Udupi: ಗೌರಿ-ಗಣೇಶ ಹಬ್ಬಕ್ಕೆ ಭರದ ಸಿದ್ಧತೆ; ಹೂವು, ಕಬ್ಬು, ಕೊಟ್ಟೆಗೆ ಬೇಡಿಕೆ
Team Udayavani, Sep 6, 2024, 9:06 AM IST
ಉಡುಪಿ: ಶುಕ್ರವಾರದ ಗೌರಿ ಹಬ್ಬ, ಶನಿವಾರ ನಡೆಯುವ ಗಣೇಶೋತ್ಸವಕ್ಕೆ ಜಿಲ್ಲಾದ್ಯಂತ ಸಕಲ ಸಿದ್ಧತೆ ನಡೆದಿದ್ದು, ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿ ಧಾರಣೆ ಏರಿದೆ.
ಶ್ರೀಕೃಷ್ಣ ಮಠದ ರಥಬೀದಿ, ನಗರಸಭೆಯ ಮುಂಭಾಗ, ನಗರದ ಮಾರುಕಟ್ಟೆಯ ಬಳಿ, ಮಣಿಪಾಲದ ಟೈಗರ್ ಸರ್ಕಲ್ ಬಳಿ, ಆದಿಉಡುಪಿ ಸಹಿತ ವಿವಿಧೆಡೆಯಲ್ಲಿ ಕಬ್ಬು, ಹೂ-ಹಣ್ಣುಗಳ ಮಾರಾಟ ಭರದಿಂದ ಸಾಗಿದೆ.
ಆಲಂಕಾರಿಕ ವಸ್ತುಗಳು, ಹೂವುಗಳು, ಲೈಟಿಂಗ್‌ಗಳ ಮಾರಾಟ ಕೂಡ ಭರದಿಂದ ಸಾಗಿದೆ. ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿವಿಧೆಡೆ ಪೆಂಡಾಲ್ ಅಳವಡಿಕೆ ಕಾರ್ಯ, ಲೈಟಿಂಗ್‌ಗಳು, ಬಣ್ಣದ ಕಾಗದಗಳ ಅಳವಡಿಕೆ ಪ್ರಕ್ರಿಯೆಯೂ ಭರದಿಂದ ಸಾಗಿದೆ.
ಹೊರ ಜಿಲ್ಲೆಯ ವ್ಯಾಪಾರಿಗಳು
ನಗರದಲ್ಲಿ ಗುರುವಾರ ಕಬ್ಬು 1 ಕೋಲಿಗೆ 60ರಿಂದ 80 ರೂ.ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಸೇವಂತಿಗೆ, ಕಾಕಡ ಹೂವುಗಳು 1 ಮಾರಿಗೆ 80ರಿಂದ 100 ರೂ.ಗಳಲ್ಲಿ ಮಾರಾಟವಾಯಿತು. ನಗರಸಭೆಯ ಎದುರುಭಾಗದಲ್ಲಿ ವ್ಯಾಪಾರಿಗಳು ಈಗ ಬೆರಳೆಣಿಗೆ ಸಂಖ್ಯೆಯಲ್ಲಿ ಸೇರಿದ್ದು, ಶುಕ್ರವಾರ ಮತ್ತಷ್ಟು ವ್ಯಾಪಾರಿಗಳು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಪೈಪೋಟಿಯ ವ್ಯಾಪಾರ ನಡೆದರಷ್ಟೇ ದರ ಕಡಿಮೆಯಾಗಲು ಸಾಧ್ಯ ಎಂದು ಗ್ರಾಹಕರು ತಿಳಿಸಿದ್ದಾರೆ.
ಕಡುಬು ತಯಾರಿಸುವ ಕೊಟ್ಟೆ
ರಥಬೀದಿಯ ಬಳಿ ಮಹಿಳೆಯರು ಕಡುಬು ತಯಾರಿಸುವ ಕೊಟ್ಟೆಯನ್ನು ಮಾರಾಟ ಮಾಡುತ್ತಿದ್ದರು. 100 ರೂ.ಗಳಿಗೆ 6 ಕೊಟ್ಟೆಗಳನ್ನು ನೀಡಲಾಗುತ್ತಿತ್ತು. ಇವಿಷ್ಟೇ ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಿಗೆ ಬೇಕಿರುವ ಪೂಜಾ ಸಾಮಗ್ರಿಗಳನ್ನು ವಿವಿಧ ಅಂಗಡಿಗಳಿಂದ ಖರೀದಿಸುವ ದೃಶ್ಯಾವಳಿಗಳೂ ಕಂಡುಬಂತು. ಬಾಳೆಹಣ್ಣು ಹಾಗೂ ಇತರ ಹಣ್ಣುಗಳ ಮಾರಾಟವೂ ಭರದಿಂದ ಸಾಗಿದ್ದು, ಇನ್ನೆರಡು ದಿನ ಉತ್ತಮ ವ್ಯಾಪಾರ ನಿರೀಕ್ಷೆ ಹೊಂದಲಾಗಿದೆ ಎಂಬುವುದು ವ್ಯಾಪಾರಿಗಳ ಅನಿಸಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Viral: ಫೇಸ್‌ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್‌ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
Ullala: ಆಯತಪ್ಪಿ ಪಾಳು ಬಾವಿಗೆ ಬಿದ್ದು ಸ್ಥಳೀಯ ಮೀನುಗಾರ ಮೃತ್ಯು
America: ಹೊಸ ವರ್ಷದ ಸಂಭ್ರಮಾಚರಣೆ-ಜನರ ಗುಂಪಿನ ಮೇಲೆ ನುಗ್ಗಿದ ಟ್ರಕ್-ಹಲವು ಸಾ*ವು
Belagavi: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.