ಉಡುಪಿ ಪ್ರವಾಹದಿಂದ ಕಲಿಯುವುದೇನು


Team Udayavani, Oct 1, 2020, 4:18 AM IST

ಉಡುಪಿ ಪ್ರವಾಹದಿಂದ ಕಲಿಯುವುದೇನು

ಸುರಕ್ಷಾ ಕ್ರಮ ಅಗತ್ಯ
ಜನಸಂಖ್ಯಾ ಸಾಂದ್ರತೆ, ಮಳೆಯ ಮಾದರಿ, ನಗರದ ಮೂಲ ಸೌಕರ್ಯದ ಸ್ಥಿತಿಗತಿ, ಒಳಚರಂಡಿ ವ್ಯವಸ್ಥೆಯ ವಿವರಗಳನ್ನು ಪಡೆದು ಮಳೆಗಾಲದಲ್ಲಿ ಎದುರಾಗಬಹುದಾದ ಸಂಭಾವ್ಯ ತೊಂದರೆಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದು. ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು, ನುರಿತ ವೈದ್ಯ ಸಿಬಂದಿ ಹಾಗೂ ಔಷಧದೊಂದಿಗೆ ಸದಾ ಸನ್ನದ್ಧರಾಗಿರಬೇಕು. ನದಿ ಪಾತ್ರದಲ್ಲಿರುವ ಗ್ರಾಮದ ಜನರನ್ನು ಬೇರೆ ಕಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ನದಿಯ ಹತ್ತಿರ ಇರುವ ವಿದ್ಯುತ್‌ ಕಂಬಕ್ಕೆ ಸುರಕ್ಷೆಯ ದೃಷ್ಟಿಯಿಂದ ಬೇಕಾಗುವ ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಆಸ್ತಿಪಾಸ್ತಿ, ಜಾನುವಾರುಗಳಿಗೆ ಹಾನಿಯಾಗದಂತೆ ಮುಂಜಾಗ್ರತೆ ವಹಿಸಬೇಕು.
– ಪ್ರೀತಿ ಎಸ್‌. ಭಟ್‌, ಹರಿಖಂಡಿಗೆ

ಸ್ವಚ್ಛತೆಗೆ ಆದ್ಯತೆ ಸಿಗಲಿ
ಪ್ರಕೃತಿಗೆ ವಿರುದ್ಧವಾಗಿ ನಾವು ಜೀವನವನ್ನು ನಡೆಸಲು ಮುಂದಾಗಲೇಬಾರದು. ಇದರಿಂದ ಆದ ಆವಾಂತರವನ್ನು ನೋಡಿದ್ದೇವೆ. ನಗರ ವ್ಯಾಪ್ತಿಯಲ್ಲಿ ನೀರು ಸರಿಯಾಗಿ ಹರಿದುಹೋಗುವ ವ್ಯವಸ್ಥೆಯಾಗಬೇಕು. ನದಿ, ತೋಡು, ಚರಂಡಿಗಳ ಸ್ವಚ್ಛತೆಯ ಜತೆಗೆ ಅತಿಕ್ರಮವಾಗುವುದನ್ನು ತಡೆಯಬೇಕು. ತಗ್ಗು ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಮಾಡುವ ಮುನ್ನ ನೀರು ಹರಿದುಹೋಗುವ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಅಲ್ಲಿಯೇ ವಾಸ ಮಾಡುತ್ತಿರುವವರನ್ನು ಸ್ಥಳಾಂತರಿಸುವ ಕಾರ್ಯವಾಗಲಿ. ಮಳೆಗಾಲಕ್ಕಿಂತ ಮೊದಲ 1- 2 ತಿಂಗಳಲ್ಲಿ ಸಂಭಾವ್ಯ ಅಪಾಯಗಳನ್ನು ತಡೆಯಲು ಜಿಲ್ಲಾಡಳಿತ ಸಿದ್ಧತೆ ನಡೆಸಬೇಕು.
– ಪರಶುರಾಮ ಆಚಾರ್ಯ, ಮಣಿಪಾಲ

