ಕೃಷ್ಣನೂರಲಿ ಹಬ್ಬದ ಸಂಭ್ರಮ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ

ನಾಳೆ ಲೀಲೋತ್ಸವ

Team Udayavani, Aug 23, 2019, 7:00 AM IST

220819Astro04

ನೂರಾರು ಲೀಲೆಗಳ ಮೂಲಕವೇ ಜಗತ್ತಿಗೆ ವಿವಿಧ ರೀತಿಯ ಸಂದೇಶಗಳನ್ನು ನೀಡಿದ ಗೋವಿಂದನ ಜನ್ಮಾಷ್ಟಮಿ ಆಚರಣೆ ಇಂದು ನಡೆಯಲಿದೆ. ನಾಗರ ಪಂಚಮಿಯ ಬಳಿಕ ನಡೆಯುವ ಪ್ರಮುಖ ಹಬ್ಬದ ಆಚರಣೆಗೆ ಎಲ್ಲೆಡೆ ಸಿದ್ಧತೆಗಳು ನಡೆದಿವೆ. ಕರಾವಳಿಯಲ್ಲಿ ಮುಖ್ಯವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಅದ್ಧೂರಿಯ ಶ್ರೀಕೃಷ್ಣ ಲೀಲೋತ್ಸವ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಉಡುಪಿ: ಇಂದು ನಡೆಯಲಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ನಾಳೆ ನಡೆಯುವ ಮೊಸರು ಕುಡಿಕೆ ಉತ್ಸವಕ್ಕೆ ಶ್ರೀಕೃಷ್ಣ ಮಠದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಈಗಾಗಲೆ ಹಲವಾರು ಮಂದಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಬಣ್ಣಬಣ್ಣದ ಹೂಗಳಿಂದ ತುಂಬಿತುಳುಕುತ್ತಿರುವ ರಥಬೀದಿ ಪರಿಸರ ರಂಗುರಂಗಿನಿಂದ ಕಂಗೊಳಿಸುತ್ತಿದೆ. ಗುರುವಾರ ಶ್ರೀಕೃಷ್ಣ ಮಠ ಹಾಗೂ ರಥಬೀದಿಯಲ್ಲಿ ಕಂಡು ಬಂದ ಕೆಲ ದೃಶ್ಯಗಳ ಒಂದು ಝಲಕ್‌ ಇಲ್ಲಿದೆ.

ಎಲ್ಲಿ ನೋಡಿದರಲ್ಲಿ ಹೂಗಳ ರಾಶಿ
ಶ್ರೀ ಕೃಷ್ಣ ಮಠದ ರಥಬೀದಿಯ ತುಂಬಾ ಹೂವುಗಳ ರಾಶಿ ಕಂಡು ಬಂತು ಹಾಸನ, ಚಿಕ್ಕಮಂಗಳೂರು, ಮೈಸೂರು, ಅರಕಲಗೋಡು ಸಹಿತ ವಿವಿಧ ಜಿಲ್ಲೆಗಳಿಂದ ಸುಮಾರು 100ಕ್ಕೂ ಅಧಿಕ ಹೂವಿನ ವ್ಯಾಪಾರಿಗಳು ಕಂಡು ಬಂದರು. ಗುರುವಾರ ಬೆಳಗ್ಗೆಯೇ ಆಗಮಿಸಿದ ಅವರು ವ್ಯಾಪಾರವಹಿವಾಟು ನಡೆಸುತ್ತಿದ್ದರು.

ರಥಬೀದಿಯಲ್ಲಿ ಕಂಡುಬಂದ ಹೂವಿನ ವ್ಯಾಪಾರಿಗಳಲ್ಲಿ ಹಾಸನದಿಂದ ಬಂದವರೇ ಅಧಿಕ 50ರಿಂದ 60 ಮಂದಿ ವ್ಯಾಪಾರಿಗಳು ಬಂದಿದ್ದು 10ಕ್ಕೂ ಅಧಿಕ ವಾಹನಗಳಲ್ಲಿ ಹೂವುಗಳನ್ನು ತಂದಿದ್ದರು. ಅಷ್ಟಮಠಗಳ ಎದುರು ಹೂವುಗಳ ರಾಶಿಯೇ ಕಂಡುಬಂತು. ಬುಧವಾರಕ್ಕೆ ಹೋಲಿಸಿದರೆ ಗುರುವಾರ ಹೂವಿನ ದರದಲ್ಲಿ ತುಸು ಏರಿಕೆಯಾಗಿತ್ತು.

ಕಾಣಸಿಕ್ಕರು ಮುದ್ದುಕೃಷ್ಣರು
ರಥಬೀದಿಯಲ್ಲಿ ಮುದ್ದುಕೃಷ್ಣ ವೇಷಧರಿಸಿದ ಹಲವಾರು ಮಕ್ಕಳು ಕಾಣಸಿಕ್ಕರು. ಕೈಯಲ್ಲೊಂದು ಕೊಳಲು, ತಲೆಯಲ್ಲೊಂದು ನವಿಲುಗರಿ ಇಟ್ಟು ಪುಟಾಣಿ ವೇಷಧಾರಿಗಳು ಹೆತ್ತವರೊಂದಿಗೆ ಅತ್ತಿಂದಿತ್ತ ಓಡಾಡುತ್ತಿದ್ದರು. ಇಂದು ಬೆಳಗ್ಗೆ ಶ್ರೀಕೃಷ್ಣವೇಷ ಸ್ಪರ್ಧೆ ನಡೆಯಲಿದೆ.

