ಕೇರಳದಿಂದ ಬೋಟಿನಲ್ಲಿ ಬಂದ 70 ಮಂದಿ: ತಪಾಸಣೆ
Team Udayavani, Mar 25, 2020, 12:17 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ಕರ್ನಾಟಕಕ್ಕಿಂತ ಭೀಕರ ಸ್ಥಿತಿ ಇರುವ ಕೇರಳದ ಗಡಿಭಾಗದಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಮಂಗಳವಾರ ಕುಂದಾಪುರಕ್ಕೆ ಆಗಮಿಸಿದ ಸುಮಾರು 70 ಮಂದಿಯ ಆರೋಗ್ಯ ತಪಾಸಣೆಯನ್ನು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಕುಮಟಾ, ಕಾರವಾರ, ಕುಂದಾಪುರ ಭಾಗದ ಸುಮಾರು 70 ಮಂದಿ ಮೀನುಗಾರರು ಮೀನುಗಾರಿಕೆಗಾಗಿ ಕೇರಳ ಕಡೆಗೆ ತೆರಳಿದ್ದರು. ಅವರು ಮಂಗಳವಾರ ಕೋಡಿ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಮಾಹಿತಿ ಪಡೆದ ಸ್ಥಳೀಯರು ಅವರನ್ನು ನೇರ ಸರಕಾರಿ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ಮಾಡಿದರು.
ಆರೋಗ್ಯ ಇಲಾಖೆ ಸಹಕಾರದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ತೆರೆದ ವಿದೇಶದಿಂದ ಬಂದವರ ನೋಂದಣಿ ವಿಭಾಗದಲ್ಲಿ ತಪಾಸಣೆ ನಡೆಸಲಾಯಿತು. ಅನಂತರ ಕುಮಟಾ, ಕಾರವಾರ ಕಡೆಗೆ ತೆರಳುವವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಯಿತು. ಸೂಕ್ತ ನಿರ್ದೇಶನ ನೀಡಲಾಗಿದೆ. ಕೇರಳದಲ್ಲಿ ಸಾಂಕ್ರಾಮಿಕ ಹೆಚ್ಚು ಹಬ್ಬಿದ್ದು ಕರ್ನಾಟಕ ಈ ಪ್ರಮಾಣದಲ್ಲಿ ಹಬ್ಬಿಸಿಕೊಂಡಿಲ್ಲ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.