ಕುಕ್ಕುಂದೂರು: ಸಮಸ್ಯೆಗಳು ಕೂರುವ ಗ್ರಾಮವಾಗದಿರಲಿ!
ನಾಗರಿಕರ ಕಡತ ರಕ್ಷಣೆಗೆ ಅಂಗೈಯಷ್ಟು ಜಾಗ!
Team Udayavani, Jun 24, 2022, 5:45 PM IST
ಕಾರ್ಕಳ: ತಾಲೂಕಿನ ದೊಡ್ಡ ಗ್ರಾ.ಪಂ. ಎನ್ನುವ ಹೆಗ್ಗಳಿಕೆ ಕುಕ್ಕುಂದೂರಿನದ್ದು. 33 ವಾರ್ಡ್ ಗಳಿದ್ದರೂ ಇದು ಕಂದಾಯ ಗ್ರಾಮ. ನಾಗರಿಕರ ಕಡತ ಸಂಗ್ರಹಿಸಿಡುವ ವಿ.ಎ., ಕಚೇರಿಯೇ ಸೂಕ್ತವಾಗಿಲ್ಲ ಎನ್ನುವುದೇ ಇಲ್ಲಿನ ದೊಡ್ಡ ಸಮಸ್ಯೆ.
ಗ್ರಾಮಲೆಕ್ಕಿಗರ ಕಚೇರಿ ಮಾತ್ರ ಸಣ್ಣ ಗೂಡಿನಂತಿದೆ. ಇಕ್ಕಟ್ಟಾದ ಸಣ್ಣ ಕೊಠಡಿಯಲ್ಲಿ ಗ್ರಾಮದ ಎಲ್ಲ ವಾರ್ಡ್‌ಗಳ ಕಡತ ಸಂಗ್ರಹಿಸಿಡಬೇಕಾದ ಪರಿಸ್ಥಿತಿ.
ಮಳೆಗಾಲದಲ್ಲಿ ಕಟ್ಟಡ ಸೋರು ತ್ತದೆ. ಕಿಟಕಿ ಬಾಗಿಲುಗಳ ಸಂಧಿಯಲ್ಲೂ ನೀರು ಒಳ ನುಗ್ಗಿ ದಾಖಲೆಗಳೆಲ್ಲವೂಒದ್ದೆಯಾಗುವ ಸ್ಥಿತಿಯಲ್ಲಿದೆ. ಕಟ್ಟಡ ಮೇಲ್ವಾವಣಿಗೆ ಅಳವಡಿಸಿದ ಮರಗಳು ಗೆದ್ದಲು ಹಿಡಿದಿವೆ. ಕಡತ ರಕ್ಷಣೆ ಮಾಡುವುದೇ ಪ್ರಮುಖ ಸಮಸ್ಯೆ.
ಗ್ರಾಮದಲ್ಲಿ ಹಲವು ವರ್ಷ ಗಳಿಂದ ಭೂಮಿಯನ್ನು ಬಳಸು ತ್ತಿರುವ ಪ. ಜಾತಿಯ 100ಕ್ಕೂ ಅಧಿಕ ಕುಟುಂಬಗಳಿಗೆ ಹಿರಿಯರ ಮರಣ ಸರ್ಟಿಫಿಕೇಟ್ ಇಲ್ಲದೆ ಹಕ್ಕುಪತ್ರ ಸಿಕ್ಕಿಲ್ಲ. ಹಾಗಾಗಿ ಸವಲತ್ತು ಗಳೂ ಇಲ್ಲ. ಇದಕ್ಕಾಗಿ ಗ್ರಾಮದಲ್ಲಿ ವಿಶೇಷ ಕಂದಾಯ ಅದಾಲತ್ ನಡೆಸಿ ದಶಕಗಳ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂಬುದು ಈ ಸಮುದಾಯದ ಮನವಿ.