ಕಾರ್ಯಕ್ರಮ ವಿವರ: ಆ.22ರಂದು ಸಾರ್ವಜನಿಕರಿಗಾಗಿ ಹತ್ತಿ ಮಾಡುವ ಸ್ಪರ್ಧೆ ಆಯೋಜಿಸಲಾಗಿತ್ತು. ಆ. 23ರ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಮಧ್ವಮಂಟಪದಲ್ಲಿ ಪ್ರಸಿದ್ಧ ಭಜನ ತಂಡಗಳಿಂದ ನಡೆಯಲಿರುವ ಭಜನ ಕಾರ್ಯಕ್ರಮಕ್ಕೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ. ಬಳಿಕ ಮುದ್ದುಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 12ರಿಂದ ಓಲಗ ಮಂಟಪದಲ್ಲಿ ಪುತ್ತಿಗೆ ಚಂದ್ರಶೇಖರ್‌ ಬಳಗದಿಂದ ಸ್ಯಾಕೊÕàಫೋನ್‌ ವಾದನ ನಡೆಯಲಿದೆ. ಆ. 24ರ ಬೆಳಗ್ಗೆ 9ರಿಂದ 12ರ ವರೆಗೆ ಓಲಗ ಮಂಟಪದಲ್ಲಿ ಪವನ ಬಿ. ಆಚಾರ್‌ ನಿರ್ದೇಶನ ದಲ್ಲಿ ಪಂಚ ವೀಣಾವಾದನ, ಬೆಳಗ್ಗೆ 10ಕ್ಕೆ ರಾಜಾಂಗಣದಲ್ಲಿ ಭಜನ ಕಾರ್ಯಕ್ರಮ, ಮಾನವ ನಿರ್ಮಿತ ಪಿರಮಿಡ್‌ “ಆಲಾರೆ ಗೋವಿಂದ’ ತಂಡದ ಪ್ರದರ್ಶನಕ್ಕೆ ಶ್ರೀಗಳು ಚಾಲನೆ ನೀಡಲಿದ್ದಾರೆ. ಅಷ್ಟಮಿಯಂದು ಪರ್ಯಾಯ ಶ್ರೀಗಳು ತರಕಾರಿ, ಗುಂಡಿಟ್ಟು ಲಡ್ಡು ಮುಹೂರ್ತ ನೆರವೇರಿಸಲಿದ್ದಾರೆ. ವಿಟ್ಲಪಿಂಡಿಯಂದು ಬೆಳಗ್ಗೆ 10ಕ್ಕೆ ಪಲಿಮಾರು ಶ್ರೀಪಾದರು ಪಲ್ಲಪೂಜೆ ನಡೆಸಿ, ರಾಜಾಂಗಣದಲ್ಲಿ ನಡೆಯುವ ಸಾರ್ವಜನಿಕ ಅನ್ನಸಂತರ್ಪಣೆಗೆ ಚಾಲನೆ ನೀಡುವರು. ಇದೇ ಸಂದರ್ಭ ತಾಲೂಕಿನ ನಾಲ್ಕು ವಿಶೇಷ ಚೇತನ ಆಶ್ರಮಗಳಿಗೆ ಅನ್ನಪ್ರಸಾದ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಸಮಿತಿ ವತಿಯಿಂದ ಶ್ರೀಕೃಷ್ಣ ಮಠ ಮತ್ತು ಮುಖ್ಯಪ್ರಾಣ ದೇವರಿಗೆ ವಿಶೇಷ ಹೂವಿನ ಅಲಂಕಾರ ನಡೆಯಲಿದೆ. ಆ. 24ರ ಸಂಜೆ ಕಿದಿಯೂರು ಹೊಟೇಲ್‌ ಮುಂಭಾಗದಲ್ಲಿ ಮಾನವ ನಿರ್ಮಿತ ಪಿರಾಮಿಡ್‌ ಅಲಾರೆ ಗೋವಿಂದ ಕಾರ್ಯಕ್ರಮ ಮತ್ತು ನೃತ್ಯ ಪ್ರದರ್ಶನ ಜರಗಲಿದೆ.

ವ್ಯಾಪಾರ ಬಲು ಜೋರು
ಮಳೆರಾಯನ ಆರ್ಭಟವಿಲ್ಲದೆ ರಥಬೀದಿಯಲ್ಲಿ ಹಣ್ಣು-ಹಂಪಲು, ಹೂವಿನ ವ್ಯಾಪರ ಬಲು ಭರ್ಜರಿಯಿಂದಲೇ ನಡೆಯುತ್ತಲಿದ್ದವು. ಆದರೂ ವ್ಯಾಪಾರಿಗಳು ಮಳೆ ಬರುವ ಮುನ್ಸೂಚನೆಯಿಂದ ತಾವು ತಂದ ವಸ್ತುಗಳಿಗೆ ಪ್ಲಾಸ್ಟಿಕ್‌ ಹೊದಿಕೆ ಹಾಕಿಟ್ಟಿಯದ್ದರು. ಹೂವಿನ ದರ ಏರಿಕೆಯಾಗಿದ್ದರೂ ದೇವರಿಗಾಗಿ ಹೂವು ಕೊಳ್ಳುವವರ ಸಂಖ್ಯೆಗೇನೂ ಕಮ್ಮಿಯಿರಲಿಲ್ಲ. ಕೇದಗೆ ಎಲೆ, ಹಲಸಿನ ಎಲೆ, ಪೇಟ್ಲಕಾಯಿ ಸಹಿತ ಬಣ್ಣ, ಆಟಿಕೆ ಸಾಮಾನುಗಳಿಗೂ ಭಾರೀ ಬೇಡಿಕೆ ಇತ್ತು.ಮೂಡೆಯ ಎಲೆಗೆ 100 ರೂ.ಗೆ 5ರಿಂದ 6 ಸಿಗುತ್ತಿತ್ತು.

