ಗುಡ್ಡೆಯಂಗಡಿ ಬಳಿ ಅಪಘಾತ; ಪಾದಚಾರಿ ಸಾವು
Team Udayavani, Sep 16, 2020, 11:15 PM IST
![ಗುಡ್ಡೆಯಂಗಡಿ ಬಳಿ ಅಪಘಾತ; ಪಾದಚಾರಿ ಸಾವು](https://www.udayavani.com/wp-content/uploads/2020/09/acc-3-620x465.jpg)
![ಗುಡ್ಡೆಯಂಗಡಿ ಬಳಿ ಅಪಘಾತ; ಪಾದಚಾರಿ ಸಾವು](https://www.udayavani.com/wp-content/uploads/2020/09/acc-3-620x465.jpg)
ಕುಂದಾಪುರ: ತಲ್ಲೂರು ಸಮೀಪದ ಗುಡ್ಡೆಯಂಗಡಿಯ ಪಾರ್ಥಿಕಟ್ಟೆ ಬಳಿ ಬುಧವಾರ ರಾತ್ರಿ 10.30ರ ಸುಮಾರಿಗೆ ಬೈಕ್ ಸವಾರ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮರಣವನ್ನಪ್ಪಿದ್ದಾರೆ.
ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸ್ ಶವವನ್ನು ಸಾಗಿಸಿದರು. ಬೈಕನ್ನು ಸ್ಥಳೀಯರ ಸಹಕಾರದೊದಿಗೆ ಠಾಣೆಗೆ ಸಾಗಿಸಲಾಯಿತು. ಬೈಕ್ ಸವಾರ ಸಿಕ್ಕಿಲ್ಲ ಎನ್ನಲಾಗಿದೆ. ಮೃತರನ್ನು ಕೆಂಚನೂರು ನಿವಾಸಿ ಕುಪ್ಪಯ್ಯ ಶೆಟ್ಟಿ (58) ಎಂದು ಗುರುತಿಸಲಾಗಿದೆ.