ಉಡುಪಿ: ರಸ್ತೆಯಲ್ಲಿ ನೋಟಿನ ಕಂತೆಗಳನ್ನು ಹರಡಿ ಯುವಕನ ಅವಾಂತರ!
Team Udayavani, Apr 13, 2020, 1:18 PM IST
ಉಡುಪಿ; ಇಲ್ಲಿನ ವಾದಿರಾಜ ರಸ್ತೆಯಲ್ಲಿ ಯವಕನೋರ್ವ ನೋಟಿನ ಕಂತೆ ಹರಡಿ ಕೆಲ ಕಾಲ ಆತಂಕ ಸ್ರಷ್ಟಿಸಿದ ಘಟನೆ ಸೋಮವಾರ ನಡೆದಿದೆ.
ಸೋಮ ವಾರ ಯುವಕನೋರ್ವ ರಸ್ತೆಯಲ್ಲಿ ಎಲ್ಲೆಂದರಲ್ಲಿ ನೋಟುಗಳನ್ನ ಚೆಲ್ಲಿದ್ದಾನೆ. ಎರಡು ಸಾವಿರ, ಐನೂರು ಹಾಗೂ ಇನ್ನೂರರ ನೋಟುಗಳನ್ನ ನಡೆದುಕೊಂಡು ಹೋಗುತ್ತಿದ್ದಂತೆ ಚೆಲ್ಲಿದ್ದಾನೆ. ಇದನ್ನು ಕಂಡ ಜನತೆಯೂ ನೋಟು ಹೆಕ್ಕಲು ಮುಗಿಬಿದ್ದಿದ್ದಾರೆ. ಆದರೆ ಈ ನೋಟುಗಳೆಲ್ಲವೂ ನಕಲಿ ನೋಟುಗಳಾಗಿದ್ದವು. ಅವುಗಳೆಲ್ಲಾ ಜೆರಾಕ್ಸ್ ಮಾಡಲಾದ ನೋಟುಗಳು ಎಂದು ತಿಳಿದುಬಂದಿದೆ.
ವಿಷಯ ತಿಳಿದ ಜನ ,ಕೂಡಲೇ ಯುವಕನನ್ನು ಹಿಡಿಯಲು ಯತ್ನಿಸಿದ್ದಾರೆ. ಅದರೆ ಯುವಕ ಪರಾರಿಯಾಗಿದ್ದಾನೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮಧುಕರ್ ಮುದ್ರಾಡಿ ಎಲ್ಲಾ ನಕಲಿ ನೋಟುಗಳನ್ನ ಸಂಗ್ರಹಿಸಿ ನಗರ ಠಾಣ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನಲ್ಲಿ ಬಳಿ ಎರಡಕ್ಕಿಂತಲೂ ಹೆಚ್ಚು ನೋಟಿನ ಬಂಡಲ್ ಇದ್ದವು ಎನ್ನಲಾಗಿದೆ.
ಮಹಾಮಾರಿ ಕೋವಿಡ್ -19 ವೈರಸ್ ನೋಟುಗಳ ಮೂಲಕ ಹರಿಯಬಿಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದ ಜನ ,ಇದೀಗ ಭಯಪಟ್ಟಿದ್ದಾರೆ. ದುಷ್ಕರ್ಮಿಗಳು ನೋಟುಗಳ ಮೂಲಕ ಜನರನ್ನ ಭಯ ಪಡಿಸುವ ಯತ್ನಇದಾಗಿರಬಹುದೆಂದು ಮಧುಕರ್ ಮುದ್ರಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.