ಅತ್ಯಾಧುನಿಕ ಮಾದರಿಯಲ್ಲಿ ಚರಂಡಿ ನಿರ್ಮಾಣವಾಗಲಿ
ಜಿಲ್ಲಾಡಳಿತವು ಡ್ರೈನೇಜ್‌ ವ್ಯವಸ್ಥೆಯನ್ನು ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸುವ ಚಿಂತನೆ ನಡೆಸಬೇಕು. ಮಳೆಯಿಂದ ಹಾನಿಗೊಳಗಾಗುವ ಪ್ರದೇಶಗಳನ್ನು ಗುರುತಿಸಬೇಕು. ಇಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಬಾರದು. ನಗರ ಅಭಿವೃದ್ಧಿಯಾಗುತ್ತಿರುವಾಗ ಮಳೆ ನೀರು ನಿಲ್ಲಗದಂತೆ ಮುಂಜಾಗ್ರತೆ ವಹಿಸಬೇಕು. ಕಲ್ಸಂಕದಲ್ಲಿ ಪ್ರತಿ ವರ್ಷವೂ ನೆರೆ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಯೋಜನೆ ರೂಪಿಸಬೇಕು. ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರೂ ಒಂದಾಗಿ ರಕ್ಷಣೆ, ತುರ್ತು ಕಾರ್ಯಗಳಿಗೆ ಬೇಕಾದ ವ್ಯವಸ್ಥೆ ಮಾಡಿರಬೇಕು.
– ನಿರೂಪ, ಕಡೆಕಾರ್‌

ನೀರು ಸರಾಗವಾಗಿ ಹರಿಯಲು ವ್ಯವಸ್ಥೆಯಾಗಬೇಕು
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಪ್ರವಾಹ ಪರಿಸ್ಥಿತಿಗೆ ನೀರು ಸರಾಗವಾಗಿ ಹರಿಯದಿರುವುದು ಪ್ರಮುಖ ಕಾರಣ. ನದಿಗಳ ನೀರಿನಲ್ಲಿರುವ ಹೊಗೆ ತೆಗೆಯದೇ ಉಳಿದಿರುವುದರಿಂದ ಅದರೊಂದಿಗೆ ಕಸ, ಕಡ್ಡಿ, ಪ್ಲಾಸ್ಟಿಕ್‌ ತ್ಯಾಜ್ಯಗಳು ಸೇರಿ ನೀರು ಸರಾಗವಾಗಿ ಹರಿದುಹೋಗಲು ಅಡ್ಡಿಯಾಗಿ ಪ್ರವಾಹ ಉಂಟಾಗಿದೆ. ಇದು ಕಳೆದ 5 ವರ್ಷಗಳಿಂದ ಉಂಟಾದ ಸಮಸ್ಯೆ. ಹೀಗಾಗಿ ನದಿಗಳನ್ನು ಸ್ವತ್ಛಗೊಳಿಸಬೇಕು. ನಗರ ವ್ಯಾಪ್ತಿಯಲ್ಲಿರುವ ಚರಂಡಿ, ತೋಡುಗಳ ಹೂಳೆತ್ತಬೇಕು.
– ಎ. ವಿನೋದ್‌ ನಾಯಕ್‌, ಅಮ್ಮುಂಜೆ