ಶ್ರೀಕೃಷ್ಣ ಜನ್ಮಾಷ್ಟಮಿ ಎಂದರೆ ಕೇವಲ ಆಚರಣೆ ಮಾತ್ರವಲ್ಲ. ಅದರೊಂದಿಗೆ ಆತ ಕಲಿಸಿದ ಜೀವನಾನುಭವಗಳ ಮೆಲುಕು ಕೂಡ ಆಗಿದೆ. ಒಬ್ಬ ಮಾರ್ಗದರ್ಶಕನಾಗಿ, ಆಪದ್ಭಾಂದವನಾಗಿ, ಸ್ನೇಹಿತನಾಗಿ ತೋರಿದ ದಾರಿ ನಮ್ಮೆಲ್ಲರ ಜೀವನಕ್ಕೆ ಪೂರಕವಾಗಿದ್ದೇ ಆಗಿದೆ. ಅಂತಹ ಕೆಲವು ಸಂಗತಿಗಳು ಇಲ್ಲಿವೆ.

ಭಕ್ತರ ಭಕ್ತಿಗೆ ನ್ಯಾಯ
ಕಲಿಯುಗದಲ್ಲಿ ಅತೀ ಹೆಚ್ಚು ಭಕ್ತರನ್ನು ಶ್ರೀ ಕೃಷ್ಣ ಹೊಂದಿದ್ದಾನೆ ಅಂದರೆ ತಪ್ಪಾಗಲಾರದು. ಕಾರಣ ಕೃಷ್ಣನು ತನ್ನ ಸಂದೇಶಗಳಲ್ಲಿ ಬದುಕುವ ರೀತಿಯನ್ನು ಕಲಿಸಿಕೊಟ್ಟಿದ್ದ. ಕೃಷ್ಣನನ್ನು ಪೂರ್ಣವಾಗಿ ಅರಿತವರು ಕೃಷ್ಣನ ಜತೆ ಸಂಹವನ ಕಲೆಯನ್ನು ಹೊಂದಿರುತ್ತಾರೆ ಎನ್ನುವುದು ವಿಶೇಷ.

ಕುರುಕ್ಷೇತ್ರ ಯುದ್ಧದ ಸಂದರ್ಭ ಶ್ರೀ ಕೃಷ್ಣ ತನ್ನ ಊಟ-ಉಪಾಹಾರವನ್ನು ಪಾಂಡವರ ಜತೆಗೆ ಮಾಡುತ್ತಿದ್ದ. ಹೀಗೆ ಪ್ರತಿ ಬಾರಿಯೂ ಶ್ರೀ ಕೃಷ್ಣನಿಗೆ ದ್ರೌಪದಿ ಅನ್ನ ಬೇಯಿಸಿ ಊಟ ಬಡಿಸುತ್ತಿದ್ದಳು. ಒಮ್ಮೆ ಶ್ರೀ ಕೃಷ್ಣ ಕೈ-ಕಾಲು ತೊಳೆದು ಊಟಕ್ಕೆ ಕುಳಿತ ಸಂದರ್ಭ ದ್ರೌಪದಿ ಅನ್ನ ಬೇಯಲು ಇಟ್ಟು ನೀರು ಎಷ್ಟು ಹೊತ್ತಾದರೂ ಕುದಿಯಲೇ ಇಲ್ಲ. ಇತ್ತ ಶ್ರೀ ಕೃಷ್ಣ ಊಟಕ್ಕಾಗಿ ಶಾಂತಚಿತ್ತನಾಗಿ ಕಾಯುತ್ತಿರುವ ಸನ್ನಿವೇಶ ದ್ರೌಪದಿಗೆ ಇಲ್ಲೇನೋ ಆಗಿದೆ ಎಂದು ಗೊತ್ತಾಗಿಬಿಡುತ್ತದೆ. ಕೊನೆಗೆ ಶ್ರೀ ಕೃಷ್ಣನ ಬಳಿ ಬಂದು ಕೃಷ್ಣ ಎಷ್ಟು ಹೊತ್ತಾದರೂ ನೀರು ಕುದಿಯುತ್ತಲೇ ಇಲ್ಲ ಏನು ಮಾಡಲಿ ಎಂದು ಅಳಲನ್ನು ತೋಡಿಕೊಳ್ಳುತ್ತಾಳೆ. ಕೃಷ್ಣ ನಗುತ್ತಾ ಆ ನೀರನ್ನು ಯಾವ ಕೆರೆಯಿಂದ ತಂದಿರೋ ಅದಕ್ಕೆ ಸುರಿದು ಬೇರೆ ನೀರನ್ನು ಹಾಕಿ ಬೇಯಿಸಿ ನೋಡಿ ಎಂದು ಸಲಹೆಯಿತ್ತನು. ದ್ರೌಪದಿ ಆತುರವಾಗಿ ಆ ನೀರನ್ನು ಕೆರೆಗೆ ಚೆಲ್ಲಿ ಬೇರೆ ನೀರನ್ನು ತಂದು ನೀರನ್ನು ಕುದಿಸಲು ಒಲೆ ಉರಿಸುತ್ತಾಳೆ. ತತ್‌ಕ್ಷಣವೇ ನೀರು ಕುದಿಯಲು ಪ್ರಾರಂಭವಾಗಿ ಅನ್ನ ಬೇಯ ತೊಡಗುತ್ತದೆ. ಇವೆಲ್ಲವನ್ನೂ ಕಂಡ ದ್ರೌಪದಿ ಆಶ್ಚರ್ಯ ಚಕಿತಳಾಗಿ ಯಾಕೆ ಏನಾಯಿತು ಮೊದಲು ಒಲೆಯಲ್ಲಿಟ್ಟ ನೀರು ಯಾಕೆ ಕುದಿಯಲಿಲ್ಲ ಎಂದು ಕೃಷ್ಣನ ಬಳಿ ಕೇಳಿದಾಗ ಕೃಷ್ಣ ಹಾಗೆ ನಸು ನಕ್ಕು ತಂಗಿ ದ್ರೌಪದಿ ಹಾಗೇನಿಲ್ಲ. ನೀನು ಮೊದಲು ಕುದಿಸಲು ಇಟ್ಟ ನೀರಿನೊಳಗೆ ಒಂದು ಕಪ್ಪೆ ಇತ್ತು. ಆ ಕಪ್ಪೆ ಕೃಷ್ಣ ,ಕೃಷ್ಣ , ಕೃಷ್ಣ ಎಂದು ನನ್ನನ್ನು ಸ್ಮರಣೆ ಮಾಡುತ್ತಿತ್ತು ಹಾಗಾಗಿ ಆ ನೀರು ಕುದಿಯಲಿಲ್ಲ ಎಂದನಂತೆ. ಹೀಗೆ ಕೃಷ್ಣ ತನ್ನ ಭಕ್ತರ ಭಕ್ತಿಗೆ ನ್ಯಾಯವನ್ನು ಒದಗಿಸಿದ ಅದೆಷ್ಟೋ ನಿದರ್ಶನಗಳಿವೆ.

