ಆಹಾರ ನಿಯಮ, ನಿದ್ರಾ ನಿಯಮದ ರಾಷ್ಟ್ರೀಯ ನೀತಿ ಅಗತ್ಯ; ಕೋವಿಡ್ ಗೆದ್ದು ಬಂದ ಪುತ್ತಿಗೆ ಶ್ರೀ


Team Udayavani, Aug 3, 2020, 9:05 AM IST

ಆಹಾರ ನಿಯಮ, ನಿದ್ರಾ ನಿಯಮದ ರಾಷ್ಟ್ರೀಯ ನೀತಿ ಅಗತ್ಯ; ಕೋವಿಡ್ ಗೆದ್ದು ಬಂದ ಪುತ್ತಿಗೆ ಶ್ರೀ

ರಾತ್ರಿ 8ರ ಬಳಿಕ ಯಾವುದೇ ಚಟುವಟಿಕೆ ನಡೆಯದಂತೆ ಕಾನೂನು ರೂಪಿಸಬೇಕು.  ಇದು ಆರೋಗ್ಯಕ್ಕೆ ಪೂರಕ ಮಾತ್ರವಲ್ಲ ಹಲವಾರು ವಿಷಯಗಳಲ್ಲಿ ಉಳಿತಾಯವಾಗುತ್ತದೆ.

ಉಡುಪಿ: ಆಹಾರ ನಿಯಮ, ನಿದ್ರಾ ನಿಯಮ ವನ್ನು ಎಲ್ಲರೂ ಪಾಲಿಸಲುಬೇಕಾದ ಜೀವನದ ಎಲ್ಲ ಆಯಾಮಗಳನ್ನೂ ಪರಿಷ್ಕರಿಸುವ ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಬೇಕು ಎಂದು ಕೊರೊನಾ ಸೋಂಕನ್ನು ಎದುರಿಸಿ ಬಂದಿರುವ 59ರ ಹರೆಯದ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.

ಶ್ರೀಗಳು ಜು. 21ರಂದು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿ ಆ. 1ರಂದು ಬಿಡುಗಡೆಗೊಂಡು ಪಾಡಿಗಾರು ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಚಿಕಿತ್ಸಾ ಅವಧಿಯಲ್ಲಿ ಆಸ್ಪತ್ರೆ ವೈದ್ಯರ ಔಷಧಗಳಿಗೆ ಪೂರಕವಾಗಿ ಡಾ| ಗಿರಿಧರ ಕಜೆ ಅವರ ಔಷಧವನ್ನೂ ಸ್ವೀಕರಿಸಿದ್ದರು.

