ಧರ್ಮ, ದೇಶ ರಕ್ಷಣೆಯ ಹೊಣೆ ನಮ್ಮೆಲ್ಲರದು: ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ
ಆತ್ರಾಡಿಯಲ್ಲಿ ಶಾಖಾ ಮಠ ಉದ್ಘಾಟನೆ
Team Udayavani, Dec 12, 2021, 6:10 AM IST
ಉಡುಪಿ: ಭಾರತ ಜ್ಞಾನ ಬಿತ್ತರಿಸುವ ಕೇಂದ್ರ ಸ್ಥಾನ. ಕುಲದೇವರ ಉಪಾಸನೆಯೊಂದಿಗೆ ದೇಶ ಪ್ರೇಮ, ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಮಠ ಮಂದಿರ ಗಳ ರಕ್ಷಣೆ ಮಾಡುವುದರಿಂದ ಕುಲ ಉದ್ಧಾರ ವಾಗುವುದಲ್ಲದೆ ಸಮಾಜವೂ ಬಲಿಷ್ಠ ವಾಗಲಿದೆ. ಇದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಧರ್ಮ ರಕ್ಷಣೆಯ ಹೊಣೆ ನಮ್ಮ ಮೇಲಿದೆ ಎಂದು ಕೈವಲ್ಯಪುರ ಮಠದ ಶ್ರೀ ಶಿವಾನಂದ ಸರಸ್ವತೀ ಸ್ವಾಮಿ ಮಹಾರಾಜ್ ನುಡಿದರು.
ಆತ್ರಾಡಿಯಲ್ಲಿ ನಿರ್ಮಿಸಿರುವ ಕೈವಲ್ಯಪುರ ನೂತನ ಉಡುಪಿ ಶಾಖಾ ಮಠವನ್ನು ಶನಿವಾರ ಉದ್ಘಾಟಿಸಿ ಅವರುಆಶೀರ್ವಚನ ನೀಡಿದರು.
ಪ್ರತಿಯೊಬ್ಬರೂ ಅವರವರ ಇಷ್ಟ ದೇವರನ್ನು ಪೂಜಿಸುವ ಕಾರ್ಯದಲ್ಲಿ ಮಗ್ನ ರಾಗಬೇಕು. ಉಡುಪಿಯಲ್ಲಿ ಕೃಷ್ಣನೂ, ಶಿವನೂ ಆದ ಸಚ್ಚಿದಾನಂದ ಮೂರ್ತಿ ಪರ ಮಾತ್ಮನ ಸಾನ್ನಿಧ್ಯವಿದ್ದು, ಅಂತಹ ಪವಿತ್ರ ನಾಡಿನಲ್ಲಿ ಇದೀಗ ಕೈವಲ್ಯಪುರ ಶಾಖಾ ಮಠ ಸ್ಥಾಪನೆಗೊಂಡು ಪ್ರಧಾನ ಆರಾಧ್ಯ ದೇವರಾದ ಭವಾನಿ ಶಂಕರ ದೇವರ ಆರಾಧನೆಗೆ ಅವಕಾಶ ದೊರಕಿದೆ. ಇಲ್ಲಿ ವೇದ ಪಾಠಶಾಲೆ, ಗೋಶಾಲೆ ಇತ್ಯಾದಿ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ಪ್ರಸ್ತುತ ಹೊಸ ಪೀಳಿಗೆ ಸಂಸ್ಕಾರದಿಂದ ದೂರವಾಗು ತ್ತಿರುವ ಕಾಲಘಟ್ಟದಲ್ಲಿ ಮಠ, ಮಂದಿರಗಳು ಸಂಸ್ಕಾರ ಕಲಿಸಲು ಪೂರಕವಾಗಲಿವೆ. ನಮ್ಮ ಪರಂಪರೆ ಯನ್ನು ಶ್ರೀಮಂತಗೊಳಿಸುವ ಕಾರ್ಯ ಮಠ, ಮಂದಿರಗಳಿಂದ ಸಾಧ್ಯ ಎಂದರು.
ಶಾಸಕರಾದ ಕೆ. ರಘಪತಿ ಭಟ್, ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಶುಭ ಹಾರೈಸಿದರು. ಶಾಖಾ ಮಠದ ಅಧ್ಯಕ್ಷ ಸಂತೋಷ್‌ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ:ಭಾರತೀಯರಿಗೆಂದೇ ಪ್ರತ್ಯೇಕವಾಗಿ ಸಿದ್ಧವಾಗಲಿದೆ ಪಾದದ ಅಳತೆಗೋಲು!
ಉದ್ಯಮಿ ಪುರುಷೋತ್ತಮ ಪಿ. ಶೆಟ್ಟಿ, ಆತ್ರಾಡಿ ಗ್ರಾ.ಪಂ. ಅಧ್ಯಕ್ಷೆ ರೂಪಾ ಶೆಟ್ಟಿ, ಎಣ್ಣೆಹೊಳೆ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇಗುಲದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ನರಸಿಂಗೆ ಶ್ರೀ ನರಸಿಂಹ ದೇಗುಲದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಂಕರ್, ಮೊಗೇರು ಶ್ರೀ ದುರ್ಗಾ ಪರಮೇಶ್ವರೀ ದೇಗುಲದ ಆಡಳಿತ ಮೊಕ್ತೇಸರ ಅಲ್ಚಾರು ರಾಮಚಂದ್ರ ನಾಯಕ್, ಬೆಂಗಳೂರು ಟೆಕ್ಸಾಸ್‌ನ ಸಿಇಒ ರಮಾನಂದ ನಾಯಕ್, ಬಿಜೆಪಿ ಉಡುಪಿ ನಗರ ಅಧ್ಯಕ್ಷ ಮಹೇಶ್ ಠಾಕೂರ್, ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಟ್ರಸ್ಟಿ ಶೇಣಿ ಮುಕುಂದ ನಾಯಕ್, ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆಡಳಿತ ಮೊಕ್ತೇಸರ ಶಶಿಧರ ವಾಗೆÛ, ಪಳ್ಳಿ ಅಡಪಾಡಿ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರೀ ದೇಗುಲದ ಧರ್ಮದರ್ಶಿ ಪುಂಡಲೀಕ ನಾಯಕ್, ಆತ್ರಾಡಿ ಬೈರಂಜೆ ಶ್ರೀ ಭವಾನಿ ಶಂಕರ ದೇಗುಲದ ಆಡಳಿತ ಮೊಕ್ತೇಸರ ದೇವೇಂದ್ರ ವಾಗೆÛ, ಕವಳೇ ಮಠದ ಟ್ರಸ್ಟಿ ನೀಲೇಶ್ ಬೋರ್ಕರ್ ಉಪಸ್ಥಿತರಿದ್ದರು.
ಶಾಖಾ ಮಠ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು. ಮಣಿಪಾಲ ಆರ್‌ಎಸ್‌ಬಿ ಸಂಘದ ಅಧ್ಯಕ್ಷ ಗೋಕುಲದಾಸ್ ನಾಯಕ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಪರ್ಕಳ ಶ್ರೀ ದುರ್ಗಾಪರಮೇಶ್ವರೀ ಸೊಸೈಟಿಯ ಸಿಇಒ ನಿತ್ಯಾನಂದ ನಾಯಕ್ ನರಸಿಂಗೆ, ಪ್ರದೀಪ್ ನಾಯಕ್ ನೀರೆ ನಿರೂಪಿಸಿದರು. ಶ್ರೀಶ ನಾಯಕ್ ಪೆರ್ಣಂಕಿಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.