ಸ್ನೇಹಕ್ಕೂ ಸೈ ಎಂದ ನೀಲ ಮೇಘಶ್ಯಾಮ
ಸ್ತ್ರೀ ಲೋಲ, ಗೋಪಿಕರೊಡೆಯ, ರಾಧೆಯ ರಮಣ, ಮೀರಾಳ ಮಾಧವ, ದೇವಕಿಯ ಕಂದ, ದ್ವಾರಕೆಯ ರಾಜಕುಮಾರ, ಸುಧಾಮನ ಆಪ್ತ ಗೆಳೆಯ… ಇಷ್ಟು ಹೆಸರುಗಳು ಸಾಕಲ್ಲವೇ ಆತನ ಬಾಲ ಲೀಲೆಗಳನ್ನು ಹೇಳಲು. ಬೆಣ್ಣೆ ಕದ್ದು ಚೋರನಾದ ಈ ಪೋರ ಯಶೋಧೆಗೆ ಮುದ್ದಿನ ಕಂದನಾಗಿ ತಾಯಿ-ಮಗುವಿನ ನಡುವಿನ ವಾತ್ಸಲ್ಯಕ್ಕೆ ಮುನ್ನುಡಿ ಬರೆದ. ರಾಧೆ-ರುಕ್ಮಿಣಿಯರ ಮನದ ಒಡೆಯನಾಗಿ ಪ್ರೀತಿಯ ರಾಯಭಾರಿಯಾದ. ಪಾಂಡವರಿಗೆ ಮಾರ್ಗದರ್ಶಕನಾದ. ಎಲ್ಲಕ್ಕಿಂತ ಮಿಗಿಲಾಗಿ ಗೆಳತನಕ್ಕೆ ಬೆಲೆ ನೀಡಿ ಸ್ನೇಹ ಜೀವಿಯಾಗಿ ಬದುಕಿದ ನಂದನ ಮಿತೃತ್ವದ ಪ್ರತೀಕವಾಗಿ ಹೊರಹೊಮ್ಮಿದ.

ಕೃಷ್ಣ ಎಂದು ನೆನೆದರೆ ಸಾಕು ಸಕಲ ಕಷ್ಟಗಳು ಪರಿಹಾರವಾಗಿ, ಸಂತೋಷದ ವಾತಾವಾರಣ ನಿರ್ಮಾಣವಾಗಿ ಮನೆ-ಮಂದಿಗಳ ಮನಸ್ಸು ಒಂದಾಗುತ್ತ ದೆ ಎಂಬ ಮಾತಿಗೆ ಪುರಾ ವೆ ಯಾಗಿ ಕೃಷ್ಣ ಸುಧಾಮನ ಕಥೆ ಇದೆ. ದೈವ ಮನುಷ್ಯನಾದರೂ ಸಾಮಾನ್ಯರ ಬದುಕಿನ ಆಳವನ್ನು ಅರಿತು, ಬಾಲ್ಯದ ಗೆಳೆತನವನ್ನು ಉಳಿಸಿಕೊಳ್ಳಲು ಕುಚೇಲನ ಕಷ್ಟಕ್ಕೆ ನೆರವಾಗಿ ಸ್ನೇಹಿತನ ಬದುಕನ್ನು ಬೆಳಕಾಗಿಸುವ ಮೂಲಕ ವೇಣುಗೋಪಾಲ ಸ್ನೇಹ ಜೀವಿ ಎಂಬುದು ಜಗಜ್ಜಾಹೀರಾಗಿದೆ. ಸ್ನೇಹಕ್ಕಾಗಿ ಬದುಕುವವರಿಗೆ ಈ ಮೇಘ ಶ್ಯಾಮ ಮಾದರಿಯಾಗಿದ್ದಾನೆ.