ಸಾರ್ವಜನಿಕರೂ ಎಚ್ಚೆತ್ತುಕೊಳ್ಳಬೇಕು
ಸರಿಸುಮಾರು 38 ವರ್ಷಗಳ ಬಳಿಕ ಅಪ್ಪಳಿಸಿದ ಜಲಪ್ರಳಯದಿಂದ ನಾವು ಕಲಿಯಬೇಕಾದ್ದು ಬಹಳಷ್ಟು ಇದೆ. ತಗ್ಗುಪ್ರದೇಶ, ನದಿ ತೀರ ಪ್ರದೇಶದಲ್ಲಿ ನೆರೆ ಉಂಟಾದಾಗ ಹಲವಾರು ಮನೆಗಳ ನಾಶವಾಗಿವೆ. ಜನಜೀವನ ಅಸ್ತವ್ಯಸ್ತ ಗೊಂಡಿದೆ. ಬಹುಷಃ ಇಂಥ ಸಮಯದಲ್ಲಿ ಜನರು ಆದಷ್ಟು ಸ್ವತಃ ತಾವೇ ಒಗ್ಗೂಡಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ತಮ್ಮಲ್ಲಿ ತಾವೇ ಜಾಗೃತಿ ಮೂಡಿಸಿಕೊಳ್ಳಬೇಕು. ಜಿಲ್ಲಾಡಳಿತವು ತುರ್ತು ಸಂದರ್ಭದಲ್ಲಿ ಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರತಿ ಜಿಲ್ಲಾವಾರು ಪಂಚಾಯತ್‌ ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ವಯಂಸೇವಕ ಸಂಘಟನೆಗಳನ್ನು ನೇಮಿಸಿ ಜನಸಾಮಾನ್ಯರಿಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಹಲವಾರು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿದೆ.ಇದಕ್ಕೆ ಮುಖ್ಯ ಕಾರಣವೆಂದರೆ ಎಲ್ಲ ಕಡೆ ಬಹುಮಹಡಿ ಕಟ್ಟಡಗಳು, ಚರಂಡಿ ವ್ಯವಸ್ಥೆ, ಕಾಲುವೆಗಳ ನಿರ್ಮಾಣ ಸರಿಯಾಗಿ ಇಲ್ಲದ ಕಾರಣ ನೀರಿನ ಹರಿವು ಸಮರ್ಪಕವಾಗಿ ಆಗುತ್ತಿಲ್ಲ. ಇದಕ್ಕೆ ಪೂರಕ ರೀತಿಯ ಕ್ರಮ ಕೈಗೊಳ್ಳಬೇಕು. ಪ್ರಕೃತಿಯನ್ನು ಬೆಳೆಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಎಲ್ಲ ಸಮಸ್ಯೆಗಳಿಗೆ ಮುಕ್ತಿ ಇಲ್ಲ. ಆದರೆ ಅದಕ್ಕೆ ಬೇಕಾದ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದು. ಎಲ್ಲವನ್ನೂ ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವು
ಅತ್ಯಮೂಲ್ಯವಾಗಿರುತ್ತದೆ.
– ನಿಶಾ, ಅಡ್ವೆ

ಸಮರ್ಪಕ ಚರಂಡಿ, ಕಾಲುವೆ ನಿರ್ಮಾಣವಾಗಲಿ
ಮಳೆ ನೀರನ್ನು ಸರಾಗವಾಗಿ ನದಿಗೆ ಹರಿದು ಹೋಗುವಂತೆ ಚರಂಡಿ, ಕಾಲುವೆಗಳ ನಿರ್ಮಾಣವಾಗಬೇಕು. ನದಿಗಳ ಹೂಳು ತೆಗೆದು ಅದರ ಸಮರ್ಪಕವಾದ ವಿಲೇವಾರಿ ಮಾಡಬೇಕು. ಪ್ರತಿ ಗ್ರಾಮ ಮಟ್ಟದಲ್ಲಿ ಈ ಕೆಲಸ ನಡೆಯಬೇಕು. ಇದಕ್ಕಾಗಿ ಗ್ರಾಮ ಪಂಚಾಯತ್‌ ಸದಸ್ಯರ ಸಮಿತಿ ರಚಿಸಿ ನಿರಂತರವಾಗಿ ಕೆಲಸ ಮಾಡುವ ಮೂಲಕ ಸ್ವಚ್ಛ ನಗರ, ಗ್ರಾಮ ನಮ್ಮದಾಗಬೇಕು. ಕೇವಲ ಚುನಾವಣೆ ಸಂದರ್ಭಕ್ಕನುಗುಣವಾಗಿ ಯೋಜನೆ, ಆಶ್ವಾಸನೆಗಳು ಸೀಮಿತವಾಗಿರದೆ ಕಾರ್ಯರೂಪಕ್ಕೆ ಬಂದಲ್ಲಿ ಮಾತ್ರ ಇಂತಹ ಜಲಪ್ರವಾಹದಂತಹ ಅವಘಡಗಳಿಂದ ದೂರವಿರಬಹುದು.
– ನಾಗೇಶ್‌ ಕಾಮತ್‌,  ಕಟಪಾಡಿ

