ಉಡುಪಿ ಪ್ರವಾಹದಿಂದ ಕಲಿಯುವುದೇನು


Team Udayavani, Sep 29, 2020, 4:22 AM IST

ಉಡುಪಿ ಪ್ರವಾಹದಿಂದ ಕಲಿಯುವುದೇನು

ಸರಿಸುಮಾರು 38 ವರ್ಷಗಳ ಬಳಿಕ ಉಡುಪಿಯಲ್ಲಿ ಸುರಿದ ಮಳೆಗೆ ಕೆಲಕಾಲ ಬಹುತೇಕ ಎಲ್ಲರೂ ಅಕ್ಷರಶಃ ದಿಗ್ಬಂಧನಕ್ಕೆ ಒಳಗಾಗ ಬೇಕಾಯಿತು. ಹೀಗಿದ್ದರೂ ಮುಂದಿನ ಮಳೆಗಾಲ ಹೇಗಿರಬಹುದು, ಏನೆಲ್ಲ ಅಪಾಯ ತಂದೊಡ್ಡಬಹುದು, ಅದಕ್ಕಾಗಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬಹುದು ಎನ್ನುವ ಚಿಂತೆ ಎಲ್ಲರನ್ನೂ ಕಾಡಿತ್ತು. ಈ ಬಾರಿಯ ಪ್ರವಾಹ ನಮಗೆ ಸಾಕಷ್ಟು ಕಲಿಸಿಕೊಟ್ಟಿದೆ. ಹೀಗಾಗಿ ಮುಂದಿನ ನಡೆ ಹೇಗಿರಬೇಕು ಎನ್ನುವ ಓದುಗರ ಅಭಿಪ್ರಾಯಗಳು ಇಲ್ಲಿವೆ.

ಕಠಿನ ನಿಯಮ ಜಾರಿಯಾಗಲಿ
ಹೊಳೆ ಬದಿ, ತಗ್ಗು ಮತ್ತು ಗುಡ್ಡ ಪ್ರದೇಶಗಳಲ್ಲಿ ಮನೆ, ವಸತಿ ಸಂಕೀರ್ಣಗಳಿಗೆ ಅನುಮತಿ ನೀಡುವ ಮೊದಲು ಸಂಬಂಧಪಟ್ಟ ಸರಕಾರಿ ಇಲಾಖೆಗಳು ವಸತಿ ಭೂಮಿಯ ನೈಸರ್ಗಿಕ ಗುಣಾವಗುಣಗಳಿಗೆ ಸರಿಯಾದ ಯೋಗ್ಯ ಕಠಿನ ಕಾನೂನು ಕಾಯ್ದೆಗಳನ್ನು ಜಾರಿಗೆ ತರಬೇಕು. ನೆರೆ ಹಾವಳಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ತಡೆಯೊಡ್ಡಬಹುದು. ಪರಿಹಾರದಿಂದ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಸಾಧ್ಯವಿಲ್ಲ.
– ಶೇಖರ್‌, ಅಲೆವೂರು

