Udupi: ತಗ್ಗಿದ ನೆರೆ, ಈ ಸಂಕಷ್ಟಕ್ಕೆಂದು ಕೊನೆ ?


Team Udayavani, Jul 8, 2023, 1:59 PM IST

Udupi: ತಗ್ಗಿದ ನೆರೆ, ಈ ಸಂಕಷ್ಟಕ್ಕೆಂದು ಕೊನೆ ?

ಉಡುಪಿ: ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವು ಕಡೆ ಜಲಾವೃತಗೊಂಡಿದ್ದು, ಶುಕ್ರವಾರ ಎಲ್ಲೆಡೆ ನೆರೆ ಪ್ರಮಾಣ ತಗ್ಗಿದೆ. ಶ್ರೀ ಕೃಷ್ಣಮಠ, ರಥಬೀದಿ ಸಂಪರ್ಕಿಸುವ ಬಡಗುಪೇಟೆ ಮಾರ್ಗ, ಕುಂಜಿಬೆಟ್ಟು, ಬೈಲಕೆರೆ, ಕೃಷ್ಣಮಠ ಪಾರ್ಕಿಂಗ್‌ ಪ್ರದೇಶ, ಮಠದಬೆಟ್ಟು, ಗುಂಡಿಬೈಲು, ಬನ್ನಂಜೆ ಗರಡಿ ರಸ್ತೆ, ನಿಟ್ಟೂರು, ಕೊಡಂಕೂರು, ಕರಂಬಳ್ಳಿ, ಸಗ್ರಿ, ಮಣಿಪಾಲ ಇಂಡಸ್ಟ್ರೀಯಲ್‌ ಪ್ರದೇಶದಲ್ಲಿ ನೆರೆ ಆವರಿಸಿಕೊಂಡು ಜನಜೀವನ ಅಸ್ತವ್ಯಸ್ಥಗೊಂಡಿತ್ತು.

ಶುಕ್ರವಾರ ಮಳೆ ಕಡಿಮೆ ಪ್ರಮಾಣ ಇರುವುದರಿಂದ ಮಳೆ ನೀರು ಹರಿಯುವ ಕಾಲುವೆ, ಇಂದ್ರಾಣಿ ನದಿ ತುಂಬಿ ಹರಿಯುವ ಪ್ರಮಾಣದ ವೇಗ ತಗ್ಗಿದ್ದು, ಹಲವೆಡೆ ತಗ್ಗು ಪ್ರದೇಶಗಳಲ್ಲಿಯೂ ನೀರು ಕಡಿಮೆಯಾಗಿದೆ. ಗುರುವಾರ ಮನೆಗಳಿಗೆ ನೀರು ನುಗ್ಗಿದ್ದರಿಂದ ಪರದಾಡಿದ ಜನರು, ಶುಕ್ರವಾರ ನೆರೆ ಕಡಿಮೆಯಾದ ಬಳಿಕ ಮನೆಗಳನ್ನು ಸ್ವತ್ಛ ಮಾಡಲು ಪರದಾಡಿದರೆ, ಬಡಗುಪೇಟೆಯಲ್ಲಿ ವ್ಯಾಪಾರಿಗಳು ಮಳಿಗೆಗಳನ್ನು ಸ್ವತ್ಛಗೊಳಿಸಿದರು.

ಸಾಂಕ್ರಾಮಿಕ ರೋಗ ಭೀತಿ
ನೆರೆಯಿಂದಾಗಿ ನಗರದ ಕೆಲವು ಕಡೆಗಳಲ್ಲಿ ನೆರೆ ಪ್ರಮಾಣ ತಗ್ಗಿದ್ದರೂ ಕೆಲವೆಡೆ ಕೊಂಚ ನೀರು ಇರುವುದರಿಂದ ಸಾಂಕ್ರಾಮಿಕ ರೋಗ ಭೀತಿ ಜನರಿಗೆ ಕಾಡುತ್ತಿದೆ. ಸಣ್ಣ ಚರಂಡಿಗಳಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಹರಿದು ಬಂದಿದ್ದು ಹಲವೆಡೆ ಬ್ಲಾಕ್‌ ಆಗಿ ನೀರಿನ ಹರಿವು ಸಮಸ್ಯೆಯಾಗಿದೆ. ಇದರಲ್ಲಿ ಸೊಳ್ಳೆ, ಕ್ರಿಮಿ ಕೀಟಗಳು ಉತ್ಪತ್ತಿಯಾಗಿ ರೋಗ ಹಬ್ಬುವ ಸಾಧ್ಯತೆ ಇರುವುದರಿಂದ ನಗರಸಭೆ, ಆರೋಗ್ಯ ಇಲಾಖೆ ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿದೆ.