ಹತ್ತಾರು ದೇಶ ಸುತ್ತಾಡಿ ಬಂದಿರುವ ಅವರು ಕಾರ್ಯ ದೊತ್ತಡದ ನಡುವೆ ಸ್ವಾಮೀಜಿಯಾಗಿ ಪರಿಪಾಲಿಸಬೇಕಾದ ನಿಯಮಗಳಿಂದಾಗಿ ತನ್ನ ದೇಹದಲ್ಲಿ ಪ್ರತಿರೋಧ ಶಕ್ತಿ  ಕಡಿಮೆಯಾಗಿದೆ ಎಂಬುದನ್ನು ಸ್ವತಃ ಅರಿತವರು. ಸೋಂಕು  ಬಾಧಿಸುವ ಮೊದಲು ಬೆಂಗಳೂರಿಗೆ ಹೋಗಿ ಬಂದಿದ್ದರು. ಮುನ್ನೆಚ್ಚರಿಕೆಯಾಗಿ ಬಹಳ ಆಪ್ತರ ಬಳಿ ಮಾತ್ರ ವ್ಯವಹರಿಸುತ್ತಿ ದ್ದರು. ಆದರೂ ಅವರಿಗೆ ಸೋಂಕು ತಗಲಿತು. 3 ಗಂಟೆ ನಿದ್ರೆ ಪರಿಣಾಮ 20 ವರ್ಷಗಳಿಂದೀಚೆಗೆ ವಿವಿಧ ದೇಶಗಳನ್ನು ಸುತ್ತಿ ಬಂದ ಪರಿಣಾಮ ಶ್ರೀಗಳಿಗೆ ನಿದ್ರಾ ಸಮಸ್ಯೆ ಇತ್ತು. ದಿನಕ್ಕೆ ಮೂರು ಗಂಟೆ ನಿದ್ರಿಸುವುದೂ ಕಷ್ಟವಾಗಿತ್ತು. ಅಮೆರಿಕಕ್ಕೆ ಹೋಗುವುದೆಂದರೆ 36 ಗಂಟೆ ಪ್ರಯಾಣ. ಇಲ್ಲಿಂದ ಹಗಲು ಹೊರಟರೆ ತಲುಪುವಾಗ ಅಲ್ಲಿಯೂ ಹಗಲೇ ಆಗಿರುತ್ತಿತ್ತು. ಸಂಚಾರದ 36 ಗಂಟೆ ಉಪವಾಸ ಇರುತ್ತಿದ್ದರು. 12ನೇ ವಯಸ್ಸಿನಿಂದ ಸಾತ್ವಿಕ ಆಹಾರವನ್ನು ಮಾತ್ರ ಸ್ವೀಕರಿಸಿಯೂ ಕನಿಷ್ಠ ಕಾಫಿಯ ರುಚಿ ಕಾಣದ ಸ್ವಾಮೀಜಿಯವರಿಗೂ ಆಹಾರ-ನಿದ್ರಾ ನಿಯಮ ಭಂಗದಿಂದಾಗಿ ದೇಹದ ಪ್ರತಿರೋಧ ಶಕ್ತಿ ಕುಂಠಿತವಾಗಿ ಸೋಂಕು (ಇನ್‌ಫೆಕ್ಷನ್‌) ಸಾಮಾನ್ಯವಾಯಿತು. ಕೋವಿಡ್ ಕೂಡ ತಗಲಿತು.

ಬ್ರಾಹ್ಮಿ ಮುಹೂರ್ತ- ರಾಕ್ಷಸ ಕಾಲ
ರಾತ್ರಿ 8ರೊಳಗೆ ಮಲಗಿ ಬೆಳಗ್ಗೆ 4 ಗಂಟೆಯೊಳಗೆ ಎದ್ದರೆ ಪರಿಪೂರ್ಣ ನಿದ್ರೆ ದೇಹಕ್ಕೆ ಸಿಗುತ್ತದೆ. ರಾತ್ರಿ ಬೇಗ ಮಲಗಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕೆಂಬ ಶಾಸ್ತ್ರದ ನಿಯಮವೂ ಇದೆ. ಈ ಅವಧಿಯಲ್ಲಿ ಚಟುವಟಿಕೆಯಲ್ಲಿದ್ದರೆ ಆಗ ಜಾಗೃತವಾಗಿರುವ ವೈರಾಣುಗಳು ದಾಳಿ ಮಾಡುತ್ತವೆ. ಈ ಸಮಯವನ್ನು ರಾಕ್ಷಸ ಕಾಲ ಎಂದು ಶಾಸ್ತ್ರಗಳು ಕರೆದಿವೆ. ಸ್ವಾಮೀಜಿಯವರು ಆಸ್ಪತ್ರೆಯಲ್ಲಿರುವ ಸಮಯದಲ್ಲಿ ಸೂರ್ಯಾಸ್ತಮಾನದೊಳಗೆ ಆಹಾರ ಸೇವಿಸಿ 8 ಗಂಟೆಯೊಳಗೆ ಮಲಗುತ್ತಿದ್ದರು. ಬೆಳಗ್ಗೆ ಎದ್ದಾಗ ಕೆಮ್ಮು ಸಮಸ್ಯೆ ಉಂಟಾದರೆ ರಾತ್ರಿ 8 ಗಂಟೆಗೆ ಮಲಗಿ ಸಮಸ್ಯೆ ನಿವಾರಿಸಿಕೊಂಡ ಅನುಭವವೂ ಅವರಿಗಿದೆ. ಆದರೆ ರಾತ್ರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ತಡವಾಗಿ ಬರುವುದು ಇತ್ಯಾದಿ ಕಾರಣಗಳಿಂದ ವಿಶ್ರಾಂತಿಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಆಗುತ್ತಿರಲಿಲ್ಲ.