ತುರ್ತು ಕ್ರಮಕ್ಕೆ ಸಿದ್ಧತೆ ಇರಲಿ
ಭೌಗೋಳಿಕವಾಗಿ ಮುಳುಗಡೆಯಾ ಗುವ ಕರಾವಳಿ ಪ್ರದೇಶದ ವ್ಯಾಪ್ತಿಯಲ್ಲಿ ಮಂಗಳೂರು ಹಾಗೂ ಉಡುಪಿಯ ಭಾಗವು ಸೇರಿದೆ. ಇದಕ್ಕೆ ಪೂರಕ ಎಂಬಂತೆ ಇದೀಗ ಮೊನ್ನೆ ಉಡುಪಿ ಹಾಗೂ ಕಾರ್ಕಳ ತಾಲೂಕಿನಲ್ಲಿ ಇದ್ಧಕ್ಕಿದ್ಧಂತೆ 34 ಗಂಟೆಗಳ ಕಾಲ ನಿರಂತರ ಅತಿ ಹೆಚ್ಚು ಮಳೆಯಾಗಿದೆ. ಉಡುಪಿ ಜಿಲ್ಲೆಯ ಯಾವಯಾವ ತಗ್ಗು ಪ್ರದೇಶಗಳು ಮುಳುಗಡೆಯಾಗುತ್ತವೆ ಎಂಬುದು ಎಲ್ಲರ ಗಮನಕ್ಕೂ ಬಂದಿದೆ. ಇದು ಜಿಲ್ಲಾಡಳಿತ ಮತ್ತು ಸಾರ್ವಜನಿಕರಿಗೊಂದು ಪಾಠ. ಹೀಗಾಗಿ ಇದಕ್ಕೆ ಬೇಕಾದ ತುರ್ತು ಕ್ರಮಕ್ಕೆ ಸಿದ್ಧತೆ ಈಗಲೇ ಆರಂಭವಾಗಬೇಕಿದೆ.
– ಗಣೇಶ್‌ ರಾಜ್‌ ಸರಳೇಬೆಟ್ಟು , ಸಾಮಾಜಿಕ ಕಾರ್ಯಕರ್ತ

ಪರಿಹಾರ ದಳ ಸ್ಥಾಪನೆಯಾಗಲಿ
ಉಡುಪಿ ಜಿಲ್ಲೆಗೆ ಒಂದು ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಪರಿಹಾರ ದಳ ಸ್ಥಾಪನೆಯಾಗಬೇಕು. ಹೊಸ ಮನೆ, ಕಟ್ಟಡಗಳಿಗೆ ಪರವಾನಿಗೆ ನೀಡುವಾಗ ಪ್ರವಾಹ ಪೀಡಿತ ಪ್ರದೇಶವೇ ಎಂದು ಗುರುತಿಸಿ ಮನೆಗಳ ಪಂಚಾಂಗ ಎತ್ತರಕ್ಕೆ ನಿರ್ದೇಶನ ನೀಡಬೇಕು. ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಲು ಸುಗಮ ಸಂಚಾರಕ್ಕಾಗಿ ರಸ್ತೆಗಳ ಅಗಲೀಕರಣ ಅಗತ್ಯ.
- ಲಕ್ಷ್ಮೀ ಪಿ. ಶೆಟ್ಟಿ , ಕಿನ್ನಿಮೂಲ್ಕಿ

ನೀರು ಸರಾಗವಾಗಿ ಹರಿಯುವ ವ್ಯವಸ್ಥೆಯಾಗಲಿ
ಉಡುಪಿಯಲ್ಲಿ ಈ ಬಾರಿಯ ಮಳೆಯಿಂದ ಹಲವಾರು ಜನಜೀವನ ಅಸ್ತವ್ಯಸ್ತ ಗೊಂಡಿದೆ. ವಾಹನಗಳು, ವಿದ್ಯುತ್‌ ಉಪಕರಣಗಳು ನೀರಲ್ಲಿ ಮುಳುಗಿ ನಷ್ಟ ಉಂಟಾಗಿದೆ. ಹಲವು ಮನೆಗಳು ಬಿದ್ದಿವೆ. 9 ವರ್ಷಗಳ ಹಿಂದೆ ನಾನು ನಗರಸಭೆ ಸದಸ್ಯನಾಗಿದ್ದಾಗ ಗುಂಡಿಬೈಲು ಮತ್ತಿತರ ಕಡೆ ಹೊಸ ಮನೆಗೆ ಮಂಜೂರಾತಿ ನೀಡುವಾಗ ಅಡಿಪಾಯ ಎತ್ತರಿಸುವಂತೆ ಹೇಳಿ ಅನುಮತಿ ನೀಡುವಂತೆ ಎಂಜಿನಿಯರ್‌ಗೆ ಹೇಳಿದ್ದೆ. ಇತ್ತೀಚಿನ ದಿನಗಳಲ್ಲಿ ಗುಂಡಿಬೈಲ್‌ನ ವಿಶಾಲ ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಈಗ ಅಲ್ಲಿಯೂ ಬಹುಮಹಡಿ ಕಟ್ಟಡ ಆರಂಭವಾಗಿದೆ. ಈಗ ಉಡುಪಿಯಲ್ಲಿ ನೀರು ಹರಿಯಲು, ವಾಹನಗಳು ನಿಲ್ಲಲು ಜಾಗ ಇಲ್ಲದಂತಾಗಿದೆ. ಅದ್ದರಿಂದ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮೊದಲು ನಡೆಯಬೇಕು.
– ದೇವೇಂದ್ರ ಪ್ರಭು, ಮಣಿಪಾಲ

