ಕುಂದಾಪುರಕ್ಕೆ ಮತ್ತೊಂದು ಪೊಲೀಸ್‌ ವೃತ್ತ ಠಾಣೆ

Team Udayavani, Dec 17, 2022, 11:56 AM IST

tdy-7

ಕುಂದಾಪುರ: ಇಲ್ಲಿನ ಉಪ ವಿಭಾಗದಲ್ಲಿ ಒಂದಿದ್ದ ಸರ್ಕಲ್‌ ಇನ್ಸ್‌ಪೆಕ್ಟರ್‌  ಕಚೇರಿ ಕುಂದಾಪುರ ನಗರ, ಗ್ರಾಮಾಂತರ ಎಂಬ ಎರಡು ವೃತ್ತ ಠಾಣೆಗಳಾಗಲಿವೆ. ಈ ಮೂಲಕ ಕುಂದಾಪುರ ಉಪವಿಭಾಗಕ್ಕೆ ಬೈಂದೂರು, ಕುಂದಾಪುರ ನಗರ, ಕುಂದಾಪುರ ಗ್ರಾಮಾಂತರ ಎಂಬ ಮೂವರು ಸರ್ಕಲ್‌ ಇನ್ಸ್‌ಪೆಕ್ಟರ್‌ ಕಚೇರಿಗಳು ಇರಲಿವೆ.

ಆದೇಶ :

ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ಎಸಿಬಿ) ರದ್ದಾದ ಕಾರಣ ಅದರಲ್ಲಿದ್ದ ಹುದ್ದೆಗಳನ್ನು ಬಳಸಿಕೊಂಡು ಹೊಸದಾಗಿ ಪೊಲೀಸ್‌ ಉಪವಿಭಾಗ, ಹೊಸ ವೃತ್ತ ಠಾಣೆಗಳನ್ನು  ರಚಿಸಿ ಸರಕಾರ ಆದೇಶ ಮಾಡಿದೆ. ಅದರಂತೆ 40 ಪೊಲೀಸ್‌ ಠಾಣೆಗಳು ವೃತ್ತನಿರೀಕ್ಷಕರ ಠಾಣೆಗಳಾಗಿ ಪರಿವರ್ತಿಸಲು ಅನುಮೋದನೆ ನೀಡಲಾಗಿದೆ.  ಕಾರ್ಕಳ ನಗರ, ಕುಂದಾಪುರ

ನಗರ ಠಾಣೆ ಮೇಲ್ದರ್ಜೆಗೆ ಏರಲಿವೆ. ಇನ್ನು ಮುಂದೆ ಹೊಸ ಆದೇಶದಂತೆ ಕುಂದಾಪುರ ವೃತ್ತ ನಿರೀಕ್ಷರ ಕಚೇರಿ ಕುಂದಾಪುರ ನಗರ ಠಾಣೆ, ಸಂಚಾರ ಠಾಣೆಗೆ ಮೀಸಲಾಗಲಿವೆ.

ಅಧೀನ:

ಸಂಚಾರ ಠಾಣೆ ನಗರ ಠಾಣೆಯ ಅಧೀನಕ್ಕೆ ತರಲಾಗಿದೆ. ಈವರೆಗೆ ಕುಂದಾಪುರ ವೃತ್ತದಲ್ಲಿದ್ದ ಕುಂದಾಪುರ ಗ್ರಾಮಾಂತರ ಕಂಡ್ಲೂರು,  ಶಂಕರನಾರಾಯಣ,

ಅಮಾಸೆಬೈಲು ಠಾಣೆಗಳ ವ್ಯಾಪ್ತಿಗೆ ಗ್ರಾಮಾಂತರ ವೃತ್ತ ಪ್ರತ್ಯೇಕಗೊಂಡಿವೆ. ನಗರ ಠಾಣೆಯ ಕಾನೂನು ಸುವ್ಯವಸ್ಥೆ ಎಸ್‌ಐ, ಕ್ರೈಂ ಎಸ್‌ಐ, ಸಂಚಾರ ಠಾಣೆ ಎಸ್‌ಐಗಳು ನಗರ ಇನ್ಸ್‌ಪೆಕ್ಟರ್‌ ವ್ಯಾಪ್ತಿಗೆ, ಕಂಡ್ಲೂರು, ಶಂಕರನಾರಾಯಣ, ಅಮಾಸೆಬೈಲು  ಎಸ್‌ಐಗಳು ಗ್ರಾಮಾಂತರ ಸರ್ಕಲ್‌  ಇನ್ಸ್‌ಪೆಕ್ಟರ್‌ ಅಧೀನದಲ್ಲಿ ಇರಲಿದ್ದಾರೆ.