ಜೀವನಶೈಲಿ ಬದಲಾವಣೆ ಮುಖ್ಯ
ಕೊರೊನಾಕ್ಕೆ ಲಸಿಕೆ, ಔಷಧ ಕಂಡು ಹಿಡಿಯಲಿ. ಆದರೆ ದೇಹದ ಪ್ರತಿರೋಧ ಶಕ್ತಿಯನ್ನು ಕುಂಠಿತಗೊಳಿಸುವ ಜೀವನ  ಶೈಲಿಯನ್ನು ಬದಲಾಯಿಸದೆ ಇದ್ದರೆ ಯಾವ ಔಷಧವೂ ಪ್ರಯೋಜನಕ್ಕೆ ಬಾರದು ಎಂಬುದು ಶ್ರೀಗಳ ಅಭಿಪ್ರಾಯ. ರಾಷ್ಟ್ರೀಯ ವಿಶ್ರಾಂತಿ ಸಮಯ ಸಂಜೆ ತಡವಾಗಿ ಕೆಲಸದಿಂದ ನಿರ್ಗಮಿಸಿದರೆ ರಾತ್ರಿ ಮಲಗುವಾಗಲೂ ತಡವಾಗುತ್ತದೆ. ಆದ ಕಾರಣ ಬೆಳಗ್ಗೆ 10ಕ್ಕೆ ಆರಂಭವಾಗುವ ಕೆಲಸದ ಸಮಯವನ್ನು ಪರಿಷ್ಕರಿಸಿ ಸಂಜೆ 4 ಗಂಟೆಯೊಳಗೆ ಮುಗಿಯುವಂತೆ ರೂಪಿಸಬೇಕು. ಸೂರ್ಯಾಸ್ತಮಾನದ ಬಳಿಕ ಚಟುವಟಿಕೆ ಕಡಿಮೆಯಾಗಬೇಕು ಎಂದು ಸ್ವಾಮೀಜಿ ಅಭಿಪ್ರಾಯಪಡುತ್ತಾರೆ.

ಅಮೆರಿಕದಲ್ಲೇಕೆ ಶತಾಯುಷಿಗಳು ಹೆಚ್ಚು?
ಅಮೆರಿಕ, ಜಪಾನ್‌ಗಳಲ್ಲಿ ಶತಾಯುಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದಕ್ಕೆ ಕಾರಣ ಗೊತ್ತೆ? ಅವರು ಸಂಜೆ 5ರ ವೇಳೆಗೆ ಭರ್ಜರಿ ಊಟ ಮಾಡಿ ರಾತ್ರಿ 8ಕ್ಕೇ ಮಲಗಿಬಿಡುತ್ತಾರೆ. ಅವರ ಇತರ ಆಚಾರ ವಿಚಾರಗಳು ಹೇಗಿದ್ದರೂ ನಿದ್ರಾ ನಿಯಮ ಮಾತ್ರ ಕಟ್ಟುನಿಟ್ಟು. ಅದುವೇ ಅವರ ಶತಾಯುಷ್ಯದ ಗುಟ್ಟು.