ಮುನ್ನೆಚ್ಚರಿಕೆ ಅತ್ಯಗತ್ಯ
ಮುಂದಿನ ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಅತ್ಯಗತ್ಯ ಎಂಬುದನ್ನು ಈ ಬಾರಿಯ ಮಳೆ ಕಲಿಸಿಕೊಟ್ಟಿದೆ. ಇದಕ್ಕಾಗಿ ಸಣ್ಣ ಗಾತ್ರದ ಎಲೆಕ್ಟ್ರಿಕಲ್‌ ಬೋಟ್‌, ಕೈಚಾಲಿತ ದೋಣಿಗಳನ್ನು ಹಾಗೂ ಖಾಸಗಿ ದೋಣಿ ಸಿದ್ಧವಾಗಿರಬೇಕು. ಕೆಲವರಿಗಾದರೂ ದೋಣಿ ಚಲಾಯಿಸುವ ತರಬೇತಿ ನೀಡಬೇಕು. ಸಮುದ್ರ, ನದಿ ದಂಡೆಗಳಿಂದ ದೋಣಿಗಳನ್ನು ವಿಪತ್ತಿನ ಸ್ಥಳಕ್ಕೆ ಸಾಗಿಸಲು ಸೂಕ್ತವಾದ ಟ್ರಕ್‌ ವ್ಯವಸ್ಥೆಯಿರಬೇಕು. ಜಿಲ್ಲೆಯ ಯುವಕರನ್ನು ಒಳಗೊಂಡಂತೆ ಆಸಕ್ತ ಸ್ವಯಂಸೇವಕ ಸಂಘಟನೆಗಳ ಸಂಪರ್ಕ ಸಂಖ್ಯೆ ತೆಗೆದಿಟ್ಟಿರಬೇಕು. ಇವರಿಗೆ ಸೂಕ್ತ ತರಬೇತಿ ಸಿಗುವಂತೆ ಮಾಡಬೇಕು. ಜಲಪ್ರಳಯದಿಂದ ರಕ್ಷಿಸಲ್ಪಟ್ಟವರನ್ನು ಉಳಿಸಲು ಸೂಕ್ತ ಸ್ಥಳಗಳನ್ನು ಕಾದಿರಿಸಬೇಕು. ನಿರಾಶ್ರಿತರಿಗೆ ಅನ್ನ-ನೀರು ಆಹಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಬೇಕು. ಸ್ವಯಂಸೇವಕ ವೈದ್ಯರು ದಾದಿಯರು ಸಮಾಜದ ಸಂಘಟನೆಗಳು ಒಳಗೊಂಡಂತಹ ವಿಪತ್ತಿನ ಸಮಯದಲ್ಲಿ ಮಾಡಬೇಕಾದ ಕಾರ್ಯ ಸೂಚಿಯ ಬಗ್ಗೆ ಕಡತ ಮಾಡಿ ಅದಕ್ಕಾಗಿ ಒಂದಷ್ಟು ನಿಧಿಯನ್ನು ಎತ್ತಿಟ್ಟುಕೊಳ್ಳಬೇಕು. ವಿಪತ್ತು ನಿರ್ವಹಣೆಗಾಗಿ ಆಸಕ್ತ ಸ್ವಯಂಸೇವಕರ ಒಂದು ಸಮಿತಿಯನ್ನು ರಚಿಸಿ ವಿಪತ್ತು ನಿರ್ವಹಣೆಗೆ ಸದಾ ಸಿದ್ಧರಿರುವಂತೆ ನೋಡಿಕೊಳ್ಳಬೇಕು.
– ಪಾವನ ಜೈನ್‌, ಸಂತೆಕಟ್ಟೆ

