“ಮಮತಾ ಬ್ಯಾನರ್ಜಿ ಉಡುವ ಸೀರೆ ನಮಗೇಕೆ ಬೇಡ?’
ಉಡುಪಿ ಸೀರೆಗಳ ಪ್ರದರ್ಶನ, ಮಾರಾಟ ಮೇಳ
Team Udayavani, Sep 16, 2020, 7:54 AM IST
ಉಡುಪಿ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಜಿ.ಪಂ. ಸದಸ್ಯರು ಹಾಗೂ ಸಿಬಂದಿ ಭಾಗವಹಿಸಿ, ಸೀರೆಗಳನ್ನು ಖರೀದಿಸಿದರು.
ಉಡುಪಿ: ಉಡುಪಿ ಸೀರೆಯನ್ನು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಅವರು ಉಡುತ್ತಾರೆ. ಹೀಗಿರುವಾಗ ಸ್ಥಳೀಯರಾದ ನಾವು ಉಡುಪಿ ಸೀರೆಗೆ ಪ್ರೋತ್ಸಾಹ ನೀಡುವುದು ಕರ್ತವ್ಯ. ಸ್ಥಳೀಯ ಉದ್ಯಮವಾದ ಕೈಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿ.ಪಂ. ಅಧ್ಯಕ್ಷ ದಿನಕರ್ ಬಾಬು ಹೇಳಿದರು.
ಕೈಮಗ್ಗ ಸೀರೆಗಳ ಉತ್ಪಾದನೆ, ಮಾರಾಟ ಪ್ರೋತ್ಸಾಹಿಸಲು ಜಿ.ಪಂ., ಜಿಲ್ಲಾ ಕೈಮಗ್ಗ ಮತ್ತು ಜವುಳಿ ಇಲಾಖೆ ಮತ್ತು ಕೈಮಗ್ಗ ನೇಕಾರರ ಸಹಕಾರಿ ಸಂಘಗಳ ಆಶ್ರಯದಲ್ಲಿ ಮಂಗಳವಾರ ಜಿ.ಪಂ.ನಲ್ಲಿ ಆಯೋಜಿಸಿದ್ದ ಉಡುಪಿ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ಉದ್ಯಮಗಳಿಗೆ ಪ್ರೋತ್ಸಾಹ ನೀಡುವಂತೆ ಕರೆ ನೀಡಿದ್ದಾರೆ. ಉಡುಪಿ ಜಿ.ಪಂ. ಸದಸ್ಯರು ಒಂದಾಗಿ ಜಿ.ಪಂ. ಕಚೇರಿಯಲ್ಲಿ ಮಾರಾಟ ಮೇಳ ವನ್ನು ಆಯೋಜಿಸಿದ್ದಾರೆ. ಉಡುಪಿ ಸೀರೆ ಯನ್ನು ಪಶ್ಚಿಮ ಬಂಗಾಲ ಸಿಎಂ ಅವರು ಧರಿಸುತ್ತಾರೆ. ಹಾಗಿರುವಾಗ ಸ್ಥಳೀಯರಾದ ನಾವು ನಮ್ಮ ಉಡುಪಿ ಸೀರೆಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಕೈಮಗ್ಗ ಸೀರೆಗಳು ಸ್ಥಳೀಯ ನೇಕಾರರ ಕಲೆಯಾಗಿದ್ದು, ಇದನ್ನು ಪ್ರೋತ್ಸಾಹಿಸಲು ಪ್ರದರ್ಶನ ಆಯೋಜಿಸಲಾಗಿದೆ ಎಂದು ಕೈಮಗ್ಗ ಜವುಳಿ ಇಲಾಖೆಯ ಸಹಾಯಕ ಶಿವಶಂಕರ್ ತಿಳಿಸಿದರು.
ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಸದಸ್ಯೆ ಶೋಭಾ, ಸಿಇಒ ಪ್ರೀತಿ ಗೆಹೊÉàತ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.
ಬ್ರಹ್ಮಾವರ ಪ್ರಾಥಮಿಕ ನೇಕಾರರ ಸಂಘ, ಉಡುಪಿ, ಶಿವಳ್ಳಿ ಪ್ರಾಥಮಿಕ ನೇಕಾರರ ಸಂಘದ ಸದಸ್ಯರು ಕೈಮಗ್ಗ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಭಾಗವಹಿಸಿ ದ್ದಾರೆ. ಕೈ ಮಗ್ಗದ ಶರ್ಟ್, ಶಾಲು, ಸಹಜ ಸೌಂದರ್ಯದ ಉಡುಪಿ ಸೀರೆ, ಸೇರಿದಂತೆ ವಿವಿಧ ಕೈಮಗ್ಗದಿಂದ ತಯಾರಿಸಿದ ಸೀರೆ ಮಾರಾಟ ಹಾಗೂ ಪ್ರದರ್ಶನದಲ್ಲಿತ್ತು. ಜಿ.ಪಂ. ಹಾಗೂ ಡಿಸಿ ಕಚೇರಿ ಸಿಬಂದಿ ಕೈಮಗ್ಗದ ಉಡುಪುಗಳನ್ನು ಖರೀದಿರಿಸಿದರು.
ಉಡುಪಿ ಸೀರೆಗೆ ಹೊಸ ವಿನ್ಯಾಸ
ಉಡುಪಿ ಸೀರೆಗೆ ಮನಸೋತು ಎಂಬಿಎ ಪದವೀಧರರೊಬ್ಬರು ಅವು ಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮಣಿಪಾಲದ ಮಹಾಲಸ ಕಿಣಿ ಟ್ಯಾಪ್ಮಿಯಲ್ಲಿ ಎಂಬಿಎ ಪದವಿಯನ್ನು ಪಡೆದುಕೊಂಡಿದ್ದು, ಕೈಮಗ್ಗದ ಉತ್ಪನ್ನಗಳ ಮೇಲೆ ಆಸಕ್ತಿ ಹೊಂದಿರುವ ಹಿನ್ನೆಲೆಯಲ್ಲಿ ಉಡುಪಿ ಸೀರೆಗಳಿಗಾಗಿಯೇ ವಿಶೇಷ ವಿನ್ಯಾಸ ತಯಾರಿಸಿ, ಇನ್ನಷ್ಟು ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಯುವತಿಯರಿಗೆ ಇಷ್ಟವಾಗುವ ಕೆಲವೊಂದು ಸೀರೆ ವಿನ್ಯಾಸಗಳನ್ನು ಸಿದ್ಧಪಡಿಸುತ್ತಾರೆ. ಆ ಎಲ್ಲ ಸೀರೆಗಳನ್ನು ಅವರೇ ಖರೀದಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಾರೆ. ಜತೆಗೆ ನೇಕಾರರು ಇತರ ಸೀರೆಗಳನ್ನು ಮಾರಾಟ ಮಾಡಲು ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.