Ganesh Chaturthi; ಆನೆಗುಡ್ಡೆ: ಸಂಭ್ರಮದ ಶ್ರೀ ವಿನಾಯಕ ಚತುರ್ಥಿ; ಹರಿದು ಬಂದ ಭಕ್ತ ಸಮೂಹ


Team Udayavani, Sep 7, 2024, 4:48 PM IST

16-kumbashi

ತೆಕ್ಕಟ್ಟೆ: ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿನಾಯಕ ಚತುರ್ಥಿ ಹಾಗೂ ಅಷ್ಟೋತ್ತರ ಸಹಸ್ರ ನಾಲಿಕೇರ ಗಣಯಾಗ ವಿಶೇಷ ಪೂಜೆಯೊಂದಿಗೆ ಸೆ.7ರ ಶನಿವಾರ ಸಂಭ್ರಮದಿಂದ ಜರಗಿತು.

ಶ್ರೀ ದೇವಳವು ಸಂಪೂರ್ಣ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಈ ಸಂದರ್ಭದಲ್ಲಿ ನಂಬಿದ ಸಹಸ್ರಾರು ಭಕ್ತರು ಶ್ರೀ ಸನ್ನಿಧಿಯಲ್ಲಿ ನೆರೆದಿದ್ದರು.

ಹರಿದು ಬಂದ ಭಕ್ತ ಸಮೂಹ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿನಾಯಕ ಚತುರ್ಥಿಯಂದು ಸಹಸ್ರಾರು ಭಕ್ತರು  ಮುಂಜಾನೆಯಿಂದಲೂ ಶ್ರೀ ದೇವರ ದರ್ಶನ ಪಡೆದು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.

ಈ ಬಾರಿ ಸಂಭ್ರಮದ ಶ್ರೀ ವಿನಾಯಕ ಚತುರ್ಥಿಗೆ ರಾಜ್ಯದ ಮೂಲೆ ಮೂಲೆಗಳಿಂದಲೂ ಸುಮಾರು 5೦ ಸಾವಿರಕ್ಕೂ ಅಧಿಕ ಮಂದಿ ಭಕ್ತರು ಶ್ರೀಸನ್ನಿಧಿಗೆ ಆಗಮಿಸಿ ದೇವರ ದರ್ಶನ ಪಡೆದಿದ್ದು, ಸುಮಾರು 9 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ ಎಂದು ದೇವಳದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ತಿಳಿಸಿದ್ದಾರೆ.

ಸುಸಜ್ಜಿತವಾದ ವಾಹನ ಪಾರ್ಕಿಂಗ್ ವ್ಯವಸ್ಥೆ : ಪೊಲೀಸ್ ಇಂಟೆಲಿಜೆನ್ಸ್ ವಿಭಾಗದ ಸೂಚನೆಯ ಮೇರೆಗೆ ದೇವಸ್ಥಾನದ ಅತಿ ಸಮೀಪಕ್ಕೆ ಯಾವ ವಾಹನಗಳಿಗೂ ಅವಕಾಶ ನೀಡದೇ, ವಾಹನಗಳ ನಿಲುಗಡೆಗಾಗಿಯೇ ದೇವಳದ ಉತ್ತರ ದಿಕ್ಕಿನಲ್ಲಿ ಸುಸಜ್ಜಿತವಾದ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಭಕ್ತರಿಗೆ ವಿವಿಧ ಬಗೆಯ ಪ್ರಸಾದ ವಿತರಣೆ: ಪರ್ಯಾಯ ಅರ್ಚಕರು ಶ್ರೀದೇವರಿಗೆ 21 ಬಗೆಯ ಖಾದ್ಯಗಳನ್ನು ಸಮರ್ಪಿಸುವುದರಿಂದ ಭಕ್ತರಿಗೆ ಬೆಳಗ್ಗೆಯಿಂದ ಸಂಜೆ ತನಕ ವಿವಿಧ ಪ್ರಸಾದಗಳನ್ನು ವಿತರಿಸಲಾಗುವುದು.

