Baindur: ಅಭಿವೃದಿ ಕಾಣದ ಅಳ್ವೆಗದ್ದೆ ಬಂದರು
ಅತ್ಯಂತ ಸುರಕ್ಷಿತ ಬಂದರೇ ಈಗ ಅಪಾಯದಲ್ಲಿ | ತುರ್ತು ಕ್ರಮಕ್ಕೆ ಆಗ್ರಹ
Team Udayavani, Aug 30, 2024, 4:49 PM IST
ಬೈಂದೂರು: ಬೈಂದೂರು ತಾಲೂಕಿನ ಐತಿಹಾಸಿಕ ಹಿನ್ನೆಲೆ ಇರುವ ಮತ್ತು ಸರ್ವಋತು ಬಂದರಿಗೆ ಅವಕಾಶವಿರುವ ಶಿರೂರು ಗ್ರಾಮದ ಅಳ್ವೆಗದ್ದೆ ಬಂದರು ಸಮರ್ಪಕ ಅಭಿವೃದ್ಧಿ ಕಾಣದೆ ಮೀನುಗಾರರು ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ. ಸಮೀಪದ ಕಳುಹಿತ್ಲು ಭಾಗದ ಮೀನುಗಾರರು ಈ ಬಂದರನ್ನೇ ಅವಲಂಬಿಸಿದ್ದು, ಅಭಿವೃದ್ಧಿ ನಿರೀಕ್ಷೆಯಲ್ಲಿದ್ದಾರೆ.
ಇಲ್ಲಿನ ಸಮಸ್ಯೆಗಳೇನು?
ಕಳೆದ ಮಳೆಗಾಲ ಮತ್ತು ಇತ್ತೀಚೆಗೆ ಉಂಟಾದ ಕಡಲ ಅಬ್ಬರದಿಂದಾಗಿ ಅಳ್ವೆಗದ್ದೆಯಲ್ಲಿ ದೋಣಿ ನಿಲ್ಲಿಸುವ ಜಾಗದ ಮೇಲ್ಭಾಗ ಕೊಚ್ಚಿ ಹೋಗಿದೆ. ಕಳುಹಿತ್ಲು ಭಾಗದಲ್ಲಿ ಅನೇಕ ವರ್ಷ ಹಿಂದೆ ನಿರ್ಮಿಸಿದ ತಡೆಗೋಡೆ ನೆಲಮಟ್ಟದಲ್ಲಿರುವು ದರಿಂದ ನೀರು ಒಳಗೆ ನುಗ್ಗುತ್ತಿದೆ. ಮೀನುಗಾರಿಕೆಯನ್ನೇ ಕಳೆದ ಬಾರಿ 60ಕ್ಕೂ ಮಿಕ್ಕಿ ಬೋಟ್‌ಗಳು ಕೊಚ್ಚಿ ಹೋಗಿದ್ದವು. ನೂರಾರು ಪಾತಿದೋಣಿಗಳು ತೇಲಿ ಹೋಗಿದ್ದವು. ಬಲೆ, ಎಂಜಿನ್‌ಗಳು ಸಮುದ್ರ ಪಾಲಾಗಿದ್ದವು.
ಬೋಟ್ ನಿಲುಗಡೆಯ ಜಾಗ ಶಿಥಿಲಗೊಂಡಿದ್ದಲ್ಲದೆ, ಬೀದಿ ದೀಪ ಸಮಸ್ಯೆಯೂ ಇದೆ. ಜಟ್ಟಿ ನಿರ್ಮಾಣ, ಪ್ರವಾಸೋದ್ಯಮ ಹಾಗೂ ಮೀನುಗಾರಿಕೆ ಇಲಾಖೆಯಿಂದ ಮಂಜೂರಾದ ಯೋಜನೆಗಳು ಅನುಷ್ಠಾನವಾಗಬೇಕು ಎನ್ನುವುದು ಮೀನುಗಾರರ ಆಗ್ರಹ.
ಇಲ್ಲಿ 5ಕ್ಕೂ ಹೆಚ್ಚು ಬೋಟ್ ನಿರ್ಮಾಣ ಕೇಂದ್ರಗಳಿವೆ. ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುವ ಈ ಭಾಗದಲ್ಲಿ ಸೀ ವಾಕ್ ನಿರ್ಮಿಸಿದರೆ ಪ್ರವಾಸೋದ್ಯಮಕ್ಕೆ ಅನುಕೂಲ ಎಂದು ಉದಯವಾಣಿ ಈ ಹಿಂದೆಯೇ ವರದಿ ಪ್ರಕಟಿಸಿತ್ತು.
