ಕುಂದಾಪುರ: ಮನೆ ಅನುದಾನಕ್ಕೆ ಜಿಪಿಎಸ್‌ ವಿಘ್ನ!

ಹೆಸರು ಹೊಂದಿಕೆಯಾಗದೆ 300ರಷ್ಟು ಮಂದಿಗೆ ಅನುದಾನ ಬಂದಿಲ್ಲ

Team Udayavani, Dec 9, 2020, 7:59 AM IST

ಕುಂದಾಪುರ: ಮನೆ ಅನುದಾನಕ್ಕೆ ಜಿಪಿಎಸ್‌ ವಿಘ್ನ!

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ನಿರ್ಮಾಣವಾದ ಮನೆಗಳ ಅನುದಾನ ವಿತರಣೆಗೆ ಜಿಪಿಎಸ್‌ ಅಡ್ಡಿಯಾಗಿದೆ.

ಅಡ್ಡಿ
ಮಾರ್ಚ್‌ ತಿಂಗಳಿನಿಂದ ಬಿಡುಗಡೆಗೆ ಬಾಕಿಯಿದ್ದ ಕೇಂದ್ರದ ಅನುದಾನ ಕಳೆದ ಎರಡು ಶುಕ್ರ ವಾರಗಳಿಂದ ಪ್ರತಿ ವಾರದಂತೆ ಬಿಡುಗಡೆ ಯಾಗುತ್ತಿದ್ದು ಪುರಸಭೆ ವ್ಯಾಪ್ತಿಯ ಫ‌ಲಾನುಭವಿಗಳಿಗೆ ತಲು ಪಿಲ್ಲ. ಇದಕ್ಕೆ ಕಾರಣ ಮನೆ ಕಟ್ಟಿದ ಜಾಗದಲ್ಲಿ ಪುರ ಸಭೆಯವರು ವಿಸಿಲ್‌ ಆ್ಯಪ್‌ ಮೂಲಕ ಜಿಪಿಎಸ್‌ ಅನ್ನು ರಾಜೀವ್‌ ಗಾಂಧಿ ವಸತಿ ನಿಗಮದ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವಾಗ ಯಾವುದೋ ತಾಂತ್ರಿಕ ಸಮಸ್ಯೆಯಿಂದ ಬಾಕಿಯಾಗಿದೆ.

ಬಾಕಿ
ಪುರಸಭೆ ವ್ಯಾಪ್ತಿಯಲ್ಲಿ 70 ಮನೆಗಳಿಗೆ ಜಿಪಿಎಸ್‌ ಪೂರ್ಣವಾಗಿದ್ದು ಅನುದಾನ ಲಭ್ಯವಾಗಲಿದೆ. 15 ಮನೆಗಳಿಗೆ ತೆರಳಿ ಪುರಸಭೆ ಸಿಬಂದಿ ಜಿಪಿಎಸ್‌ಗೆ ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಒಟ್ಟು 59 ಮನೆಗಳು ಬಾಕಿ ಇವೆ. 31 ಮನೆಗಳು ವೆರಿಫಿಕೇಶನ್‌ಗೆ ಹಾಗೂ 26 ಮನೆಗಳು ಜಿಪಿಎಸ್‌ಗೆಬಾಕಿ ಇವೆ.

ಗ್ರಾಮಾಂತರ ಪೂರ್ಣ
ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ 1,352 ಮನೆಗಳ ಜಿಪಿಎಸ್‌ ಪೂರ್ಣಗೊಳಿಸಲು ಗುರಿ ನೀಡಲಾಗಿತ್ತು. ಈ ಪೈಕಿ 1,210 ಪೂರ್ಣವಾಗಿದ್ದು ಇನ್ನು 142 ಮಾತ್ರ ಬಾಕಿ ಇದೆ.