ಮರಗಳನ್ನು ಬೆಳೆಸೋಣ
ಒಂದು ಗಿಡವು ಒಂದು ಸ್ಥಳದಲ್ಲಿ ಬೆಳೆಯುತ್ತಿರುವಾಗ ಅದರ ಬೇರು ಮಣ್ಣಿನೊಳಗೆ ಆಳವಾಗಿ ಹಬ್ಬಿರುತ್ತದೆ ಹಾಗೂ ಮಣ್ಣಿನ ಕಣಗಳ ನಡುವೆ ಅಂತರವನ್ನು ಸೃಷ್ಟಿಸುತ್ತದೆ. ಎತ್ತರ ಜಾಗದಲ್ಲಿ ಮಳೆಯಾದಾಗ ನೀರು ಕೆಳಗೆ ಹರಿದು ಬಂದು ಮಣ್ಣಿನ ಕಣಗಳ ನಡುವೆ ಇರುವ ಅಂತರದಲ್ಲಿ ಇಂಗಿ ಹೋಗುತ್ತದೆ. ಇದರಿಂದಾಗಿ ನೆರೆಯನ್ನು ತಡೆಯಬಹುದು. ನೀರು ಕಲ್ಲುಗಳ ಮೇಲೆ ಹರಿದಾಗ ಘರ್ಷಣೆಯು ಕಡಿಮೆಯಾಗಿ, ನೀರು ವೇಗವಾಗಿ ಹರಿದು ನದಿ ಸೇರುವುದನ್ನು ಮರಗಳು ಹಾಗೂ ಉತ್ತಮ ಮಣ್ಣು ತಡೆಯಬಹುದು. ಹೀಗಾಗಿ ಮನೆ ಸುತ್ತಮುತ್ತ ಹೆಚ್ಚು ಮರ, ಗಿಡಗಳನ್ನು ಬೆಳೆಸಬೇಕು. ಇದರಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಅಪಾಯವನ್ನು ತಡೆಯಬಹುದು.
– ಶುಭಾಶ್ರೀ, ಉಡುಪಿ

ಮರಗಳನ್ನು ಬೆಳೆಸೋಣ
ಒಂದು ಗಿಡವು ಒಂದು ಸ್ಥಳದಲ್ಲಿ ಬೆಳೆಯುತ್ತಿರುವಾಗ ಅದರ ಬೇರು ಮಣ್ಣಿನೊಳಗೆ ಆಳವಾಗಿ ಹಬ್ಬಿರುತ್ತದೆ ಹಾಗೂ ಮಣ್ಣಿನ ಕಣಗಳ ನಡುವೆ ಅಂತರವನ್ನು ಸೃಷ್ಟಿಸುತ್ತದೆ. ಎತ್ತರ ಜಾಗದಲ್ಲಿ ಮಳೆಯಾದಾಗ ನೀರು ಕೆಳಗೆ ಹರಿದು ಬಂದು ಮಣ್ಣಿನ ಕಣಗಳ ನಡುವೆ ಇರುವ ಅಂತರದಲ್ಲಿ ಇಂಗಿ ಹೋಗುತ್ತದೆ. ಇದರಿಂದಾಗಿ ನೆರೆಯನ್ನು ತಡೆಯಬಹುದು. ನೀರು ಕಲ್ಲುಗಳ ಮೇಲೆ ಹರಿದಾಗ ಘರ್ಷಣೆಯು ಕಡಿಮೆಯಾಗಿ, ನೀರು ವೇಗವಾಗಿ ಹರಿದು ನದಿ ಸೇರುವುದನ್ನು ಮರಗಳು ಹಾಗೂ ಉತ್ತಮ ಮಣ್ಣು ತಡೆಯಬಹುದು. ಹೀಗಾಗಿ ಮನೆ ಸುತ್ತಮುತ್ತ ಹೆಚ್ಚು ಮರ, ಗಿಡಗಳನ್ನು ಬೆಳೆಸಬೇಕು. ಇದರಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಅಪಾಯವನ್ನು ತಡೆಯಬಹುದು.
– ಶುಭಾಶ್ರೀ, ಉಡುಪಿ

