ಕ್ವಾರಂಟೈನ್ ಕೇಂದ್ರಕ್ಕೊಬ್ಬ ನೋಡಲ್ ಅಧಿಕಾರಿ ನೇಮಿಸಿ: ಕೋಟ
Team Udayavani, May 20, 2020, 1:27 PM IST
ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ ಕುರಿತು ಸಭೆ ನಡೆಯಿತು.
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲ 4 ಸಾವಿರದಷ್ಟು ಮಂದಿ ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದು ಪ್ರತಿ ಕ್ವಾರಂಟೈನ್ ಕೇಂದ್ರ ಕ್ಕೊಬ್ಬರಂತೆ ನೋಡೆಲ್ ಅಧಿಕಾರಿಯನ್ನು ನೇಮಿಸಬೇಕು. ಅಲ್ಲಿನ ಉಸ್ತುವಾರಿ ಅವರೇ ನೋಡಿಕೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಮಂಗಳವಾರ ಅಪರಾಹ್ನ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ ಕುರಿತು ಸಭೆ ನಡೆಸಿ, ವಿಎ, ಗ್ರಾಮಸಹಾಯಕ, ಪಿಡಿಒ ಅವರನ್ನು ನೇಮಿಸಬೇಕು. ಹೆಚ್ಚುವರಿ ಅಧಿಕಾರಿಗಳು ಬೇಕಾದರೆ ಬೇರೆಡೆಯಿಂದ ತರಿಸಬೇಕು ಎಂದರು.
ಕ್ವಾರಂಟೈನ್ ಕೇಂದ್ರದಲ್ಲಿ ಇರುವ ಗರ್ಭಿಣಿಯರು, ಹಿರಿಯ ನಾಗರಿಕರು, ಮಕ್ಕಳ ಸ್ವಾಬ್ ಟೆಸ್ಟ್ ಮಾಡಿ ನೆಗೆಟಿವ್ ಬಂದ ಕೂಡಲೇ ಹೋಂ ಕ್ವಾರಂಟೈನ್‌ಗೆ ಒಳಪಡಿಸಿ ಎಂದರು. ಕ್ವಾರಂಟೈನ್ ಕೇಂದ್ರದಲ್ಲಿ ಇರುವ ಮಕ್ಕಳಿಗೆ ಸ್ಥಳೀಯ ಅಂಗನವಾಡಿಯವರು ಹಾಲು ಖರೀದಿಸಿ ಬಿಸಿ ಮಾಡಿ ನೀಡಬೇಕು. ಇದರ ವೆಚ್ಚ ಜಿಲ್ಲಾಡಳಿತ ನೀಡಲಿದೆ. ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ತುರ್ತು ಆವಶ್ಯಕ ಸಾಮಾಗ್ರಿ ನೀಡಿದರೆ ಅದರ ಬಿಲ್ ಕೂಡಾ ಸರಕಾರವೇ ಭರಿಸಲಿದೆ. ಕ್ವಾರಂಟೈನ್ ಕೇಂದ್ರಗಳ ಕಸ ವಿಲೇವಾರಿಯನ್ನು ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆ ಮಾಡುವ ನಿಗದಿತ ಸಂಸ್ಥೆ ಮಾಡಬೇಕಿದ್ದು ಪುರಸಭೆ ವ್ಯಾಪ್ತಿಯಲ್ಲಿ ಆಗುತ್ತಿದೆ. ಇತರೆಡೆ ಪಿಡಿಒಗಳು ತತ್‌ಕ್ಷಣ ಕ್ರಮ ಜರಗಿಸಬೇಕು ಎಂದರು. ಮುಖ್ಯಮಂತ್ರಿಗಳ ಸೂಚನೆಯಂತೆ ತಾತ್ಕಾಲಿಕವಾಗಿ ಸೇವಾ ಸಿಂಧು ಆ್ಯಪ್ ಬಂದ್ ಆಗಿರುವುದರಿಂದ ಅಕ್ರಮವಾಗಿ ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾ ವಹಿಸಲಾಗುವುದು ಎಂದರು.
