ಕಾಪು ತಾ.ಪಂ. ದುರಸ್ತಿಯಾದ ಕಟ್ಟಡ ಉದ್ಘಾಟನೆ ಯಾವಾಗ?
ದುರಸ್ತಿಗೆ 8 ಲಕ್ಷ ರೂ. ವೆಚ್ಚ, ವಿವಿಧ ಕಾರಣಗಳಿಂದ ಕಟ್ಟಡ ಉದ್ಘಾಟನೆ ಮುಂದೂಡಿಕೆ
Team Udayavani, Sep 5, 2020, 4:10 AM IST
ಕಾಪು: ಕಾಪು ತಾ.ಪಂ. ಆಡಳಿತ ಕಚೇರಿಗಾಗಿ ಮೀಸಲಿಟ್ಟಿರುವ ಉಳಿಯಾರಗೋಳಿ ಗ್ರಾ.ಪಂ. ಕಟ್ಟಡದ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದರೂ, ವಿವಿಧ ಕಾರಣಗಳಿಂದಾಗಿ ಇನ್ನೂ ಉದ್ಘಾಟನೆಯ ಯೋಗ ಕೂಡಿ ಬಂದಿಲ್ಲ.
ಆಗಸ್ಟ್ ಕೊನೆಯ ವಾರದಲ್ಲಿ ತಾ.ಪಂ. ಕಚೇರಿ ಉದ್ಘಾಟನೆಗೊಳ್ಳಬೇಕಿತ್ತಾದರೂ ಶಾಸಕರು ಕ್ವಾರಂಟೈನ್‌ನಲ್ಲಿದ್ದರಿಂದ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಮೃತಪಟ್ಟಿದ್ದರಿಂದ ಉದ್ಘಾಟನೆ ಮುಂದಕ್ಕೆ ಹೋಗಿತ್ತು. ಈಗ ಉದ್ಘಾಟನೆ ದಿನಾಂಕ ಚರ್ಚೆಯಾಗುತ್ತಿದ್ದರೂ ಪಿತೃಪಕ್ಷದ ಕಾರಣದಿಂದ ಮತ್ತೆ ದಿನ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ.
ದುರಸ್ತಿಗೊಂಡ ಕಟ್ಟಡಕ್ಕೆ 8 ಲಕ್ಷ ರೂ.
ವೆಚ್ಚವಾಗಿದ್ದು, ಹೊಸ ಮಿನಿ ವಿಧಾನಸೌಧ ನಿರ್ಮಾಣವಾಗುವಲ್ಲಿಯವರೆಗೆ ಉಳಿಯಾರಗೋಳಿ ಗ್ರಾ.ಪಂ. ಕಟ್ಟದಲ್ಲೇ ಕಾರ್ಯಾಚರಿಸಲಿದೆ. ಕೋವಿಡ್ ಕಾರಣ ದಿಂದಾಗಿ ಮಿನಿ ವಿಧಾನಸೌಧದ ಶಿಲಾನ್ಯಾಸವೂ ವಿಳಂಬವಾಗಿದೆ. ಪಿತೃ ಪಕ್ಷದ ಅವಧಿ ಮುಗಿದ ಕೂಡಲೇ ತಾ.ಪಂ. ಕಟ್ಟಡ
ಉದ್ಘಾಟಿಸಲಾಗುವುದು. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದು ಶಾಸಕ ಲಾಲಾಜಿ ಮೆಂಡನ್ ಹೇಳಿದ್ದಾರೆ.
ಹೊಸ ಕಚೇರಿ ರಿಪೇರಿಯಾಗಿದ್ದರೂ ಪೀಠೊಪಕರಣ, ಕಂಪ್ಯೂಟರ್‌ಗೆ ಹಣದ ಕೊರತೆ ಕಾಡಿದೆ. ಇದನ್ನು 16 ಗ್ರಾ.ಪಂ.ಗಳಿಂದ ಎರವಲು ಪಡೆಯಲು ಉದ್ದೇಶಿಸಲಾಗಿದೆ. ಸೆಪ್ಟಂಬರ್ ಮಧ್ಯ ಭಾಗದಲ್ಲಿ ಕಟ್ಟಡ ಉದ್ಘಾಟನೆಯ ನಿರೀಕ್ಷೆ ಇದೆ ಎಂದು ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ಗಾಂವ್ಕರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.