ಸಮಸ್ಯೆ ನಿವಾರಣೆಯ ಸೂತ್ರಧಾರಿ ಕೃಷ್ಣ
ಕೃಷ್ಣನು ಜೀವನದಲ್ಲಿ ಎದುರಿಸಿದ ಸಮಸ್ಯೆಗಳು ಆತನನ್ನು ತುಂಬಾ ಗಟ್ಟಿಯನ್ನಾಗಿ ಮಾಡಿದ್ದವು. ಆತ ಇನ್ನೊಬ್ಬರಿಗೆ ಮಾರ್ಗದರ್ಶನ ಮಾಡಬಲ್ಲ ಎಲ್ಲ ಸಾಮರ್ಥ್ಯವನ್ನು ತಂದು ಕೊಟ್ಟಿದ್ದವು. ಇಸ್ಕಾನ್‌ ಗುರು ಭಕ್ತಿ ವೇದಾಂತ ಪ್ರಭುಪಾದ ಅವರು ಹೇಳುವಂತೆ,ಕೃಷ್ಣನು ಪ್ರಜ್ಞಾಪೂರ್ವಕ ಮನುಕುಲದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದನು ಎಂದು ಉದಾಹರಿಸುತ್ತಾರೆ.ಜಗತ್ತಿನಲ್ಲಿ ಯುದ್ಧದಾಹ ಎಂಬುದು ಕೊನೆಗಾಣ ಬೇಕಾದರೆ ಕೃಷ್ಣನ ಪ್ರಜ್ಞಾ ವಂತಿಕೆ ಅವಶ್ಯ ಎಂದು ಸ್ವಾಮೀಜಿ ಅವರು ಮುಂದುವರೆದು ಹೇಳುತ್ತಾರೆ.ಇನ್ನು ಮಹಾಭಾರತದಲ್ಲಿ ಪಾಂಡವರು- ಕೌರವರ ಮಧ್ಯೆ ನಡೆದ ಕುರಕ್ಷೇತ್ರದ ಯುದ್ಧದಲ್ಲಿ ಬಳಿಸಿದ ರಾಜತಾಂತ್ರಿಕತೆ, ಜಾಣ್ಮೆ,ನೈಪುಣ್ಯತೆ ಹಾಗೂ ಗಟ್ಟಿ ನಿರ್ಧಾರಗಳು ನಮ್ಮ ಬದುಕಿಗೆ ಪ್ರೇರಣೆಯಾಗಲಿವೆ.

ನಾಯಕತ್ವ ಪದವಿಯಲ್ಲ ಜವಾಬ್ದಾರಿ
ರಾಜಕೀಯ ತಂತ್ರಗಾರ ಎಂದು ಕೃಷ್ಣನನ್ನು ಕರೆಯುವುದರಲ್ಲಿ ತಪ್ಪಿಲ್ಲ. ಆತ ಅದರಲ್ಲಿ ನಿಪುಣ. ನಾಯಕತ್ವವನ್ನು ಸಮರ್ಥವಾಗಿ ಎದುರಿಸುವುದರಲ್ಲಿಯೂ ಅವನದ್ದು ಎತ್ತಿದ ಕೈ. ಮಹಾಭಾರತ ಯುದ್ಧದ ಸಂದರ್ಭದಲ್ಲಿ ಪಾಂಡವರ ಪಕ್ಷದಲ್ಲೆ ಸೇನಾನಾಯಕ ಯಾರಾಗಬಹುದೆಂಬ ಪ್ರಶ್ನೆಯೊಂದು ಮೂಡಿತು. ಅಲ್ಲಿರುವವರೆಲ್ಲರೂ ಸಮರ್ಥರೇ. ಅರ್ಜುನ, ಭೀಮ ಹೀಗೆ ನಾಯಕರ ಸ್ಥಾನಕ್ಕೆ ಅರ್ಹರಾದವರ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಆದರೆ ಪಾಂಡವರೆಲ್ಲ ಒಮ್ಮತದಿಂದ ಕೃಷ್ಣನೇ ನಾಯಕನಾಗಬಹುದೆಂಬುದನ್ನು ಸೂಚಿಸುತ್ತಾರೆ. ಕೃಷ್ಣ ಈ ಮೊದಲೇ ತಾನು ಶಸ್ತ್ರವನ್ನು ಕೈಗೆತ್ತಿಕೊಳ್ಳುವುದಿಲ್ಲವೆಂಬ ನಿರ್ಧಾರ ಮಾಡಿದ್ದರೂ ಪಾಂಡವರ ನಿಲುವಿನಲ್ಲೇನೂ ಬದಲಾವಣೆಯಾಗುವುದಿಲ್ಲ. ಒಬ್ಬ ಸಮರ್ಥ ನಾಯಕ ತಾನೇ ಕೆಲಸ ಮಾಡಬೇಕೆಂದಿಲ್ಲ. ತನ್ನ ಜತೆ ಇರುವವರ ಶಕ್ತಿ, ಪ್ರತಿಭೆಗಳನ್ನು ಗುರುತಿಸಿ ಅವರ ಯೋಗ್ಯತೆಗೆ ಸೂಕ್ತ ಕೆಲಸ ನೀಡುವ ಮೂಲಕ ಅವರಿಂದ ಕಾರ್ಯಸಾಧನೆ ಮಾಡಿಕೊಳ್ಳುತ್ತಾನೆ. ಈ ಜಾಣ್ಮೆ ಕೃಷ್ಣನಲ್ಲಿತ್ತು.

