ಬಿಸಿಯೂಟ ದತ್ತಾಂಶಕಾರರ 20 ತಿಂಗಳ ಹಸಿವಿಗಿಲ್ಲ ಪರಿಹಾರ!
ಕೇಂದ್ರ ಅನುದಾನ ನೀಡಿದರೂ ರಾಜ್ಯದಲ್ಲಿ ತಡೆ; 2020 ಮಾರ್ಚ್‌ನಿಂದ ವೇತನ ಬಂದಿಲ್ಲ
Team Udayavani, Dec 2, 2021, 7:05 AM IST
ಕುಂದಾಪುರ: ಶಾಲಾ ಬಿಸಿಯೂಟ ಸೇರಿದಂತೆ ಅಕ್ಷರ ದಾಸೋಹದ ಸಮಗ್ರ ಮಾಹಿತಿಯನ್ನು ಕಂಪ್ಯೂಟರ್‌ಗೆ ದಾಖಲಿಸುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ 20 ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ. ಕೇಂದ್ರ ಸರಕಾರ ಅನುದಾನ ನೀಡಿದ್ದರೂ ರಾಜ್ಯ ಸರಕಾರ ಅನುದಾನವನ್ನು ತಡೆಹಿಡಿದಿದ್ದು, ಲಕ್ಷಾಂತರ ಮಕ್ಕಳ ಬಿಸಿಯೂಟದ ಲೆಕ್ಕ ಇರಿಸುವ ಮಂದಿಯ ಊಟದ ಚಿಂತೆ ಯಾರಿಗೂ ಇಲ್ಲ ಎಂದಾಗಿದೆ.
ಅಕ್ಷರ ದಾಸೋಹ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು, ಶೈಕ್ಷಣಿಕ ವಲಯಕ್ಕೊಬ್ಬರು ಪ್ರಥಮ ದರ್ಜೆ ಸಹಾಯಕರು, ಡಿ ದರ್ಜೆ ಸಹಾಯ ಕರು ಹಾಗೂ ಡಾಟಾ ಎಂಟ್ರಿ ಆಪ ರೇಟರ್‌ಗಳು ಹುದ್ದೆ ಇವೆ. ಉಡುಪಿ ಜಿಲ್ಲೆಯ ತಾಲೂಕುಗಳ ಪೈಕಿ ಪ್ರ.ದ. ಸಹಾ ಯಕರ ಹುದ್ದೆ ಒಂದಷ್ಟೇ ಭರ್ತಿ ಯಿದ್ದು, ಉಳಿದೆಲ್ಲ ಖಾಲಿ ಯಿದೆ. ದ.ಕ.ದಲ್ಲಿ ಎಲ್ಲ ಹುದ್ದೆ ಭರ್ತಿ ಇದೆ. ಬಹುತೇಕ ಎಲ್ಲ ಕಡೆ ಡಿ ದರ್ಜೆ ಹುದ್ದೆ ಖಾಲಿಯೇ ಇದೆ. ರಾಜ್ಯದಲ್ಲಿ 176 ಶೈಕ್ಷಣಿಕ ವಲಯಗಳಲ್ಲಿ ಹಾಗೂ 32 ಜಿಲ್ಲಾ ಕಚೇರಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳ ಹುದ್ದೆ ಗಳಿವೆ. ಇವರೆಲ್ಲ ಕಳೆದ ಅನೇಕ ವರ್ಷಗಳಿಂದ ಹೊರಗುತ್ತಿಗೆ ವ್ಯವಸ್ಥೆಯಲ್ಲಿ ದುಡಿಯುತ್ತಿದ್ದಾರೆ.