ಕೆಎಸ್‌ಆರ್‌ಟಿಸಿ ವತಿಯಿಂದ ಬೆಂಗಳೂರಿಗೆ 8, ಹುಬ್ಬಳ್ಳಿಗೆ 1 ಬಸ್, ಬೈಂದೂರು, ಸಿದ್ದಾಪುರ ಮೊದಲಾದ 5 ಮಾರ್ಗಗಳಿಗೆ ಬಸ್ ಬಿಡಲಾಗಿದೆ. ರಾಜ್ಯದ ಇತರ ಊರುಗಳಿಗೆ ಬೇಡಿಕೆ ಬಂದಿಲ್ಲ. ಬೇಡಿಕೆ ಬಂದಂತೆ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ ಎಂದು ಡಿಪೋ ಮೆನೇಜರ್ ರಾಜೇಶ್ ತಿಳಿಸಿದರು. ಖಾಸಗಿ ಬಸ್ ಇಲ್ಲದ ವೇಳೆ ಕೆಎಸ್‌ಆರ್‌ಟಿಸಿ ಸೇವೆ ನೀಡಿದರೆ ಜನರ ಬಳಿಗೆ ತಲುಪಬಹುದು ಎಂದು ಸಚಿವರು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ, ಎರಡು ತಾಲೂಕಿನ ಕ್ವಾರಂಟೈನ್ ಕೇಂದ್ರಗಳಲ್ಲಿ ಒಟ್ಟು 60 ಗರ್ಭಿಣಿಯರಿದ್ದು 40 ಜನರ ಪರೀಕ್ಷೆ ಆಗಿದೆ. 447 ಮಕ್ಕಳಿದ್ದಾರೆ. ಕುಂದಾಪುರ ತಾಲೂಕಿನ 44 ಕೇಂದ್ರಗಳಲ್ಲಿ 1,740 ಜನ, ಬೈಂದೂರು ತಾಲೂಕಿನ 27 ಕೇಂದ್ರಗಳಲ್ಲಿ 2,247 ಜನರಿದ್ದಾರೆ. ಈ ಪೈಕಿ 487 ಜನರ ಗಂಟಲದ್ರವ ಮಾದರಿ ಕಳುಹಿಸಲಾಗಿದೆ. ವರದಿ ಬಂದಿಲ್ಲ. 16 ಲ್ಯಾಬ್ ಟೆಕ್ನಿಶಿಯನ್ ಇದ್ದಾರೆ. ಒಬ್ಬರ ತಪಾಸಣೆಗೆ 12 ನಿಮಿಷ ಬೇಕಾಗುತ್ತದೆ. ಕಿಯೋಸ್ಕ್ಗಳ ಕೊರತೆಯಿದೆ. 1 ದಿನದಲ್ಲಿ 150 ಮಂದಿಯ ಮಾದರಿ ಸಂಗ್ರಹಿಸಬಹುದು ಎಂದು ವಿವರಿಸಿದರು.
ಬೈಂದೂರು ಆಸ್ಪತ್ರೆ ವೈದ್ಯಾಧಿಕಾರಿ ಡಾ| ಪ್ರೇಮಾನಂದ್, ಮೂರು ಜಿಲ್ಲೆಗೆ ಒಂದೇ ಪ್ರಯೋಗಾಲಯ ಇದ್ದ ಕಾರಣ ವರದಿ ವಿಳಂಬವಾಗುತ್ತಿತ್ತು. ಪ್ರಯೋಗಾಲಯದಲ್ಲಿ ದಿನವೊಂದಕ್ಕೆ 250 ವರದಿ ಸಿದ್ಧವಾಗುತ್ತದೆ. ಉಡುಪಿ ಜಿಲ್ಲೆಯ 60ರಷ್ಟು ವರದಿ ಬರುತ್ತದೆ. ಈವರೆಗೆ 1,918 ವರದಿ ಬಂದಿದ್ದು 542 ಫಲಿತಾಂಶ ವರದಿ ಬಾಕಿ ಇದೆ ಎಂದರು.
ಬಿಸಿಎಂ ಹಾಸ್ಟೆಲ್‌ನ 54 ಸಿಬಂದಿಯನ್ನು ಕ್ವಾರಂಟೈನ್ ಸೇವೆಗೆ ಬಳಸಬಹುದು ಎಂದು ಬಿಸಿಎಂ ಅಧಿಕಾರಿ ಮಾದಾರ್ ಹೇಳಿದರು.
ಎಎಸ್‌ಪಿ ಹರಿರಾಮ್ ಶಂಕರ್, ಪ್ರತಿದಿನ ಕ್ವಾರಂಟೈನ್ ಕೇಂದ್ರದಲ್ಲಿ ದಿಢೀರ್ ಹಾಜರಿ ಕರೆಯಲಾಗುವುದು. ಹೊರಗೆ ಹೋದವರ ಮೇಲೆ, ಅವರನ್ನು ಬಂದು ಸಂಪರ್ಕಿಸುವವರ ಮೇಲೆ, ಕೇಂದ್ರದಲ್ಲಿ ಅನಧಿಕೃತ ವ್ಯಕ್ತಿಗಳಿದ್ದರೆ ಅವರ ಮೇಲೆ ಕೇಸು ದಾಖಲಿಸಲಾಗುವುದು ಎಂದರು.
ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಜಿ. ಪಂ. ಸದಸ್ಯರಾದ ಬಾಬು ಹೆಗ್ಡೆ ತಗ್ಗರ್ಸೆ, ಗೌರಿ ದೇವಾಡಿಗ, ತಾ. ಪಂ.ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಸದಸ್ಯರಾದ ಪ್ರವೀಣ್‌ಕುಮಾರ ಶೆಟ್ಟಿ ಕಡೆR, ಕರಣ್ ಪೂಜಾರಿ, ಕಾರ್ಯ ನಿರ್ವಹಣಾಧಿಕಾರಿಗಳಾದ ಕೇಶವ್ ಶೆಟ್ಟಿಗಾರ್, ಭಾರತಿ, ತಹಶೀಲ್ದಾರ್‌ಗಳಾದ ತಿಪ್ಪೇಸ್ವಾಮಿ, ಬಿ.ಪಿ.ಪೂಜಾರ್, ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಗೋಪಿಕೃಷ್ಣ, ಸುರೇಶ್ ನಾಯಕ್, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.