ರಾಯಭಾರಿ
ರಾಯಭಾರಿಯ ಕೆಲಸ ಬಾಂಧವ್ಯವನ್ನು ಏರ್ಪಡಿಸುವುದು. ಕೃಷ್ಣನೊಬ್ಬ ಅತ್ಯದ್ಭುತ ರಾಯಭಾರಿ. ಯುದ್ಧದ ಮೊದಲು ಒಂದು ಸಂಧಾನ ಮಾಡುವ ಅವನ ಜಾಣ್ಮೆ ಅಪರೂಪ. ಕೇವಲ ಕೌರವ-ಪಾಂಡವರ ಯುದ್ಧದಲ್ಲಿ ಮಾತ್ರವಲ್ಲ ಇತರ ಹಲವು ಯುದ್ಧಗಳಲ್ಲಿಯೂ ಕೃಷ್ಣನ ರಾಯಭಾರಿತ್ವ ಕೆಲಸ ಮಾಡುತ್ತದೆ. ಜರಾಸಂಧ ಹಾಗೂ ಭೀಮನ ನಡುವೆ ಯುದ್ಧಕ್ಕೂ ಮೊದಲು ಆತ ಜರಾಸಂಧನಿಗೆ ಒಂದು ಅವಕಾಶವನ್ನು ನೀಡುತ್ತಾನೆ. ಕೌರವರ ಹಾಗೂ ಪಾಂಡವರ ಯುದ್ಧದಲ್ಲಿ ಕೃಷ್ಣನದ್ದು ನೇರ ರಾಜಕೀಯ ನಡೆ. ಅವನ ಮಾತುಗಳೆಲ್ಲವೂ ರಾಜತಾಂತ್ರಿಕತೆಯನ್ನು ಅರಿಯುವಂತೆ ಇತ್ತು. ದುರ್ಯೋಧನನ ಮನವೊಲಿಸಲು ಪ್ರಯತ್ನಿಸುವ ಮೂಲಕ ಶಾಂತಿಯನ್ನು ನೆಲೆಸಲು ಪ್ರಯತ್ನಿಸುತ್ತಾನೆ. ರಾಯಭಾರಿ ಆಗಿ ಹೋದುದರ ಪರಿಣಾಮವಾಗಿ ಆತ ಯುದ್ಧ ಶಸ್ತ್ರವನ್ನು ಬಳಸುವುದಿಲ್ಲ. ಶಾಂತಿಗಾಗಿ ಹಂಬಲಿಸುವ ಅಥವಾ ಸ್ನೇಹವನ್ನು ಬಯಸುವ ಪ್ರತಿಯೊಬ್ಬರೂ ಕೃಷ್ಣನ ಈ ಗುಣವನ್ನು ಕಲಿಯಲೇಬೇಕು.

ನೀತಿ ವಂತನಾಗಿ ಶ್ರೀಕೃಷ್ಣ
ಕೃಷ್ಣ ನೀತಿ ವಂತನಾಗಿದ್ದು ತನ್ನ ಪ್ರಾಮಾಣಿಕತೆ, ಸತ್ಯ ವನ್ನು ಜಗತ್ತಿಗೆ ಸಾರಿದ್ದಾನೆ. ಅದರಲ್ಲೂ ದ್ರೌಪದಿಯ ಅಣ್ಣನಾಗಿ ಆಕೆ ಕಷ್ಟದಲ್ಲಿರುವಾಗ ಆಕೆಗೆ ವಸ್ತ್ರ ದಯಪಾಲಿಸಿ ಹೆಣ್ಣು ಮಕ್ಕಳ ಕಷ್ಟಕ್ಕೆ ಸ್ಪಂದಿಸಿದ ಅಣ್ಣನಾಗಿದ್ದಾನೆ.ಸುಧಾಮನ ಗೆಳೆತನದಲ್ಲೂ ಆತ ಬಾಯಿ ಬಿಟ್ಟು ಏನೂ ಕೇಳದಿದ್ದರೂ ಅವನ ಮನಸ್ಸನ್ನು ಅರ್ಥ ಮಾಡಿಕೊಂಡುಗೆಳೆಯನ ಮನಸ್ಸನ್ನು ಅರಿತ ಕೃಷ್ಣ ಈಗಿನ ಕಾಲದ ಯುವಕರಿಗೆ ಸ್ಫೂರ್ತಿಯಾಗುತ್ತಾನೆ.

ಆತನಲ್ಲಿದ್ದ ನೀತಿ ವಂತಿಕೆ, ಬೇರೆಯವರ ಮೇಲಿದ್ದ ಪ್ರೀತಿ ಎಲ್ಲವೂ ನಮಗೆ ಪಾಠವೇ. ಕೃಷ್ಣ ಕೇವಲ ತನ್ನ ರಕ್ಷಣೆ ಯೊಂದೇ ಅಲ್ಲ ತನ್ನ ಸುತ್ತಲಿನವರ ರಕ್ಷಣೆ ಆದ್ಯ ಕರ್ತವ್ಯ ವೆಂಬುದನ್ನು ಮನುಕಲಕ್ಕೆ ಸಾರಿದ. ಆತ ಗೋವರ್ಧನ ಗಿರಿಯನ್ನು ಕಿರು ಬೆರಳಿನಿಂದ ಎತ್ತಿ ಹಿಡಿದು ಜನರನ್ನು ರಕ್ಷಿಸಿದ. ಅದಲ್ಲದೆ ಸ್ವಾಭಿಮಾನಿಗಳು ಹೇಗಿರಬೇಕೆಂದು ನಾವು ಕೃಷ್ಣನನ್ನು ನೋಡಿ ಕಲಿಯಬೇಕು. ಅದಕ್ಕೆ ಉದಾಹರಣೆ ಎಂಬಂತೆ ಸಂಧಾನಕ್ಕಾಗಿ ಅಸ್ತಿನಾವತಿಗೆ ಹೋಗುವ ಕೃಷ್ಣ ಎಂತಹ ಸಿರಿವಂತರ ಮನೆಗೆ ಆಹ್ವಾನಿಸಿದರೂ ಹೋಗದೆ ಕಡೆಗೆ ವಿಧುರನ ಮನೆಗೆ ಹೋಗುತ್ತಾನೆ. ಸಜ್ಜನರ ಮನೆ ಯಲ್ಲಿ ಗಂಜಿ ಊಟ ಮಾಡಿದರೂ ತೊಂದರೆಯಿಲ್ಲ. ಆದರೆ ತಪ್ಪು ಅನ್ಯಾಯ ಮಾಡಿರುವವರ ಆತಿಥ್ಯ ಬೇಡ ಎಂಬ ಸಂದೇಶವನ್ನು ಮನುಕುಲಕ್ಕೆ ಸಾರುತ್ತಾನೆ.