ಗ್ರಾಮಗಳು:

ಶಂಕರನಾರಾಯಣದಲ್ಲಿ 1937 ಇಸವಿಗೂ ಮೊದಲು ಬ್ರಿಟಿಷರು ಠಾಣೆ  ಮಂಜೂರು ಮಾಡಿದ್ದು, ನಕ್ಸಲ್‌ ಸಮಸ್ಯೆ ಅತಿಯಾದಾಗ ಸರಕಾರ 2011ರಲ್ಲಿ ನಕ್ಸಲ್‌  ಸಮಸ್ಯೆ ನಿಗ್ರಹಕ್ಕಾಗಿಯೇ ಶಂಕರನಾರಾಯಣದಿಂದ ಆರು ಗ್ರಾಮಗಳನ್ನು ಬೇರ್ಪಡಿಸಿ ನೂತನ ಅಮಾಸೆಬೈಲು ಠಾಣೆ ಮಂಜೂರು ಮಾಡಿದೆ. ಅಮಾಸೆಬೈಲು ಠಾಣೆಗೆ ಆರು ಗ್ರಾಮ, ಶಂಕರನಾರಾಯಣ ಠಾಣೆಗೆ ಹದಿನೇಳು ಗ್ರಾಮ, ಕಂಡ್ಲೂರು ಠಾಣೆಗೆ ಹದಿನೈದು ಗ್ರಾಮಗಳ ವ್ಯಾಪ್ತಿಯಿದೆ.

ಸರ್ಕಲ್‌ ಕಚೇರಿ:

ಅಂದು ಬ್ರಿಟಿಷರು ಶಂಕರನಾರಾಯಣ ಠಾಣೆಗೆ ಎರಡು ಎಕ್ರೆಗೂ ಮಿಕ್ಕಿ ಜಾಗ ಮಂಜೂರುಗೊಳಿಸಿದ್ದರು. ಹೊಸ ಠಾಣೆಯ ಮೇಲ್ಗಡೆ ನಕ್ಸಲ್‌ ಠಾಣೆ ಇದ್ದು ಅವರು ಸಂಪೂರ್ಣ ಹೆಬ್ರಿಯಲ್ಲಿ ಕ್ಯಾಂಪ್‌ ಹೂಡಿದ್ದಾರೆ. ಹಿಂದಿನ ಠಾಣೆಯ ಓಪಿ ಕ್ವಾರ್ಟರ್ಸ್‌ ಖಾಲಿ ಇದೆ. ಅಲ್ಲಿ ಕೂಡ  ಕಚೇರಿ ತೆರೆಯಲು  ಅವಕಾಶ ಇದೆ. ಶಂಕರನಾರಾಯಣ ಪೇಟೆಯಲ್ಲಿ ಹಳೆ ಸರಕಾರಿ ಆಸ್ಪತ್ರೆ ಕಟ್ಟಡ  ಕೂಡಾ ಖಾಲಿ ಇದ್ದು ಇಲ್ಲಿಯೂ ವೃತ್ತ ನಿರೀಕ್ಷಕರ ಕಚೇರಿ ತೆರೆಯಬಹುದು. ಸದ್ಯದ ಮಾಹಿತಿ ಪ್ರಕಾರ ಈಗ ಇರುವ ಠಾಣೆಯ ಮೇಲ್ಭಾಗದಲ್ಲಿಯೇ ಸರ್ಕಲ್‌ ಕಚೇರಿ ಕಾರ್ಯನಿರ್ವಹಿಸಲಿದೆ.