ವೇತನ
ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಪ್ರತೀ 10-11 ತಿಂಗಳಿಗೊಮ್ಮೆ ಒಪ್ಪಂದವಾಗಿ ಹೊರಗುತ್ತಿಗೆ ಟೆಂಡರ್ ವಹಿಸಿಕೊಂಡ ಸಂಸ್ಥೆ ಯಿಂದ ಮರು ನೇಮಕಾತಿ ನಡೆ ಯು ತ್ತಿತ್ತು. 20 ಸಾವಿರ ರೂ. ವೇತನ ಕೇಂದ್ರದಿಂದ ದೊರೆತರೂ ಕೈಗೆ ಸಿಗುವುದು 15 ಸಾವಿರ ರೂ.ವರೆಗೆ. ಕೋವಿಡ್ ಭೀತಿ ಆರಂಭವಾದ 2020ರ ಮಾರ್ಚ್
ನಿಂದ ವೇತನ ಬರುತ್ತಿಲ್ಲ. ಈ ಕುರಿತು ಮನವಿಗಳು ಸಲ್ಲಿಕೆಯಾದ ಬಳಿಕ ಕೇಂದ್ರ ಸರಕಾರ ಅಷ್ಟೂ ಅನುದಾನ ಬಿಡುಗಡೆ ಮಾಡಿದೆ. ಈ ಕುರಿತು ಮಾಹಿತಿಯನ್ನೂ ಒದಗಿಸಿದೆ. ಆದರೆ ಕೇಂದ್ರ ಕೊಟ್ಟರೂ ರಾಜ್ಯ ಬಿಡ ಎಂಬಂತೆ ರಾಜ್ಯ ಸರಕಾರ ಅಷ್ಟೂ ಸಮಯದಿಂದ ವೇತನ ಬಿಡುಗಡೆ ಮಾಡಿಲ್ಲ. ಶಿಕ್ಷಣ ಸಚಿವರು, ಮುಖ್ಯಮಂತ್ರಿ, ಇಲಾಖಾ ಆಯುಕ್ತರಿಗೆ ಈ ಬಗ್ಗೆ ಮಾಹಿತಿ ಇದ್ದರೂ ಬಡಪಾಯಿಗಳ ಕಷ್ಟಕ್ಕೆ ಸ್ಪಂದಿಸುವವರು ಇಲ್ಲ. ವೇತನ ದೊರೆಯದವರು ರಾಜ್ಯದಲ್ಲಿ ಒಟ್ಟು ಡಾಟಾ ಎಂಟ್ರಿ ಆಪರೇಟರ್‌ಗಳು – 176, ಜಿಲ್ಲಾ ಕಚೇರಿಯ ಆಪರೇಟರ್‌ಗಳು – 32.
ಇದನ್ನೂ ಓದಿ:ಅಮೆರಿಕ : ಶಾಲಾ ವಿದ್ಯಾರ್ಥಿಯಿಂದ ಸಹಪಾಠಿಗಳ ಮೇಲೆ ಗುಂಡಿನ ದಾಳಿ , 3 ಸಾವು
33 ವಿಧದ ಕೆಲಸ
ತಾಲೂಕಿನ ಎಲ್ಲ ಶಾಲೆಗಳಿಂದ ಬಿಸಿಯೂಟದ ಅಂಕಿಅಂಶ ಸಂಗ್ರಹಿಸಿ ದಾಖಲಿಸುವುದು, ಉಳಿಕೆ ಆಧರಿಸಿ ಮುಂದಿನ ತಿಂಗಳ ಧಾನ್ಯ ಅಕ್ಕಿ ಹಂಚುವಿಕೆ, ಬೇಡಿಕೆ ಪಟ್ಟಿ ತಯಾರಿಕೆ, ಬಿಲ್ಲು ತಯಾರಿಸಿ ಸರಬರಾಜುದಾರರಿಗೆ ನೀಡುವುದು, ಶಾಲಾವಾರು ರಸೀದಿಗಳನ್ನು ಪರಿಶೀಲಿಸುವುದು, ಕ್ಷೀರಭಾಗ್ಯ ಯೋಜನೆಯ ಶಾಲಾವಾರು ಮಾಹಿತಿ ಸಂಗ್ರಹ ದಾಖಲೀಕರಣ, ಅಂತರ್ಜಾಲದಲ್ಲಿ ಪ್ರತಿಯೊಂದು ಮಾಹಿತಿ ದಾಖಲೀಕರಣ, ಅಡುಗೆ ಸಿಬಂದಿಯ ಹಾಜರಾತಿ, ವೇತನ ಬಿಲ್ಲು ತಯಾರಿಸಿ ಅವರ ಖಾತೆಗೆ ಹಣ ಜಮಾವಣೆ, ಅಡುಗೆ ಸಿಲಿಂಡರ್‌ಗಳನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬೇಡಿಕೆ ಪಟ್ಟಿ ತಯಾರಿಸಿ ಬಿಲ್ಲಿಗೆ ವ್ಯವಸ್ಥೆ, ವಾರ್ಷಿಕ ಕ್ರಿಯಾಯೋಜನೆ ತಯಾರಿ ಸಹಿತ ಸುಮಾರು 33 ವಿಧದ ಕೆಲಸಗಳನ್ನು ಡಾಟಾ ಎಂಟ್ರಿ ಆಪರೇಟರ್‌ಗಳು ಮಾಡಬೇಕಾಗುತ್ತದೆ.
ಅಕ್ಷರದಾಸೋಹ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ವೇತನ ಆಗಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈಗ ಜಿಲ್ಲಾ ಪ್ರವಾಸದಲ್ಲಿದ್ದು, ಬೆಂಗಳೂರಿಗೆ ತೆರಳಿದ ಬಳಿಕ ಇಲಾಖಾಧಿಕಾರಿಗಳ ಜತೆ ಚರ್ಚಿಸಿ ಪರಿಶೀಲಿಸಲಾಗುವುದು.
– ಬಿ.ಸಿ. ನಾಗೇಶ್,
ಶಿಕ್ಷಣ ಸಚಿವರು
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.