ನರ್ಮ್ ಬಸ್ ನಿಲ್ದಾಣಕ್ಕೆ ಕಾವಲುಗಾರ ನೇಮಕ: ಸ್ವಚ್ಛತೆಗೆ ಆದ್ಯತೆ; ಪ್ರಯಾಣಿಕರು ನಿರಾಳ
Team Udayavani, Dec 17, 2020, 5:13 AM IST
ಉಡುಪಿ: ಕುಡುಕರ ವಿಶ್ರಾಂತಿ, ಸಾಂಕ್ರಾಮಿಕ ರೋಗಗಳ ತಾಣವಾಗಿ ಪರಿವರ್ತನೆಯಾಗಿದ್ದ ನರ್ಮ್ ಬಸ್ ನಿಲ್ದಾಣದಲ್ಲಿ ಇದೀಗ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ವತ್ಛತೆಗೆ ಪ್ರಾಮುಖ್ಯ ನೀಡಿ, ಕಾವಲುಗಾರರನ್ನು ನೇಮಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲವಾದ ವಾತಾವರಣ ನಿರ್ಮಿಸಿಕೊಟ್ಟಿದ್ದಾರೆ.
ನಿಲ್ದಾಣ ಅಧಿಕೃತವಾಗಿ ಉದ್ಘಾಟನೆಯಾಗದೆ ಇದ್ದರೂ ಬಸ್‌ಗಳು ನಿಲ್ದಾಣ ಪ್ರವೇಶಿಸುತ್ತಿವೆ. ಕೋವಿಡ್-19, ಪ್ರಯಾಣಿಕರ ಕೊರತೆಯಿಂದ ನರ್ಮ್ ಬಸ್‌ಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಖಾಸಗಿ ವಾಹನ
ಗಳು ಪಾರ್ಕಿಂಗ್ ಮಾಡುತ್ತಿದ್ದವು. ಜತೆಗೆ ಕುಡುಕರ ಆಶ್ರಯ ತಾಣ ಆಗಿತ್ತು. ಈ ಮಾರ್ಗದಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಸಂಚರಿ ಸಲು ಭಯಪಡುತ್ತಿದ್ದರು.
ಸುದಿನ ವರದಿ !
“ಉದಯವಾಣಿ ಸುದಿನ’ ಈ ಕುರಿತು ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕಾವಲುಗಾರರನ್ನು ನೇಮಿಸಿದ್ದಾರೆ. ಜಿಲ್ಲೆಯಲ್ಲಿ ನರ್ಮ್ ಬಸ್‌ಗಳು 2016ರಲ್ಲಿ ಆರಂಭವಾಗಿದ್ದವು. ಈ ಸಂದರ್ಭ ಸರಿಯಾದ ಬಸ್ ನಿಲ್ದಾಣವಿಲ್ಲ ಎನ್ನುವ ಕೊರಗು ನೀಗಿಸುವ ನಿಟ್ಟಿನಲ್ಲಿ ನಗರದ ಸಿಟಿ ಬಸ್ ನಿಲ್ದಾಣದ ಬಳಿಯ ಶಿಕ್ಷಣ ಇಲಾಖೆ ಜಾಗದಲ್ಲಿ 2017ರ ಸೆ.10ರಂದು ಅಂದಿನ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಅವರು ನರ್ಮ್ ಬಸ್ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು.. ಅಂತೆಯೇ ಗುತ್ತಿಗೆ ಕಾಮಗಾರಿ ಅನ್ವಯ 2018ರೊಳ ಗಾಗಿ ನರ್ಮ್ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ, ಬಸ್ ಸಂಚಾರಕ್ಕೆ ಮುಕ್ತಗೊಳಿಸಬೇಕಾಗಿತ್ತು. ಆದರೆ ಗುತ್ತಿಗೆದಾರರು ವಿವಿಧ ಕಾರಣ ನೀಡಿ ಕಾಮಗಾರಿಯನ್ನು 2019ರ ಕೊನೆಗೆ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ನಿಲ್ದಾಣದಲ್ಲಿರುವ ಅಂಗಡಿಗಳು ಕಾರ್ಯಾಚರಿಸುತ್ತಿವೆ.
ಮೂರು ಅಂತಸ್ತು
ನಿಲ್ದಾಣವನ್ನು ಸುಮಾರು 41 ಸೆಂಟ್ಸ್ ಜಾಗದಲ್ಲಿ 3 ಅಂತಸ್ತುಗಳನ್ನು ಒಳಗೊಂಡ ಕಟ್ಟಡ ನಿರ್ಮಿಸಲಾಗಿದೆ.
ಜನವರಿ ತಿಂಗಳಲ್ಲಿ ಬಸ್ ನಿಲ್ದಾಣ ಉದ್ಘಾಟನೆ
ಪ್ರಸ್ತುತ ಚುನಾವಣೆ ಪ್ರಚಾರದ ಕೆಲಸದಲ್ಲಿ ತೊಡಗಿಸಿಕೊಂಡಿರುವುದರಿಂದ ಸಾರಿಗೆ ಸಚಿವರು ಜನವರಿ ತಿಂಗಳಿನಲ್ಲಿ ನರ್ಮ್ ಬಸ್ ನಿಲ್ದಾಣ ಉದ್ಘಾಟಿಸಲಿದ್ದಾರೆ.
-ಕೆ. ರಘುಪತಿ ಭಟ್, ಶಾಸಕರು, ಉಡುಪಿ.
ಮದ್ಯ ಸೇವಿಸಿ ನಿದ್ರಿಸಲು ಅವಕಾಶವಿಲ್ಲ
ನರ್ಮ್ ಬಸ್ ನಿಲ್ದಾಣಕ್ಕೆ ಕಾವಲುಗಾರರನ್ನು ನೇಮಿಸಲಾಗಿದೆ. ನಿಲ್ದಾಣದಲ್ಲಿ ಮದ್ಯ ಸೇವಿಸಿ ನಿದ್ದೆ ಮಾಡಲು ಅವಕಾಶವಿಲ್ಲ. ಸ್ವತ್ಛತೆ ಕಡೆಗೂ ಗಮನಹರಿಸಲಾಗುತ್ತಿದೆ.
-ಉದಯ ಕುಮಾರ್ ಶೆಟ್ಟಿ, ಕೆಎಸ್‌ಆರ್‌ಟಿಸಿ ಉಡುಪಿ ಡಿಪೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.