Udupi: ಸಾಲು-ಸಾಲು ರಜೆ; ನವರಾತ್ರಿ ಸಂಭ್ರಮ; ಎಲ್ಲೆಡೆ ವಾಹನ ದಟ್ಟಣೆ
Team Udayavani, Oct 6, 2024, 4:00 PM IST
ಉಡುಪಿ: ನವರಾತ್ರಿ ಪ್ರಯುಕ್ತ ಶಾಲಾ-ಮಕ್ಕಳಿಗೆ ರಜೆ ಇದ್ದು, ನಗರದಾದ್ಯಂತ ವಿವಿಧ ಅಂಗಡಿ-ಮುಂಗಟ್ಟುಗಳಲ್ಲಿ ಜನದಟ್ಟಣೆ ಕಂಡುಬರುತ್ತಿದೆ. ಧಾರ್ಮಿಕ ಕೇಂದ್ರಗಳ ಎದುರು ಭಾಗದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಳ ಕಂಡುಬಂದಿದೆ. ದಟ್ಟನೆ ಇರುವ ಭಾಗದಲ್ಲಿ ಕೆಲವು ದಿನಗಳ ಮಟ್ಟಿಗಾದರೂ ಟ್ರಾಫಿಕ್ ಪೊಲೀಸರು ಅಥವಾ ಹೋಂಗಾರ್ಡ್‌ಗಳನ್ನು ನಿಯೋಜಿಸುವ ಬಗ್ಗೆ ಸಾರ್ವಜನಿಕ ವಲಯದಿಂದ ಆಗ್ರಹಗಳು ಕೇಳಿಬರುತ್ತಿವೆ.
ಬೆಳಗ್ಗಿನಿಂದ ರಾತ್ರಿಯವರೆಗೂ ಈ ಸಮಸ್ಯೆ ತಪ್ಪಿದ್ದಲ್ಲ. ಈ ನಡುವೆ ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವ ಕಾರಣ ಸಮಸ್ಯೆ ಎದುರಾಗುತ್ತಿದೆ. ನಗರದ ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಕಲ್ಸಂಕ, ಕರಾವಳಿ ಬೈಪಾಸ್, ತೆಂಕಪೇಟೆ, ಬಡಗುಪೇಟೆ, ಕಿನ್ನಿಮೂಲ್ಕಿ ಹೀಗೆ ವಿವಿಧೆಡೆ ಹಿಂದಿಗಿಂತಲೂ ಅಧಿಕ ವಾಹನಗಳು ಸಂಚರಿಸುತ್ತಿವೆ.
ಕಿತ್ತುಹೋದ ಕೋನ್‌ಗಳು
ಕಲ್ಸಂಕ ಬಳಿ ಎಡಬದಿಗೆ ಹೋಗುವ ವಾಹನಗಳ ಸಂಚಾರಕ್ಕೆ ಕೋನ್ ಅಳವಡಿಕೆ ಮಾಡಿದ್ದು, ಅದು ಸಂಪೂರ್ಣ ಕಿತ್ತುಹೋಗಿದ್ದು, ಕಬ್ಬಿಣ ಮೇಲೆ ಎದ್ದು ಕಾಣುತ್ತಿದೆ. ಇದೇ ಕೆಎಂ ಮಾರ್ಗದ ಬಳಿಯೂ ಕೋನ್‌ಗಳು ಸಂಪೂರ್ಣ ಕಿತ್ತುಹೋಗಿವೆ. ಪರಿಣಾಮ ವಾಹನಗಳು ಎಲ್ಲೆಂದರಲ್ಲಿ ಜಾಗ ಇರುವೆಡೆ ನುಗ್ಗಿಸಿಕೊಂಡು ಚಲಿಸುತ್ತವೆ.
ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ
ನಗರದ ಹಲವೆಡೆ ನೋ ಪಾರ್ಕಿಂಗ್ ಫಲಕ ಹಾಕಲಾಗಿದ್ದು, ಇದರ ಎದುರು ಭಾಗದಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿರುವ ಪರಿಣಾಮ ಮತ್ತಷ್ಟು ಸಂಚಾರ ದಟ್ಟನೆ ಎದುರಾಗುತ್ತಿದೆ. ಕೆಲವು ಸಿಗ್ನಲ್ ಫಲಕಗಳು ಕೂಡ ಕಿತ್ತು ಹೋಗಿರುವ ಪರಿಣಾಮ ಅದು ಯಾವ ಸಿಗ್ನಲ್ ಎಂಬುವುದು ಪ್ರಯಾಣಿಕರಿಗೆ ತಿಳಿಯುವುದೂ ಇಲ್ಲ.
ಸಿಬಂದಿ ನೇಮಕ
ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ವಿವಿಧ ಭಾಗಗಳಿಗೆ ಕೋನ್ ಹಾಗೂ ಸಿಗ್ನಲ್ ಲೈಟ್‌ಗಳನ್ನು ಅಳವಡಿಸುವ ಬಗ್ಗೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಆಯಾಕಟ್ಟಿನ ಭಾಗದಲ್ಲಿ ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆೆ ನಿಯಂತ್ರಿಸುತ್ತಿದ್ದಾರೆ. ಹೆಚ್ಚಿನ ದಟ್ಟಣೆ ಕಂಡುಬರುತ್ತಿರುವ ಸ್ಥಳಗಳಲ್ಲಿ ಅಧಿಕ ಮಂದಿ ಸಿಬಂದಿಯನ್ನೂ ನಿಯೋಜಿಸಲಾಗುವುದು.
-ಸುದರ್ಶನ ದೊಡ್ಡಮನಿ, ಪೊಲೀಸ್ ಉಪನಿರೀಕ್ಷಕರು, ಸಂಚಾರ ಠಾಣೆ
ಉಡುಪಿಯಲ್ಲಿ ನಿತ್ಯ ಬ್ಲಾಕ್
ನಗರದ ಕಿದಿಯೂರು ಹೊಟೇಲ್ ಮುಂಭಾಗದಲ್ಲಿ ಡ್ರೈನೇಜ್ ಕಾಮಗಾರಿ ಮಾಡುತ್ತಿರುವ ಕಾರಣ ಅಲ್ಲಿಂದ ಶಿರಿಬೀಡು ಮಾರ್ಗವಾಗಿ ಸಿಟಿ ಬಸ್ ನಿಲ್ದಾಣ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಣಿಪಾಲಕ್ಕೆ ಹೋಗುವವರು ಕಿದಿಯೂರು ಹೊಟೇಲ್‌ನಿಂದ ಬಲಬದಿಗೆ ತಿರುಗಿ ಸಿಟಿ ಬಸ್‌ನಿಲ್ದಾಣದ ಮೂಲಕ ಹೋಗಬೇಕು. ನಗರಕ್ಕೆ ಹೋಗುವವರೂ ಇದೇ ಮಾರ್ಗದಲ್ಲಿ ಹೋಗಬೇಕಿರುವ ಕಾರಣ ಸಿಟಿ ಬಸ್ ನಿಲ್ದಾಣದ ತುಂಬಾ ಬೆಳಗ್ಗಿನಿಂದ ರಾತ್ರಿಯವರೆಗೂ ಟ್ರಾಫಿಕ್ ದಟ್ಟನೆ ಕಂಡುಬರುತ್ತಿದೆ. ಇಲ್ಲಿ ಇಬ್ಬರು ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿದೆಯಾದರೂ ಕಿರಿದಾದ ಏಕಮುಖ ರಸ್ತೆಯಾದ ಕಾರಣ ನಿತ್ಯ ಈ ಸಮಸ್ಯೆ ಎದುರಾಗುತ್ತಿದೆ. ಆದಷ್ಟು ಬೇಗ ಪೂರ್ಣ ಗೊಳಿಸಿ ಸಂಚಾರ ಮುಕ್ತಗೊಳಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಇಲ್ಲವಾದರೆ ಕಾಮಗಾರಿ ಆಗು ವಾಗಲೇ ವಾಹನ ಸಂಚಾರ ಮಾಡುವ ಸಾಧ್ಯತೆಯೂ ಹೆಚ್ಚಿದೆ ಎಂದು ಸ್ಥಳೀಯರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.