ಚರಂಡಿ ವ್ಯವಸ್ಥೆ ಪರಿಶೀಲನೆಯಾಗಲಿ
ಉಡುಪಿ ನಗರದ ಕೆಲವು ಬಹುಮಹಡಿ ಕಟ್ಟಡಗಳ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಆಗಿದೆಯೋ ಇಲ್ಲವೋ ಹಾಗೂ ಹೊಸ ಕಟ್ಟಡಗಳ ನಿರ್ಮಾಣದ ವೇಳೆ ಮುಂಜಾಗ್ರತೆ ಕ್ರಮವಾಗಿ ಕಡ್ಡಾಯವಾಗಿ ಚರಂಡಿ ವ್ಯವಸ್ಥೆ ಸರಿಯಾಗಿದೆಯೇ
ಎಂದು ನಗರಸಭೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
– ಬಾಲು ಪಿ.ಡಿ., ಉಡುಪಿ

ಅಕ್ರಮಗಳಿಗೆ ಕಡಿವಾಣ ಬೀಳಲಿ
ಇತ್ತೀಚೆಗೆ ಸಂಭವಿಸಿದ ಜಲಪ್ರವಾಹ ಪ್ರಾಕೃತಿಕ ವಿಕೋಪಕ್ಕಿಂತ ಹೆಚ್ಚಾಗಿ ಮಾನವ ದುರಾಸೆಯಿಂದ ಘಟಿಸಿದೆ. ಕಲ್ಸಂಕದಿಂದ ದೊಡ್ಡಣ್ಣಗುಡ್ಡೆ ಕ್ರಾಸ್‌ವರೆಗೆ ಹಿಂದೆ ಇದ್ದ ಕೆಲವು ಸಣ್ಣ ತೋಡುಗಳು ಈಗ ಮಾಯವಾಗಿವೆ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಇನ್ನು ಕೆಲವು ತೋಡುಗಳು ಸಪೂರ ಆಗಿವೆ. ಇದಕ್ಕೆಲ್ಲ ನಮ್ಮ ದುರಾಸೆ, ಅಧಿಕಾರಸ್ಥರಿಂದ ಸಾರ್ವಜನಿಕ ಹಿತದ ಕಡೆಗಣನೆ ಕಾರಣವಾಗಿದೆ. ಇಂಥ ಅಕ್ರಮಗಳನ್ನು ಗುರುತಿಸಿ ಸರಿಪಡಿಸಬೇಕು. ಜತೆಗೆ ಪ್ರವಾಹ ಬರುವ ಬಗ್ಗೆ ಮಾಹಿತಿ ಯನ್ನು ಜನರಿಗೆ ಮುಂದಾಗಿ ತಿಳಿಸಬೇಕು. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದರೆ ಜನಸಾಮಾನ್ಯರ ಸಂಕಷ್ಟಗಳಿಗೆ ಅಡಳಿತ/ ಜನಪ್ರತಿನಿಧಿಗಳು ಸ್ಪಂದಿಸಿದಂತಾಗುತ್ತದೆ.
– ಬಿ. ಜಗದೀಶ ರಾವ್‌, ಗುಂಡಿಬೈಲು

