Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
ಉತ್ತರಾಖಂಡದಿಂದ ಬಂದು ಉಡುಪಿಯ ಶಾಲೆಗಳಲ್ಲಿ ಸಂವಾದ ನಡೆಸಿದ ಅಜಯ್ ಒಲಿ, ರಾಷ್ಟ್ರಾದ್ಯಂತ ತಿರುಗಾಟ
Team Udayavani, Nov 26, 2024, 3:19 PM IST
ಉಡುಪಿ: ಉತ್ತರಾಖಂಡದ ಯುವಕರೊಬ್ಬರು ಬಾಲ ಕಾರ್ಮಿಕ ಪದ್ಧತಿ, ಅಪೌಷ್ಟಿಕತೆ, ಭಿಕ್ಷಾಟನೆ ವಿರುದ್ಧ ಮತ್ತು ಮಕ್ಕಳ ಶಿಕ್ಷಣ ಹಕ್ಕಿಗಾಗಿ 10 ವರ್ಷಗಳಿಂದ ಬರಿಗಾಲಿನಲ್ಲಿ ದೇಶ ಸಂಚಾರ ಮಾಡುತ್ತಿದ್ದಾರೆ. ಅಜಯ್ ಒಲಿ ಎಂಬ 32 ವರ್ಷದ ಈ ಯುವಕ ಇತ್ತೀಚೆಗೆ ಉಡುಪಿಯಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸಂವಾದ ನಡೆಸಿದರು.
2015ರ ಸೆಪ್ಟಂಬರ್ 29ರಂದು ಉತ್ತರಾಖಂಡ ರಾಜ್ಯದ ಪಿಥೋರಘರ್ ಜಿಲ್ಲೆಯಿಂದ ಬರಿಗಾಲಿನಲ್ಲಿ ದೇಶ ಸುತ್ತುವ ಒಲಿ ಅಭಿಯಾನಕ್ಕೆ ಚಾಲನೆ ದೊರೆತಿದೆ. ಈವರೆಗೆ ದೇಶದ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುತ್ತಾಡಿದ್ದಾರೆ. ರಾಷ್ಟ್ರದ 4,50,000ಕ್ಕೂ ಹೆಚ್ಚು ಮಕ್ಕಳು/ಯುವ ಜನತೆಯೊಂದಿಗೆ ಉತ್ತರ ಭಾರತದಲ್ಲಿ 120ಕ್ಕೂ ಹೆಚ್ಚು ನಗರಗಳಲ್ಲಿ ಬಾಲ ಕಾರ್ಮಿಕ ಮತ್ತು ಭಿಕ್ಷಾಟನೆ ವಿರುದ್ಧ ಅಭಿಯಾನ ನಡೆಸಿದ್ದಾರೆ. ವಿಶೇಷವಾಗಿ 17,000ಕ್ಕೂ ಹೆಚ್ಚು ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತಂದಿದ್ದಾಗಿ ಅವರು ಹೇಳುತ್ತಾರೆ.
ಘನ್‌ಶ್ಯಾಮ್ ಓಲಿ ಎಂಬ ಎನ್‌ಜಿಒ ಮೂಲಕ ಮಕ್ಕಳ ಕಲ್ಯಾಣ ಸಂಘ ನಡೆಸುತ್ತಿರುವ ಇವರು ಅದರ ಮೂಲಕ ಹಿಂದುಳಿದ ಮಕ್ಕಳಿಗೆ ಶಿಕ್ಷಣ, ಊಟ ಮತ್ತು ಇತರ ಅಗತ್ಯಗಳನ್ನು ಒದಗಿಸುತ್ತಿದ್ದಾರೆ.
ಮಕ್ಕಳ ಕಲ್ಯಾಣ, ಜಾಗೃತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಸರಕಾರದಿಂದ ರಾಷ್ಟ್ರೀಯ ಯುವ ಪ್ರಶಸ್ತಿ ಪಡೆದಿದ್ದಾರೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಇವರ ಹೆಸರಿನಲ್ಲಿದೆ. ಉನ್ಮುಕ್ತಿ, ಎಜುಕೇಶನ್ ಆನ್ ವ್ಹೀಲ್, ಮೇರಿ ಸಹೇಲಿ ಮೊದಲಾದ ಸ್ವಯಂ ನಿಧಿ ಯೋಜನೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಅಭಿಯಾನ ಆರಂಭವಾಗಿದ್ದು ಹೀಗೆ….