ಪ್ರತೀ ವರ್ಷವು ನಿಲ್ಲದ ಗೋಳು
ಉಡುಪಿ ನಗರದಲ್ಲಿ ಕೆಲವು ಸೂಕ್ಷ್ಮ ಪ್ರದೇಶಗಳು ಪ್ರತೀವರ್ಷ ನೆರೆ ಬಾಧಿತ ಸ್ಥಳವಾಗಿ ಜನರು ಗೋಳಾಟ ಅನುಭವಿಸುವ ಸ್ಥಿತಿ ಬಂದಿದೆ. ಬೈಲಕೆರೆ, ಮಠದಬೆಟ್ಟು, ಬನ್ನಂಜೆ ಗರಡಿ ರಸ್ತೆ, ಗುಂಡಿಬೈಲು ಪರಿಸರ ಪ್ರತೀವರ್ಷ ನೆರೆ ಹಾಟ್‌ಸ್ಪಾಟ್‌ ಆಗಿದೆ. ಇಲ್ಲಿನ ಜನರು ನೆರೆಯಿಂದಾಗಿ ರೋಸಿ ಹೋಗಿದ್ದಾರೆ. ಮನೆಗೆ ನೀರು ನುಗ್ಗಿದಾಗ ರಕ್ಷಣ ಕಾರ್ಯಚರಣೆಗೆ ತೆರಳಿದರೆ ಕೆಲವರು ಮನೆ ಬಿಟ್ಟು ಬರುವುದಿಲ್ಲ ಎಂದು ಪಟ್ಟು ಹಿಡಿಯುತ್ತಾರೆ. ನಮ್ಮ ಈ ಸಂಕಷ್ಟಕ್ಕೆ ಕೊನೆ ಯಾವಾಗ ಎಂಬುದು ಈ ಭಾಗದ ಜನರ ಪ್ರಶ್ನೆಯಾಗಿದೆ.

ನೀರು ಹೋಗಲು ಜಾಗವೇ ಇಲ್ಲ
ಉಡುಪಿ ನಗರ ಸಂಪೂರ್ಣ ಅವೈಜ್ಞಾನಿಕವಾಗಿ ರೂಪುಗೊಳ್ಳುತ್ತಿರುವುದು ಈ ಸಮಸ್ಯೆಗೆ ಕಾರಣವಾಗಿದೆ ಎಂಬುದು ತಜ್ಞರ ಅಭಿಪ್ರಾಯ. ತಗ್ಗು ಪ್ರದೇಶದ ಕೃಷಿ ಭೂಮಿಗಳು ಜನ ವಸತಿ ಪ್ರದೇಶಗಳಾಗಿ ಬದಲಾಗಿರುವುದು, ಮಳೆ ನೀರು ಹರಿಯುವ ಕಾಲುವೆಗಳ ಒತ್ತುವರಿ, ಮಳೆ ನೀರು ಸಾಗಲು ವಿಶಾಲವಾದ ಕಾಲುವೆಗಳಿಗೆ ಜಾಗದ ಕೊರತೆಯಿಂದಾಗಿ ಈ ಸಮಸ್ಯೆ ಮರುಕಳಿಸುತ್ತಲೇ ಇರುತ್ತದೆ. ಇಂದ್ರಾಳಿಯಿಂದ ಕಲ್ಸಂಕ ಗುಂಡಿಬೈಲು, ಕೊಡಂಕೂರು, ನಿಟ್ಟೂರು ಮೂಲಕ ಸಾಗುವ ಇಂದ್ರಾಣಿ ನದಿಗೆ. ನಗರದ ಹಲವು ಭಾಗದಲ್ಲಿ ಮಳೆ ನೀರು ಸಂಪರ್ಕಿಸುವ ಸಣ್ಣ ತೋಡು, ಕಾಲುವೆಗಳು ಇವೆ. ಇದರಲ್ಲಿ ಶೇ.60ರಷ್ಟರಲ್ಲಿ ಮಾತ್ರ ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಇದೆ. ಶೇ.40ರಷ್ಟು ನಗರದ ಒಳಗಿನ ಪರಿಸರದಲ್ಲಿ ಬ್ಲಾಕ್‌ ಆಗುತ್ತದೆ. ಉಳಿದಂತೆ ಇಂದ್ರಾಣಿ ಹರಿಯುವ ಮುಖ್ಯ ಕಾಲುವೆ ಕಿರಿದಾಗಿರುವುದರಿಂದ ಹರಿವು ಪ್ರಮಾಣ ಹೆಚ್ಚಾಗಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿಸಿ ಅವಾಂತರ ಸೃಷ್ಟಿಸುತ್ತದೆ. ಈ ಬಗ್ಗೆ ತಜ್ಞರಿಂದ ವೈಜ್ಞಾನಿಕವಾಗಿ ಸಮೀಕ್ಷೆ, ವರದಿ ಸಿದ್ಧಪಡಿಸಿ ಪರಿಹಾರ ಕ್ರಮ ತೆಗೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ನಗರಸಭೆ ಗಂಭೀರ ಚಿಂತನೆ ನಡೆಸಬೇಕು ಎಂಬುದು ತಜ್ಞರ ಅಭಿಪ್ರಾಯ.