ಅನುದಾನ
ಕೇಂದ್ರ ಸರ ಕಾರದ ಯೋಜನೆಗೆ ಹಣಕಾಸಿನ ಕೊರತೆ ಇಲ್ಲ. ಮಾರ್ಚ್‌ ನಿಂದ ಅನುದಾನ ಬಾರದೇ ಇದ್ದರೂ ಈಗ ದೊಡ್ಡ ದೊಡ್ಡ ಮೊತ್ತವೇ ಖಾತೆಗೆ ಜಮೆಯಾಗುತ್ತಿದೆ. ಇದರಿಂದ ಫ‌ಲಾನುಭವಿಗಳ ಮುಖದಲ್ಲಿ ಹರ್ಷ ತುಂಬಿದೆ. ಎರಡು ವಾರಗಳಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿಗೆ ಪಿಎಂಎ ಯೋಜನೆ ಬಾಬ್ತು 1.12 ಕೋ.ರೂ. ಅನುದಾನ ಮಂಜೂರಾಗಿದ್ದು 281 ಫ‌ಲಾನುಭವಿಗಳ ಖಾತೆಗೆ ಜಮೆಯಾಗಿದೆ. ಇನ್ನೂ 200 ಮನೆಗಳಿಗೆ ಅನುದಾನ ಬರಬೇಕಿದ್ದು ಇನ್ನೆರಡು ವಾರಗಳಲ್ಲಿ ಎಲ್ಲ ಫ‌ಲಾನುಭವಿಗಳಿಗೂ ಅನುದಾನ ದೊರೆಯುವ ನಿರೀಕ್ಷೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ರಾಜ್ಯದಿಂದ ಮನೆ ಇಲ್ಲ
ಕೇಂದ್ರ ಸರಕಾರದ ವಸತಿ ಯೋಜನೆಗೆ ಫ‌ಲಾನುಭವಿಗಳ ಪಟ್ಟಿ ಕೇಳಿದ್ದು ನಿರ್ಮಾಣವಾದ ಮನೆಗಳಿಗೆ ಅನುದಾನವೂ ಬಂದಿದೆ. ಆದರೆ ರಾಜ್ಯ ಸರಕಾರದಿಂದ ನೀಡುವ ವಸತಿ ಯೋಜನೆಗಳು ಇನ್ನು ಎರಡು ವರ್ಷಗಳ ಕಾಲ ದೊರೆಯುವುದಿಲ್ಲ. ಬಸವ, ಅಂಬೇಡ್ಕರ್‌ ಮೊದಲಾದ ವಸತಿ ಯೋಜನೆಗಳಲ್ಲಿ ಇನ್ನು 2 ವರ್ಷಗಳ ಕಾಲ ಫ‌ಲಾನುಭವಿ ಆಯ್ಕೆಗೆ ಅವಕಾಶ ಇಲ್ಲ. ಹೊಸ ಮನೆ ಮಂಜೂರಿಲ್ಲ ಎಂದು ಸರಕಾರವೇ ಹೇಳಿದೆ.

ವಿರೋಧ
ಶಾಸಕರ ನೇತೃತ್ವದಲ್ಲಿ ಫ‌ಲಾನುಭವಿಗಳನ್ನು ಆಯ್ಕೆ ಮಾಡಿದರೆ ಪಂಚಾಯತ್‌ಗಳ ಶಾಸನಬದ್ಧ ಅಧಿಕಾರ ಕಿತ್ತುಕೊಂಡಂತೆ ಎಂದು ಆಕ್ಷೇಪ ಕೇಳಿ ಬಂದಿತ್ತು. ಗ್ರಾಮ ಪಂಚಾಯತ್‌ ಹಕ್ಕೊತ್ತಾಯ ಸಮಿತಿ ಈ ಕುರಿತು ನ್ಯಾಯಾಲಯದ ಮೊರೆ ಹೋಗಿತ್ತು. ಹೋರಾಟಗಳನ್ನೂ ಮಾಡಿತ್ತು.

ಈ ವರ್ಷ ಅನುಮಾನ
ಪಂಚಾಯತ್‌ಗಳಿಗೆ ಚುನಾವಣೆ ಘೋಷಣೆ ಯಾದ ಕಾರಣ 2020ನೇ ಸಾಲಿನ ಫ‌ಲಾನುಭವಿಗಳ ಪಟ್ಟಿಯನ್ನು ತಯಾರು ಮಾಡುವುದು ಈ ವರ್ಷ ಅನುಮಾನವಾಗಿದೆ. ಮುಂದಿನ ವರ್ಷ ಹೊಸ ಆಡಳಿತ ಮಂಡಳಿ ಆಯ್ಕೆಯಾಗಿ ಗ್ರಾಮಸಭೆ ನಡೆಸಿ ಅದರಲ್ಲೇ ಆಯ್ಕೆ ಮಾಡಬೇಕಿದೆ.
ಏಕೆಂದರೆ ವಸತಿ ಯೋಜನೆ ಫ‌ಲಾನುಭವಿಗಳ ಪಟ್ಟಿಯನ್ನು ಗ್ರಾಮಸಭೆಗಳ ಮೂಲಕವೇ ಆಯ್ಕೆ ಮಾಡಬೇಕು, ವೀಡಿಯೋ ಚಿತ್ರೀಕರಣ ಮಾಡಬೇಕೆಂದು ನಿಯಮ ಇದೆ.

ಮಿತಿ ಸಡಿಲ
ಕಳೆದ ವರ್ಷದವರೆಗೆ ಪಟ್ಟಿ ತಯಾರಿ ಸಂದರ್ಭ 2010ರ ವಸತಿ ರಹಿತರ ಪಟ್ಟಿಯಲ್ಲಿ ದ್ದವರಿಗೆ ಮಾತ್ರ ಅವಕಾಶ ಇತ್ತು. ಈಗ ನಿಯಮ ಸರಳಗೊಳಿಸಲಾಗಿದ್ದು ಎಲ್ಲ ವಸತಿ ರಹಿತರಿಗೂ ಆಯ್ಕೆಗೆ ಅವಕಾಶ ಇದೆ.

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.