Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
ಉಡುಪಿ ಅಂದಕ್ಕೆ ಚೆಂದ ಕೊಟ್ಟದ್ದು ಮಣಿಪಾಲದ ಸಮೂಹ ಸಂಸ್ಥೆಗಳು...
Team Udayavani, Nov 29, 2024, 6:00 PM IST
ಉಡುಪಿ: ಅಮೃತ ನಾಡಿನಲ್ಲಿ ಹುಟ್ಟಿದ ಸಂಸ್ಥೆ ಇದು. ಈ ಸಂಸ್ಥೆಯು ವಿದ್ಯೆಯೆಂಬ ಅಮೃತವನ್ನು ನೀಡುತ್ತಿದೆ ಎಂದು ಶುಕ್ರವಾರ (ನ.29) ನಡೆದ ಮಹಾತ್ಮ ಗಾಂಧಿ ಮೆಮೋರಿಯಲ್ (ಎಂಜಿಎಂ) ಕಾಲೇಜಿನ ಅಮೃತ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.
ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಮಣ್ಣಿನ ಗುಣ, ಈ ಕಾಲೇಜನ್ನು ಸ್ಥಾಪಿಸಿದ ಕತೃತ್ವ ಶಕ್ತಿ, ಅವರ ಆಡಳಿತ ವೈಖರಿಯನ್ನೆಲ್ಲಾ ನೋಡಿದಾಗ ಈ ಸಂಸ್ಥೆಯು ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಅಚ್ಚರಿಯೆನಿಸುವುದಿಲ್ಲ ಎಂದರು.
ಸಾಧನೆಗೆ ಎರಡು ಮಾರ್ಗಗಳು. ಒಂದು ಕರ್ಮ ಪಥ ಹಾಗೂ ವಿದ್ಯಾ ಪಥ. ಕರ್ಮ ಮಾರ್ಗದಿಂದ ನಶ್ವರವಾದ ಸ್ವರ್ಗ ಲೋಕವನ್ನು ಪಡೆಯಬಹುದು ಆದರೆ ವಿದ್ಯಾ ಮಾರ್ಗದಿಂದ ಶಾಶ್ವತ ಮೋಕ್ಷವನ್ನು ಪಡೆಯಬಹುದು. ಅಂತಹ ವಿದ್ಯೆಯನ್ನು ಯೋಗ್ಯರಿಗೆ ನಿರಂತರವಾಗಿ ದಾನ ಮಾಡಿದುದರಿಂದ ಈ ಸಂಸ್ಥೆಯು ಕೂಡ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಒಳ್ಳೆಯ ಕಾರ್ಯದಿಂದಾಗಿ ಇದು ಗುಣಮಟ್ಟವಾಗಿ ಬೆಳೆದು ಬಂದ ಈ ಸಂಸ್ಥೆಯು ಶತಮಾನೋತ್ಸವ ಕಾಣಲಿ ಎಂದು ಆಶೀರ್ವಚನ ನೀಡಿದರು.
ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಉಡುಪಿ ಅಂದಕ್ಕೆ ಚೆಂದ ಕೊಟ್ಟದ್ದು ಮಣಿಪಾಲದ ಸಮೂಹ ಸಂಸ್ಥೆಗಳು. ಉಡುಪಿ ಗೌರವವನ್ನು ಉತ್ತುಂಗಕ್ಕೇರಿಸಿದ ಕಾರ್ಯವನ್ನು ಮಾಡುತ್ತಿರುವುದು ಈ ಸಮೂಹ ಸಂಸ್ಥೆಗಳು. ಸಹಸ್ರಾರು ವಿದ್ಯಾರ್ಥಿಗಳನ್ನು ದೇಶದ ಭವಿಷ್ಯಕ್ಕೆ ಕೊಡುಗೆ ನೀಡಿದ ಕೀರ್ತಿ ಈ ಕಾಲೇಜಿಗೆ ಸಲ್ಲುತ್ತದೆ ಎಂದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ, ಎಂಜಿಎಂ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ನಿರಂಜನ ವಾನಳ್ಳಿ ಅವರು ಮಾತನಾಡಿ ಶುಭ ಹಾರೈಸಿದರು.
ದಿ.ಟಿ.ಮೋಹನ್‌ದಾಸ್ ಪೈ ಅಮೃತ ಸೌಧವನ್ನು ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಯು. ಪೈ ಉದ್ಘಾಟಿಸಿದರು. ವಸ್ತುಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ನೆರವೇರಿಸಿದರು.
ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ ಹಾಗೂ ಟಿಎಂಪೈ ಸ್ಮರಣೆಯೊಂದಿಗೆ ಅಂಚೆ ಇಲಾಖೆಯು ಹೊರತಂದ ವಿಶೇಷ ಅಂಚೆ ಲಕೋಟೆಯನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.
ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರು ಟಿ.ಸತೀಶ್ ಯು ಪೈ ಅವರನ್ನು ಸನ್ಮಾನಿಸಿದರು. ಈ ಸಂದರ್ಭ ಡಾ. ಟಿಎಂ ಪೈ ಅವರ ಕುಟುಂಬಸ್ತರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಟಿ.ಎಂ.ಎ. ಪೈ ಫೌಂಡೇಶನ್ ಅಧ್ಯಕ್ಷ ಅಶೋಕ ಪೈ, ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಸಂಧ್ಯಾ.ಎಸ್.ಪೈ, ಎಂ.ಜಿ.ಎಂ.ಕಾಲೇಜು ಟ್ರಸ್ಟಿ ವಸಂತಿ ಆರ್. ಪೈ, ಮಾಹೆ ಮಣಿಪಾಲದ ಸಹಕುಲಾಧಿಪತಿ, ಎಜಿಇ ಮಣಿಪಾಲ ಅಧ್ಯಕ್ಷ ಡಾ. ಎಚ್.ಎಸ್. ಬಲ್ಲಾಳ್, ಮಾಹೆ ಮಣಿಪಾಲದ ಉಪಕುಲಪತಿ ಲೇ.ಜ. (ಡಾ.) ಎಂ.ಡಿ. ವೆಂಕಟೇಶ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಹ ಉಪಕುಲಪತಿಗಳು ಡಾ. ನಾರಾಯಣ ಸಭಾಹಿತ್, ಎಜಿಇ ಕಾರ್ಯದರ್ಶಿ ಸಿ.ಎ. ಬಿ.ಪಿ. ವರದರಾಯ ಪೈ, ಎಂ.ಜಿ.ಎಂ. ಕಾಲೇಜು ಪ್ರಾಂಶುಪಾಲರು ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಎಂ.ಜಿ.ಎಂ. ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ಮಾಲತಿ ದೇವಿ, ಎಂ.ಜಿ.ಎಂ. ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ. ದೇವಿದಾಸ ಎಸ್. ನಾಯ್ಕ, ಟಿ. ಮೋಹನದಾಸ ಪೈ ಕೌಶಲ್ಯಾಭಿವೃದ್ಧಿ ಕೇಂದ್ರ ನಿರ್ದೇಶಕ ಟಿ. ರಂಗ ಪೈ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ
Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ
Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್ ನಿಲ್ದಾಣವೇ ಇಲ್ಲ !
”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್
Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.