![Social–media-Stars](https://www.udayavani.com/wp-content/uploads/2025/02/Social-media-Stars-415x249.jpg)
![Social–media-Stars](https://www.udayavani.com/wp-content/uploads/2025/02/Social-media-Stars-415x249.jpg)
Team Udayavani, Oct 20, 2020, 4:00 AM IST
ಬೈಂದೂರು: ಈ ವರ್ಷದ ಮುಂಗಾರು ಬೆಳೆ ಇನ್ನೇನು ಕೆಲವೆ ದಿನದಲ್ಲಿ ಕಟಾವಿಗೆ ಸಿದ್ಧಗೊಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಉತ್ತಮ ಫಸಲು ಬಂದರೂ ಕೂಡ ರೈತರಿಗೆ ಕಾಡು ಪ್ರಾಣಿಗಳಿಂದ ಸಂರಕ್ಷಿಸಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಮುಖ್ಯವಾಗಿ ಬೈಂದೂರು ತಾಲೂಕು ಹಾಗೂ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭತ್ತದ ಬೇಸಾಯ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದೆ. ಮುಂಗಾರು ಬೆಳೆ ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಕಟಾವಿಗೆ ಸಿದ್ಧಗೊಳ್ಳುತ್ತದೆ. ಹವಾಮಾನ ವೈಪರೀತ್ಯ ಒಂದೆಡೆಯಾದರೆ ಈ ಸಮಯದಲ್ಲಿ ಗದ್ದೆಯಲ್ಲಿರುವ ಬೆಳೆಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹರಸಾಹಸಪಡಬೇಕಾಗಿದೆ.
ರಾತ್ರಿ ವೇಳೆ ಹಳ್ಳಿಯಲ್ಲಿ ಕಾವಲು
ಸಾಮಾನ್ಯವಾಗಿ ರಾತ್ರಿ ವೇಳೆ ಹಳ್ಳಿಗಳಲ್ಲಿ ರೈತರು ಅಟ್ಟಣಿಗೆ (ಮನೆ ಹಳ್ಳಿ) ನಿರ್ಮಿಸಿಕೊಂಡು ರಾತ್ರಿಯಿಡೀ ಗದ್ದೆ ಕಾಯುತ್ತಾರೆ. ಕಾಡು ಹಂದಿಯ ಕಾಟ ಈ ವರ್ಷ ಅತ್ಯಧಿಕವಾಗಿದೆ. ನವಿಲು, ಕಡವೆ, ಕಾಡುಕೋಣ, ಹಂದಿ ಕಾಟದಿಂದ ಭತ್ತದ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿದೆ. ಪೈರುಗಳು ಬೆಳೆದಿರುವ ಕಾರಣ ಗದ್ದೆಯಲ್ಲಿ ಮೊಳಕೆ ಬರುವ ಪರಿಸ್ಥಿತಿ ಇದೆ ಎನ್ನುವುದು ಕೃಷಿಕ ನಾರಾಯಣ ಮರಾಠಿಯವರ ಅಭಿಪ್ರಾಯವಾಗಿದೆ.
ವರ್ಷದಿಂದ ವರ್ಷಕ್ಕೆ ಹೆಚ್ಚು
ಕಳೆದ ಕೆಲವು ವರ್ಷಗಳಿಂದ ಪ್ರತಿ ಸಾರಿಯೂ ಭತ್ತದ ಬೆಳೆಗೆ ಕಾಡು ಪ್ರಾಣಿಗಳ ಕಾಟ ಅಧಿಕವಾಗಿದೆ. ಕಾಡು ನಾಶದ ಪರಿಣಾಮ ಒಂದೆಡೆಯಾದರೆ ಮಂಗಗಳು ಕಾಡು ಬಿಟ್ಟು ಊರು ಸೇರಿಕೊಂಡಿವೆ.ಮಾತ್ರವಲ್ಲದೆ ಮನೆಯ ಪಾತ್ರೆಯಲ್ಲಿ ರುವ ಆಹಾರ ಎತ್ತಿಕೊಂಡು ಹೋಗುತ್ತವೆ. ಭತ್ತದ ಗದ್ದೆಗೂ ಕೂಡ ಇವುಗಳ ಕಾಟ ಅಧಿಕವಾಗಿದೆ. ರಾತ್ರಿ ವೇಳೆ ಕಾಡು ಹಂದಿ ಹಗಲು ವೇಳೆ ಮಂಗ,ನವಿಲು ಕಾಯುವುದು ರೈತರಿಗೆ ಸಮಸ್ಯೆಯಾಗತೊಡಗಿದೆ.ಕೂಲಿಯಾಳುಗಳ ಕೊರತೆ ಮತ್ತು ಹಿರಿಯರು ಮಾತ್ರ ಕೃಷಿ ಚಟುವಟಿಕೆ ಮುಂದುವರಿಸಿಕೊಂಡು ಬಂದಿರುವುದರ ನಡುವೆ ಕಾಡು ಪ್ರಾಣಿಗಳ ಹಾವಳಿ, ಹವಾಮಾನ ವೈಪರೀತ್ಯ ಈ ಬಾರಿಯೂ ಕೃಷಿಕರಿಗೆ ಕಂಟಕವಾಗಿ ಪರಿಣಮಿಸಿದೆ.
