ಉಡುಪಿ: ಪೊಲೀಸ್ ಸಹಿತ ಕೆಲವರಿಗೆ ಸೋಂಕು
Team Udayavani, Jun 22, 2020, 7:20 AM IST
ಸಾಂದರ್ಭಿಕ ಚಿತ್ರ
ಉಡುಪಿ: ಬೈಂದೂರಿನ ಪೊಲೀಸ್ ಸಿಬಂದಿ, ಬೈಂದೂರು ತಾಲೂಕಿನ ಆಸ್ಪತ್ರೆಯೊಂದರ ಸಿಬಂದಿ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಕೆಲವರಿಗೆ ಸೋಂಕು ತಗಲಿರುವುದು ರವಿವಾರ ದೃಢವಾಗಿದೆ. ಆದರೆ ರಾಜ್ಯ ಮಟ್ಟದಿಂದ ಅಧಿಕೃತವಾಗಿ ಸೋಮವಾರ ಪ್ರಕಟನೆ ಹೊರಬೀಳಲಿದೆ.
ರವಿವಾರ 112 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವರಲ್ಲಿ ಉಸಿರಾಟದ ಸಮಸ್ಯೆಯವರು ಐವರು, ಕೋವಿಡ್ ಶಂಕಿತರು 17 ಮಂದಿ, ಕೊರೊನಾ ಸಂಪರ್ಕಿತರು 22, ಜ್ವರ ಬಾಧಿತರು 8, ಹಾಟ್‌ಸ್ಪಾಟ್‌ನವರು 60 ಮಂದಿ ಇದ್ದಾರೆ. ಒಟ್ಟು 1,063 ಸೋಂಕಿತರಲ್ಲಿ 965 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದು 96 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 267 ಜನರ ಮಾದರಿಗಳ ವರದಿ ಬರಬೇಕಿದೆ. ಪ್ರಸ್ತುತ 741 ಮಂದಿ ಮನೆಗಳಲ್ಲಿ, 81 ಮಂದಿ ಐಸೊಲೇಶನ್ ವಾರ್ಡ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. 11 ಮಂದಿ ಐಸೊಲೇಶನ್ ವಾರ್ಡ್‌ಗೆ ಸೇರಿದ್ದು ಇಬ್ಬರು ಬಿಡುಗಡೆಗೊಂಡಿದ್ದಾರೆ.
ಕೇರಳ ವೃದ್ಧೆಯ ವರದಿ ನೆಗೆಟಿವ್
ಬೆಳ್ಮಣ್: ಸಂಕಲಕರಿಯದಲ್ಲಿರುವ ಪುತ್ರನ ನಿವಾಸಕ್ಕೆ ಗುರುವಾರ ಕೇರಳದಿಂದ ಆಗಮಿಸಿ ಶುಕ್ರವಾರ ಮೃತಪಟ್ಟ 95 ವರ್ಷದ ವೃದ್ಧೆಯ ಗಂಟಲದ್ರವದ ವರದಿ ಬಂದಿದ್ದು, ಕೊರೊನಾ ಇಲ್ಲವೆಂದು ದೃಢಪಟ್ಟಿದೆ. ಸ್ಥಳೀಯರಲ್ಲಿ ನೆಲೆಸಿದ್ದ ಆತಂಕ ದೂರವಾಗಿದೆ. ರವಿವಾರ ಶವ ಸಂಸ್ಕಾರ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.