ಅಮೃತ ನಿರ್ಮಲ ನಗರಕ್ಕೆ 7 ಪೌರಾಡಳಿತ ಸಂಸ್ಥೆ
Team Udayavani, Nov 14, 2021, 7:20 AM IST
ಕುಂದಾಪುರ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ರಾಜ್ಯದ 75 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನು ಸ್ವಚ್ಛ- ಸುಂದರ ವಾಗಿಸಲು “ಅಮೃತ ನಿರ್ಮಲ ನಗರ ಯೋಜನೆ’ ಅನುಷ್ಠಾನಗೊಳ್ಳಲಿದ್ದು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 7 ಸಂಸ್ಥೆಗಳು ಆಯ್ಕೆಯಾಗಿವೆ. ಬೈಂದೂರು, ಬೆಳ್ತಂಗಡಿ ಪ.ಪಂ., ಕುಂದಾಪುರ, ಕಾರ್ಕಳ, ಬಂಟ್ವಾಳ, ಮೂಡುಬಿದಿರೆ ಪುರಸಭೆ, ಪುತ್ತೂರು ನಗರಸಭೆ ತಲಾ 1 ಕೋ.ರೂ. ಅನುದಾನ ಪಡೆಯಲಿವೆ.
ಅನುದಾನದಲ್ಲಿ ನಗರ, ಪಟ್ಟಣವನ್ನು ಸ್ವಚ್ಛ, ಸುಂದರವಾಗಿಸಬೇಕು. ಹಸಿ ಕಸ, ಒಣಕಸ ಸಂಸ್ಕರಣೆಗೆ ಯಂತ್ರ ಖರೀದಿ, ಆವರಣ ಗೋಡೆ, ಬೇಲಿ, ಸಂಪರ್ಕ ರಸ್ತೆ, ಶೌಚಾಲಯ ನಿರ್ಮಾಣ, ಸಕ್ಕಿಂಗ್ ಯಂತ್ರ, ಟ್ಯಾಂಕರ್ ಖರೀದಿ, ಪೌರಕಾರ್ಮಿಕರಿಗೆ ಸಮವಸ್ತ್ರ, ಕಲುಷಿತ ನೀರು ಸಂಸ್ಕರಣೆ, ಮಾಹಿತಿ ಚಟುವಟಿಕೆ, ನಗರ ಹಸುರೀ ಕರಣ, ಸೌಂದರ್ಯ ವೃದ್ಧಿ ಮಾಡಬಹುದು.
ವರ್ಷದ ಗಡುವು:
ಕಾಮಗಾರಿ ಮುಗಿಸಲು ಒಂದು ವರ್ಷದ ಕಾಲಾವಧಿ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳು ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯಿಂದ ಅನುಮೋದನೆ ಪಡೆಯಬೇಕು. ಜಿಲ್ಲಾಮಟ್ಟದ ಸಮಿತಿ
ಯಲ್ಲಿ ಸಚಿವರ ಮೇಲುಸ್ತುವಾರಿಯಲ್ಲಿ, ಡಿ.ಸಿ. ಜತೆಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಕಾರ್ಯಪಾಲಕ ಎಂಜಿನಿಯರ್, ಸ್ಥಳೀಯಾಡಳಿತ ಸಂಸ್ಥೆಯ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿ, ಪರಿಸರ ಎಂಜಿನಿಯರ್ ಇರುತ್ತಾರೆ.
ಪ್ರಗತಿಯಲ್ಲಿ ಕುಂದಾಪುರ ಮುಂದೆ:
ಅನುದಾನ ಬಿಡುಗಡೆಗೊಂಡ 75 ಪೌರಸಂಸ್ಥೆಗಳ ಪೈಕಿ ತ್ಯಾಜ್ಯ ಸಂಸ್ಕರಣ ಪ್ರಗತಿಯಲ್ಲಿ ಕುಂದಾಪುರ ಪುರಸಭೆ ಮುಂಚೂಣಿಯಲ್ಲಿದೆ. ಉಡುಪಿ, ದ.ಕ. ಜಿಲ್ಲೆಗಳಲ್ಲಿ ಕುಂದಾಪುರ ಪುರಸಭೆ 96 ಶೇ., ಕಾರ್ಕಳ ಪುರಸಭೆ 93.9 ಶೇ., ಬೈಂದೂರು ಹೊಸ ಪಟ್ಟಣ ಪಂಚಾಯತ್ ಆದ ಕಾರಣ 0 ಶೇ., ಬಂಟ್ವಾಳ ಪುರಸಭೆ 57.14 ಶೇ., ಬೆಳ್ತಂಗಡಿ ಪ. ಪಂ. 66.67 ಶೇ., ಮೂಡುಬಿದಿರೆ ಪುರಸಭೆ 66.67 ಶೇ., ಪುತ್ತೂರು ನಗರಸಭೆ 57.14 ಶೇ. ಪ್ರಗತಿ ಸಾಧಿಸಿವೆ. ಕೋಲಾರ ನಗರಸಭೆ ಕನಿಷ್ಠ ಅಂದರೆ ಶೇ. 2.48ರಷ್ಟು ಪ್ರಗತಿ ಸಾಧಿಸಿದೆ.
ಕಸದಿಂದ ಗೊಬ್ಬರ:
ಕುಂದಾಪುರದಲ್ಲಿ ಶೇ. 96 ಪ್ರಗತಿ ಆಗುವಲ್ಲಿ ಪುರ ಸಭೆಯ ಪಾಲು ಮಹತ್ವದ್ದಾಗಿದೆ. ಇಲ್ಲಿ ಕಸವನ್ನು ಪ್ರತ್ಯೇಕಿಸಿ ಗೊಬ್ಬರ ಮಾಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಕಸದ ರಾಶಿ ಹೆಚ್ಚಿಸುತ್ತಾ ಕಸ ವಿಲೇಗೆ ಜಾಗದ ಕೊರತೆ ಉಂಟಾಗದಂತಿರಲು ಈ ವ್ಯವಸ್ಥೆ ಅನುಕೂಲವಾಗಿದೆ. ಕಸ ಪ್ರತ್ಯೇಕಿಸಲು ಯಂತ್ರಗಳು, ಕಸ ಪ್ರತ್ಯೇಕಿಸಿ ಮಾರಾಟ, ಕಸಗೊಬ್ಬರ, ಎರೆಗೊಬ್ಬರ, ಜೀವಜಲ ಹೀಗೆ ವೈವಿಧ್ಯಮಯವಾಗಿ ವಿಲೇವಾರಿ ನಡೆಯುತ್ತದೆ.
ರಾಜ್ಯದ 75 ಸಂಸ್ಥೆಗಳು, ಅಧಿಕಾರಿಗಳ ಜತೆ ನ. 11ರಂದು ನಡೆಯಬೇಕಿದ್ದ ಅಮೃತ ನಿರ್ಮಲ ನಗರ ಯೋಜನೆ ಕುರಿತ ಸಭೆ ನೀತಿಸಂಹಿತೆ ಕಾರಣದಿಂದ ಮುಂದೂಡಿಕೆಯಾಗಿದೆ. ಚುನಾ ವಣೆ ಬಳಿಕ ಪ್ರಕ್ರಿಯೆ ಮುಂದುವರಿ ಯಲಿದೆ. ಅನುದಾನ ಬಳಕೆಗೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ.-ಎಂ. ಕೂರ್ಮಾ ರಾವ್ ,ಜಿಲ್ಲಾಧಿಕಾರಿ, ಉಡುಪಿ
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.