ಶೈಕ್ಷಣಿಕ ಉದ್ದೇಶಕ್ಕೆ ದತ್ತು ಪಡೆದ ಮಗುವೊಂದು ಅಪೌಷ್ಟಿಕತೆಯಿಂದ ಸಾವನ್ನಪ್ಪಿದ್ದರಿಂದ ಬೇಸರಗೊಂಡ ಅವರು, ದೇಶಾದ್ಯಂತ ಬರಿಗಾಲಿನಲ್ಲಿ ಸಂಚರಿಸಿ ಭಿಕ್ಷಾಟನೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರಯತ್ನಿಸುವ ಸಂಕಲ್ಪ ಮಾಡಿದರು. ಅಲ್ಲಲ್ಲಿ ನಿತ್ಯ ಸಭೆ ನಡೆಸುವುದು, ಒಂದಿಷ್ಟು ಚರ್ಚೆ, ಸಂವಾದ, ಶಾಲಾ ಕಾಲೇಜುಗಳಿಗೆ ಭೇಟಿ, ಯುವ ಜತೆಯೊಂದಿಗೆ ಮಾತುಕತೆ ಇವೆ ಅಜಯ್ ಓಲಿ ದಿನಚರಿ. ಅವರು ಒಂದು ಊರಿಗೆ ಹೋದರೆ ಅಲ್ಲಿ 15-20 ಕಿ.ಮೀ. ಬರಿಗಾಲಲ್ಲಿ ಓಡಾಡುತ್ತಾರೆ. ಪ್ರವಾಸೋದ್ಯಮ ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಇವರು ಮಾನಸಿಕ ಆರೋಗ್ಯ ಮತ್ತು ವೃತ್ತಿ ಕೌಶಲ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 7 ಗ್ರಂಥಾಲಯ ಮತ್ತು ಶಿಕ್ಷಣ ಕೇಂದ್ರ ನಡೆಸುತ್ತಿದ್ದಾರೆ.
ಭಿಕ್ಷಾಟನೆ, ಬಾಲಕಾರ್ಮಿಕ ಪದ್ಧತಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಜನ ಜಾಗೃತಿ ರೂಪಿಸಬೇಕು ಎಂಬ ಉದ್ದೇಶದಿಂದ 2015ರಲ್ಲಿ ಅಭಿಯಾನ ಶುರು ಮಾಡಿದೆ. ಜನಜಾಗೃತಿಯ ಭಾಗವಾಗಿ ಉಡುಪಿಗೆ ಭೇಟಿ ನೀಡಿದ್ದೇನೆ. ಉಡುಪಿ ಮತ್ತು ಮಣಿಪಾಲದಲ್ಲಿನ ಅಭಿಯಾನದ ಅನುಭವ ಸ್ಮರಣೀಯವಾಗಿದೆ.
– ಅಜಯ್ ಓಲಿ
ಕರ್ನಾಟಕದಲ್ಲಿ ಒಲಿ ಓಡಾಟ
ವಿಜಯನಗರ ಜಿಲ್ಲೆಗೆ ಬಂದಿದ್ದ ಒಲಿ ಅವರು ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಕಾಸರಗೋಡು ಸುತ್ತಾಡಿ ಉಡುಪಿಗೆ ಬಂದಿದ್ದರು. ಉಡುಪಿಯಲ್ಲಿ ಬಾಲಕಿಯರ ಪದವಿಪೂರ್ವ ಕಾಲೇಜು ಮತ್ತು ಸಿಲಾಸ್ ಇಂಟರ್‌ನ್ಯಾಶನಲ್ ಸ್ಕೂಲ್‌ಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಜತೆಗೆ ರಥಬೀದಿ, ನಗರಸಭೆ, ಬಸ್ ನಿಲ್ದಾಣ ಮೊದಲಾದ ಕಡೆಗಳಲ್ಲಿ ನಡಿಗೆಯ ಮೂಲಕ ಜನಜಾಗೃತಿ ಮೂಡಿಸಿದರು. ಇಲ್ಲಿಂದ ಅಂಕೋಲಾ, ಗೋವಾ ಮತ್ತು ಹಿಮಾಚಲಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇವರ ಓಡಾಟಕ್ಕೆ ಎಜುಕೇಶನ್ ಆನ್ ವ್ಹೀಲ್ ಎಂದು ಹೆಸರು.
-ದಿವ್ಯಾ ನಾಯ್ಕನಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.