Thekkatte: ಸುಟ್ಟು ಕರಕಲಾದ ಎರಡು ದ್ವಿಚಕ್ರ ವಾಹನ
Team Udayavani, Sep 14, 2024, 9:07 PM IST
ತೆಕ್ಕಟ್ಟೆ: ಇಲ್ಲಿನ ಉಳ್ತೂರು -ಹಲ್ತೂರು ಸಂಪರ್ಕ ರಸ್ತೆ ಸಮೀಪದ ಮೂಡುಬೆಟ್ಟು ಎಂಬಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹಾಗೂ ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನ ಹಠಾತ್ ಬೆಂಕಿ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಸೆ. 14ರ ಮುಂಜಾನೆ 4.30ರ ಸುಮಾರಿಗೆ ಸಂಭವಿಸಿದೆ.
ಇಲ್ಲಿನ ಆನೆಮನೆ ಭಾಗೀರಥಿ ಶೆಡ್ತಿ ಅವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವು ಮುಂಜಾನೆ ವೇಳೆಗೆ ಹಠಾತ್ ಬೆಂಕಿ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಕರಕಲಾಗಿದೆ. ಇದರ ಪರಿಣಾಮ ಅಲ್ಲಿಯೇ ಸಮೀಪ ನಿಲ್ಲಿಸಿದ್ದ ಇನ್ನೊಂದು ದ್ವಿಚಕ್ರ ವಾಹನ ಸಹಿತ ಮನೆಯ ವಿದ್ಯುತ್ ಮೀಟರ್ ಬೋರ್ಡ್, ಸ್ಲಾéಬ್, ಕಿಟಕಿ ಬಾಗಿಲು, ಗೋಡೆ ಹಾಗೂ ಟೈಲ್ಸ್‌ಗಳು ಬೆಂಕಿಯ ಕೆನ್ನಾಲಿಗೆಗೆ ಗುರಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ
ತಪ್ಪಿದ ಭಾರೀ ಅನಾಹುತ:
ಮುಂಜಾವಿನ ಗಾಢನಿದ್ರೆಯಲ್ಲಿದ್ದ ಮನೆಯವರಿಗೆ ಒಮ್ಮೆಲೇ ಸ್ಫೋಟದ ಶಬ್ಧ ಕೇಳಿ ಆತಂಕಗೊಂಡು ಮನೆಯಿಂದ ಹೊರಬಂದು ನೋಡಿದಾಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನವು ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು. ಆ ಕ್ಷಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಪಂಪ್ ಬಳಸಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ನೆರೆಹೊರೆಯವರು ಆಗಮಿಸಿ ಬೆಂಕಿ ನಂದಿಸಲು ಮುಂದಾದರು. ದ್ವಿಚಕ್ರ ವಾಹನದ ಹತ್ತಿರವೇ ಇದ್ದ ಕಾರನ್ನು ದೂರಕ್ಕೆ ತಳ್ಳಿದ ಪರಿಣಾಮ ಸಂಭವನೀಯ ಭಾರೀ ಅವಘಡವೊಂದು ತಪ್ಪಿದೆ ಎಂದು ಮಹೇಶ್ ಶೆಟ್ಟಿ ಅವರು ಉದಯವಾಣಿಗೆ ತಿಳಿಸಿದ್ದಾರೆ.
ಮಹೇಶ್ ಶೆಟ್ಟಿ ಅವರು ಪತ್ನಿ, ಮಗು ಮತ್ತು ಅತ್ತೆ ಸೇರಿದಂತೆ ನಾಲ್ವರು ಈ ಮನೆಯಲ್ಲಿ ವಾಸವಾಗಿದ್ದರು. ಕೋಟ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu-Kashmir: ಮೂರು ಪ್ರತ್ಯೇಕ ಎನ್‌ಕೌಂಟರ್: 5 ಉಗ್ರರ ಹತ್ಯೆ
Udupi: ರಾಜ್ಯ ಸರಕಾರದಿಂದ ಅಲ್ಪಸಂಖ್ಯಾಕರ ಓಲೈಕೆ: ಬಿಜೆಪಿ ಆರೋಪ
Mangaluru: ಕರಾವಳಿ ಅಭಿವೃದ್ಧಿಗೆ ಪಕ್ಷಭೇದ ಮರೆತು ಶ್ರಮಿಸಬೇಕಿದೆ: ಚಂದ್ರಶೇಖರ್
Mangaluru: ಮುಡಿಪು ಜವಾಹರ್ ನವೋದಯ ವಿದ್ಯಾಲಯ “ಪಿಎಂ ಶ್ರೀ’ ಶಾಲೆ: ಸಂಸದ ಕ್ಯಾ.ಚೌಟ ಘೋಷಣೆ
World Democracy Day 2024: ಕರಾವಳಿಯಲ್ಲಿ ಸೆ.15ಕ್ಕೆ (ಇಂದು) ಬೃಹತ್ ಮಾನವ ಸರಪಳಿ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.