ವಿಶೇಷ ಭದ್ರತೆ : ಶ್ರೀ ವಿನಾಯಕ ಚತುರ್ಥಿಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದೇವಳದಲ್ಲಿ ವಿಶೇಷವಾಗಿ ಸಿಸಿ ಕೆಮರಾಗಳ ಕಣ್ಗಾವಲಿರಿಸಿದ್ದು, ವಿಶೇಷ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಈ ಸಂದಭದಲ್ಲಿ ಕುಂಭಾಶಿ ಆನೆಗುಡ್ಡೆ ಶ್ರೀ  ವಿನಾಯಕ ದೇವಸ್ಥಾನದ ಆಡಳಿತ ‘ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ, ಹಿರಿಯ ವಿಶ್ರಾಂತ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಧರ್ಮದರ್ಶಿ ಕೆ.ನಿರಂಜನ ಉಪಾಧ್ಯಾಯ, ಕೆ.ಪದ್ಮನಾಭ ಉಪಾಧ್ಯಾಯ ಹಾಗೂ ಪರ್ಯಾಯ ಅರ್ಚಕ ಕೆ.ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು, ದೇಗುಲದ ವ್ಯವಸ್ಥಾಪಕ ನಟೇಶ್ ಕಾರಂತ್ ತೆಕ್ಕಟ್ಟೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Chmber-Meeting

Film Industry: ಕನ್ನಡ ಚಿತ್ರರಂಗದ ನಟಿಯರ ರಕ್ಷಣೆಗೆ ಪಾಶ್‌ ಸಮಿತಿ: ನಾಗಲಕ್ಷ್ಮಿ ಚೌಧರಿ

ಬಿಜೆಪಿಯದ್ದು ಜಗಳ ಹಚ್ಚುವ ಪಾಲಿಟಿಕ್ಸ್‌: ಡಾ|ಶರಣಪ್ರಕಾಶ

ಬಿಜೆಪಿಯದ್ದು ಜಗಳ ಹಚ್ಚುವ ಪಾಲಿಟಿಕ್ಸ್‌: ಡಾ|ಶರಣಪ್ರಕಾಶ

1-wqeqwewqe

J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!

Train ಬೆಳಗಾವಿಗೆ ಶೀಘ್ರ ಮತ್ತೊಂದು ರೈಲು: ಸೋಮಣ್ಣ

Train ಬೆಳಗಾವಿಗೆ ಶೀಘ್ರ ಮತ್ತೊಂದು ರೈಲು: ಸೋಮಣ್ಣ

Nagamangala ಗಲಭೆಗೆ ಪಿಎಫ್ಐ,ಎಸ್‌ಡಿಪಿಐ ಕುಮ್ಮಕ್ಕು: ಈಶ್ವರಪ್ಪ

Nagamangala ಗಲಭೆಗೆ ಪಿಎಫ್ಐ,ಎಸ್‌ಡಿಪಿಐ ಕುಮ್ಮಕ್ಕು: ಈಶ್ವರಪ್ಪ

1-modi-BG

Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Gangolli: Disgusted person commits suicide

Gangolli: ಜುಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ

Malpe: ತಡರಾತ್ರಿಯವರೆಗೆ ಧ್ವನಿವರ್ಧಕ ಬಳಕೆ : ಪ್ರಕರಣ ದಾಖಲು

Malpe: ತಡರಾತ್ರಿಯವರೆಗೆ ಧ್ವನಿವರ್ಧಕ ಬಳಕೆ : ಪ್ರಕರಣ ದಾಖಲು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 6ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 6ನೇ ರೀಲ್ಸ್ ಪ್ರಸಾರ

Udupi: ‘ಕಲ್ಜಿಗ’ ಸಿನೆಮಾ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಒತ್ತಾಯ

Udupi: ‘ಕಲ್ಜಿಗ’ ಸಿನೆಮಾದಲ್ಲಿ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಒತ್ತಾಯ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Yelandur ಆಟೋಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರಿಗೆ ತೀವ್ರ ಗಾಯ

Chmber-Meeting

Film Industry: ಕನ್ನಡ ಚಿತ್ರರಂಗದ ನಟಿಯರ ರಕ್ಷಣೆಗೆ ಪಾಶ್‌ ಸಮಿತಿ: ನಾಗಲಕ್ಷ್ಮಿ ಚೌಧರಿ

Chalavadi Narayanaswamy ಡ್ರಾಮಾ ಬೇಡ: ಪ್ರಿಯಾಂಕ್‌ ಖರ್ಗೆ

Chalavadi Narayanaswamy ಡ್ರಾಮಾ ಬೇಡ: ಪ್ರಿಯಾಂಕ್‌ ಖರ್ಗೆ

Thirthahalli: ಡಿಜೆ ಶಬ್ದಕ್ಕೆ ವೃದ್ಧ ದುರ್ಮರಣ

Thirthahalli: ಡಿಜೆ ಶಬ್ದಕ್ಕೆ ವೃದ್ಧ ದುರ್ಮರಣ

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.