂಟೆಯಲ್ಲಿ ಉಡುಪಿಯಲ್ಲಿ 26 ಮಿ.ಮೀ., ಕುಂದಾಪುರ 37 ಮಿ.ಮೀ., ಕಾರ್ಕಳ 26 ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 30 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಹಲವು ಕಡೆಯಲ್ಲಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ.
ಸಾಧಾರಣ ಮಳೆ
ಬುಧವಾರ ಉಡುಪಿ ತಾಲೂಕಿನಾದ್ಯಂತ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನದ ವೇಳೆ ಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ನಡುವೆ ಹನಿ ಹನಿ ಮಳೆಯಾಗಿದೆ.
ಗರಿಷ್ಠ ಪರಿಹಾರದ ಭರವಸೆ
ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಜನಸಂಚಾರ ಪ್ರಾರಂಭವಾಗಿದೆ. ಪ್ರವಾಸಿ ವಾಹನಗಳು ಬಾಡಿಗೆ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ, ಶಾಸಕರು, ನಗರಸಭೆ ಅಧಿಕಾರಿಗಳು ನೆರೆ ಪ್ರದೇಶಗಳಿಗೆ ಭೇಟಿ ನೀಡಿ, ಗರಿಷ್ಠ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.