![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Nov 18, 2023, 8:47 PM IST
ಗಂಗೊಳ್ಳಿ: ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೊಹಮ್ಮದ್ ಅಶ³ಕ್ ಹಾಗೂ ಕೋಡಿ ಪಿರೋಜ್ ಅವರನ್ನು ಆಹಾರ ನಿರೀಕ್ಷಕ ಸುರೇಶ್ ಎಚ್. ಎಸ್. ಅವರ ತಂಡ ಕಾರ್ಯಾಚರಣೆ ನಡೆಸಿ ಹೊಸಾಡು ಗುಹೇಶ್ವರ ದೇಗುಲ ರಸ್ತೆ ಬಳಿ ಅಡ್ಡಗಟ್ಟಿ, ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಈ ವೇಳೆ ಆಮ್ನಿ ಕಾರಿನಲ್ಲಿ 18 ಚೀಲಗಳಲ್ಲಿ ತುಂಬಿದ್ದ 18,700 ರೂ. ಮೌಲ್ಯದ 550 ಕೆ.ಜಿ. ಅಕ್ಕಿ ಸಿಕ್ಕಿದ್ದು, ಅದನ್ನು ಹಾಗೂ ಸಾಗಾಟದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ಈ ಅನ್ನಭಾಗ್ಯ ಅಕ್ಕಿಯನ್ನು ಯಾರಿಂದಲೋ ಖರೀದಿಸಿ, ಹೆಚ್ಚಿನ ಬೆಲೆಗೆ ಅಂಗಡಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಮೊಹಮ್ಮದ್ ಅಶ್ಪಕ್ ಹಾಗೂ ಕೋಡಿ ಪಿರೋಜ್ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.