ಕೃಷ್ಣ ಮಾತುಗಾರನಾಗಿ ಕೃಷ್ಣ ಒಬ್ಬ ವಾಕ್‌ ಚಾ ತುರ್ಯಗಾರ ಎಂಬುದರಲ್ಲಿ ಎರಡು ಮಾತಿಲ್ಲ . ಆತನ ಸಂವಹನ ಕಲೆ ಆತ ಬಾಲ್ಯದಿಂದಲೂ ಜನರೊಂದಿಗೆ ವ್ಯವ ಹರಿಸಿದ ರೀತಿ ಸಮಾ ಲೋಚನ ಕೌಶಲ ಇವೆಲ್ಲವೂ ಯುವಕರಿಗೆ ಪ್ರೇರಕವಾ ಗುವಂತಹ ಅಂಶಗಳು. ಆರಂಭದಲ್ಲಿ ಅವನು ತನ್ನ ತಾಯಿಯ ಮನವೊಲಿ ಸಲು ಹೇಳುತ್ತಿದ್ದ ಕಥೆಗಳು. ಅದು ಸತ್ಯವೋ ಸುಳ್ಳೊ ಅದು ಬೇರೆ, ಆದರೆ ಆ ಕಥೆಗಳಿಂದ ಅವನ ತಾಯಿಯ ಮನಸ್ಸು ಕರಗುತ್ತಿತ್ತು. ಅವನನ್ನು ಶಿಕ್ಷೆ ಯಿಂದ ತಪ್ಪಿಸಿಕೊಳ್ಳುವಂತೆ ಮಾಡು ತ್ತಿತ್ತು.

ಅವನು ತನ್ನ ಸಿಹಿ ಮಾತುಗಳ ಮೂಲಕ ಗೋಪಿಕೆಯರ ಮನವೊಲಿಸುವುದು ಕೂಡ ಅವನ ಕೌಶಲವಾಗಿತ್ತು. ಅದಲ್ಲದೆ ಅವನು ಮನಸ್ಸಿನಲ್ಲಿ ಯುದ್ಧಬೇಕೆಂದಿದ್ದರೂ ಕೂಡ ಕೌರ ವರ ಆಸ್ಥಾನದಲ್ಲಿ ಪಾಂಡವರ ರಾಯಭಾರಿಯಾಗಿ ಯುದ್ಧ ವನ್ನು ತಪ್ಪಿಸಲು ಆಡಿದ ಮಾತುಗಳು ಅದಲ್ಲದೆ ಅವರೊಂದಿಗಿನ ಸಂವಹನ, ಸಮಾಲೋಚನೆ ಇವೆ ಲ್ಲವೂ ಅವನ ಮಾತುಗಾರಿಕೆಯಲ್ಲಿ ಎಷ್ಟರ ಮಟ್ಟಿನ ಪ್ರಬುದ್ಧತೆ ಹಾಗೂ ಮತ್ತು ಅದ ರಿಂದಾಗುವ ಪರಿಣಾಮಗಳ ಬಗ್ಗೆ ಅರಿವಿತ್ತು ಎನ್ನುವುದನ್ನು ಅರಿತುಕೊಳ್ಳಬಹುದಾಗಿದೆ. ಕೃಷ್ಣನ ಪ್ರಕಾರ ನಮ್ಮ ಮಾತು ಇನ್ನೊಬ್ಬರನ್ನು ಒಳ್ಳೆಯ ರೀತಿಯಲ್ಲಿ ಬದಲಿಸುವಂತಿರಬೇಕು. ಅಂತಹ ಶಕ್ತಿ ಮಾತಿನಲ್ಲಿದ್ದಾಗ ಮಾತ್ರ ಮಾತುಗಾರಿಕೆ ಗೊಂದು ಮೌಲ್ಯ ನೀಡಿ ದಂತಾಗುತ್ತದೆ.

