Udupi: ಧರ್ಮ ರಕ್ಷಣೆಗೆ ಹಿಂಸೆ ತಪ್ಪಲ್ಲ ಎಂದಿದ್ದ ಶ್ರೀ ಕೃಷ್ಣ
ಶ್ರೀಕೃಷ್ಣ ಜನ್ಮಾಷ್ಟಮಿ ಸಪ್ತೋತ್ಸವದ ಸಮಾರೋಪದಲ್ಲಿ ಡಾ| ಎಸ್.ಎಲ್. ಬೈರಪ್ಪ
Team Udayavani, Aug 29, 2024, 1:16 PM IST
ಉಡುಪಿ: ದೇಶದ ಸ್ವಾತಂತ್ರ್ಯದ ಸಂದರ್ಭದಲ್ಲಿ ಗಾಂಧೀಜಿಯವರು ಅಹಿಂಸಾವಾದ ಪ್ರತಿಪಾದನೆ ವೇಳೆ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಅಹಿಂಸೆ ಬೋಧಿಸಿದ್ದಾನೆ ಎಂದಿದ್ದರು. ಅದನ್ನೇ ದೇಶದ ಮೊದಲ ಪ್ರಧಾನಿ ಅನುಸರಿಸಿ ನಮ್ಮ ಸೈನ್ಯಕ್ಕೆ ಬಲ ತುಂಬಲಿಲ್ಲ. ಹೀಗಾಗಿ ಚೀನದ ಆಕ್ರಮಣ ಎದುರಿಸಲು ವಿಫಲರಾದೆವು. ವಾಸ್ತವದಲ್ಲಿ ಶ್ರೀ ಕೃಷ್ಣ ಧರ್ಮ ರಕ್ಷಣೆಗೆ ಹಿಂಸೆ ಮಾಡಬಹುದು ಎಂದು ಬೋಧಿಸಿದ್ದಾನೆ. ಅಹಿಂಸೆಯ ಪ್ರಸ್ತಾವ ಮಾಡಿದ್ದು ಅರ್ಜುನ ಎಂದು ಹಿರಿಯ ಕಾದಂಬರಿಕಾರ ಡಾ| ಎಸ್. ಎಲ್. ಭೈರಪ್ಪ ಹೇಳಿದರು.
ಶ್ರೀ ಕೃಷ್ಣಮಠ, ಪರ್ಯಾಯ ಪುತ್ತಿಗೆ ಮಠ ದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಮಾಸೋತ್ಸವದಲ್ಲಿ ಜರಗಿದ ಸಪೊ¤àತ್ಸವದ ಸಮಾರೋಪದಲ್ಲಿ ಬುಧವಾರ ಶ್ರೀ ಮಠದಿಂದ ವಿಶೇಷ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಶ್ರೀ ಕೃಷ್ಣ ರಾಜತಂತ್ರಜ್ಞ, ತಣ್ತೀಶಾಸ್ತ್ರಜ್ಞ ಹೀಗೆ ಎಲ್ಲವೂ ನಿಜ. ಆದರೆ ನಾವು ಶ್ರೀ ಕೃಷ್ಣನನ್ನು ಅರ್ಥೈಸಿಕೊಳ್ಳುವಲ್ಲಿ ಸೋತಿದ್ದೇವೆ. ಆತನನ್ನು ನಾವು ಸರಿಯಾದ ಕ್ರಮದಲ್ಲಿ ಅರ್ಥೈಸಿಕೊಳ್ಳಬೇಕು ಎಂದರು.
ಸುತ್ತಮುತ್ತ ಕಂಡ ವಿಷಯವನ್ನೇ ಕಥೆ, ಸಾಹಿತ್ಯ, ಕಾದಂಬರಿಯಾಗಿ ಬರೆಯುತ್ತೇನೆ ಎನ್ನುವವರೂ ಇದ್ದಾರೆ. ಆದರೆ ತಣ್ತೀಶಾಸ್ತ್ರ ಎಂಬ ಅಧ್ಯಾತ್ಮವನ್ನು ಅಧ್ಯಯನ ಮಾಡದೆ ಯಾವುದೇ ಸಾಹಿತ್ಯ ಬರೆಯಲು ಸಾಧ್ಯವಿಲ್ಲ. ನಮ್ಮ ಜೀವನವನ್ನು ಸರಿಯಾಗಿ ಮಾಡುವುದೇ ತಣ್ತೀಶಾಸ್ತ್ರ. ಜೀವನದ ಮೌಲ್ಯಗಳು ಸಾಹಿತ್ಯದಲ್ಲಿ ಕಾಣಬೇಕು. ನಾನು ಚಿಕ್ಕವನಿದ್ದಾಗಿನಿಂದ ಕಥೆ ಹೇಳುವ ಪ್ರವೃತ್ತಿ ಹೊಂದಿದ್ದು, ಆದ್ದರಿಂದಲೇ ಕಥೆ ಬರೆಯಲು ಸಾಧ್ಯವಾಗಿದೆ ಎಂದರು.
