ಅಕ್ರಮ ಸಕ್ರಮ ಶುಲ್ಕ ಕಡಿಮೆ ಮಾಡಲು ಕ್ರಮ: ಶಾಸಕ ಕೊಡ್ಗಿ
Team Udayavani, May 31, 2023, 6:44 AM IST
ಕುಂದಾಪುರ: ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾನದ ಸಮುದ್ರತೀರದಲ್ಲಿ ಅನಾದಿ ಕಾಲದಿಂದ ಮನೆ ಕಟ್ಟಿ ಕುಳಿತ ಬಡವರಿಗೆ ವಿವಿಧ ಕಾರಣಗಳಿಂದ ಹಕ್ಕುಪತ್ರ ಮಂಜೂರಾಗಿರಲಿಲ್ಲ. ಅಂದಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಅಂದಿನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಯತ್ನದಿಂದ ಜಾಗ ಮಂಜೂರಾಗಿದ್ದು ಜನರಿಂದ ಸರಕಾರಕ್ಕೆ ಕಟ್ಟಬೇಕಾದ ಮೊತ್ತ ಅಧಿಕವಿದೆ. ಇದನ್ನು ಕಡಿಮೆ ಮಾಡಲು ಸರಕಾರಿ ಹಂತದಲ್ಲಿ ಪ್ರಯತ್ನಿಸಲಾಗುವುದು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಮಂಗಳವಾರ ಮಾಧ್ಯಮ ದವರ ಜತೆ ಮಾತನಾಡಿ, ಕೋಡಿ ಕನ್ಯಾನ ಮತ್ತು ಹೊಸಬೆಂಗ್ರೆಯ ಜನರ ಭೂಮಿ ಹಕ್ಕಿನ ಕನಸು ಇತ್ತೀಚೆಗೆ ನನಸಾಯಿತು. ಒಟ್ಟು 161 ಕುಟುಂಬಗಳಿಗೆ ಸರಕಾರಿ ಭೂಮಿ ಮಂಜೂರಾತಿ ಆದೇಶ ಆಗಿದೆ. 178ಜನರಿಗೆ ಪರಂಬೋಕು ಜಮೀನು ಮಂಜೂರಾಗಿದೆ. 132 ಜನರಿಗೆ ಸಮುದ್ರ ತೀರ ಎಂದು ನಮೂದಾಗಿದ್ದ ಜಮೀನು ಮಂಜೂರಾಗಲು ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ. ಇಲ್ಲಿ ಸೆಂಟ್ಸ್‌ಗೆ 5 ಸಾವಿರ ರೂ. ಕಟ್ಟಿಸಲಾಗುತ್ತಿದ್ದು ಬಡವರಿಗೆ ಕಷ್ಟವಾಗುತ್ತಿದೆ. ಮಲ್ಪೆಯಲ್ಲಿ ಇಂತಹ ಪ್ರಕರಣದಲ್ಲಿ ಸೆಂಟ್ಸ್‌ಗೆ 500 ರೂ. ಕಟ್ಟಿಸಲಾಗಿದ್ದು ಅದೇ ಮಾದರಿಯಲ್ಲಿ ಇಲ್ಲಿಯೂ ಹಣ ಪಾವತಿಗೆ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಕೋಡಿ ಕನ್ಯಾನ ಮತ್ತು ಹೊಸ ಬೆಂಗ್ರೆ ಜನತೆಯ ಈ ಭೂಮಿ ಹಕ್ಕಿನ ಬಗ್ಗೆ ದಶಕಗಳಿಂದಲೂ ಹಲವು ಮಾದರಿಯಲ್ಲಿ ಹೋರಾಟಗಳು ನಡೆದಿದ್ದವು. ಎಲ್ಲ ದಾಖಲೆಗಳ ಸಂಗ್ರಹದ ಮೂಲಕ ಹಾಲಾಡಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳು ಮತ್ತು ಸಿಆರ್‌ಝಡ್ ಅಧಿಕಾರಿಗಳ ಸಭೆ ನಡೆಸಿ ನಿರಾಕ್ಷೇಪಣ ಪತ್ರಕೊಡುವಂತೆ ಮಾಡಿ, ಕಡತವನ್ನು ಬೆಂಗಳೂರಿಗೆ ಒಯ್ದು ಸಚಿವಾಲಯದ ಹಿಂದೆ ಬಿದ್ದರು. ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಸಭೆ ಕರೆದರು. ಹೀಗೆ ನೂರಾರು ಮನೆಯವರಿಗೆ ಹಕ್ಕುಪತ್ರ ದೊರೆಯುವಂತಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ
Udupi: ಕಲ್ಸಂಕ ಜಂಕ್ಷನ್; ಹಗಲು-ರಾತ್ರಿ ಟ್ರಾಫಿಕ್ ಕಿರಿಕಿರಿ
Padubidri: ಪಲಿಮಾರು ಉಪ್ಪು ನೀರು ತಡೆ ಅಣೆಕಟ್ಟು ನಾಲ್ಕೇ ವರ್ಷದಲ್ಲಿ ಜೀರ್ಣಾವಸ್ಥೆಗೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು
World Rapid Chess: ಕಡೆಗೂ ಅರ್ಜುನ್ ಎರಿಗೈಸಿಗೆ ಅಮೆರಿಕ ವೀಸಾ
Women’s ODI: ಹರ್ಲೀನ್ ಶತಕ; ವಿಂಡೀಸ್ ವಿರುದ್ಧ ಭಾರತಕ್ಕೆ 2-0 ಸರಣಿ ಜಯ
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.