ಬೇಸಗೆಯಲ್ಲಿ ನೀರಿನ ಕೊರತೆ ತಪ್ಪಿದ್ದಲ್ಲ. ನೀರು ಇದ್ದರೂ, ಓವರ್ ಹೆಡ್ ಟ್ಯಾಂಕ್ ಇದ್ದರೂ, ಸಾರ್ವಜನಿಕ ಬಾವಿಯ ಪಂಪ್‌ಗ್ಳು ಆಗಾಗ ಕೆಡುತ್ತಿರುವುದರಿಂದ ಸಮಸ್ಯೆ ಯಾಗುತ್ತಿದೆ. ದುರಸ್ತಿಗೆ ಸಮಯ ತಗಲುವ ಕಾರಣ ನಿರಂತರ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಮಾಣಿಗುಡ್ಡೆ, ಪೊಸನೊಟ್ಟು ಈ ಕಾಲನಿಗಳಲ್ಲಿ ಸಮಸ್ಯೆ ತುಸು ಹೆಚ್ಚು. ಪಂಪ್ ದುರಸ್ತಿಯಾಗುವವರೆಗೆ ಸಮಸ್ಯೆ ಅನುಭವಿಸಲೇಬೇಕು. ಗ್ರಾ.ಪಂ.ಯಲ್ಲಿ ಹೆಚ್ಚುವರಿ ಪಂಪ್ ಗಳ ದಾಸ್ತಾನು ಇರಿಸಿಕೊಂಡರೆ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗ ಬಹುದು ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮಕ್ಕೆ ಸರಕಾರಿ ಬಸ್ ವ್ಯವಸ್ಥೆ ಗಳಿಲ್ಲ. ಗ್ರಾಮಕ್ಕೆ ಹಿಂದೆ ಬರುತಿದ್ದ ಎಲ್ಲ ಖಾಸಗಿ ಬಸ್ಸುಗಳು ಈಗ ಬರುತ್ತಿಲ್ಲ. ಕೆಲವು ಸಂಚಾರ ಸ್ಥಗಿತ ಗೊಳಿಸಿವೆ. ಇದರಿಂದ ವಿದ್ಯಾರ್ಥಿ ಗಳಿಗೆ, ನಾಗರಿಕರಿಗೆ ಸಮ ಯಕ್ಕೆ ಸರಿಯಾಗಿ ಶಾಲಾ ಕಾಲೇಜು ಗಳಿಗೆ ತೆರಳಲು, ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಹೋಗಲು ಸಾಧ್ಯ ವಾಗುತ್ತಿಲ್ಲ. ಮಕ್ಕಳು ರಸ್ತೆ ಬದಿ, ಪೇಟೆಗಳಲ್ಲಿ ಬಾಕಿಯಾಗುತ್ತಾರೆ ಎನ್ನುತ್ತಾರೆ ಗ್ರಾಮದ ನಿವಾಸಿಗಳು.
ನೀರಿನ ಸಮಸ್ಯೆಗೆ ಶಾಶ್ವತ ಪರಿ ಹಾರ ಒದಗಿಸಲು ಜಲಜೀವನ್ ಯೋಜನೆ ಪ್ರಗತಿಯಲ್ಲಿದೆ. ಪೊಸನೊಟ್ಟು ಎಂಬಲ್ಲಿ ಹಳೆಯ ಪ್ರಾ. ಆ. ಕೇಂದ್ರ ಸ್ಥಳಾಂತರ ಬಳಿಕ ಆ ಕೇಂದ್ರದ ಸುತ್ತ ಪೊದೆಗಳು ತುಂಬಿ ನಿರುಪಯುಕ್ತವಾಗಿ ಅಕ್ರಮ ಚಟುವಟಿಕೆಯ ಕೇಂದ್ರವಾಗಿದೆ. ಪಶು ಚಿಕಿತ್ಸಾಲಯವಿದ್ದರೂ ವೈದ್ಯರು ಇಲ್ಲದೆ ಕೃಷಿ ಅವಲಂಬಿತ ಗ್ರಾಮದದವರು ತೊಂದರೆ ಅನುಭವಿಸುವಂತಾಗಿದೆ.
ಕಚೇರಿ ಶೀಘ್ರ ಸ್ಥಳಾಂತರ: ಗ್ರಾಮಕರಣಿಕರ ಕಚೇರಿ ಶಿಥಿಲವಾಗಿದೆ. ಗ್ರಾಮದ ಜನರಿಗೆ ಕಚೇರಿ ದೂರದಲ್ಲಿರುವುದರಿಂದ ಸಮಸ್ಯೆಯಾಗುತ್ತಿರುವುದು ತಿಳಿದಿದೆ. ಈ ಕಾರಣಕ್ಕೆ ಕಚೇರಿ ಗ್ರಾ.ಪಂ. ಕಟ್ಟಡಕ್ಕೆ ಶೀಘ್ರವೇ ಸ್ಥಳಾಂತರಗೊಳ್ಳಲಿದೆ. ಉಳಿದಂತೆ ಗ್ರಾಮದಲ್ಲಿ ರಸ್ತೆ ಇತರ ಸೌಕರ್ಯಗಳೆಲ್ಲವೂ ಪರವಾಗಿಲ್ಲ. -ಶಶಿಮಣಿ , ಅಧ್ಯಕ್ಷೆ, ಕುಕ್ಕುಂದೂರು ಗ್ರಾ.ಪಂ.
ಕಾನೂನು ಸಮಸ್ಯೆ: ಗ್ರಾಮದಲ್ಲಿ ತೀರಾ ತೊಂದರೆಯ ಸಮಸ್ಯೆಗಳು ಏನಿಲ್ಲ. ಹೆಚ್ಚಿನವು ಪರಿಹಾರ ಕಂಡಿವೆ. ಹಳೆಯ ದಾಖಲೆಗಳಿಗೆ ಸಂಬಂಧಿಸಿದ ಕಾನೂನು ಸಮಸ್ಯೆಗಳಿಂದ ಪರಿಹಾರವಾಗದ ಸಮಸ್ಯೆಗಳು ಇವೆ. –ಥೋಮಸ್ ಮಸ್ಕರೇನ್ಹಸ್, ಹಿರಿಯ ಸದಸ್ಯರು, ಕುಕ್ಕುಂದೂರು ಗ್ರಾ.ಪಂ.
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.