Udupi: ಕಟಪಾಡಿ-ನಿಟ್ಟೂರು; ಹೆದ್ದಾರಿ ಬದಿ ತ್ಯಾಜ್ಯ ರಾಶಿ
ಕಂಡ ಕಂಡಲ್ಲಿ ಎಸೆವ ತ್ಯಾಜ್ಯದಿಂದ ದುರ್ವಾಸನೆ: ಪ್ರಾಣಿಗಳಿಗೂ ಅಪಾಯ
Team Udayavani, Nov 11, 2024, 6:27 PM IST
ಉಡುಪಿ: ಉಡುಪಿ ನಗರದಲ್ಲಿ ತ್ಯಾಜ್ಯ ವಿಲೇವಾರಿ ಒಂದು ಮಟ್ಟಕ್ಕೆ ಸಮಾಧಾನಕರ ಅನಿಸಿದರೂ ಕಟಪಾಡಿಯಿಂದ ನಿಟ್ಟೂರಿನವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಉದ್ದಕ್ಕೂ ಎಸೆಯಲಾಗಿರುವ ರಾಶಿ ರಾಶಿ ತ್ಯಾಜ್ಯ ಸ್ವತ್ಛ ಉಡುಪಿಯ ಪರಿಕಲ್ಪನೆಯನ್ನು ಅಣಕಿಸುತ್ತಿದೆ.
ಕಟಪಾಡಿಯಿಂದ ನಿಟ್ಟೂರುವರೆಗೆ ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗಿದ್ದು, ಅವು ಕೊಳೆತು ಅಸಹ್ಯಕರ ವಾತಾವರಣ ಸೃಷ್ಟಿಯಾಗಿದೆ. ಹೆದ್ದಾರಿಯಲ್ಲಿ ಸಾಗುವಾಗೆಲ್ಲ ದುರ್ವಾಸನೆ ಮೂಗಿಗೆ ಬಡಿಯುತ್ತಿದೆ. ಇದೇ ಪರಿಸರದಲ್ಲಿ ವಾಸವಾಗಿರುವವರ ಗೋಳು ಹೇಳದ ಸ್ಥಿತಿಯಲ್ಲಿದೆ.
ಹಳೆಯ ಬಟ್ಟೆ, ಆಹಾರ ಪೊಟ್ಟಣ, ಚಪ್ಪಲಿಗಳು, ಹಾಳಾದ ಗೃಹ ಬಳಕೆ ಅನುಪಯುಕ್ತ ವಸ್ತು, ಪ್ಲಾಸ್ಟಿಕ್ ಬಾಟಲಿ ಹೀಗೆ ಕಸಗಳನ್ನು, ಹಳೆ ಕಟ್ಟಡದ ಅವಶೇಷಗಳನ್ನು ತಂದು ಹೆದ್ದಾರಿ ಬದಿ ಎಸೆದು ಹೋಗುತ್ತಿದ್ದಾರೆ.
ರೋಗರುಜಿನಗಳ ತಾಣ
ನಿಟ್ಟೂರಿನಿಂದ- ಕಟಪಾಡಿ ವರೆಗೆ ಹಲವೆಡೆ ಸಣ್ಣ ತೋಡು ಹರಿಯುತ್ತಿದೆ. ಉದ್ಯಾವರ ಹೊಳೆ, ಇಂದ್ರಾಣಿ ನದಿ, ಸಣ್ಣಪುಟ್ಟ ಕಾಲುವೆಗಳು ತ್ಯಾಜ್ಯ ತುಂಬಿಕೊಂಡು ಕಲುಷಿತಗೊಂಡಿವೆ. ತ್ಯಾಜ್ಯ ಚೀಲಗಳು ತೋಡು, ಕಾಲುವೆಗಳಲ್ಲಿ ಸೇರಿಕೊಂಡು ಪರಿಸರ ಮಾಲಿನ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ.
ಗಾಳಿ ಬರುವಾಗ ವಾಸನೆ ಬಡಿಯುತ್ತದೆ
ಹೆದ್ದಾರಿ ಬದಿ ತ್ಯಾಜ್ಯ ತಂದು ಹಾಕುವುದರಿಂದ ಅದು ಕೊಳೆತು ದುರ್ವಾಸನೆ ಬರುತ್ತದೆ. ಗಾಳಿ ಬೀಸುವಾಗೆಲ್ಲ ಮೂಗು ಬಿಡಲು ಆಗುವುದಿಲ್ಲ. ರೋಗ ಬರುವುದಕ್ಕೂ ಇದು ಕಾರಣವಾಗುತ್ತಿದೆ.
– ಹೊನ್ನಮ್ಮ, ನಿಟ್ಟೂರು ನಿವಾಸಿ.
ಜಾನುವಾರುಗಳಿಗೆ ದುಷ್ಪರಿಣಾಮ
ಇಲ್ಲಿ ಒಣ, ಹಸಿ ತ್ಯಾಜ್ಯ ಎರಡನ್ನೂ ಎಸೆಯಲಾಗುತಿದ್ದು ಜಾನುವಾರುಗಳು, ಬೀದಿ ನಾಯಿಗಳು ಈ ಆಹಾರವನ್ನು ಸೇವಿಸುತ್ತಿವೆ. ಇದರಿಂದ ಅವುಗಳ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Udupi: ಗೀತೆಯ ಸಂದೇಶ ಪ್ರತೀ ಮನೆಯನ್ನೂ ಪ್ರವೇಶಿಸಲಿ: ಕಾಂಚಿ ಶ್ರೀ
Udupi: ಎಂಜಿಎಂ ಕಾಲೇಜಿನಲ್ಲಿ ನ.29 ರಿಂದ ಡಿ.1ವರೆಗೆ ಅಮೃತ ಮಹೋತ್ಸವ ಸಂಭ್ರಮ
Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.