ಆನೆಗುಡ್ಡೆ: ರಾಜ್ಯ ಮಟ್ಟದ ಕುಣಿತ ಭಜನ ಸ್ಪರ್ಧೆ ಫಲಿತಾಂಶ
Team Udayavani, Dec 5, 2023, 6:03 PM IST
ತೆಕ್ಕಟ್ಟೆ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಇವರ ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ ಕುಣಿತ ಭಜನ ಸ್ಪರ್ಧೆ, ಭಕ್ತಿಗಾನ ನೃತ್ಯ ಜೋಡಿ ಭಜನ ಸ್ಪರ್ಧೆ ಡಿ. 3ರಂದು ಸಂಪನ್ನಗೊಂಡಿತು.
ಪ್ರಥಮ ಸ್ಥಾನ ಪಡೆದ ಮಾಮೋಡಿ ಮಾಣಿ ಸಿದ್ದಲಿಂಗೇಶ್ವರ ಭಜನ ತಂಡಕ್ಕೆ ಮಣೂರು ಗೀತಾನಂದ ಫೌಂಡೇಶನ್ ಇದರ ಪ್ರವರ್ತಕ ಉದ್ಯಮಿ ಆನಂದ ಸಿ.ಕುಂದರ್ ಪ್ರಶಸ್ತಿ ಪ್ರದಾನ ಮಾಡಿದರು.
ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ದೈಲಬೆಟ್ಟು, ಕಲ್ಲಮುಂಡ್ಕೂರು ದ್ವಿತೀಯ, ಶ್ರೀ ಪ್ರಸನ್ನ ಗಣಪತಿ ಭಜನ ಮಂಡಳಿ
ಮೂಡ್ಲಕಟ್ಟೆ ತೃತೀಯ , ಶ್ರೀರಾಮ ಭಜನ ಮಂಡಳಿ ಮುದ್ದೂರು ನಾಲ್ಕೂರು ನಾಲ್ಕನೇ, ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿ ಭಟ್ಕಳ ಐದನೇ ಸ್ಥಾನ ಹಾಗೂ ಶ್ರೀ ನಾಗಬ್ರಹ್ಮಲಿಂಗೇಶ್ವರ ಮಕ್ಕಳ ಕುಣಿತ ಭಜನ ಮಂಡಳಿ ಚಿತ್ತೇರಿ ಬೆನಗಲ್ ಆರನೇ ಸ್ಥಾನ ಗಳಿಸಿತು.
ತೀರ್ಪುಗಾರರಾದ ಜಯಕರ ಪೂಜಾರಿ, ರವಿಶಂಕರ್ ಹೆಬ್ಬಾರ್, ನರೇಶ್ ಸಸಿಹಿತ್ಲು, ಕೃಷ್ಣ ಪೂಜಾರಿ, ಚಂದ್ರಶೇಖರ್ ಎರ್ಮಾಳ್,
ಶ್ರೇಯಾ ಖಾರ್ವಿ, ವೇಣುಗೋಪಾಲ್ ಭಟ್ ಕೋಟೇಶ್ವರ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಸಮ್ಮಾನಿಸಲಾಯಿತು.
ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು.
ದೇಗುಲದ ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ರಾಜ್ಯಮಟ್ಟದ ಕುಣಿತ ಭಜನ ಸ್ಪರ್ಧೆಯ ಸಮಿತಿಯ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉದ್ಯಮಿ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ, ಕೋಟೇಶ್ವರ ಶ್ರೀರಾಮ ಕಲಾ ಸಂಘದ ಅಧ್ಯಕ್ಷ ಸೀತಾರಾಮ ಧನ್ಯ ಗೋಪಾಡಿ, ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದ ಜಯಾನಂದ ಖಾರ್ವಿ ಕುಂದಾಪುರ, ಬಾಬಣ್ಣ ಪೂಜಾರಿ, ಸಂಯೋಜಕ ರಾಘವೇಂದ್ರ ಶೆಟ್ಟಿಗಾರ್, ದೇಗುಲದ
ವ್ಯವಸ್ಥಾಪಕ ನಟೇಶ್ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯಮಟ್ಟದ ಈ ಸ್ಫರ್ಧೆಯಲ್ಲಿ ಸುಮಾರು 48 ಭಜನ
ತಂಡಗಳು ಭಾಗವಹಿಸಿದೆ. ಸುಜಾತಾ ನಾಗೇಶ್ ಕುಂದರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
High Court: ಮತದಾರರಿಗೆ ಅನುದಾನ ಆಮಿಷ; ನಡ್ಡಾ ವಿರುದ್ಧದ ಪ್ರಕರಣ ರದ್ದು
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.