Wandse: ಕೊಚ್ಚಿ ಹೋದ ಮರದ ದಿಣ್ಣೆ, ಮತ್ತೆ ಬಂದ್ದದ್ದೂ ದಿಣ್ಣೆಯೇ!
ನೈಕಂಬ್ಳಿ -ಹಳಿಯಮ್ಮ ದೇಗುಲ; ಕಿರು ಸೇತುವೆಗೆ ಜನರಿಂದ ಬೇಡಿಕೆ
Team Udayavani, Aug 22, 2024, 5:53 PM IST
ವಂಡ್ಸೆ: ನೈಕಂಬ್ಳಿ -ಹಳಿಯಮ್ಮ ದೇಗುಲ ಹಾಗೂ ಮಹಾಲಿಂಗೇಶ್ವರ ದೇಗುಲಗಳ ನಡುವಿನ ಗ್ರಾಮಸ್ಥರ ನಿತ್ಯಸಂಚಾರದ ಸಂಪರ್ಕ ಕೊಂಡಿಯಾಗಿದ್ದ ಮರದ ದಿಣ್ಣೆಯ ಕಾಲುಸಂಕ ಭಾರೀ ಮಳೆಯ ರಭಸಕ್ಕೆ ಕೊಚ್ಚಿಹೋಗಿದ್ದು, ಇದೀಗ ತುರ್ತು ತಾತ್ಕಾಲಿಕ ನೆಲೆಯಲ್ಲಿ ಮರದ ದಿಣ್ಣೆಯ ಕಾಲುಸಂಕ ನಿರ್ಮಾಣವಾಗಿದೆ. ಆದರೆ, ಇಲ್ಲಿನ ಜನರು ಕಿರುಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ನೈಕಂಬ್ಳಿ, ಮಾರಣಕಟ್ಟೆ ಹಾಗೂ ಮಹಾಲಿಂಗೇಶ್ವರ ದೇಗುಲಕ್ಕೆ ಸಾಗುವ ಮರದ ದಿಣ್ಣೆ ಕೊಚ್ಚಿ ಹೋದ ಬಳಿಕ ಗ್ರಾ.ಪಂ. ಇರುವ ಸಂಪನ್ಮೂಲಗಳನ್ನು ಕ್ರೋಡೀಕರಿಸಿ, ಗ್ರಾಮಸ್ಥರ ಸಹಕಾರದೊಡನೆ ಇದೀಗ ತಾತ್ಕಾಲಿಕ ಕಾಲುಸಂಕ ನಿರ್ಮಿಸಿದೆ.
ಗ್ರಾಮಸ್ಥರು ಕಿರುಸೇತುವೆಗೆ ಆಗ್ರಹಿಸುತ್ತಿದ್ದರೂ ಪಂಚಾಯತ್‌ಗೆ ಒಂದು ಕೋಟಿ ವೆಚ್ಚದ ನಿರ್ಮಾಣ ಕಷ್ಟಸಾಧ್ಯವಾಗಿದೆ. ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿಯವರ ಶಿಫಾರಸಿನಂತೆ ಈ ಹಿಂದೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅನುದಾನ ಬಿಡುಗಡೆಗೆ ಶಿಫಾರಸು ಮಾಡಿದ್ದರು. ಆದರೆ, ಅನುದಾನ ಬಿಡುಗಡೆಯಾಗದೆ ಯೋಜನೆ ಕಡತದಲ್ಲೇ ಬಾಕಿ ಉಳಿದಿದೆ. ಈಗ ಗ್ರಾಮಸ್ಥರು ಸರಕಾರ ಮತ್ತು ಸಂಸದರ ನೆರವು ಕೋರಿದ್ದಾರೆ.
125 ಮನೆ, ಶಾಲೆ, ಅಂಗನವಾಡಿಗಳಿರುವ ಪ್ರದೇಶ
ಪರಿಸರದಲ್ಲಿ 125ಕ್ಕೂ ಮಿಕ್ಕಿ ಮನೆಗಳಿದ್ದು, ಸರಕಾರಿ ಹಿ.ಪ್ರಾ. ಶಾಲೆ ಸಹಿತ ಅಂಗನವಾಡಿ ಶಾಲೆ ಕೂಡ ಇದೆ. ಗ್ರಾಮಸ್ಥರು ವಂಡ್ಸೆ ಹಾಗೂ ಕೊಲ್ಲೂರಿಗೆ ತೆರಳಲು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ.
ಸಂಪನ್ಮೂಲ ಒದಗಿಸಿದಲ್ಲಿ ಕಿರುಸೇತುವೆ
ಚಿತ್ತೂರು ಗ್ರಾ.ಪಂ.ನಲ್ಲಿ ಸಂಪನ್ಮೂಲದ ಕೊರತೆ ಇದೆ. ರಾಜ್ಯ ಸರಕಾರ, ಜನಪ್ರತಿನಿಧಿಗಳು ಸಂಪನ್ಮೂಲ ಒದಗಿಸಿದಲ್ಲಿ ಕಿರುಸೇತುವೆ ನಿರ್ಮಿಸಬಹುದು. ಈ ದಿಸೆಯಲ್ಲಿ ಗ್ರಾಮಸ್ಥರ ಮನವಿಗೊಂದು ಶಾಶ್ವತ ಪರಿಹಾರ ಒದಗಿಸಲು ಇಲಾಖೆ ಹಾಗೂ ಸಚಿವರು ಹೆಚ್ಚಿನ ಕಾಳಜಿ ವಹಿಸಿ ಶ್ರಮಿಸುವಂತಾಗಲಿ.
– ರವಿರಾಜ್ ಶೆಟ್ಟಿ, ಅಧ್ಯಕ್ಷರು, ಚಿತ್ತೂರು ಗ್ರಾ.ಪಂ.
-ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.