ಅರ್ಜಿ ನೀಡಿ
ವರ್ಷದಿಂದ ವರ್ಷಕ್ಕೆ ಕಾಡು ಪ್ರಾಣಿಗಳ ಹಾವಳಿ ಅಧಿಕವಾಗಿರುವುದು ನಿಜ. ಆದರೆ ಅತಿಯಾದ ಕಾಡು ನಾಶ ಕೂಡ ಇದಕ್ಕೆ ಮಹತ್ವದ ಕಾರಣವಾಗಿದೆ. ಕಾಡು ಪ್ರಾಣಿಗಳಿಂದ ರೈತರ ಬೆಳೆ ನಾಶವಾದಾಗ ಅದರ ವಿವರದ ಅರ್ಜಿಯನ್ನು ಅರಣ್ಯ ಇಲಾಖೆಗೆ ನೀಡಿದರೆ ಇಲಾಖೆಯಿಂದ ಬೆಳೆ ನಾಶದ ಪರಿಹಾರ ಕೊಡಲಾಗುತ್ತದೆ. ರೈತರು ಇದರ ಉಪಯೋಗ ಪಡೆಯಬಹುದಾಗಿದೆ.
– ಕಿರಣ್ ಬಾಬು, ವಲಯಾರಣ್ಯಧಿಕಾರಿ ಬೈಂದೂರು
ಅರುಣ ಕುಮಾರ್, ಶಿರೂರು
Udupi: ಗ್ರಾಮೀಣ ಭಾಗದ ಕಾಲುಸಂಕ 3 ವರ್ಷಗಳಲ್ಲಿ ಪೂರ್ಣ: ಸಚಿವ ಸತೀಶ್ ಜಾರಕಿಹೊಳಿ
Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್
ಸಿಎಸ್‌ಟಿ – ಮಂಗಳೂರು ಎಕ್ಸ್‌ಪ್ರೆಸ್ ರೈಲಲ್ಲಿ ಕಳವು ಪ್ರಕರಣ ಮತ್ತೆ ಕಾಪುವಿಗೆ ವರ್ಗಾವಣೆ
Udupi: ಗೀತಾರ್ಥ ಚಿಂತನೆ-190: ಎಲ್ಲ ತಿಳಿದಿದೆ ಎಂಬ ಪ್ರಜ್ಞೆ ಅಪಾಯಕಾರಿ
Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’
Social Media Virals: ಸೋಶಿಯಲ್ ಮೀಡಿಯಾ ತಂದುಕೊಟ್ಟ “ಸ್ಟಾರ್ ಪಟ್ಟ’
Congress Talk Fight: ಡಿಸಿಎಂ ಡಿ.ಕೆ.ಶಿವಕುಮಾರ್‌ಗೇ ಸಚಿವ ಕೆ.ಎನ್.ರಾಜಣ್ಣ ಸಡ್ಡು!
ನಾವು ಕಾನ್ವೆಂಟ್‌ನಲ್ಲಿ ಓದಿದವರು ಕನ್ನಡದ ಬಗ್ಗೆ ತಿಳಿವಳಿಕೆ ಇಲ್ಲ: ಶಿಕ್ಷಣ ಸಚಿವ ಮಧು
Tragedy: ಡೆ *ತ್‌ನೋಟ್ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!
Govt School: ಶಾಲಾ ಮಕ್ಕಳಿಗೆ ಚಿಕ್ಕಿ ವಿತರಣೆ ಸ್ಥಗಿತಗೊಳಿಸಿದ ಶಿಕ್ಷಣ ಇಲಾಖೆ!
You seem to have an Ad Blocker on.
To continue reading, please turn it off or whitelist Udayavani.