ಕೃಷ್ಣ ಒಬ್ಬ ಅದ್ಭುತ ಮಾರ್ಗದರ್ಶಕ
ಕುರುಕ್ಷೇತ್ರ ರಣರಂಗದಲ್ಲಿ ಅರ್ಜುನನಿಗೆ ಜುಗುಪ್ಸೆ ಉಂಟಾದಾಗ ದಾಯಾದಿಗಳ ನಡುವಿನ ಯುದ್ಧ ಇದಲ್ಲ . ಬದಲಾಗಿ ಧರ್ಮ ಉಳಿಯಲು ಅಧರ್ಮ ಅಳಿಯಲು ಈ ಯುದ್ಧ ಎಂದು ಅರ್ಜುನನಿಗೆ ಮಾರ್ಗದರ್ಶನ ನೀಡಿದ್ದ. ಅರ್ಜುನಿಗೆ ಮಾತ್ರ ಕೃಷ್ಣ ಮಾರ್ಗದರ್ಶಕನಲ್ಲ ಪ್ರತಿಯೊಂದು ಜೀವಿಗೂ ಮಾರ್ಗದರ್ಶಕ. ಆತ ನಮ್ಮೊಂದಿಗೆ ಇದ್ದು ನಮ್ಮನ್ನು ಮುನ್ನಡೆಸಬೇಕಾಗಿಲ್ಲ. ಭಗವದ್ಗೀತೆಯಲ್ಲಿ ನೀಡಿದ ಆತನ ಉಪದೇಶದಲ್ಲಿ ಮನುಕುಲದ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಯಾವುದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೇ ಶಾಂತ ಚಿತ್ತದಿಂದ ಪರಿಸ್ಥಿತಿ ಎದುರಿಸುವಂತೆ ಆತ ಹೇಳುತ್ತಾನೆ. ಬದಲಾವಣೆ ಜಗತ್ತಿನ ನಿಯಮ ಎಂದು ಹೇಳಿದ್ದ ಕೃಷ್ಣ . ಪ್ರತಿಯೊಬ್ಬರ ಜೀವನದಲ್ಲಿ ಬದಲಾವಣೆ ಕಾಣಬೇಕು ಅಲ್ಲದೇ ಬದಲಾವಣೆಯನ್ನು ಎದುರಿಸಲು ಸದಾ ಸಿದ್ಧರಾಗಿರಬೇಕು ಎಂದು ಕೃಷ್ಣ ತನ್ನ ಉಪದೇಶದಲ್ಲಿ ತಿಳಿಸಿ ನಮ್ಮೆಲ್ಲರಿಗೂ ಮಾರ್ಗದರ್ಶಕನಾಗಿದ್ದಾನೆ. ಕೃಷ್ಣ ಒಬ್ಬ ಸ್ನೇಹಿತನಾಗಿ ನಮ್ಮೆಲ್ಲರಿಗೂ ಇಷ್ಟವಾಗುತ್ತಾನೆ. ಕುಚೇಲ, ಸುಧಾಮರ ಸ್ನೇಹದೊಂದಿಗೆ ಶ್ರೀ ಕೃಷ್ಣ ಗೆಳೆತನಕ್ಕೆ ಹೊಸ ಆಯಾಮವನ್ನೆ ನೀಡಿದ್ದ. ರಾಜಭೋಗದಲ್ಲಿ ಕೃಷ್ಣ ಇದ್ದರೂ ಕುಚೇಲ ತಂದ ಅವಲಕ್ಕಿಯನ್ನು ಸಂತೋಷದಿಂದ ಸ್ವೀಕರಿಸಿ ಆತನಿಗೆ ಹರಸಿ ಕಷ್ಟಗಳನ್ನು ನಿವಾರಿಸಿದ್ದ.

ಜೀವನ ಸ್ಫೂರ್ತಿಯಾಗಿ ಕೃಷ್ಣ
ಕೃಷ್ಣನನ್ನು ವಿಷ್ಣುವಿನ ಅವತಾರ ಎಂಬ ನಂಬಿಕೆಯಿದೆ. ಎಲ್ಲ ರೀತಿಯಲ್ಲಿ ನಮಗೆ ಕೃಷ್ಣ ಹತ್ತಿರವಾದವನು. ಅದಕ್ಕೆ ಓಶೋ ಅವರು ಆತನನ್ನು ಬದುಕಿ ಬಾಳಿದವ ಎಂದು ಸಂಭೋಧಿಸುತ್ತಾನೆ. ಕೃಷ್ಣನ ಜೀವನ-ಸಾಧನೆ ಎಂದರೆ ಕಷ್ಟವನ್ನು ಎದುರಿಸಿಯೇ ನಮ್ಮೆಲ್ಲರ ಜೀವನಕ್ಕೆ ಸ್ಫೂರ್ತಿಯಾದನು. ಆತ ತನ್ನ ಸಂಕಷ್ಟದಲ್ಲಿ ಕೂಡ ಸಮಸ್ಯೆ ನಿವಾರಿಸಿದ ರಾಜತಾಂತ್ರಿಕ ಪರಿ ಅಗ್ರಗಣ್ಯವಾದುದು. ಅಂತೆಯೇ ಕೃಷ್ಣ ಜೀವನವನ್ನು ನೋಡುವ ದೃಷ್ಟಿಕೋನವೇ ಎಲ್ಲರಿಗಿಂತ ಭಿನ್ನವಾದುದು. ಆತ ನೈಜವಾಗಿಯೇ ಜೀವನದ ಪರಿ ನೋಡುತ್ತಾನೆ ಜೀವನದಲ್ಲಿ ಯಾವುದು ನಿಜವಾಗಿರುತ್ತೋ ಅದು ಎಂದಿಗೂ ಅವಾಸ್ತವವಲ್ಲ ಎನ್ನುತ್ತಾನೆ. ಶ್ರೀ ಕೃಷ್ಣನು ಭಗವದ್ಗೀತೆಯ ಮೂಲಕ ಇಡೀ ಜೀವನದ ಸಾರವನ್ನೇ ಅರ್ಜುನನ ಮೂಲಕ ಬೋಧಿಸಿದ್ದಾನೆ. ಆತ ಹೇಳುವಂತೆ, ಜೀವನದಲ್ಲಿ ನೀನು ಏನನ್ನೂ ನಿರೀಕ್ಷಿಸದೇ, ನಿಮ್ಮ ಕೆಲಸವನ್ನು ನೀವು ಮಾಡಿದಾಗ ಯಶಸ್ಸು ನಿನ್ನನ್ನೇ ಹುಡುಕಿಕೊಂಡು ಬರುತ್ತದೆ ಎಂಬ ಮಾತು ನಿಜಕ್ಕೂ ನಮ್ಮ ಜೀವನಕ್ಕೆ ಸ್ಫೂರ್ತಿಯಾದುದು.

ಟಾಪ್ ನ್ಯೂಸ್

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Suilla

Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

missing

Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.