ಪಾಳು ಬಿದ್ದ ಕೆರೆ ಗಳನ್ನು ಪುನಶ್ಚೇತನಗೊಳಿಸಬೇಕು
ಅವೈಜ್ಞಾನಿಕವಾಗಿ ಬೆಳೆಯುತ್ತಿರುವ ನಗರಕ್ಕೆ ಒಂದು ಮಾಸ್ಟರ್‌ ಪ್ಲ್ರಾನ್‌ ಹಾಕಿ ಎಲ್ಲ ವಿಪತ್ತುಗಳನ್ನು ಎದುರಿಸುವಂತಾಗಬೇಕು. ಪ್ರತಿ ತಾಲೂಕು ಕೇಂದ್ರದಲ್ಲಿ ವಿಪತ್ತು ನಿರ್ವಹಣ ಕೇಂದ್ರವನ್ನು ರಚಿಸಬೇಕು. ಆ ಕೇಂದ್ರದಲ್ಲಿ ಬೋಟು, ತೆಪ್ಪ, ಲೈಫ್ ಜಾಕೆಟ್‌, ಸಿಬಂದಿ, ರೋಪ್‌ಗ್ಳಿರ ಬೇ ಕು. 4- 5 ಮಾಳಿಗೆಯನ್ನು ತಲುಪಬಲ್ಲ ಆಧುನಿಕ ಏಣಿಗಳು ಇರಬೇಕು. ಹೊಳೆ, ಕೆರೆಗಳಲ್ಲಿ ತುಂಬಿರುವ ಹೂಳು, ಕಸ, ಕೆಸ ರನ್ನು ತೆಗೆದು ನದಿಯ ಆಳವನ್ನು ಹೆಚ್ಚಿಸಬೇಕು. ಪಾಳುಬಿದ್ದ ಕೆರೆಗಳನ್ನು ಪುನಶ್ಚೇತನಗೊಳಿಸಬೇಕು. ಸಮುದ್ರ ಪ್ರಕ್ಷುಬ್ಧವಾದಾಗ ಬೋಟುಗಳಿಗೆ ಬಂದರಿನೊಳಕ್ಕೆ ಹೋಗಲಾಗದೆ ಮುಳುಗಿ ಸೊತ್ತು ಮತ್ತು ಜೀವಹಾನಿಯಾಗದಂತೆ ತಡೆಯಲು ಆಧುನಿಕ ಸ್ಪೀಡ್‌ ಬೋಟನ್ನು ಹೊಂದಿರಬೇಕು. ಇದಕ್ಕೆ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಎಲ್ಲ ಬಂದರುಗಳನ್ನು ಅಭಿವೃದ್ಧಿಪಡಿಸಬೇಕು. ನೆರೆ ಇಳಿದ ಮೇಲೆ ಸಾಂಕ್ರಾಮಿಕ ರೋಗ ಬಾರದಂತೆ ತಡೆಗಟ್ಟಲು ಬೇಕಾದ ವ್ಯವಸ್ಥೆ ಮಾಡಬೇಕು. ಪ್ರತಿ ಗ್ರಾಮದಲ್ಲಿ ಆಸಕ್ತ ಸ್ವಯಂ ಸೇವಕರ ತಂಡ ರಚಿಸಬೇಕು.
– ಪಾಂಡು ರಂಗ, ಮಲ್ಪೆ

ನಿಮ್ಮ ಸಲಹೆ ನೀಡಿ
38 ವರ್ಷಗಳ ಬಳಿಕ ಉಡುಪಿಯಲ್ಲಿ ಅಪ್ಪಳಿಸಿದ ಜಲಪ್ರಳಯ ಸಾಕಷ್ಟು ಹಾನಿ ಮಾಡುವ ಜತೆಗೆ ಭವಿಷ್ಯಕ್ಕೊಂದು ಉತ್ತಮ ಪಾಠ ಕಲಿಸಿದೆ. ಮುಂದೆ ಇಂಥ ಸಂದರ್ಭವನ್ನು ಮತ್ತಷ್ಟು ಸಮರ್ಥವಾಗಿ ನಿಭಾಯಿಸಲು ಯಾವ ರೀತಿ ನಾವು ಸಜ್ಜಾಗಬೇಕು, ಏನೆಲ್ಲ ಯೋಜನೆಗಳನ್ನು ರೂಪಿಸಿಕೊಳ್ಳಬಹುದು, ಯಾವೆಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಜತೆಗೆ ಜಿಲ್ಲಾಡಳಿತದ ಹೊಣೆಗಾರಿಕೆ ಏನು
ಎನ್ನುವ ಬಗ್ಗೆ ಓದುಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಲಹೆಗಳನ್ನು ಕಳುಹಿಸಲು ನಮ್ಮ  ವಾಟ್ಸಪ್‌ ನಂ.

7618774529

ಟಾಪ್ ನ್ಯೂಸ್

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Suilla

Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

missing

Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.