ಗ್ರಾಮಾಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಚರಿಸದ ಬಸ್
ಆತಂಕದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು
Team Udayavani, Jun 15, 2020, 5:29 AM IST
ಸಾಂದರ್ಭಿಕ ಚಿತ್ರ.
ಕುಂದಾಪುರ: ಮುಂಜಾಗ್ರತಾ ಕ್ರಮಗಳೊಂದಿಗೆ ಜೂ.18ಕ್ಕೆ ಇಂಗ್ಲಿಷ್ ಪಿಯು ಪರೀಕ್ಷೆ ಹಾಗೂ ಜೂ. 25ರಿಂದ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ಆದರೆ ಕುಂದಾಪುರ, ಬೈಂದೂರು ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗ ದಿರುವುದರಿಂದ ಈ ಪ್ರದೇಶಗಳಿಂದ ಬಂದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆಗಳಿವೆ.
ಹಕ್ಲಾಡಿ, ನೂಜಾಡಿ, ಜಡ್ಕಲ್, ಮುದೂರು, ಹೆಂಗವಳ್ಳಿ, ಹಳ್ಳಿಹೊಳೆ, ಯಡಮೊಗೆ, ಹೇರಂಜಾಲು, ಕಾಲ್ತೋಡು ಮತ್ತಿತರ ಕಡೆಗಳಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ. ಹಾಗಾಗಿ ಈ ಭಾಗದಿಂದ ಕುಂದಾಪುರ ಅಥವಾ ಬೇರೆ ಪರೀಕ್ಷಾ ಕೇಂದ್ರ
ಗಳಿಗೆ ಬರುವ ಮಕ್ಕಳಿಗೆ ಸಮಸ್ಯೆಯಾಗಲಿದೆ. ಮುದೂರು, ಜಡ್ಕಲ್ ಭಾಗದ ವಿದ್ಯಾರ್ಥಿಗಳಿಗೆ ಕೊಲ್ಲೂರು ಪ್ರೌಢಶಾಲೆಯಲ್ಲಿ ಪರೀಕ್ಷೆ ನಡೆಯಲಿದೆ. ಗೋಳಿಯಂಗಡಿ, ಬೆಳ್ವೆ, ಅಲಾºಡಿ, ಹೆಂಗವಳ್ಳಿ ಭಾಗದವರಿಗೆ ಆವರ್ಸೆಯಲ್ಲಿ ಪರೀಕ್ಷೆ ನಡೆಯಲಿದೆ. ಆರ್ಡಿ, ಹಾಲಾಡಿ ಭಾಗದವರಿಗೆ ಬಿದ್ಕಲ್‌ಕಟ್ಟೆಯಲ್ಲಿ ಪರೀಕ್ಷೆ ನಡೆಯಲಿದೆ. ಇಲ್ಲಿನ ಕೆಲ ಕಡೆಗಳಲ್ಲಿ ಬಸ್ ಸಂಚಾರ ಇಲ್ಲದಿದ್ದರೆ, ಮತ್ತೆ ಕೆಲವೆಡೆಗಳಲ್ಲಿ ಮಕ್ಕಳಿಗೆ ಅನುಕೂಲ ಕರ ಸಮಯದಲ್ಲಿ ಬಸ್ಸಿಲ್ಲ.
ಪಿಯು : 9 ಪರೀಕ್ಷಾ ಕೇಂದ್ರ
ಅವಿಭಜಿತ ಕುಂದಾಪುರ ತಾಲೂಕಿನ 9 ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ ನಡೆಯಲಿದ್ದು, ಕುಂದಾಪುರ ಸರಕಾರಿ ಪ.ಪೂ., ಭಂಡಾರ್‌ಕಾರ್ ಕಾಲೇಜು, ಆರ್.ಎನ್. ಶೆಟ್ಟಿ ಪ.ಪೂ. ಕಾಲೇಜು, ಬೈಂದೂರು, ಶಿರೂರು, ನಾವುಂದ, ವಂಡ್ಸೆ, ಬಿದ್ಕಲ್‌ಕಟ್ಟೆ, ಕೋಟೇಶ್ವರ ಪ.ಪೂ. ಕಾಲೇಜುಗಳು ಪರೀಕ್ಷಾ ಕೇಂದ್ರಗಳಾಗಿವೆ.