ತಗ್ಗು ಪ್ರದೇಶಗಳನ್ನು ಪರಿಶೀಲಿಸಿ
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿ ವರ್ಷವೂ ಮಳೆಗಾಲದ ಆರಂಭಕ್ಕಿಂತ ಮೊದಲು ತೋಡು, ಚರಂಡಿಗಳನ್ನು ಸ್ವತ್ಛಗೊಳಿಸಬೇಕು. ವಸತಿ, ಕಟ್ಟಡಗಳಿಗೆ ಪರವಾನಿಗೆ ಕೊಡುವಾಗ ತಗ್ಗು ಪ್ರದೇಶಗಳಲ್ಲಿ ಪರಿಶೀಲಿಸಿ ನೆರೆ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡುವಂತೆ ಸೂಚಿಸಬೇಕು.
– ಭಾಸ್ಕರ್‌ ಬಿ. ಭಂಡಾರಿ, ಬೈಲಕೆರೆ

ಒತ್ತುವರಿಗೆ ತಡೆ ಬೀಳಲಿ
ನಗರ ಮಧ್ಯದಲ್ಲಿ ಹಾದುಹೋಗುವ ಅಗಲವಾದ ಮತ್ತು ಕಿರಿದಾದ ಎಲ್ಲ ತೋಡುಗಳನ್ನು ಮೂಲದಿಂದ ಅಂತ್ಯದವರೆಗೆ ವರ್ಷಕ್ಕೆ ಎರಡು ಬಾರಿ ಆಳಗೊಳಿಸಿ, ಸ್ವತ್ಛ ಗೊಳಿಸಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಯಾಗಲಿ. ತಗ್ಗು ಪ್ರದೇಶಗಳಲ್ಲಿ ಹೊಸ ಕಟ್ಟಡಗಳಿಗೆ ತಳಮಹಡಿ ನಿರ್ಮಿಸಲು ಅನುಮತಿ ನೀಡಬಾರದು. ಕೃಷಿ ಗದ್ದೆಗಳಿಗೆ ಮಣ್ಣು ತುಂಬಿಸಿದಾಗ ನೀರು ಹರಿಯಲು ವ್ಯವಸ್ಥೆ ಇಲ್ಲದೆ ಅಡೆತಡೆಗಳಾಗುತ್ತವೆ. ಇದನ್ನು ತಡೆಯಬೇಕು. ತೋಡುಗಳ ಪಕ್ಕದ ಜಮೀನಿನವರು ಒತ್ತುವರಿ ಮಾಡದಂತೆ ತಡೆಯಬೇಕು. ಅಲ್ಲದೆ ನಿವೇಶನಕ್ಕೆ ಇಂತಿಷ್ಟೇ ಅಗಲದ ರಸ್ತೆ ಬೇಕೆಂಬ ನಿಯಮದಂತೆ, ತೋಡಿಗೂ ಇಂತಿಷ್ಟೇ ಅಗಲವಿರುವಂತೆ ಕಾನೂನು ತಿದ್ದುಪಡಿ ಮಾಡಬೇಕು.
– ನಾಜ ಶೆಟ್ಟಿ , ಉಡುಪಿ