ಶಂಕರನಾರಾಯಣದಲ್ಲಿ  ಕಚೇರಿ :

ನಗರ ವೃತ್ತ ನಿರೀಕ್ಷಕರ ಕಚೇರಿ ಕುಂದಾಪುರದಲ್ಲಿ ಇರಲಿದ್ದು ಗ್ರಾಮಾಂತರ ಠಾಣೆ ಶಂಕರನಾರಾಯಣದ ಈಗಿನ ಠಾಣೆಯಲ್ಲಿ ನಿರ್ವಹಿಸಲಿದೆ. ಇದಕ್ಕೆ ಬೇಕಾದ ಪತ್ರ ವ್ಯವಹಾರಗಳು ನಡೆದಿದ್ದು ಸರಕಾರಿ ಆದೇಶವೂ ಆಗಿದೆ. ಗಜೆಟ್‌ ನೋಟಿಫಿಕೇಶನ್‌ ಮಾತ್ರ ಬಾಕಿ ಇದೆ. ಗ್ರಾಮಾಂತರದ ಮೂರು ಠಾಣಾ ವ್ಯಾಪ್ತಿಯ ಮಧ್ಯದಲ್ಲಿರುವ ಶಂಕರನಾರಾಯಣ ಠಾಣೆ ವೃತ್ತ ನಿರೀಕ್ಷಕರ ಕಚೇರಿಗೆ ಸೂಕ್ತ ಸ್ಥಳ ಎಂದು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಡುಪಿ ಉಸ್ತುವಾರಿಯಾಗಿದ್ದಾಗ ಮನವಿ ನೀಡಲಾಗಿತ್ತು. ಡಿವೈಎಸ್‌ಪಿ ಕಚೇರಿಯಿಂದಲೂ ಈ ಕುರಿತು ಆಡಳಿತಾತ್ಮಕ ಪತ್ರ ವ್ಯವಹಾರ ನಡೆದಿದೆ.

ಅಮಾಸೆಬೈಲು, ಶಂಕರನಾರಾಯಣ, ಕಂಡ್ಲೂರು ಮೂರು ಠಾಣೆ ಸೇರಿಸಿ ಶಂಕರನಾರಾಯಣದಲ್ಲಿ ವೃತ್ತ ನಿರೀಕ್ಷಕರ ಕಚೇರಿ  ತೆರೆಯಬೇಕೆಂದು ಶಂಕರ ನಾರಾಯಣ ತಾ| ಹೋರಾಟ ಸಮಿತಿ ಹಲವು ವರ್ಷಗಳಿಂದ ಸರಕಾರ ಹಾಗೂ ಪೊಲೀಸ್‌ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರಿಗೆ ಆಗ್ರಹಿಸುತ್ತಲೇ ಬಂದಿದೆ. ಸಿಎಂ ಬಸವರಾಜ್‌ ಬೊಮ್ಮಾಯಿಯವರೂ ಸ್ಪಂದಿಸಿದ್ದರು.-ಚಿಟ್ಟೆ ರಾಜಗೋಪಾಲ ಹೆಗ್ಡೆ , ಸಂಚಾಲಕ, ಶಂಕರನಾರಾಯಣ ತಾ| ರ.ಹೋ.ಸಮಿತಿ

ಸದ್ಯದ ಪ್ರಸ್ತಾವನೆಯಂತೆ ಹೊಸ ಗ್ರಾಮಾಂತರ ಠಾಣೆ ಶಂಕರನಾರಾಯಣ ಠಾಣೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ಈ ಬಗ್ಗೆ ಗಜೆಟ್‌ ನೋಟಿಫಿಕೇಶನ್‌ ಮಾತ್ರ ಬಾಕಿ ಇದೆ. ನಗರ ಹಾಗೂ  ಗ್ರಾಮಾಂತರ ಎಂಬ ಎರಡು ಸರ್ಕಲ್‌ ಕಚೇರಿಗಳು ಕಾರ್ಯನಿರ್ವಹಿಸಲಿವೆ.  ಕೆ. ಶ್ರೀಕಾಂತ್‌, ಡಿವೈಎಸ್‌ಪಿ, ಕುಂದಾಪುರ ಉಪವಿಭಾಗ

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

2

Kundapura: ಒಂದು ಕರೆಗಾಗಿ 3-4 ಕಿ.ಮೀ. ನಡೆಯಬೇಕು!

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

de

Kundapura: ಮಲಗಿದ್ದಲ್ಲಿಯೇ ವ್ಯಕ್ತಿ ಸಾವು

Brahmavar

Kumbhashi: ಅಪಘಾತದ ಗಾಯಾಳು ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.