ದೇಹದ ಸಂವಿಧಾನ
ಕೊರೊನಾದಿಂದ ಚೀನಕ್ಕೆ ಧೈರ್ಯ ಬಂದಿದೆ. ಪಾಕಿಸ್ಥಾನದೊಂದಿಗೆ ಸೇರಿಕೊಂಡು ಜೈವಿಕ ಅಸ್ತ್ರ ಪ್ರಯೋಗಿಸುವ ಸ್ಥಿತಿಯಲ್ಲಿದೆ. ಬಲಿಷ್ಠ ಭಾರತಕ್ಕಾಗಿ ನಮ್ಮ ಪ್ರಜೆಗಳು, ಸೈನಿಕರಲ್ಲಿ ಪ್ರತಿರೋಧ ಶಕ್ತಿ ಹೆಚ್ಚಿಸುವಂತಹ ಜೀವನಶೈಲಿ ರೂಪಿಸಬೇಕು. ಸೂರ್ಯಾಸ್ತದ ಬಳಿಕ ಚಟುವಟಿಕೆ ಕಂಡುಬಂದರೆ ದಂಡ ವಿಧಿಸಬೇಕು. ದೇಹಕ್ಕೂ ಒಂದು ಸಂವಿಧಾನವಿದ್ದು ಅದನ್ನು ಉಲ್ಲಂ ಸಿ ದರೆ ಅಪಾಯ. ಪೂರ್ವಜರಂತೆ ಜೀವನ ಶೈಲಿ ರೂಪಿಸಿ ಕೊಳ್ಳುವುದು ಎಲ್ಲ ವಿಧದಿಂದಲೂ ಒಳ್ಳೆಯದು. ಕೊರೊನಾ ಶ್ರಮಿಕ ವರ್ಗಕ್ಕೆ ಹೆಚ್ಚು ಅಪಾಯಕಾರಿಯಾಗದೆ ಇರುವುದನ್ನೂ ಗಮನಿಸಬೇಕಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಂತೆ ರಾಷ್ಟ್ರೀಯ ಆರೋಗ್ಯ ನೀತಿಯನ್ನೂ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಬೇಕು ಎನ್ನುತ್ತಾರೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು.

ಭಗವದ್ಗೀತೆಯಲ್ಲಿ ಯುಕ್ತಾಹಾರ ವಿಹಾರಸ್ಯ… ಎಂದು ಶ್ರೀಕೃಷ್ಣ ಹೇಳಿದ್ದಾನೆ. ಆಹಾರ ಮತ್ತು ನಿದ್ರೆಯಂತಹ ನಿಸರ್ಗ ವಿಧಿಸಿದ ಕ್ರಮಗಳನ್ನು ಚಾಚೂತಪ್ಪದೆ ಪಾಲಿಸಬೇಕೆನ್ನುವುದು ಇದರ ಅರ್ಥ. ಇದು ಗೊತ್ತಿದ್ದರೂ ಪಾಲಿಸಲು ಸಾಧ್ಯವಾಗಲಿಲ್ಲ. ನಿಷೇಧಿತ ಸಮಯದಲ್ಲಿ ಎಲ್ಲರೂ ಚಟುವಟಿಕೆಯಲ್ಲಿದ್ದಾಗ ಉಳಿದವರೂ ಹಾಗೆಯೇ ನಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಸೂರ್ಯಾಸ್ತದೊಳಗೆ ಆಹಾರ ಸ್ವೀಕಾರ, ರಾತ್ರಿ 8 ಗಂಟೆಯಿಂದ ಬೆಳಗ್ಗೆ 4 ಗಂಟೆ ವರೆಗೆ ರಾಷ್ಟ್ರೀಯ ವಿಶ್ರಾಂತಿ ಸಮಯ ಎಂಬ ಶಾಸನಾತ್ಮಕ ನೀತಿಯನ್ನು ಘೋಷಿಸಬೇಕು.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠ, ಉಡುಪಿ

ಟಾಪ್ ನ್ಯೂಸ್

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

1

Udupi: ಪೊಲೀಸ್‌ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Bomb Threat: ಹೋಟೆಲ್‌, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ

Bomb Threat: ಹೋಟೆಲ್‌, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.