ನದಿಗಳನ್ನು ಉಳಿಸೋಣ
ಉಡುಪಿಯಲ್ಲಿ ಸುರಿದ ಧಾರಾಕಾರ ಮಳೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತವಾಗಿಸಿತ್ತು. ಕಲ್ಸಂಕ, ಬೈಲಕೆರೆ ವ್ಯಾಪ್ತಿಯಲ್ಲಿ ಬೃಹತ್‌ ಚರಂಡಿ ವ್ಯವಸ್ಥೆಯ ಅಕ್ಕಪಕ್ಕದಲ್ಲೇ ಹಲವಾರು ಮನೆಗಳಿವೆ. ಹೀಗಾಗಿ ಸರ್ವೆ ಮಾಡಿ ನೆರೆಯಿಂದ ಬಾಧಿತವಾಗುವ ಪ್ರದೇಶಗಳನ್ನು ಸಾಧ್ಯವಾದರೆ ಬೇರೆಡೆ ಸ್ಥಳಾಂತರಗೊಳಿಸುವುದು ಉತ್ತಮ. ಚರಂಡಿ, ತೋಡಿನ ಹೂಳನ್ನು ವರ್ಷಕ್ಕೊಮ್ಮೆಯಾದರೂ ತೆಗೆದು ತ್ಯಾಜ್ಯ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಮಳೆಯಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು. ಮರಳು ದಂಧೆಗೆ ಕಡಿವಾಣ ಹಾಕಿ ಅಮೂಲ್ಯವಾದ ನದಿಗಳನ್ನು ಉಳಿಸಬೇಕು.
– ನಾಗವೇಣಿ, ಉಡುಪಿ

ಮಾಹಿತಿ: ವ್ಯವಸ್ಥೆಯಾಗಬೇಕು
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕವಾಗಿ ತಗ್ಗು ಪ್ರದೇಶದಲ್ಲಿ ವಾಸಿಸುವವರು ಮತ್ತು ಅತಿವೃಷ್ಟಿಯಾದಲ್ಲಿ ತತ್‌ಕ್ಷಣ ಅಪಾಯಕ್ಕೀಡಾಗುವ ಪರಿಸರದ ಜನರಿಗೆ ಏನು ಮಾಡಬೇಕು ಎಂಬ ಬಗ್ಗೆ ಮಳೆಗಾಲದ ಮುಂಚೆ ಒಂದು ಮಾಹಿತಿ ಕಾರ್ಯಾಗಾರವನ್ನು ಆಯಾ ಪ್ರದೇಶದಲ್ಲಿ ಪರಿಸರದ ಸ್ವಯಂ ಸೇವಾ ಸಂಸ್ಥೆಗಳು, ಸ್ಥಳೀಯರು ಮತ್ತು ಜಿÇÉಾಡಳಿತದ ತುರ್ತು ಸೇವಾ ಘಟಕಗಳ ಸಹಾಯದಿಂದ ಏರ್ಪಡಿಸಬೇಕು. ಈ ಪರಿಸರದ ತೋಡುಗಳಲ್ಲಿ ಸರಾಗವಾಗಿ ನೀರು ಹರಿದು ಹೋಗುವ ಹಾಗೇ ಕಸ ನಿರ್ವಹಣೆ, ವಿಪತ್ತಿನ ಸಮಯದಲ್ಲಿ ಎಚ್ಚರಿಸಲು ಸೈರನ್‌ ವ್ಯವಸ್ಥೆ, ಜನರನ್ನು ಸಾಗಿಸಲು ಬೋಟ್‌, ರûಣ ತೆಪ್ಪದ ವ್ಯವಸ್ಥೆ ಮಾಡಿಕೊಂಡಿರಬೇಕು.
– ಅರುಣ್‌ ಪಟವರ್ಧನ್‌ ವಳಕಾಡು, ಉಡುಪಿ

