ಉಡುಪಿ ನಗರಸಭೆ : ಅಧ್ಯಕ್ಷೆ , ಉಪಾಧ್ಯಕ್ಷೆ ಸ್ಥಾನ ಪೂರ್ವ-ಪಶ್ಚಿಮಕ್ಕೆ ಹಂಚಿಕೆ?
Team Udayavani, Oct 10, 2020, 5:18 AM IST
ಉಡುಪಿ: ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರುವಂತೆ ಮಾಡಿದೆ. ಅತೀ ಹೆಚ್ಚು ಸ್ಥಾನ ಪಡೆದುಕೊಂಡ ಬಿಜೆಪಿಯಲ್ಲಿ ಗದ್ದುಗೆ ಏರುವ ಕಸರತ್ತು ಶುರುವಾಗಿದೆ.
2018ರ ಸೆ. 3ರಂದೇ ಎಲ್ಲ ಪೌರಾಡಳಿತ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿತ್ತು. ಚುನಾಯಿತ ಪ್ರತಿನಿಧಿಗಳು ಆಡಳಿತ ಅಧಿಕಾರಕ್ಕೆ ಬರಬೇಕು ಎನ್ನುವಷ್ಟರಲ್ಲಿ ಸಮ್ಮಿಶ್ರ ಸರಕಾರ ಕೆಲ ಪೌರಾಡಳಿತ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಬದಲಾಯಿಸಿತ್ತು.ಇದನ್ನು ಪ್ರಶ್ನಿಸಿ ಕೆಲ ಸದಸ್ಯರು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಅನಂತರ 2019ರಲ್ಲಿ ಈ ಪ್ರಕರಣ ಇತ್ಯರ್ಥಗೊಂಡು ಇನ್ನೇನು ಅಧಿಕಾರ ಸ್ವೀಕರಿಸಬೇಕು ಎನ್ನುವಷ್ಟರಲ್ಲಿ ಮತ್ತೆ ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಬಂದ ಹಿನ್ನೆಲೆಯಲ್ಲಿ ಪೌರಾಡಳಿತ ಸಂಸ್ಥೆಯಲ್ಲಿ ಚುನಾಯಿತರ ಆಡಳಿತ ಜಾರಿಯಾಗಲಿಲ್ಲ.
ನಗರಸಭೆಯ ಒಟ್ಟು 35 ವಾರ್ಡ್ ಗಳಲ್ಲಿ 31 ಸ್ಥಾನಗಳನ್ನು ಬಿಜೆಪಿ ಪಡೆದರೆ, ಕಾಂಗ್ರೆಸ್ 4 ಸ್ಥಾನಗಳನ್ನು ಗಳಿಸಿತ್ತು. ಇದೀಗ ಪ್ರಕಟವಾದ ಮೀಸಲಾತಿ ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ(ಎ) ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ. ಈ ಅರ್ಹತೆ ಪಟ್ಟಿಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಬಿಜೆಪಿಯಿಂದ 9 ಮತ್ತು ಕಾಂಗ್ರೆಸ್‌ನಿಂದ ಒಬ್ಬರು ಸೇರಿದಂತೆ ಒಟ್ಟು 10 ಅರ್ಹರಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ 15 ಮತ್ತು ಕಾಂಗ್ರೆಸ್‌ನಿಂದ ಇಬ್ಬರು ಸೇರಿದಂತೆ ಒಟ್ಟು 17 ಅರ್ಹರಿದ್ದಾರೆ. ಇವರಲ್ಲಿ ಯಾರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಪಟ್ಟ ಒಲಿಯಲಿದೆ ಎಂಬ ಕುತೂಹಲ ಶುರುವಾಗಿದೆ. ಇದಕ್ಕೆ ತೆರೆಮರೆ ರಾಜಕೀಯ ಕೂಡ ನಡೆಯುತ್ತಿದೆ.
ಉಪಾಧ್ಯಕ್ಷೆ ಸ್ಥಾನಕ್ಕೆ ಯಾರು?
ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿಯಲ್ಲಿ 15 ಹಾಗೂ ಕಾಂಗ್ರೆಸ್‌ನಲ್ಲಿ ಇಬ್ಬರು ಅರ್ಹರಿದ್ದಾರೆ. ಒಂದು ವೇಳೆ ಸುಮಿತ್ರಾ ನಾಯಕ್ ಅವರಿಗೆ ಅಧ್ಯಕ್ಷ ಸ್ಥಾನ ಕೈತಪ್ಪಿದರೂ, ಉಪಾಧ್ಯಕ್ಷೆ ಸ್ಥಾನ ಸಿಗುವ ಸಾಧ್ಯತೆ ಇದೆ. ಎರಡು ಬಾರಿ ಆಯ್ಕೆಯಾದ ಗೋಪಾಲಪುರ ವಾರ್ಡ್‌ನ ಮಂಜುಳ ನಾಯಕ್ ಹೆಸರು ಹಿರಿತನದ ಪಟ್ಟಿಯಲ್ಲಿದೆ. ಇವರು 1996ರಲ್ಲಿ ಸುಬ್ರಹ್ಮಣ್ಯನಗರ ವಾರ್ಡಿನಲ್ಲಿ ಗೆಲುವು ಪಡೆದಿದ್ದರು, 2006ರಲ್ಲಿ ನಾಮ ನಿರ್ದೇಶನ ಸದಸ್ಯರಾಗಿದ್ದರು. ಮೊದಲು ಕಾಂಗ್ರೆಸ್‌ನಿಂದ ಹಾಗೂ ಎರಡನೇ ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿದ ಗೀತಾ ಶೇಟ್ ಹಾಗೂ ಎಡ್ಲಿನ್ ಕರ್ಕಡ ಅವರ ಹೆಸರೂ ಕೇಳಿಬರುತ್ತಿದೆ.
ಪೂರ್ವ-ಪಶ್ಚಿಮಕ್ಕೆ ಹಂಚಿಕೆ!
ಬಿಜೆಪಿ ಪಕ್ಷ ಭೌಗೋಳಿಕ ಮಾನದಂಡದ ಆಧಾರದ ಮೇಲೆ ಸ್ಥಾನ ಹಂಚಿಕೆ ಮಾಡುವ ಸಾಧ್ಯತೆ ಇದೆ. ಅಧ್ಯಕ್ಷೆ ಸ್ಥಾನಕ್ಕೆ ಪೂರ್ವ (ಮಣಿಪಾಲ- ಪರ್ಕಳ ಭಾಗ) ಹಾಗೂ ಉಪಾಧ್ಯಕ್ಷೆ ಸ್ಥಾನ ಪಶ್ಚಿಮ (ಮಲ್ಪೆ ಭಾಗ) ಹಂಚಿ ಹೋಗುವ ಸಾಧ್ಯತೆಗಳಿವೆ.
ಅಧ್ಯಕ್ಷೆ ಸ್ಥಾನಕ್ಕೆ ಪೈಪೋಟಿ
ಬಿಜೆಪಿಯಿಂದ ಆಯ್ಕೆಯಾದ 15 ಮಹಿಳೆಯರಲ್ಲಿ 9 ಮಂದಿ ಹಿಂದುಳಿದ ವರ್ಗ (ಎ) ಮಹಿಳಾ ಅಭ್ಯರ್ಥಿಗಳಿ ದ್ದಾರೆ. ಅವರಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಪರ್ಕಳ ವಾರ್ಡ್ ನಿಂದ ಮೂರು ಬಾರಿ ಜಯಗೊಳಿಸಿದ ಸುಮಿತ್ರಾ ನಾಯಕ್ ಅವರ ಹೆಸರು ಮುಂಚೂಣಿಯಲ್ಲಿದೆ. ಜತೆಗೆ ಮೊದಲ ಬಾರಿ ಕಾಂಗ್ರೆಸ್ ಹಾಗೂ ಎರಡನೇ ಬಾರಿ ಬಿಜೆಪಿಯಿಂದ ಅತ್ಯಧಿಕ ಮತಗಳಿಂದ ವಿಜಯ ಸಾಧಿಸಿದ ಕಡಿಯಾಳಿ ಗೀತಾ ಶೇಟ್ ಅವರ ಹೆಸರು ಕೇಳಿಬರುತ್ತಿದೆ. ಈ ಪಟ್ಟಿಯಲ್ಲಿನ ಉಳಿದ 7 ಮಂದಿ ಸದಸ್ಯರು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.