ಸಜ್ಜನರು ಒಂದಾಗಬೇಕು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಭಗವಂತನ ಅವತಾರದ ಸಂಭ್ರಮದಲ್ಲಿ ಭಾಗಿಯಾದರೆ ಜೀವನದ ಉದ್ಧಾರ, ಭಗವಂತನ ಅನುಗ್ರಹ, ಪುಣ್ಯ ಸಂಚಯ ಆಗುತ್ತದೆ. ಪಡೆದದ್ದನ್ನು ಮರಳಿ ನೀಡುವುದೇ ಧರ್ಮದ ಮೂಲ ತಣ್ತೀ. ಇದರಿಂದ ಜಗತ್ತಿನ ಕಲ್ಯಾಣವಾಗುತ್ತದೆ. ಮರಳಿ ನೀಡದಿದ್ದರೆ ಜಗತ್ತಿಗೆ ನಷ್ಟವಾಗುತ್ತದೆ. ಸಜ್ಜರನ ರಕ್ಷಣೆಗೆ, ದುಷ್ಟರಿಗೆ ಶಿಕ್ಷೆ ನೀಡುವ ದೇವರು ಅವತರಿಸುತ್ತಾರೆ. ಸಜ್ಜನರ ಮೌನ, ನಿಷ್ಕ್ರಿಯತೆ ಉಗ್ರ ಶಕ್ತಿ ಹೆಚ್ಚಳಕ್ಕೂ ಕಾರಣವಾಗುತ್ತದೆ. ಸಜ್ಜನರು ಒಟ್ಟಾಗಿ ಸಕ್ರಿಯರಾದರೆ ಉಗ್ರರೇ ಇರುವುದಿಲ್ಲ ಎಂದರು. ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಡಿ. ಹರ್ಷೇಂದ್ರ ಕುಮಾರ್ ಹೆಗ್ಗಡೆ ದಂಪತಿ ಪರ್ಯಾಯ ಶ್ರೀಪಾದರನ್ನು ಗೌರವಿಸಿ ದರು. ಶ್ರೀಪಾದರು ಹರ್ಷೇಂದ್ರ ಹೆಗ್ಗಡೆ ದಂಪತಿಯನ್ನು ಅನುಗ್ರಹಿಸಿದರು. ಪವಿತ್ರಪಾಣಿ ಶ್ರೀನಿವಾಸ ಉಪಾಧ್ಯಯ, ಶೋಭಾ ಉಪಾಧ್ಯಾಯ ದಂಪತಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಲಾಯಿತು. ಮಧ್ವಸರೋವರ ಸ್ವತ್ಛತೆಗೆ 5 ಲಕ್ಷ ರೂ. ಕೊಡುಗೆ ನೀಡಿದ ದಿಲ್ಲಿಯ ಅಮಿತ್ ಕುಮಾರ್, ಸಾಹಿತಿ ಪ್ರಧಾನ್ ಗುರುದತ್ತ, ಗುಜರಾತ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ ನರಸಿಂಹ ಕೋಮಲ್, ಕ್ರೆಡಾೖ ಸಂಸ್ಥೆ ಶರಣ್ ಶೆಟ್ಟಿ, ಅಮಿತ್ ಅರವಿಂದ್, ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು. ಶ್ರೀಮಠದ ರಮೇಶ್ ಭಟ್ ಸ್ವಾಗತಿಸಿ, ಡಾ| ಬಿ. ಗೋಪಾಲ್ ಆಚಾರ್ಯ ನಿರೂಪಿಸಿದರು.
ಹುಲಿವೇಷ ಸ್ಪರ್ಧೆ: ಬಹುಮಾನ ವಿತರಣೆ ಅಷ್ಟಮಿ, ಶ್ರೀಕೃಷ್ಣ ಲೀಲೋತ್ಸವದ ಹಿನ್ನೆಲೆಯಲ್ಲಿ ಜರಗಿದ ಹುಲಿವೇಷ ಹಾಗೂ ಜನಪದ ವೇಷ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಪರ್ಯಾಯ ಶ್ರೀಪಾದರು ಬಹುಮಾನ ವಿತರಿಸಿದರು. ಹುಲಿ ವೇಷ ಕುಣಿತದಲ್ಲಿ ಪಡು ಅಲೆವೂರು ಶ್ರೀ ಇಷ್ಟ ಮಹಾಲಿಂಗೇಶ್ವರ ತಂಡ ಪ್ರಥಮ ಸ್ಥಾನ, ಅಲೆವೂರು ವಿಷ್ಣು ಸೇವಾ ಬಳಗ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮೊದಲ ಬಹುಮಾನವಾಗಿ ಟಿವಿಎಸ್ ಎಲೆಕ್ಟ್ರಿಕಲ್ ಸ್ಕೂಟರ್ ನ ಕೀಯನ್ನು ಶ್ರೀಪಾದರು ವಿಜೇತ ತಂಡಕ್ಕೆ ಹಸ್ತಾಂತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Udupi: ಗೀತೆಯ ಸಂದೇಶ ಪ್ರತೀ ಮನೆಯನ್ನೂ ಪ್ರವೇಶಿಸಲಿ: ಕಾಂಚಿ ಶ್ರೀ
Udupi: ಎಂಜಿಎಂ ಕಾಲೇಜಿನಲ್ಲಿ ನ.29 ರಿಂದ ಡಿ.1ವರೆಗೆ ಅಮೃತ ಮಹೋತ್ಸವ ಸಂಭ್ರಮ
Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.