ನೀರು ಹರಿಯಲು ವ್ಯವಸ್ಥೆಯಾಗಲಿ
ಉಡುಪಿ ವ್ಯಾಪ್ತಿಯಲ್ಲಿರುವ ಎಲ್ಲ ತೋಡು, ಚರಂಡಿಗಳ ಹೂಳು ತೆಗೆದು ಸರಾಗವಾಗಿ ನೀರು ಹರಿಯುವ ವ್ಯವಸ್ಥೆಯಾಗಲಿ. ಇದಕ್ಕೆ ಜಿಲ್ಲಾಡಳಿತ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ ಮುಖ್ಯ. ತೋಡುಗಳನ್ನು ಆಕ್ರಮಿಸಿ ಕಟ್ಟಡ ಕಟ್ಟಲು ಪರವಾನಿಗೆ ಕೊಡಬಾರದು. ನೆರೆ ಬಂದಾಗ ಎಚ್ಚೆತ್ತುಕೊಳ್ಳುವುದಕ್ಕಿಂತ ಮೊದಲೇ ಜಾಗೃತರಾಗಿರುವುದು ಒಳ್ಳೆಯದು. ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಪ್ರತಿಯೊಂದು ರಸ್ತೆ ಬದಿಯಲ್ಲೂ ಚರಂಡಿಯನ್ನು ಅಗತ್ಯ ವಾಗಿ ನಿರ್ಮಿಸಬೇಕು. ಹೆಚ್ಚಿನ ಕಡೆ ಚರಂಡಿಯೇ ಇಲ್ಲದೆ ರಸ್ತೆ ನಿರ್ಮಾಣವಾಗುತ್ತಿರುವುದು ಇಂದಿನ ದೊಡ್ಡ ದುರಂತ. ಇದನ್ನೆಲ್ಲ ಸರಿಪಡಿಸಿದರೆ ಸ್ವಲ್ಪ ಮಟ್ಟಿನ ಅವಘಡ ತಪ್ಪಿಸಬಹುದು.
– ಭಾಗ್ಯಾ, ಉದ್ಯಾವರ

ಚರಂಡಿಗಳು ಸ್ವತ್ಛವಾಗಲಿ
38 ವರ್ಷಗಳ ಬಳಿಕ ಈ ಬಾರಿ ಉಡುಪಿಯಲ್ಲಿ ಜಲ ಪ್ರಳಯ ನೋಡಿದ್ದೇವೆ. ಜಿಲ್ಲಾಡಳಿತ ಮತ್ತಷ್ಟು ಸಮರ್ಥವಾಗಿ ಈ ಪ್ರವಾಹದ ಹಾವಳಿಯನ್ನು ತಪ್ಪಿಸಲು ಚರಂಡಿಯನ್ನು ಹೂಳು ಮುಕ್ತ ಗೊಳಿಸಬೇಕು, ಇಂದ್ರಾಳಿ ನದಿಯನ್ನು ಸ್ವತ್ಛಗೊಳಿಸಿ ಸಲೀಸಾಗಿ ಹರಿಯುವಂತೆ ಮಾಡಬೇಕು. ಗದ್ದೆ ಜಾಗದಲ್ಲಿ ದೊಡ್ಡ ದೊಡª ಕಟ್ಟಡ ಕಟ್ಟುವಾಗ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಪರ್ವತ ಪ್ರದೇಶ ಸೇರಿದಂತೆ ಮಣ್ಣು ಕೊಚ್ಚಿಹೋಗುವ ಪ್ರದೇಶದಲ್ಲಿ ಮಣ್ಣು ಹಿಡಿದಿಟ್ಟುಕೊಳ್ಳಲು ಸಸಿಗಳನ್ನು ನಾಟಿ ಮಾಡಬೇಕು. ಪ್ರತೀ ಗ್ರಾ.ಪಂ.ಗೆ ಒಂದಾದರೂ ದೋಣಿ ಒದಗಿಸಬೇಕು ಮತ್ತು ಸ್ವಯಂ ಸೇವಕ ಯುವಕರ ತಂಡ ರಚನೆಯಾಗಬೇಕು.
– ರಾಘವೇಂದ್ರ ಪ್ರಭು, ಕರ್ವಾಲು

ಟಾಪ್ ನ್ಯೂಸ್

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನು ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

5-katapady

Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ

4-katapady

ಶ್ರೀಕ್ಷೇತ್ರ ಪೇಟೆಬೆಟ್ಟು ಕಟಪಾಡಿ- ಜ.4,5: ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮೋತ್ಸವ

1-magu

Manipal; ಝೀರೋ ಟ್ರಾಫಿಕ್‌ನಲ್ಲಿ ಮಗು ಬೆಂಗಳೂರಿಗೆ : ಈಶ್ವರ ಮಲ್ಪೆ ನೆರವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.