ಮೀನುಗಾರರಿಗೆ ಅಪಾರ ನಷ್ಟ
10 ವರ್ಷ ಹಿಂದೆ ಬ್ರೇಕ್ ವಾಟರ್ ನಿರ್ಮಾಣಕ್ಕೆ ಸುಮಾರು 9 ಕೋಟಿ ರೂಪಾಯಿ ಬಿಟ್ಟು ಬೇರೆ ಅನುದಾನ ಬಂದಿಲ್ಲ. ಔಟ್ ಡೋರ್ ಬಂದರು, ಬ್ರೇಕ್‌ವಾಟರ್ ವಿಸ್ತರಣೆ, ಪಾತಿ ದೋಣಿಗಳ ನಿಲುಗಡೆ ಕೇಂದ್ರ ನಿರ್ಮಾಣ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಅತಿವೃಷ್ಟಿಗೆ ಬಂದರು ಮತ್ತು ಮೀನುಗಾರಿಕಾ ವಲಯ ಅಪಾರ ನಷ್ಟ ಅನುಭವಿಸಿತ್ತು. ಬೋಟ್ ಕಳೆದುಕೊಂಡ ಮೀನುಗಾರರಿಗೆ ತಾತ್ಕಾಲಿಕ ಪರಿಹಾರ 6 ಸಾವಿರ ರೂಪಾಯಿ ಕೂಡ ಸರಿಯಾಗಿ ಸಿಕ್ಕಿಲ್ಲ. ಸೀಮೆಎಣ್ಣೆ ಪೂರೈಕೆಯೂ ಸಮರ್ಪಕವಾಗಿಲ್ಲ.
– ನಾಗೇಶ ಮೊಗೇರ ಅಳ್ವೆಗದ್ದೆ, ಸ್ಥಳೀಯ ಗ್ರಾ.ಪಂ. ಸದಸ್ಯ
ಸುರಕಿತ ಬಂದರು ಅಪಾಯದಲ್ಲಿ ಅಳ್ವೆಗದ್ದೆ ಮೂರು ದಶಕದ ಹಿಂದೆ ಸುರಕ್ಷಿತ ಬಂದರು ಎಂದು ಗುರುತಿಸಿಕೊಂಡಿತ್ತು. ಪರ್ಸಿನ್, ಟ್ರಾಲ್ ಸೇರಿದಂತೆ ದೊಡ್ಡ ಬೋಟ್‌ಗಳು ಬಂದರು ಪ್ರವೇಶಿಸುತ್ತಿದ್ದವು. ಅಳಿವೆಯಲ್ಲಿ ತುಂಬಿರುವ ಹೂಳಿನಿಂದಾಗಿ ದೊಡ್ಡ ಪ್ರಮಾಣದಲ್ಲಿ ಬೋಟ್‌ಗಳು ಒಳ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಭಟ್ಕಳ ಹಾಗೂ ಗಂಗೊಳ್ಳಿ ನಡುವಿನ ಮೀನುಗಾರರ ನೆಲೆಯಾಗಿರುವ ಅಳ್ವೆಗದ್ದೆ ಬಂದರು ಪ್ರದೇಶವನ್ನು ನಿರ್ಲಕ್ಷಿಸಲಾಗುತ್ತಿದೆ. ಕಳುಹಿತ್ಲು ಭಾಗದಲ್ಲೂ ಉತ್ತಮ ಅವಕಾಶವಿದ್ದು ಜಂಟಿ ಅಭಿವೃದ್ದಿಯಾಗಬೇಕಿದೆ.
-ತಾರಿಸುಲ್ಲಾ ಮಹ್ಮದ್ ಗೌಸ್ ಕಳುಹಿತ್ಲು , ಸ್ಥಳೀಯ ಗ್ರಾ.ಪಂ ಸದಸ್ಯ
-ಅರುಣ್ ಕುಮಾರ್ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅಂಬರ್‌ಗ್ರೀಸ್ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Shiroor: ಡಿವೈಡರ್‌ಗೆ ಕಾರು ಢಿಕ್ಕಿ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.