ಅಜೆಕಾರು: ದರ್ಬುಜೆ- ದೆಪ್ಪುತ್ತೆ ಸೇತುವೆ ಕಾಮಗಾರಿ ಪ್ರಗತಿಯಲ್ಲಿ
Team Udayavani, Jun 9, 2019, 6:10 AM IST
ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್ ಹಾಗೂ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದರ್ಬುಜೆ ಮತ್ತು ದೆಪ್ಪುತ್ತೆ ಭಾಗವನ್ನು ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು ಪಿಲ್ಲರ್ ಕಾರ್ಯ ಪೂರ್ಣಗೊಂಡಿದೆ.
ದೆಪ್ಪುತ್ತೆ ದರ್ಬುಜೆ ಭಾಗದ ನಾಗರಿಕರು ಹಲವು ದಶಕಗಳಿಂದ ಈ ಸೇತುವೆ ನಿರ್ಮಾಣಕ್ಕಾಗಿ ನಿರಂತರ ಹೋರಾಟ ನಡೆಸಿದ್ದರು. ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನಿರಂತರ ಮನವಿ ಮಾಡುತ್ತಾ ಬಂದಿದ್ದು, ಕಳೆದ ಜನವರಿ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭಗೊಂಡಿತ್ತು.
1 ಕೋಟಿ ರೂ. ಮಂಜೂರು
ಸಿಆರ್‌ಎಫ್ ಫಂಡ್‌ನಿಂದ ಸೇತುವೆಗೆ 1 ಕೋಟಿ ರೂ. ಮಂಜೂರಾಗಿದ್ದು ಸೇತುವೆಯ ಪಿಲ್ಲರ್ ಕಾಮಗಾರಿ ಪೂರ್ಣಗೊಂಡಿದೆ. ಮಳೆಗಾಲದ ಸಮಯದಲ್ಲಿ ಸೇತುವೆಯ ಇತರ ಕಾಮಗಾರಿಗಳನ್ನು ನಡೆಸಲಾಗುತ್ತದೆ ಎಂದು ಗುತ್ತಿಗೆದಾರರು ಹೇಳಿದ್ದಾರೆ.
ಈ ಸೇತುವೆ ನಿರ್ಮಾಣದಿಂದಾಗಿ ದೆಪ್ಪುತ್ತೆ ದರ್ಬುಜೆ ಭಾಗದ ಜನತೆ ಕುಕ್ಕುಜೆ ಪೆರ್ಡೂರು ಹಾಗೂ ಅಜೆಕಾರು ಕಾರ್ಕಳಕ್ಕೆ ಸುತ್ತುಬಳಸಿ ಪ್ರಯಾಣಿಸುವ ಸಂಕಷ್ಟ ತಪ್ಪಲಿದೆ.
ಈ ಮಳೆಗಾಲಕ್ಕೆ ಕಷ್ಟ
ಇನ್ನೂ ಹಲವು ಕಾಮಗಾರಿಗಳು ನಡೆಯ ಬೇಕಿರುವುದರಿಂದ ಈ ಬಾರಿಯ ಮಳೆಗಾಲಕ್ಕೆ ಸೇತುವೆ ಕಾಮಗಾರಿ ಮುಗಿಯುವುದು ಕಷ್ಟವಾಗಿದೆ. ಕಾಮಗಾರಿ ಕಾಮಗಾರಿ ಪೂರ್ಣಗೊಳ್ಳಲು ಒಂದು ವರ್ಷದ ಅವಕಾಶವಿರುವುದರಿಂದ ಮುಂದಿನ ಮಳೆಗಾಲಕ್ಕೆ ಕಾಮಗಾರಿ ಪೂರ್ಣಗೊಂಡು ಸ್ಥಳೀಯರ ಸಂಕಷ್ಟಕ್ಕೆ ಮುಕ್ತಿ ಸಿಗುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.