ಕುಂದಾಪುರ : 2,457 ವಿದ್ಯಾರ್ಥಿಗಳು
ಎಸೆಸೆಲ್ಸಿ ಪರೀಕ್ಷೆಗೆ ಕುಂದಾಪುರ ವಲಯದಲ್ಲಿ 8 ಕೇಂದ್ರಗಳಿದ್ದು, ಹೆಚ್ಚುವರಿಯಾಗಿ ಒಂದೆರಡು ಕೇಂದ್ರಗಳನ್ನು ಮಾಡಲಾಗಿದೆ. ಕುಂದಾಪುರ ಬೋರ್ಡ್ ಹೈಸ್ಕೂಲ್, ಸೈಂಟ್ ಮೇರಿಸ್, ಪಬ್ಲಿಕ್ ಶಾಲೆ ಕೋಟೇಶ್ವರ, ಬಿದ್ಕಲ್‌ಕಟ್ಟೆ, ಶಂಕರನಾರಾಯಣ, ಸಿದ್ದಾಪುರ, ಬಸೂÅರು, ಗಂಗೊಳ್ಳಿ ಕೇಂದ್ರ ಗಳಲ್ಲಿ ಒಟ್ಟು 2,457 ಮಂದಿ ಪರೀಕ್ಷೆ ಬರೆಯಲಿದ್ದಾರೆ.
ಬೈಂದೂರು : 2,060 ವಿದ್ಯಾರ್ಥಿಗಳು
ಬೈಂದೂರು ವಲಯದಲ್ಲಿ 8 ಕೇಂದ್ರಗಳಿದ್ದು, ಬೈಂದೂರು ಸರಕಾರಿ ಪ್ರೌಢಶಾಲೆ, ರತ್ತುಬಾಯಿ ಜನತಾ ಪ್ರೌಢಶಾಲೆ, ಉಪ್ಪುಂದ ಜೂ| ಕಾಲೇಜು, ಕಂಬದಕೋಣೆ ಜೂ| ಕಾಲೇಜು, ನಾವುಂದ ಜೂ| ಕಾಲೇಜು, ತಲ್ಲೂರು ಸರಕಾರಿ ಪ್ರೌಢಶಾಲೆ, ವಂಡ್ಸೆ ಜೂನಿಯರ್ ಕಾಲೇಜು ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆಗಳಲ್ಲಿ ಒಟ್ಟು 2,060 ಮಂದಿ ವಿದ್ಯಾರ್ಥಿ ಗಳು ಪರೀಕ್ಷೆ ಬರೆಯಲಿದ್ದಾರೆ.
ಬಸ್ಸಿಲ್ಲದೆ ಸಮಸ್ಯೆ
ನಮ್ಮ ಮನೆ ಹಕ್ಲಾಡಿ. ಪರೀಕ್ಷೆ ಇರುವುದು ಕುಂದಾಪುರದಲ್ಲಿ. ಈ ಮಾರ್ಗದಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ.. ಈ ಮಾರ್ಗದಲ್ಲಿ ವಿಶೇಷ ಬಸ್ ಕಲ್ಪಿಸಿದರೆ ಸಹಕಾರಿ ಯಾಗಲಿದೆ ಎಂದು ಹಕ್ಲಾಡಿಯ ವಿದ್ಯಾರ್ಥಿನಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು
ಈಗಾಗಲೇ ಇಲಾಖೆಯಿಂದ ಯಾವೆಲ್ಲ ಮಾರ್ಗಗಳಲ್ಲಿ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದರ ಕುರಿತು ರೂಟ್‌ಗಳನ್ನು ಸಿದ್ಧಪಡಿಸಿ ಜಿಲ್ಲಾಡಳಿತದ ಗಮನಕ್ಕೆ ತಂದು, ಕೆಎಸ್‌ಆರ್‌ಟಿಸಿಗೆ ನೀಡಲಾಗಿದೆ. ಇನ್ನು ಏನಾದರೂ ಸಮಸ್ಯೆಗಳಿದ್ದರೆ ಆಯಾಯ ಕಾಲೇಜುಗಳ ಶಿಕ್ಷಕರ ಗಮನಕ್ಕೆ ತನ್ನಿ. ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು.
– ಭಗವಂತ ಕಟ್ಟಿಮನೆ, ಉಪ ನಿರ್ದೇಶಕರು, ಪ.ಪೂ. ಶಿಕ್ಷಣ ಇಲಾಖೆ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.