ಟಾಪ್ ನ್ಯೂಸ್

10-dk-shi

R Ashok ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿರುವುದು ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅವಮಾನ

BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್‌ ಸುರೇಶ್; ಬಿಗ್‌ಬಾಸ್‌ ಆಟದಲ್ಲಿ ರಾದ್ಧಾಂತ

BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್‌ ಸುರೇಶ್; ಬಿಗ್‌ಬಾಸ್‌ ಆಟದಲ್ಲಿ ರಾದ್ಧಾಂತ

Vijayendra (2)

MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

lakshmi hebbalkar

Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್

10

BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್‌ ʼಛಾವಾʼ; ರಿಲೀಸ್‌ ಡೇಟ್‌ ಮುಂದೂಡಿಕೆ?

7-

ಹುಂಡಿ ಒಡೆದು ನಗದು ದೋಚಿ ಪರಾರಿಯಾದ ದುಷ್ಕರ್ಮಿಗಳು; ಎರಡು ಪ್ರತ್ಯೇಕ ಘಟನೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Katpadi: ಅಂಚಿಗೆ ಬ್ಯಾರಿಕೇಡ್‌ ಇರಿಸಿ ರಿಬ್ಬನ್‌ ಅಳವಡಿಕೆ

9

Padubidri: ಹೆಜಮಾಡಿ ಬಂದರು ಮೀನಮೇಷ ಎಣಿಕೆ

8

Malpe: ಮೀನು ಒಣಗಿಸುವ ಜಾಗದ ಪಕ್ಕದಲ್ಲೇ ತ್ಯಾಜ್ಯರಾಶಿ!

7

Udupi: ಶ್ವಾನದಳಕ್ಕೆ ಬೆಲ್ಜಿಯಂ ಮೆಲಿನೋಯಸ್‌!

ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !

ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

10-dk-shi

R Ashok ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿರುವುದು ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅವಮಾನ

9-kollegala

Kollegala: ಕಲುಷಿತ ನೀರು ಸೇವಿಸಿ ನಾಲ್ವರು ಆಸ್ಪತ್ರೆಗೆ ದಾಖಲು

BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್‌ ಸುರೇಶ್; ಬಿಗ್‌ಬಾಸ್‌ ಆಟದಲ್ಲಿ ರಾದ್ಧಾಂತ

BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್‌ ಸುರೇಶ್; ಬಿಗ್‌ಬಾಸ್‌ ಆಟದಲ್ಲಿ ರಾದ್ಧಾಂತ

10

Katpadi: ಅಂಚಿಗೆ ಬ್ಯಾರಿಕೇಡ್‌ ಇರಿಸಿ ರಿಬ್ಬನ್‌ ಅಳವಡಿಕೆ

Vijayendra (2)

MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.